#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

SL vs AUS: 35ನೇ ಟೆಸ್ಟ್‌ ಶತಕ ಸಿಡಿಸಿದ ಸುನೀಲ್‌ ಗವಾಸ್ಕರ್‌ ದಾಖಲೆ ಮುರಿದ ಸ್ಟೀವನ್‌ ಸ್ಮಿತ್!

Steve Smith hits 35th Hundred: ಶ್ರೀಲಂಕಾ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ ಅವರು ತಮ್ಮ ವೃತ್ತಿ ಜೀವನದ 35ನೇ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತೀಯ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅವರನ್ನು ಹಿಂದಿಕ್ಕಿದ್ದಾರೆ.

SL vs AUS: ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ದಾಖಲೆ ಮುರಿದ ಸ್ಟೀವನ್‌ ಸ್ಮಿತ್‌!

Profile Ramesh Kote Jan 29, 2025 8:16 PM

ಗಾಲೆ: ಶ್ರೀಲಂಕಾ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದ ಆರಂಭಿಕ ದಿನ ಆಸ್ಟ್ರೇಲಿಯಾ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ ಅವರು ತಮ್ಮ ವೃತ್ತಿ ಜೀವನದಲ್ಲಿ 35ನೇ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಭಾರತೀಯ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅವರನ್ನು ಹಿಂದಿಕ್ಕಿದ್ದಾರೆ.

ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಿದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಸ್ಟೀವನ್‌ ಸ್ಮಿತ್‌, ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಮೊದಲನೇ ದಿನದಾಟದ ಅಂತ್ಯಕ್ಕೆ ಅವರು 188 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 104 ರನ್‌ಗಳನ್ನು ಗಳಿಸಿ ಎರಡನೇ ದಿನದಾಟದ ಅಂತ್ಯಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಈ ಶತಕದ ಮೂಲಕ ಆಸ್ಟ್ರೇಲಿಯಾನ ತಂಡ 81.1ಓವರ್‌ಗಳಿಗೆ ಎರಡು ವಿಕೆಟ್‌ಗಳ ನಷ್ಟಕ್ಕೆ 330 ರನ್‌ಗಳನ್ನು ಕಲೆ ಹಾಕಿದೆ.

AUS vs SL: 10 ಸಾವಿರ ಟೆಸ್ಟ್‌ ರನ್‌ ಪೂರೈಸಿ ವಿಶೇಷ ದಾಖಲೆ ಬರೆದ ಸ್ಟೀವನ್‌ ಸ್ಮಿತ್‌!

ಸುನೀಲ್‌ ಗವಾಸ್ಕರ್‌ ದಾಖಲೆ ಮುರಿದ ಸ್ಮಿತ್‌

ಈ ಶತಕದ ಮೂಲಕ ಸ್ಟೀವನ್‌ ಸ್ಮಿತ್‌ ಅವರು ತಮ್ಮ 35ನೇ ಟೆಸ್ಟ್‌ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ಟೆಸ್ಟ್‌ ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸುನೀಲ್‌ ಗವಾಸ್ಕರ್‌ ಅವರನ್ನು ಆಸೀಸ್‌ ಬ್ಯಾಟ್ಸ್‌ಮನ್‌ ಹಿಂದಿಕ್ಕಿದ್ದಾರೆ. ಸುನೀಲ್‌ ಗವಸ್ಕಾರ್‌ ತಮ್ಮ ಟೆಸ್ಟ್‌ ವೃತ್ತಿ ಜೀವನವನ್ನು 34 ಶತಕಗಳೊಂದಿಗೆ ಮುಗಿಸಿದ್ದಾರೆ. ಸಚಿನ್‌ ತೆಂಡೂಲ್ಕರ್‌ (51 ಶತಕ), ಜಾಕ್‌ ಕಾಲಿಸ್‌ (45 ಶತಕ), ರಿಕಿ ಪಾಟಿಂಗ್‌ (41 ಶತಕ), ಕುಮಾರ ಸಂಗಕ್ಕಾರ (38 ಶತಕ), ಜೋ ರೂಟ್‌ ( 36 ಶತಕ) ರಾಹುಲ್‌ ದ್ರಾವಿಡ್‌ (36 ಶತಕ) ಕ್ರಮವಾಗಿ ಅಗ್ರ ಕ್ರಮಾಂಕಗಳಲ್ಲಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಲಾನ್‌ ಬಾರ್ಡರ್‌ ಹಾಗೂ ಸ್ಟೀವಾ ಅವರನ್ನು ಕೂಡ ಸ್ಮಿತ್‌ ಹಿಂದಿಕ್ಕಿದ್ದಾರೆ. 41ಶತಕಗಳ ಮೂಲಕ ರಿಕಿ ಪಾಂಟಿಂಗ್‌ ಅಗ್ರ ಸ್ಥಾನದಲ್ಲಿದ್ದಾರೆ.



ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು

ಸಚಿನ್‌ ತೆಂಡೂಲ್ಕರ್‌: 51 ಶತಕಗಳು

ಜಾಕ್‌ ಕಾಲಿಸ್‌: 45 ಶತಕಗಳು

ರಿಕಿ ಪಾಂಟಿಂಗ್‌: 41 ಶತಕಗಳು

ಕುಮಾರ ಸಂಗಕ್ಕಾರ: 38 ಶತಕಗಳು

ಜೋ ರೂಟ್‌: 36 ಶತಕಗಳು

ರಾಹುಲ್‌ ದ್ರಾವಿಡ್‌: 36 ಶತಕಗಳು

ಸ್ಟೀವನ್‌ ಸ್ಮಿತ್‌: 35 ಶತಕಗಳು



10 ಸಾವಿರ ಟೆಸ್ಟ್‌ ರನ್‌ ಪೂರ್ಣಗೊಳಿಸಿದ ಸ್ಟೀವನ್‌ ಸ್ಮಿತ್‌

ಇದೇ ಪಂದ್ಯದಲ್ಲಿ ಸ್ಟೀವನ್‌ ಸ್ಮಿತ್‌ ಮತ್ತೊಂದು ಮೈಲುಗಲ್ಲು ತಲುಪಿದ್ದರು. ಅವರು ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 10, 000 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ 15ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಬಲಗೈ ಬ್ಯಾಟ್ಸ್‌ಮನ್‌ 205 ಟೆಸ್ಟ್‌ ಇನಿಂಗ್ಸ್‌ಗಳಿಂದ 10 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. 195 ಟೆಸ್ಟ್‌ ಇನಿಂಗ್ಸ್‌ಗಳಿಂದ ಈ ಸಾಧನೆ ಮಾಡಿದ ಬ್ರಿಯಾನ್‌ ಲಾರಾ, ಸಚಿನ್‌ ತೆಂಡೂಲ್ಕರ್‌ ಹಾಗೂ ಕುಮಾರ ಸಂಗಕ್ಕಾರ ಜಂಟಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.