Tumkur (Gubbi) news: ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದ ಬೆಳ್ಳಿ ಪಲ್ಲಕ್ಕಿ ಉತ್ಸವ
ಐತಿಹಾಸಿಕ ಪ್ರಸಿದ್ಧ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಬೆಳ್ಳಿ ಪಲ್ಲಕ್ಕಿ ಉತ್ಸವದ ಅತ್ಯಾಕರ್ಷಕ ಪುಷ್ಪಾ ಲಂಕಾರಕ್ಕೆ ಸಾವಿರಾರು ಭಕ್ತರು ಸಾಕ್ಷಿ ಯಾದರು. ಕಳೆದ ಭಾನುವಾರ ರಥೋತ್ಸವ ಕೂಡಾ ಸಾವಿರಾರು ಭಕ್ತರನ್ನು ಸೆಳೆದಿತ್ತು. ಇಡೀ ರಾತ್ರಿ ನಡೆಯುವ ಬೆಳ್ಳಿ ಪಲ್ಲಕ್ಕಿ ಉತ್ಸವ ಹೂವಿನ ಅಲಂಕಾರ ಹಾಗೂ ವಿದ್ಯುದ್ದೀಪ ಅಲಂಕಾ ರಕ್ಕೆ ಹೆಸರುವಾಸಿಯಾಗಿದೆ.


ಗುಬ್ಬಿ: ಐತಿಹಾಸಿಕ ಪ್ರಸಿದ್ಧ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಬೆಳ್ಳಿ ಪಲ್ಲಕ್ಕಿ ಉತ್ಸವದ ಅತ್ಯಾಕರ್ಷಕ ಪುಷ್ಪಾ ಲಂಕಾರಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಕಳೆದ ಭಾನುವಾರ ರಥೋತ್ಸವ ಕೂಡಾ ಸಾವಿರಾರು ಭಕ್ತರನ್ನು ಸೆಳೆದಿತ್ತು. ಇಡೀ ರಾತ್ರಿ ನಡೆಯುವ ಬೆಳ್ಳಿ ಪಲ್ಲಕ್ಕಿ ಉತ್ಸವ ಹೂವಿನ ಅಲಂಕಾರ ಹಾಗೂ ವಿದ್ಯುದ್ದೀಪ ಅಲಂಕಾ ರಕ್ಕೆ ಹೆಸರುವಾಸಿಯಾಗಿದೆ.
ನಂತರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಹೂವಿನ ಹಾಗೂ ಚಿನ್ನಾಭರಣ ಅಲಂಕಾರ ಮಾಡಲಾಯಿತು. ನಂತರ ಪಲ್ಲಕ್ಕಿ ಮೆರವಣಿಗೆ ವಿವಿಧ ಕಲಾ ತಂಡದೊಂದಿಗೆ ನಡೆದು ಮದ್ದು ಬಿರುಸು ಬಾಣ ಪ್ರದರ್ಶನಕ್ಕೆ ಜನರು ಆಕರ್ಷಿತರಾದರು.
ಇದನ್ನೂ ಓದಿ: Tumkur (Gubbi)News: ಕಡಬದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ದಸಂಸ ಒತ್ತಾಯ
ದೇವಾಲಯದ ಮೂಲ ಸ್ವಾಮಿಯ ಗದ್ದುಗೆಗೆ ವಿಶೇಷ ಹಣ್ಣಿನ ಅಲಂಕಾರ ಭಕ್ತರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತ್ತು. ರಾತ್ರಿ ಬರುವ ಭಕ್ತರಿಗೆ ನಿರಂತರ ದಾಸೋಹ ಪ್ರಸಾದ ವ್ಯವಸ್ಥೆಯನ್ನು ದಾಸೋಹ ಸಮಿತಿ ಆಯೋಜಿಸಿತ್ತು. ಜಾತ್ರೆಗೆ ಮೆರುಗು ಕಟ್ಟುವ ಅಂಗಡಿ ಮುಂಗಟ್ಟು, ಮಕ್ಕಳ ಆಟಿಕೆಗಳು, ನಾನಾ ಬಗೆಯ ತಿಂಡಿ ತಿನಿಸು ಹಾಗೂ ತೇರು ಬೀದಿಯ ಅಲಂಕಾರ ಕಂಗೊಳಿಸಿತು. ಪೌರಾಣಿಕ ನಾಟಕ ಪ್ರದರ್ಶನ ಸ್ಥಳೀಯ ಕಲಾವಿದರು ನಡೆಸಿಕೊಟ್ಟರು. ಪಲ್ಲಕ್ಕಿ ಉತ್ಸವಕ್ಕೆ ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಸಾಕ್ಷಿಯಾದರು.