ಎರಡನೇ ಬಾರಿಗೆ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿ ಗೆದ್ದ ಸ್ಮೃತಿ ಮಂಧಾನ
ಮಹಿಳ ಏಕದಿನ ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯೂ ಮಂಧಾನ(Smriti Mandhana) ಹೆಸರಿನಲ್ಲಿದೆ.

Smriti Mandhana

ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) 2024 ರ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಎರಡನೇ ಬಾರಿಗೆ ಮಂಧಾನಗೆ ಒಲಿದ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗ ಪ್ರಶಸ್ತಿಯಾಗಿದೆ. ಮೊದಲ ಬಾರಿಗೆ 2018ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದೀಗ 2 ಬಾರಿ ಈ ಪ್ರಶಸ್ತಿ ಗೆಲ್ಲುವ ಮೂಲಕ ಈ ಸಾಧನೆಗೈದ ವಿಶ್ವದ 2ನೇ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ನ್ಯೂಜಿಲ್ಯಾಂಡ್‌ನ ಸುಜಿ ಬೇಟ್ಸ್ ಮೊದಲಿಗರು.
ಸ್ಮೃತಿ ಜತೆ ಶ್ರೀಲಂಕಾದ ನಾಯಕಿ ಚಾಮರಿ ಅಟಪಟ್ಟು, ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ ಮತ್ತು ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಪ್ರಶಸ್ತಿ ರೇಸ್‌ನಲ್ಲಿದ್ದರು. ಇವರನ್ನೆಲ್ಲ ಹಿಂದಿಕ್ಕುವಲ್ಲಿ ಮಂಧಾನ ಯಶಸ್ವಿಯಾದರು.
For the second time, one of the leading stars of the game takes out the ICC Women’s ODI Cricketer of the Year award 🌟 pic.twitter.com/LJbgA8OobX
— ICC (@ICC) January 27, 2025
ಸ್ಮೃತಿ ಮಂಧಾನ ಅವರು 2024 ರಲ್ಲಿ 13 ಪಂದ್ಯಗಳಲ್ಲಿ 57.46 ಸರಾಸರಿಯಲ್ಲಿ ನಾಲ್ಕು ಶತಕಗಳು ಸೇರಿದಂತೆ 794 ರನ್ ಗಳಿಸಿದರು. ಕಳೆದ ವರ್ಷ 50 ಓವರ್‌ಗಳ ಮಾದರಿಯಲ್ಲಿ ಅವರು ಪ್ರಮುಖ ರನ್ ಗಳಿಸಿದ ಆಟಗಾರ್ತಿಯಾಗಿದ್ದರು.
ಇದನ್ನೂ ಓದಿ Kamindu Mendis: ವರ್ಷದ ಐಸಿಸಿ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಕಮಿಂದು ಮೆಂಡಿಸ್
ಮಹಿಳ ಏಕದಿನ ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯೂ ಇವರ ಹೆಸರಿನಲ್ಲಿದೆ. ಐಸಿಸಿ 20 ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ ರೇಸ್‌ನಲ್ಲಿಯೂ ಸ್ಮೃತಿ ಕಾಣಿಸಿಕೊಂಡಿದ್ದರು. ಆದರೆ T20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಪ್ರಶಸ್ತಿ ಒಲಿಯಿತು.