ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ರಷ್ಯಾ- ಉಕ್ರೇನ್‌ ಯುದ್ಧ ನಿಲ್ಲಿಸಲು ಸೌದಿ ಅರೇಬಿಯಾಕ್ಕೆ ಸಾಧ್ಯ; ಡೊನಾಲ್ಡ್‌ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ(ಜ.23) ಸೌದಿ ಅರೇಬಿಯಾ ಮತ್ತು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ (OPEC) ಇತರ ಸಂಸ್ಥೆಗಳಿಗೆ ತೈಲ ಬೆಲೆಗಳನ್ನು ಕಡಿಮೆ ಮಾಡಲು ಕರೆ ನೀಡಿದ್ದಾರೆ. ಕಡಿಮೆ ದರದಲ್ಲಿ ತೈಲ ಸಿಗುವಂತಾದರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತತ್‌ಕ್ಷಣಕ್ಕೆ ಅಂತ್ಯವಾಗುತ್ತದೆ ಎಂದು ಟ್ರಂಪ್‌ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಸೌದಿ ಅರೇಬಿಯಾದ ʻಆ ಒಂದು ನಡೆʼ ರಷ್ಯಾ-ಉಕ್ರೇನ್‌ ಯುದ್ಧಕ್ಕೆ ಅಂತ್ಯ ಹಾಡುತ್ತಾ?

Donald Trump

Profile Deekshith Nair Jan 24, 2025 1:12 PM

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್(‌Donald Trump) ತಮ್ಮ ಪದಗ್ರಹಣದ ನಂತರ ಸಾಕಷ್ಟು ಮಹತ್ವದ ನಿರ್ಣಯಗಳನ್ನು ಘೋಷಿಸುತ್ತಿದ್ದಾರೆ. ಇದೀಗ ದಾವೋಸ್‌ನಲ್ಲಿ(Davos) ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯನ್ನು(World Economic Forum) ಉದ್ದೇಶಿಸಿ ಟ್ರಂಪ್‌ ಗುರುವಾರ(ಜ.23) ಮಾತನಾಡಿದ್ದಾರೆ. ಸೌದಿ ಅರೇಬಿಯಾ ಮತ್ತು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ (OPEC) ಇತರ ಸಂಸ್ಥೆಗಳಿಗೆ ತೈಲ ಬೆಲೆ ಕಡಿಮೆ ಮಾಡಲು ಡೊನಾಲ್ಡ್‌ ಟ್ರಂಪ್ ಕರೆ ನೀಡಿದ್ದು, ಕಡಿಮೆ ಬೆಲೆಯಿಂದಾಗಿ ರಷ್ಯಾ-ಉಕ್ರೇನ್‌ ಯುದ್ಧ ಅಂತ್ಯವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.‌

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಮಹತ್ವದ ಭಾಷಣ ಮಾಡಿದ್ದಾರೆ. "ನಾನು ಸೌದಿ ಅರೇಬಿಯಾ ಮತ್ತು ಒಪೆಕ್‌ಗೆ ತೈಲ ಬೆಲೆಯನ್ನು ಕಡಿಮೆ ಮಾಡಲು ಹೇಳಲಿದ್ದೇನೆ. ನೀವು ಕೂಡ ತೈಲ ಬೆಲೆ ಇಳಿಸಬೇಕು. ನನ್ನ ಚುನಾವಣೆಗೂ ಮೊದಲೇ ಸೌದಿ ದೇಶಕ್ಕೆ ನಾನು ಕರೆ ನೀಡಿದ್ದೆ. ಆದರೆ ಅವರು ನನ್ನ ಮಾತನ್ನು ತಳ್ಳಿ ಹಾಕಿದರು. ಅವರು ಬೆಲೆ ಕಡಿಮೆ ಮಾಡದಿರುವುದು ನನಗೆ ಆಶ್ಚರ್ಯ ತರಿಸಿದೆ. ತೈಲ ಬೆಲೆ ಇಳಿದ ಕೂಡಲೇ ರಷ್ಯಾ-ಉಕ್ರೇನ್‌ ಯುದ್ಧ ಅಂತ್ಯವಾಗುತ್ತದೆ" ಎಂದರು.



"ಇದೀಗ ಮತ್ತೆ ಯುದ್ಧ ಮುಂದುವರಿಯುವಷ್ಟು ಬೆಲೆ ಹೆಚ್ಚಾಗಿದೆ. ನೀವು ತೈಲ ಬೆಲೆಯನ್ನು ಇಳಿಸಬೇಕು.ಯುದ್ಧವನ್ನು ಕೊನೆಗೊಳಿಸಬೇಕು. ಅವರು ಅದನ್ನು ಬಹಳ ಹಿಂದೆಯೇ ಮಾಡಬೇಕಾಗಿತ್ತು. ಆದರೆ ಅವರು ಆ ನಿರ್ಧಾರಕ್ಕೆ ಬಂದಿಲ್ಲ. ತೈಲ ಬೆಲೆಗಳು ಕಡಿಮೆಯಾಗುವುದರೊಂದಿಗೆ ಲಕ್ಷಾಂತರ ಜೀವಗಳು ಉಳಿಯುತ್ತವೆ. ಹಾಗೆ ಸಾಲದ ಮೇಲಿನ ಬಡ್ಡಿದರಗಳನ್ನು ತಕ್ಷಣವೇ ಇಳಿಸಬೇಕೆಂದು ಒತ್ತಾಯಿಸುತ್ತೇನೆ. ವಿಶ್ವದ ಹಲವು ರಾಷ್ಟ್ರಗಳು ಬಡ್ಡಿದರವನ್ನು ಇಳಿಸಬೇಕು" ಎಂದು ಟ್ರಂಪ್‌ ತಮ್ಮ ಭಾಷಣದಲ್ಲಿ ಹೇಳಿದರು.

ಈ ಸುದ್ದಿಯನ್ನೂ ಓದಿ:Nithin A Gokhale Column: ತೊಂದರೆ ಕೊಟ್ಟು ಕೆಲಸ ಸಾಧಿಸೋದೇ ಟ್ರಂಪ್‌ ತಂತ್ರ !

ಟ್ರಂಪ್ ಭಾಷಣದ ಮಧ್ಯೆ ರಷ್ಯಾದ ಜನರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ರಷ್ಯಾ ಅಧ್ಯಕ್ಷ ಪುಟಿನ್‌ ಅವರೊಂದಿಗಿನ ಸಕಾರಾತ್ಮಕ ಸಂಬಂಧದ ಬಗ್ಗೆಯೂ ಹೇಳಿದರು.

ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಚೀನಾದಿಂದ ಸಹಾಯ;ಟ್ರಂಪ್‌

ಡೊನಾಲ್ಡ್‌ ಟ್ರಂಪ್‌ ಆಗಾಗ್ಗೆ ಚೀನಾ ದೇಶದ ಬಗ್ಗೆ ವಿಶ್ವಾಸದ ಮಾತುಗಳನ್ನಾಡುತ್ತಾರೆ. ನಿನ್ನೆ(ಜ.23) ತಮ್ಮ ಭಾಷಣದ ವೇಳೆ ಚೀನಾದತ್ತ ಸ್ನೇಹದ ಹಸ್ತ ಚಾಚಿದ್ದಾರೆ. ಟ್ರಂಪ್ ಮತ್ತೊಮ್ಮೆ ಚೀನಾದ ಮೇಲೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುಮಾರು ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವಲ್ಲಿ ಚೀನಾ ಪ್ರಮುಖ ಪಾತ್ರ ವಹಿಸಬಹುದು ಎಂದು ಅವರು ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಸೂಚಿಸಿದರು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಒಳ್ಳೆಯ ವ್ಯಕ್ತಿ ನನಗೆ ಅವರ ಮೇಲೆ ಪ್ರೀತಿ ಗೌರವವಿದೆ. ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು.