Chikkaballapur News: ಉಸ್ತುವಾರಿ ಸಚಿವರ ಹುಟ್ಟು ಹಬ್ಬದ ಅಂಗವಾಗಿ ಯಲುವಳ್ಳಿ ರಮೇಶ್ ಅಭಿಮಾನಿಗಳಿಂದ ಉಚಿತ ಅನ್ನದಾನ ಸೇವೆಗೆ ಚಾಲನೆ ನೀಡಿ ಹೇಳಿಕೆ
ಖಡಕ್ ರಾಜಕಾರಣಿ ಯಾವ ಮುಲಾಜಿಗೂ ಅಂಜುವವರಲ್ಲ. ಅವರ ತಂದೆ ಯಂತೆ ನೇರ ನುಡಿಯ ಕೊಟ್ಟ ಮಾತು ತಪ್ಪದೆ ಈಡೇರಿಸುವ ವ್ಯಕ್ತಿ ಅವರು. ಸಚಿವರಾದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಜಟಿಲ ಸಮಸ್ಯೆಗಳಾದ ಸರ್ಕಾರಿ ಮಹಿಳಾ ಕಾಲೇಜು ಕಟ್ಟಡ ಉದ್ಘಾಟನೆ, ಹೈಟೆಕ್ ಹೂವು ಮಾರುಕಟ್ಟೆ, ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ, ಇಂಜಿನಿಯರಿಂಗ್ ಕಾಲೇಜು ಜತೆಗೆ ಬಾಗೇಪಲ್ಲಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸಲು ಯೋಜನೆಗಳನ್ನ ತರುವಲ್ಲಿ ಯಶಸ್ವಿಯಾಗಿದ್ದಾರೆ

ಉಸ್ತುವಾರಿ ಸಚಿವರ ಹುಟ್ಟು ಹಬ್ಬದ ಅಂಗವಾಗಿ ಯಲುವಳ್ಳಿ ರಮೇಶ್ ಅಭಿಮಾನಿಗಳ ಸಂಘದ ಯಲುವಹಳ್ಳಿ ಜನಾರ್ಧನ್ ಉಚಿತ ಅನ್ನದಾನ ಸೇವೆಗೆ ಚಾಲನೆ ನೀಡಿ ಮಾತನಾಡಿದರು.

ಚಿಕ್ಕಬಳ್ಳಾಪುರ : ಜಿಲ್ಲೆಯ ಅಭಿವೃದ್ದಿಗೆ ಪಣತೊಟ್ಟಿರುವ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿಸುಧಾಕರ್ ಅಭಿವೃದ್ಧಿಯ ವಿಚಾರದಲ್ಲಿ ರಾಜಿಯಾಗದ ಮನೋ ಭಾವವುಳ್ಳವರಾಗಿದ್ದಾರೆ ಎಂದು ಯುವ ಮುಖಂಡ ಯಲುವಹಳ್ಳಿ ಜನಾರ್ಧನ್ ತಿಳಿಸಿದರು. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಯಲುವಳ್ಳಿ ಎನ್ ರಮೇಶ್ ಅಭಿಮಾನಿಗಳ ಸಂಘದಿಂದ ಬುಧವಾರ ಡಾ.ಎಂ.ಸಿ.ಸುಧಾಕರ್ ಹುಟ್ಟು ಹಬ್ಬದ ಅಂಗವಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಏರ್ಪಡಿಸಿದ್ದ ಹಮಾಲಿಗಳು ಮತ್ತು ರೈತರಿಗೆ ಉಚಿತ ಅನ್ನಸಂತರ್ಪಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇದನ್ನೂ ಓದಿ: Chikkaballapur News: ಸತ್ಯದ ಕತ್ತು ಹಿಸುಕಿ ಕೊಲ್ಲುವ ಸಂದರ್ಭದಲ್ಲಿ ರಂಗಪ್ರಯೋಗ ಆಗುತ್ತಿರುವುದು ಶ್ಲಾಘನೀಯ
ಎಂ.ಸಿ.ಸುಧಾಕರ್ ಖಡಕ್ ರಾಜಕಾರಣಿ ಯಾವ ಮುಲಾಜಿಗೂ ಅಂಜುವವರಲ್ಲ. ಅವರ ತಂದೆ ಯಂತೆ ನೇರ ನುಡಿಯ ಕೊಟ್ಟ ಮಾತು ತಪ್ಪದೆ ಈಡೇರಿಸುವ ವ್ಯಕ್ತಿ ಅವರು. ಸಚಿವರಾದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಜಟಿಲ ಸಮಸ್ಯೆಗಳಾದ ಸರ್ಕಾರಿ ಮಹಿಳಾ ಕಾಲೇಜು ಕಟ್ಟಡ ಉದ್ಘಾಟನೆ, ಹೈಟೆಕ್ ಹೂವು ಮಾರುಕಟ್ಟೆ, ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ, ಇಂಜಿನಿಯರಿಂಗ್ ಕಾಲೇಜು ಜತೆಗೆ ಬಾಗೇಪಲ್ಲಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸಲು ಯೋಜನೆಗಳನ್ನ ತರುವಲ್ಲಿ ಯಶಸ್ವಿ ಯಾಗಿದ್ದಾರೆ ಅವರಿಗೆ ಅವರ ಕುಟುಂಬಕ್ಕೆ ದೇವರು ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅವರ ಸೇವೆ ಇನ್ನಷ್ಟು ಮತ್ತಷ್ಟು ಜನರಿಗೆ ಸಿಗಲಿ ಆ ನಿಟ್ಟಿನಲ್ಲಿ ಅವರು ನೂರ್ಕಾಲ ಸುಖಜೀವನ ಸಾಗಿಸಲಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಡಾ.ಎಂ.ಸಿ ಸುಧಾಕರ್ ಜಿಲ್ಲೆಯ ಅಭಿ ವೃದ್ದಿಗೆ ಸಾಕಷ್ಟು ಶ್ರಮವಹಿಸಿದ್ದಾರೆ. ತಂದೆ ಚೌಡರೆಡ್ಡಿ ಅವರಂತೆ ಮಗನೂ ಕೂಡ ಹಿಡಿದ ಕೆಲಸ ಆಗುವರೆಗೂ ಬಿಡದೆ ಹಿಂಬಾಲಿಸಿ ಮಾಡಿಸುತ್ತಾರೆ.ಜಿಲ್ಲೆಗೆ ಹೈಟೆಕ್ ಹೂವಿನ ಮಾರುಕಟ್ಟೆಗೆ ಭೂಮಿ ಕೊಟ್ಟಿರುವುದು,ಚಿಂತಾಮಣಿಗೆ ಇಂಜನಿಯರಿAಗ್ ಕಾಲೇಜು ಮಂಜೂರು ಮಾಡಿಸಿರುವುದು, ನಂದಿ ಬೆಟ್ಟಕ್ಕೆ ರೋಪ್ ವೇ ಅನುಷ್ಠಾನಗೊಳಿಸಲು ಶ್ರಮಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.
ಈ ವೇಳೆ ಎಪಿಎಂಸಿ ಮಾರುಕಟ್ಟೆ ವರ್ತಕ ಕಣಜೇನಹಳ್ಳಿ ಸುರೇಶ್, ಹೇಮಾ ಜನಾರ್ದನ್, ಮಧು ಕುಮಾರ್ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.