ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ ಫೋಟೋಗ್ರಾಫರ್ ಅಂಡ್ ವಿಡಿಯೋಗ್ರಾಫರ್ ಅಸೋಸಿಯೇಷನ್ ನಿಂದ ರಾಜ್ಯ ಸಮಾವೇಶ

ನಾವು ಸುಂದರವಾಗಿ ಕಾಣಲು, ನಾಯಕರಾಗಿ ಬೆಳೆಯಲು ಮತ್ತು ಇತಿಹಾಸದ ಅನೇಕ ಘಟನೆ ಗಳನ್ನು ನೆನಪಿಸಿಕೊಳ್ಳುವ ಕೆಲಸವನ್ನು ನೀವು ಮಾಡುತ್ತಿರಾ. ಎಲ್ಲರ ಬದುಕನ್ನು ಬೆಳಗಿಸುವ ಛಾಯಾಗ್ರಾಹಕ ಸಮುದಾಯದ ಬದುಕು ಕತ್ತಲೆಯಲ್ಲಿ ಇದೆ. ನಾನು ಈ ಹಂತಕ್ಕೆ ತಲುಪಲು ಕ್ಯಾಮರಾಮನ್ ಗಳೇ ಕಾರಣ ಹಾಗಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸಚಿವರಲ್ಲಿ ಕೋರು ತ್ತೇನೆ

ಛಾಯಾಗ್ರಾಹಕರ ಕಲ್ಯಾಣ ಮಂಡಳಿ ಸ್ಥಾಪಿಸಲು ಆಗ್ರಹ

ಕರ್ನಾಟಕ ಫೋಟೋಗ್ರಾಫರ್ ಅಂಡ್ ವಿಡಿಯೋಗ್ರಾಫರ್ ಅಸೋಸಿಯೇಷನ್ ರಾಜ್ಯ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು.

Ashok Nayak Ashok Nayak Aug 17, 2025 10:27 PM

ದಾವಣಗೆರೆ: ರಾಜ್ಯದಲ್ಲಿ ಅನೇಕ ನಿಗಮ, ಮಂಡಳಿಗಳಿದ್ದು ಛಾಯಾಗ್ರಾಹಕರಿಗೆ ಇಲ್ಲ ಹಾಗಾಗಿ ರಾಜ್ಯ ಸರ್ಕಾರ ಫೋಟೋಗ್ರಾಫರ್ ಅಂಡ್ ವಿಡಿಯೋಗ್ರಾಫರ್ ಕಲ್ಯಾಣ ಮಂಡಳಿ ಮಾಡಲು ನೀವು ಮನವಿ ಮಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ . ಮಲ್ಲಿಕಾರ್ಜುನ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸಲಾಗುತ್ತದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಆಗಸ್ಟ್ 17 ರ ಭಾನುವಾರ ಕರ್ನಾಟಕ ಫೋಟೋಗ್ರಾಫರ್ ಅಂಡ್ ವಿಡಿಯೋಗ್ರಾಫರ್ ಅಸೋಸಿಯೇಷನ್ ರಾಜ್ಯ ಸಂಘದ ಉದ್ಘಾಟನೆ ಮತ್ತು ಪದಗ್ರಹಣ ಹಾಗೂ ದಾವಣಗೆರೆ ತಾಲ್ಲೂಕು ಸಂಘದ13ನೇ ವಾರ್ಷಿಕೋತ್ಸವ, 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಛಾಯಾಗ್ರಾಹಕರ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಫೋಟೋಗ್ರಾಫರ್ ಅಂಡ್ ವಿಡಿಯೋಗ್ರಾಫರ್ ಅಸೋಸಿಯೇಷನ್ ರಾಜ್ಯ ಸಮಿತಿ, ದಾವಣಗೆರೆ ಜಿಲ್ಲಾ ಸಮಿತಿ ಸರ್ಕಾರಕ್ಕೆ ಹಲವು ಬೇಡಿಕೆ ಗಳನ್ನೊಳಗೊಂಡ ನಿರ್ಣಯ ಕೈಗೊಂಡಿದ್ದು ಸಲ್ಲಿಸಿದ್ದು, ನಿವೇಶನ, ಮತ್ತು ಕಾರ್ಯಾಲಯಕ್ಕೆ ಸಹಕಾರ ನೀಡಲಾಗುತ್ತದೆ ಎಂದರು.

