IPL 2025: ಆರ್‌ಸಿಬಿಗೆ ನಾಯಕನಾಗಲು ಕೊಹ್ಲಿ ಏಕೈಕ ಆಯ್ಕೆ; ಎಬಿಡಿ
2013ರಿಂದ 2021ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ, ಬೆಂಗಳೂರು ತಂಡವನ್ನು ನಾಲ್ಕು ಬಾರಿ ಪ್ಲೇ ಆಫ್ ಹಂತ, ಹಾಗೂ 2016ರಲ್ಲಿ ಫೈನಲ್ ತಲುಪಿಸಿದ್ದರು.
ಬೆಂಗಳೂರು: 2025ರ ಐಪಿಎಲ್(IPL 2025) ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ನಾಯಕನ ಆಯ್ಕೆ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್(AB de Villiers) ಅವರು ನಾಯಕನ ಸ್ಥಾನಕ್ಕೆ ತಂಡದಲ್ಲಿರುವ ಏಕೈಕ ಆಯ್ಕೆ ಅದು ವಿರಾಟ್ ಕೊಹ್ಲಿ(Virat Kohli) ಮಾತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿಲಿಯರ್ಸ್, 'ಸ್ನೇಹಿತರೇ, ವಿರಾಟ್ ಕೊಹ್ಲಿ ಮಾತ್ರ ಆರ್‌ಸಿಬಿ ನಾಯಕತ್ವಕ್ಕೆ ಇರುವ ಏಕೈಕ ಆಯ್ಕೆ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ವೃತ್ತಿಜೀವನದ ಅಂತ್ಯದ ಸಮೀಪದಲ್ಲಿದ್ದಾರೆ, ಹೀಗಾಗಿ ಅವರು ಹಿಂದೆಂದಿಗಿಂತಲೂ ಅವರು ಹೆಚ್ಚು ಸ್ಫೂರ್ತಿ ಪಡೆದಿದ್ದಾರೆ' ಎಂದು ಡಿವಿಲಿಯರ್ಸ್ ಹೇಳಿದರು.
AB de Villiers backs #ViratKohli to make a comeback as captain of Royal Challengers Bengaluru for IPL 2025.#IPL2025 #IPL #RCB pic.twitter.com/g7vuHP7hpb
— Circle of Cricket (@circleofcricket) January 24, 2025
2013ರಿಂದ 2021ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ, ಬೆಂಗಳೂರು ತಂಡವನ್ನು ನಾಲ್ಕು ಬಾರಿ ಪ್ಲೇ ಆಫ್ ಹಂತ, ಹಾಗೂ 2016ರಲ್ಲಿ ಫೈನಲ್ ತಲುಪಿಸಿದ್ದರು. 2022 ರಿಂದ 2024 ಆವೃತ್ತಿ ವರೆಗೆ ಫಾಫ್ ಡುಪ್ಲೆಸಿಸ್ ತಂಡವವನ್ನು ಮುನ್ನಡೆಸಿದ್ದರು. ಈ ಬಾರಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹೀಗಾಗಿ ಫ್ರಾಂಚೈಸಿ ನೂತನ ನಾಯಕನ ಹುಡುಕಾಟದಲ್ಲಿದೆ.
ಇದನ್ನೂ ಓದಿ IPL 2025: ಲಕ್ನೋ ತಂಡದ ನಾಯಕನಾದ ರಿಷಭ್ ಪಂತ್
ಆರ್‌ಸಿಬಿ ತಂಡ
ವಿರಾಟ್ ಕೊಹ್ಲಿ,ರಜತ್ ಪಾಟೀದಾರ್, ಯಶ್ ದಯಾಳ್,ಜೋಶ್ ಹ್ಯಾಸಲ್ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮ, ಲಿಯಾಮ್ ಲಿವಿಂಗ್ಸ್ಟೋನ್, ರಸಿಕ್ ಸಲಾಂ, ಸುಯಶ್ ಶರ್ಮ, ಭುವನೇಶ್ವರ್ ಕುಮಾರ್,ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ನುವಾನ್ ತುಷಾರ, ರೊಮಾರಿಯೊ ಶೆರ್ಡ್, ಸ್ವಪ್ನಿಲ್ ಸಿಂಗ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕರ, ಮೋಹಿತ್ ರಾಥೀ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ.