ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಶ್ರೀಧರನ್ ಶ್ರೀರಾಮ್ ಸಹಾಯಕ ಬೌಲಿಂಗ್‌ ಕೋಚ್‌

ಶ್ರೀರಾಮ್ ಅವರು ಈ ಹಿಂದೆ ಪಂಜಾಬ್‌ನ ಬೌಲಿಂಗ್‌ ಕೋಚ್‌ ಆಗಿ, ಆರ್‌ಸಿಬಿಯ ಬ್ಯಾಟಿಂಗ್‌ ಮತ್ತು ಸ್ಪಿನ್‌ ಬೌಲಿಂಗ್‌ ಕೋಚ್‌ ಆಗಿ, ಆಸ್ಟ್ರೇಲಿಯಾದ ಸಹಾಯಕ ತರಬೇತುದಾರರಾಗಿ 2021ರ ವಿಶ್ವಕಪ್‌ ವಿಜೇತ ತಂಡದ ಭಾಗವಾಗಿದ್ದರು. ಶ್ರೀರಾಮ್‌ 2000 ಮತ್ತು 2004ರ ನಡುವೆ 8 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಶ್ರೀಧರನ್ ಶ್ರೀರಾಮ್ ಸಹಾಯಕ ಬೌಲಿಂಗ್‌ ಕೋಚ್‌

Profile Abhilash BC Feb 25, 2025 10:38 AM

ಚೆನ್ನೈ: ಮುಂಬರುವ ಐಪಿಎಲ್‌ 18ನೇ(IPL 2025) ಆವೃತ್ತಿಗೆ ಚೆನ್ನೈ ಸೂಪರ್‌ ಕಿಂಗ್ಸ್‌(CSK) ಫ್ರಾಂಚೈಸಿ ಭಾರತದ ಮಾಜಿ ಆಲ್‌ರೌಂಡರ್ ಶ್ರೀಧರನ್ ಶ್ರೀರಾಮ್ (Sridharan Sriram)ಅವರನ್ನು ತಂಡದ ಸಹಾಯಕ ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ವಿಂಡೀಸ್‌ನ ಡ್ವೇನ್‌ ಬ್ರಾವೊ ಕೆಕೆಆರ್‌ ತಂಡಕ್ಕೆ ಸಲಹೆಗಾರನಾಗಿ ಆಯ್ಕೆಯಾದ ಕಾರಣ ಅವರ ಸ್ಥಾನಕ್ಕೆ ಇದೀಗ ಶ್ರೀರಾಮ್ ಅವರನ್ನು ನೇಮಿಸಲಾಗಿದೆ.

ಶ್ರೀರಾಮ್ ಅವರು ಈ ಹಿಂದೆ ಪಂಜಾಬ್‌ನ ಬೌಲಿಂಗ್‌ ಕೋಚ್‌ ಆಗಿ, ಆರ್‌ಸಿಬಿಯ ಬ್ಯಾಟಿಂಗ್‌ ಮತ್ತು ಸ್ಪಿನ್‌ ಬೌಲಿಂಗ್‌ ಕೋಚ್‌ ಆಗಿ, ಆಸ್ಟ್ರೇಲಿಯಾದ ಸಹಾಯಕ ತರಬೇತುದಾರರಾಗಿ 2021ರ ವಿಶ್ವಕಪ್‌ ವಿಜೇತ ತಂಡದ ಭಾಗವಾಗಿದ್ದರು. ಶ್ರೀರಾಮ್‌ 2000 ಮತ್ತು 2004ರ ನಡುವೆ 8 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಏಶ್ಯಕಪ್ ಹಾಗೂ ಟಿ20 ವಿಶ್ವಕಪ್‌ಗಿಂತ ಮೊದಲು ಬಾಂಗ್ಲಾದೇಶದ ಟಿ20 ಸಲಹೆಗಾರನಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಇದೀಗ ಮತ್ತೆ ಐಪಿಎಲ್‌ನಲ್ಲಿ ಕೋಚಿಂಗ್‌ ಶುರು ಮಾಡಿರುವ ಶ್ರೀಧರ್‌ ಸ್ಟೀಫನ್ ಫ್ಲೆಮಿಂಗ್(ಮುಖ್ಯ ಕೋಚ್), ಮೈಕ್ ಹಸ್ಸಿ(ಬ್ಯಾಟಿಂಗ್ ಕೋಚ್)ಹಾಗೂ ಎರಿಕ್ ಸಿಮೊನ್ಸ್(ಬೌಲಿಂಗ್ ಸಲಹೆಗಾರ)ಅವರ ಜತೆ ಚೆನ್ನೈ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.



ಮಾರ್ಚ್ 22ರಿಂದ ಐಪಿಎಲ್‌ ಪಂದ್ಯಾವಳಿಗಳು ಆರಂಭವಾಗಲಿದೆ. ಈಗಾಗಲೇ ಧೋನಿ ಸೇರಿ ಚೆನ್ನೈ ತಂಡದ ಆಟಗಾರು ಚೆನ್ನೈನ ಚೆಪಾಕ್‌ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಮಾರ್ಚ್‌ 23 ರಂದು ಚೆನ್ನೈ ತಂಡ ಮುಂಬೈ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಕಣಕ್ಕಿಳಿಯುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.

ಇದನ್ನೂ ಓದಿ IPL 2025: ಚೆಪಾಕ್‌ನಲ್ಲಿ ಹಾರಲು ಸಿದ್ಧಗೊಳ್ಳುತ್ತಿದೆ ಧೋನಿಯ 'ಹೆಲಿಕಾಪ್ಟರ್ ಶಾಟ್'

ಚೆನ್ನೈ ತಂಡ

ಋತುರಾಜ್ ಗಾಯಕ್ವಾಡ್, ಮಥೀಶ ಪತಿರಾಣ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ನೂರ್​ ಅಹ್ಮದ್,​ ಆರ್​. ಅಶ್ವಿನ್​, ಡೆವೊನ್​ ಕಾನ್ವೇ, ರಚಿನ್​ ರವೀಂದ್ರ, ರಾಹುಲ್​ ತ್ರಿಪಾಠಿ, ಖಲೀಲ್​ ಅಹ್ಮದ್​, ವಿಜಯ್​ ಶಂಕರ್​, ಸ್ಯಾಮ್​ ಕರನ್​, ಅಂಶುಲ್​ ಕಂಬೋಜ್​, ಶೇಕ್​ ರಶೀದ್​, ಮುಕೇಶ್​ ಚೌಧರಿ, ದೀಪಕ್​ ಹೂಡಾ, ಗುರುಜಪ್​ನೀತ್​ ಸಿಂಗ್​ ,ನಾಥನ್​ ಎಲ್ಲಿಸ್​, ಜೇಮಿ ಓವರ್ಟನ್​, ಕಮಲೇಶ್​ ನಾಗರಕೋಟಿ, ರಾಮಕೃಷ್ಣ ಘೋಷ್​, ಶ್ರೇಯಸ್​ ಗೋಪಾಲ್​, ವಂಶ್​ ಬೇಡಿ, ಆಂಡ್ರೆ ಸಿದ್ಧಾರ್ಥ್​.