ಇದನ್ನೂ ಓದಿ: Hari Paraak Column: ಜೈಲಲ್ಲಿರೋ ಕೈದಿಗಳು: ʼಬಂದರೋ ಬಂದರೋ ಭಾವ ಬಂದರೋʼ

ನಾವು ಸುಂದರವಾಗಿ ಕಾಣಲು, ನಾಯಕರಾಗಿ ಬೆಳೆಯಲು ಮತ್ತು ಇತಿಹಾಸದ ಅನೇಕ ಘಟನೆ ಗಳನ್ನು ನೆನಪಿಸಿಕೊಳ್ಳುವ ಕೆಲಸವನ್ನು ನೀವು ಮಾಡುತ್ತಿರಾ. ಎಲ್ಲರ ಬದುಕನ್ನು ಬೆಳಗಿಸುವ ಛಾಯಾಗ್ರಾಹಕ ಸಮುದಾಯದ ಬದುಕು ಕತ್ತಲೆಯಲ್ಲಿ ಇದೆ. ನಾನು ಈ ಹಂತಕ್ಕೆ ತಲುಪಲು ಕ್ಯಾಮರಾಮನ್ ಗಳೇ ಕಾರಣ ಹಾಗಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸಚಿವರಲ್ಲಿ ಕೋರು ತ್ತೇನೆ ಎಂದರು.

ಪ್ರಾಸ್ತಾವಿಕವಾಗಿ ಕರ್ನಾಟಕ ಫೋಟೋಗ್ರಾಫರ್ ಅಂಡ್ ವಿಡಿಯೋಗ್ರಾಫರ್ ಅಸೋಸಿಯೇಷನ್ ರಾಜ್ಯ ಮಾಧ್ಯಮ ಸಲಹೆಗಾರರು & ನ್ಯಾಷನಲ್ ಮೀಡಿಯಾ ಕೌನ್ಸಿಲ್ ನಿರ್ದೇಶಕರಾದ ಮಾಲ ತೇಶ್ ಅರಸ್ ಮಾತನಾಡಿ, ಸಾಮಾಜಿಕ ಭದ್ರತೆಗಾಗಿ ಆರೋಗ್ಯ ವಿಮೆ, ಜೀವ ವಿಮೆ, ಅಪಘಾತ ವಿಮೆ ಸೌಲಭ್ಯ ಯೋಜನೆ. ಆರ್ಥಿಕ ಸಹಾಯ: ಅಪಘಾತ, ಅನಾರೋಗ್ಯ, ಮರಣ ಇತ್ಯಾದಿ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ನೆರವು. ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ. ಕ್ಯಾಮೆರಾ, ಲೈಟಿಂಗ್, ಎಡಿಟಿಂಗ್ ಸಾಫ್ಟ್‌ವೇರ್ ಖರೀದಿಗೆ ಸಾಲ/ಸಬ್ಸಿಡಿ ಬೇಕು. ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ಕ್ಷೇತ್ರದ ನವೀನ ತಂತ್ರಜ್ಞಾನದಲ್ಲಿ ತರಬೇತಿ. ಉದ್ಯೋಗಾವಕಾಶಗಳು ಹೆಚ್ಚಿಸುವ ಕಾರ್ಯಾಗಾರ ಗಳು. ವೃತ್ತಿ ಭದ್ರತೆ, ಮದುವೆ ಸಹಾಯಧನ. ಮನೆ ನಿರ್ಮಾಣ, ಗೃಹಸಾಲ ಸೌಲಭ್ಯ. ತುರ್ತು ವೈದ್ಯಕೀಯ ನೆರವು ಹೀಗೆ ಕಲ್ಯಾಣ ಯೋಜನೆಗಳಿಗೆಗಾಗಿ ನಮ್ಮ ಹೋರಾಟ ಇರಲಿದೆ ಈ ಹಿನ್ನೆಲೆ ಯಲ್ಲಿ ಕಲ್ಯಾಣ ಮಂಡಳಿ ರಚಿಸಬೇಕು ಎಂದರು.

ಸಾಧಕರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್‌ ಪ್ರದಾನ ಮಾಡಿ ಮಾತನಾಡಿ, ಇಂದು ಅನೇಕರು ಸಂಕಷ್ಟದಲ್ಲಿದ್ದಾರೆ ಅವರು ವೃತ್ತಿಯನ್ನು ಕಾಯಕವಾಗಿ ಮಾಡಿದರೆ 365 ದಿನವೂ ಲಾಭ ಇರುತ್ತದೆ. ಬರೀ ಮದುವೆ, ನಾಮಕರಣ ಎಂದು ಕುಳಿತು ಕೊಳ್ಳದೇ ಕ್ರಿಯಾಶೀಲರಾಗಿ ಇರಬೇಕು. ‌ರಾಜ್ಯಾಧ್ಯಕ್ಷರಾಗಿರುವ ಮನು ಏನೇ ಕಾರ್ಯಕ್ರಮ ಮಾಡಿದರೂ ತಲೆ ಕೆಡಿಸಿಕೊಂಡು ಮಾಡುತ್ತಾರೆ. ಆತ ನಿಜವಾದ ಹೋರಾಟಗಾರ, ‌ನಿಮ್ಮ ಭರವಸೆಯನ್ನು ಪೂರೈಸಲಿ ಎಂದರು.

ವಿರಕ್ತ ಮಠದ ಶ್ರೀ ಬಸವಪ್ರಭು ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದರು. ಕರ್ನಾಟಕ ಫೋಟೋಗ್ರಾಫರ್ ಅಂಡ್ ವಿಡಿಯೋಗ್ರಾಫರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಮನು.ಎಂ. ದೇವನಗರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾ ಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್, ಸಂಘದ ಕಾನೂನು ಸಲಹೆಗಾರರಾದ ವಿನೋದ ಕುಮಾರ್, ಗೌರವ ಸಲಹೆಗಾರರಾದ ಖಾಜಾ ಪೀರ್ ದಾವಣಗೆರೆ ಅಕ್ಕಿ ವರ್ತಕರ ಸಂಘ ಅಧ್ಯಕ್ಷರಾದ ಎಂ.ವಿ.ಜಯಪ್ರಕಾಶ್ ಮಾತನಾಡಿದರು.

ಫೋಟೋಗ್ರಾಫರ್ ಅಂಡ್ ವಿಡಿಯೋಗ್ರಾಫರ್ ಕುಟುಂಬದವರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಆರೈಕೆ ಆಸ್ಪತ್ರೆ ಎಂ.ಡಿ. ಡಾ.ರವಿಕುಮಾರ್ .ಟಿ .ಜಿ. ಉಚಿತ ಕಣ್ಣಿನ ಪರೀಕ್ಷೆ ತಪಾಸಣೆ ಯನ್ನು ಕಠಾರೆ ಆಪ್ಟಿಕಲ್ಸ್ ಕಂಪನಿ ದಾವಣಗೆರೆ ಇವರಿಂದ ನಡೆಯಿತು.

ಪ್ರಶಸ್ತಿ ಪ್ತದಾನ: 2025ನೇ ಸಾಲಿನ ಕರ್ನಾಟಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಯನ್ನು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಕೆ.ಜಿ.ಯಲ್ಲಪ್ಪ,, ಕರುನಾಡ ಸಮರ ಸೇನೆ ರಾಜ್ಯಾ ಧ್ಯಕ್ಷರಾದ ಐಗೂರು ಬಿ.ಕೆ.ಸುರೇಶ್, ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾಧ್ಯಕ್ಷರಾದ ರಾಮೇಗೌಡ ಎಂ.ಎಸ್. ಶ್ರೀ ತರಳಬಾಳು ಜ್ಯೂಯಲರ್ಸ್ ಮಾಲೀಕರಾದ ಬಿ.ಆರ್. ಮಂಜುನಾಥ್, ಸಮಾಜ ಸೇವಕರಾದ ಎಂ.ಜಿ.ಶ್ರೀಕಾಂತ್, ಗುಮ್ಮನೂರು ಶ್ರೀನಿವಾಸ್, ಹನುಮಂತ. ಹೆಚ್.ವೈ. ತಿಮ್ಮೇನ ಹಳ್ಳಿ ಅವರಿಗೆ ಪ್ರದಾನ ಮಾಡಲಾಯಿತು.

ಸಮಾವೇಶಕ್ಕೂ ಮುನ್ನ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು ನೂರಾರು ಫೋಟೋಗ್ರಾಫರ್ ಅಂಡ್ ವಿಡಿಯೋಗ್ರಾಫರ್ ಕುಟುಂಬದವರು, ಸಾರ್ವಜನಿಕರು ಭಾಗವಹಿಸಿದ್ದರು.

