ಸಂಜು ಸ್ಯಾಮ್ಸನ್ ತೋರು ಬೆರಳಿಗೆ ಗಾಯ: 2025ರ ಐಪಿಎಲ್‌ವರೆಗೂ ಕ್ರಿಕೆಟ್‌ನಿಂದ ಔಟ್!
Index finger injury for Sanju Samson: ಭಾರತ ಟಿ20 ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ತೋರು ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಇಂಗ್ಲೆಂಡ್ ವಿರುದ್ದದ ಐದನೇ ಟಿ20ಐ ಪಂದ್ಯದಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದು, 2025ರ ಐಪಿಎಲ್ ಟೂರ್ನಿಯ ವರೆಗೂ ಲಭ್ಯರಾಗುವುದಿಲ್ಲ ಎಂದು ವರದಿಯಾಗಿದೆ.
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ತೋರು ಬೆರಳಿನ ಗಾಯಕ್ಕೆ ತುತ್ತಾಗಿರುವ ಭಾರತ ತಂಡದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ (Sanju Samson) ಒಂದು ತಿಂಗಳಿಗೂ ಹೆಚ್ಚಿನ ಅವಧಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆಂದು ಬಿಸಿಸಿಐ ಮೂಲಗಳು ತಿಳಿಸಿರುವುದು ವರದಿಯಾಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಅಂತಿಮ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರ ಎಸೆತದಲ್ಲಿ ಸಂಜು ಸ್ಯಾಮ್ಸನ್ ಅವರ ತೋರು ಬೆರಳಿಗೆ ಚೆಂಡು ತಗುಲಿತ್ತು. ಈ ಹಿನ್ನೆಲೆಯಲ್ಲಿ ಅವರ ಬದಲು ಧ್ರುವ್ ಜುರೆಲ್ ಇಂಗ್ಲೆಂಡ್ ತಂಡದ ಇನಿಂಗ್ಸ್‌ನಲ್ಲಿ ವಿಕೆಟ್ ಕೀಪರ್
ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಸಂಜು ಸ್ಯಾಮ್ಸನ್ ಅವರು ಬರೋಬ್ಬರಿ ಒಂದೂವರೆ ತಿಂಗಳು ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಇದರ ಪರಿಣಾಮ ಅವರು ತಮ್ಮ ಕೇರಳ ತಂಡದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
IND vs ENG: ಅಭಿಷೇಕ್ ಶರ್ಮಾ ಬ್ಯಾಟಿಂಗ್ ಅಬ್ಬರ, ಕೊನೆಯ ಪಂದ್ಯವನ್ನೂ ಗೆದ್ದ ಭಾರತ!
ಟಿ20ಐ ಸರಣಿ ಮುಗಿಸಿಕೊಂಡು ನೇರವಾಗಿ ಸಂಜು ಸ್ಯಾಮ್ಸನ್ ತಮ್ಮ ತವರೂರು ತಿರುವನಂತಪುರಂನಲ್ಲಿರುವ ಮನೆಗೆ ಮರಳಿದ್ದಾರೆ ಹಾಗೂ ನಂತರ ಬೆಂಗಳೂರಿಗೆ ತೆರಳಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದಾರೆ. ಸಂಪೂರ್ಣವಾಗಿ ಗುಣಮುಖರಾದ ಬಳಿಕ ಎನ್‌ಸಿಎ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಸಂಜು ಸ್ಯಾಮ್ಸನ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ.
ಬಿಸಿಸಿಐ ಮೂಲಗಳು ಹೇಳಿದ್ದೇನು?
"ಸಂಜು ಸ್ಯಾಮ್ಸನ್ ಅವರ ಬಲಗೈ ತೋರು ಬೆರಳಿಗೆ ಗಾಯವಾಗಿದೆ. ಇದರಿಂದ ಅವರು ಗುಣಮುಖರಾಗಿ ನೆಟ್ಸ್‌ನಲ್ಲಿ ಬ್ಯಾಟ್ ಮಾಡಲು ಕನಿಷ್ಠ ಆರು ವಾರಗಳ ಅವಧಿ ಬೇಕಾಗಬಹುದು. ಆದ್ದರಿಂದ ಫೆಬ್ರವರಿ 8 ರಿಂದ 12ರವರೆಗೆ ಜಮ್ಮು ಮತ್ತು ಕಾಶ್ಮೀರ ವಿರುದ್ದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಿಂದ ಅವರು ಸಂಪೂರ್ಣ ಹೊರಗುಳಿಯಲಿದ್ದಾರೆ," ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದನ್ನು ಪಿಟಿಐ ವರದಿ ಮಾಡಿದೆ.
Bad News...SANJU SAMSON Back In Trivandrum Kerala...Having Confirmed Fractured His Index Finger..Will be On Rest for Six Weeks...He Won't be Participating In Ranji Trophy Either...
— SANTHOSH Cochin (@SANTHOS15514244) February 3, 2025
IPL Participation Yet to be Confirmed... pic.twitter.com/MyhR63nuam
2025ರ ಐಪಿಎಲ್‌ಗೆ ಸಂಜು ಮರಳಬಹುದು
"2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಹೊತ್ತಿಗೆ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ಪರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಬಹುದು," ಎಂದು ಅವರು ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರು ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಭಾನುವಾರದ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಎಸೆದ ಸರಿ ಸುಮಾರು 150ಕಿ.ಮೀ ವೇಗದ ಎಸೆತದಲ್ಲಿ ಚೆಂಡು ಸಂಜು ತೋರು ಬೆರಳಿಗೆ ತಗುಲಿತು. ನಂತರ ಅವರು ಮತ್ತೊಂದು ಸಿಕ್ಸರ್ ಹಾಗೂ ಬೌಂಡರಿಯನ್ನು ಬಾರಿಸಿದ್ದರು. ನಂತರ ಅವರ ಬೆರಳಿನಲ್ಲಿ ಊತ ಕಾಣಿಸಿಕೊಂಡಿತ್ತು. ಇದಾದ ಬಳಿಕ ಸಂಜು ಡಗೌಟ್‌ಗೆ ತೆರಳಿ ಸ್ಕ್ಯಾನ್‌ಗೆ ಅವರ ಬೆರಳನ್ನು ಒಳಪಡಿಸಿದ್ದರು.
IND vs ENG: ಸ್ಪೋಟಕ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಅಭಿಷೇಕ್ ಶರ್ಮಾ!
ಇಂಗ್ಲೆಂಡ್ ವಿರುದ್ಧ ಟಿ20ಐ ಸರಣಿಯಲ್ಲಿ ವೈಫಲ್ಯ
ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಐದು ಪಂದ್ಯಗಳಿಂದ ಸಂಜು ಸ್ಯಾಮ್ಸನ್ ಗಳಿಸಿದ್ದು ಕೇವಲ 51 ರನ್‌ಗಳು ಮಾತ್ರ. ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಅವರು ಗಳಿಸಿದ್ದ 26 ರನ್ ಈ ಸರಣಿಯಲ್ಲಿನ ಇನಿಂಗ್ಸ್‌ವೊಂದರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಅದರಲ್ಲಿಯೂ ವಿಶೇಷವಾಗಿ ಸಂಜು ಶಾರ್ಟ್ ಎಸೆತಗಳಲ್ಲಿ ತಮ್ಮ ವಿಕೆಟ್ ಅನ್ನು ಕೈಚೆಲ್ಲಿದ್ದರು. ಜೋಫ್ರಾ ಆರ್ಚರ್, ಮಾರ್ಕ್ ವುಡ್ ