IPL 2025: ವಿರಾಟ್ ಕೊಹ್ಲಿ ಆರ್‌ಸಿಬಿಗೆ ನಾಯಕ? ಬೆಂಗಳೂರು ಫ್ರಾಂಚೈಸಿ ಸಿಒಒ ಹೇಳಿದ್ದಿದು!
Who is RCB's Captain?: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಗೆ ಸಿದ್ದತೆಗಳು ನಡೆಯುತ್ತಿವೆ. ಕೆಲ ಫ್ರಾಂಚೈಸಿಗಳು ತಮ್ಮ-ತಮ್ಮ ತಂಡಗಳಿಗೆ ನಾಯಕನನ್ನು ನೇಮಿಸುವುದು ಬಾಕಿ ಇದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದ ಬಗ್ಗೆ ಆರ್‌ಸಿಬಿ ಸಿಒಒ ರಾಜೇಶ್ ಮೆನನ್ ಮಾತನಾಡಿದ್ದಾರೆ.
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರೆಂಬ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಇಲ್ಲ. ಕಳೆದ ಮೂರು ಆವೃತ್ತಿಗಳಲ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ್ದ ಫಾಫ್ ಡು ಪ್ಲೆಸಿಸ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡಯಾಗಿದ್ದಾರೆ. ಸದ್ಯ ಆರ್‌ಸಿಬಿ ತಂಡದಲ್ಲಿರುವ ಆಟಗಾರರನ್ನು ಗಮನಿಸಿದರೆ, ವಿರಾಟ್ ಕೊಹ್ಲಿಯೇ ನಾಯಕತ್ವಕ್ಕೆ ಮರಳಬಹುದೆಂದು ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ ಸ್ಪೋರ್ಟ್ಸ್ ತಕ್ ಸಂದರ್ಶನದಲ್ಲಿ ಆರ್‌ಸಿಬಿ ಸಿಒಒ ರಾಜೇಶ್ ಮೆನನ್‌ಗೆ ನಾಯಕತ್ವದ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು.
2021ರ ಐಪಿಎಲ್ ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವವನ್ನು ತೊರೆದಿದ್ದರು. ನಂತರ 2022ರ ಮೆಗಾ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸಿ ನಾಯಕತ್ವ ನೀಡಲಾಗಿತ್ತು. ಇವರ ನಾಯಕತ್ವದಲ್ಲಿಯೂ ಆರ್‌ಸಿಬಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಹದಿನೆಂಟನೇ ಆವೃತ್ತಿಲಯಲ್ಲಿ ಆರ್‌ಸಿಬಿ ತಂಡವನ್ನು ಯಾವು ಮುನ್ನಡೆಸಲಿದ್ದಾರೆಂಬ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಇದರ ನಡುವೆ ಆರ್‌ಸಿಬಿ ಸಿಒಒ ಮೆನನ್ ಅವರು ಆರ್‌ಸಿಬಿ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ.
WPL 2025: ಚಾಂಪಿಯನ್ ಆರ್‌ಸಿಬಿ ತಂಡ ಸೇರಿಕೊಂಡ ಆಸ್ಟ್ರೇಲಿಯಾ ಸ್ಟಾರ್‌ಗಳು!
ಬೆಂಗಳೂರು ಫ್ರಾಂಚೈಸಿ ಸಿಒಒ ಹೇಳಿದ್ದೇನು?
ಸ್ಪೋರ್ಟ್ಸ ತಕ್ ಸಂದರ್ಶನದಲ್ಲಿ ಭಾಗವಹಿಸಿದ್ದ ಬೆಂಗಳೂರು ಫ್ರಾಂಚೈಸಿ ಸಿಒಒ ರಾಜೇಶ್ ಮೆನನ್ ಅವರಿಗೆ ಆರ್‌ಸಿಬಿಯನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆಯೇ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಆರ್‌ಸಿಬಿ ಮೆನನ್, "ಆರ್‌ಸಿಬಿ ನಾಯಕತ್ವದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ತಂಡದಲ್ಲಿ ಹಲವು ನಾಯಕರು ಇದ್ದಾರೆ. 4 ರಿಂದ 5 ನಾಯಕರು ತಂಡದಲ್ಲಿದ್ದಾರೆ. ನಾವು ಏನು ಮಾಡಬೇಕೆಂದು ಇನ್ನೂ ಚರ್ಚಿಸಿಲ್ಲ. ನಾವು ಚರ್ಚಿಸುತ್ತೇವೆ ಮತ್ತು ಒಂದು ತೀರ್ಮಾನಕ್ಕೆ ಬರುತ್ತೇವೆ," ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ 2021 ರಿಂದ 2021ರವರೆಗೆ 143 ಪಂದ್ಯಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದಾರೆ, ಇದರಲ್ಲಿ ಅವರು 66 ಪಂದ್ಯಗಳನ್ನು ಗೆದ್ದಿದ್ದಾರೆ. 70 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಒಮ್ಮೆ ಫೈನಲ್‌ಗೆ ಅರ್ಹತೆ ಪಡೆದಿತ್ತು ಹಾಗೂ ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 973 ರನ್‌ಗಳನ್ನು ಸಿಡಿಸಿದ್ದರು.
IPL 2025: ಆರ್‌ಸಿಬಿಗೆ ನಾಯಕನಾಗಲು ಕೊಹ್ಲಿ ಏಕೈಕ ಆಯ್ಕೆ; ಎಬಿಡಿ
ಆರ್‌ಸಿಬಿಗೆ ಸ್ಟಾರ್ ಆಟಗಾರರ ಸೇರ್ಪಡೆ
2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ಕೆಲ ಸ್ಟಾರ್ ಆಟಗಾರರನ್ನು ಖರೀದಿಸಿತ್ತು. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್. ಜಾಶ್ ಹೇಝಲ್‌ವುಡ್, ರೊಮ್ಯಾರಿಯೊ ಶೆಫರ್ಡ್, ನುವಾನ್ ತುಷಾರ ಹಾಗೂ ಸುಯಶ್ ಶರ್ಮಾ ಅವರು ಆರ್‌ಸಿಬಿ ಬಂದಿದ್ದಾರೆ.
2025ರ ಐಪಿಎಲ್‌ಗೆ ಆರ್‌ಸಿಬಿ ತಂಡದ ಬಗ್ಗೆ ಮಾತನಾಡಿ, "ಮೆಗಾ ಹರಾಜಿಗೆ ಹೋಗುವುದಕ್ಕೂ ಮುನ್ನ ನಮ್ಮ ತಂಡದ ಬಗ್ಗೆ ನಮಗೆ ಗೊತ್ತಿತ್ತು. ಅಂದರೆ, ತಂಡದಲ್ಲಿನ ಅಗತ್ಯತೆ ಏನು, ಎಷ್ಟು ಸ್ಥಾನಗಳು ಬಾಕಿ ಇವೆ, ತಂಡವನ್ನು ಶಕ್ತಿಯುತಗೊಳಿಸಲು ಎಂಥಾ ಆಟಗಾರರ ಬೇಕು, ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಸೂಕ್ತವಾಗುವ ಬೌಲಿಂಗ್ ಲೈನ್ ಅಪ್ ಸೇರಿದಂತೆ ಎಲ್ಲಾ ಬೇಡಿಕೆಗಳನ್ನು ನಾವು ಪೂರೈಸಿದ್ದೇವೆ," ಎಂದು ರಾಜೇಶ್ ಮೆನನ್ ತಿಳಿಸಿದ್ದಾರೆ.