ಛಾಯಾಗ್ರಾಹಕರಿಗೆ ಸನ್ಮಾನಿ, ಪುರಸ್ಕಾರ: ಕರ್ನಾಟಕ ಫೋಟೋಗ್ರಾಫರ್ ಅಂಡ್ ವಿಡಿಯೋ ಗ್ರಾಫರ್ ಅಸೋಸಿಯೇಷನ್ ವತಿಯಿಂದ ವಿಶೇಷವಾಗಿ ಛಾಯಾಗ್ರಹಣ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಛಾಯಾಗ್ರಾಹಕರಿಗೆ ಗೌರವಿಸಲಾಯಿತು. ದಿ ಬೆಸ್ಟ್ ಸೀನಿಯರ್ ಫೋಟೋಗ್ರಾಫರ್ :ವಿ.ಆರ್.ಅರುಣ್ ಕುಮಾರ್. ದಾವಣಗೆರೆ. ದಿ ಬೆಸ್ಟ್ ಸೀನಿಯರ್ ವಿಡಿಯೋ ಗ್ರಾಫರ್ : ಮುಸ್ತಾಕ್ ಅಹ್ಮದ್, ದಾವಣಗೆರೆ,ದಿ ಬೆಸ್ಟ್ ಎಲ್.ಇ.ಡಿ. ವಾಲ್ ಸರ್ವಿಸ್ : ರಂಗಸ್ವಾಮಿ ಎಸ್. ದಾವಣಗೆರೆ, ದಿ ಬೆಸ್ಟ್ ವಿಡಿಯೋ ಎಡಿಟಿಂಗ್ : ಅಕ್ಷಯ್ ಎಸ್.ಕಾಂಬೈ. ದಾವಣಗೆರೆ, ದಿ ಬೆಸ್ಟ್ ಡ್ರೋ ಲನ್ ಆಪರೇಟರ್ : ರಾಘವೇಂದ್ರ ಎಂ. ದಾವಣಗೆರೆ. ದಿ ಬೆಸ್ಟ್ ಕ್ಯಾಂಡಿಡ್ ಫೋಟೋಗ್ರಾಫರ್ : ವೀರೇಶ್.ಎಸ್.ವಿ. ದಾವಣಗೆರೆ.ದಿ ಬೆಸ್ಟ್ ಇವೆಂಟ್ ಫೋಟೋಗ್ರಾಫರ್ : ಪ್ರಭಾಕರ್.ಪಿ.ಆರ್. ದಾವಣಗೆರೆ, ದಿ ಬೆಸ್ಟ್ ಸಿನಿಮಾಟೋಗ್ರಾಫರ್ : ಪಿ.ಮಧು, ದಾವಣಗೆರೆ. ದಿ ಬೆಸ್ಟ್ ಕ್ಯಾಮೆರಾ ಸರ್ವಿಸ್ :ಯೋಗೇಶ್ ಪಿ.ಎಸ್. ಹರಪನಹಳ್ಳಿ, ಇವರಿಗೆ ಹಾಗೂ ಮಹಿಳಾ ವಿಭಾಗದಲ್ಲಿ ದಿ ಬೆಸ್ಟ್ ವಿಡಿಯೋ ಎಡಿಟಿಂಗ್: ಚನ್ನಮ್ಮ ಎಂ.ದಾವಣಗೆರೆ, ದಿ ಬೆಸ್ಟ್ ಅಲ್ಬಮ್ ಡಿಸೈನರ್ : ಜ್ಯೋತಿ, ದಾವಣಗೆರೆ ಇವರಿಗೆ ಕೊಡಲಾಯಿತು.

ಸಮಾವೇಶದಲ್ಲಿ ಕಾರ್ಯಾಧ್ಯಕ್ಷರಾದ ಎಸ್.ರಾಜಶೇಖರಪ್ಪ ಕೊಂಡಜ್ಜಿ ,ಉಪಾಧ್ಯಕ್ಷರಾದ ಡಿ.ರಮೇಶ್, ಪ್ರಧಾನ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಜಂಟಿ ಕಾರ್ಯದರ್ಶಿ, ಖಜಾಂಚಿ ಎಸ್.ಎ.ಸುಮಾ ಕಲ್ಲೇಶ್, ದಾವಣಗೆರೆ ಜಿಲ್ಲಾಧ್ಯಕ್ಷ ಬಿ.ಮಂಜುನಾಥ್ , ದಾವಣಗೆರೆ ತಾಲ್ಲೂಕು ಅಧ್ಯಕ್ಷ ಹೆಚ್.ಎಫ್.ಸಂಜಯ್ ಇದ್ದರು.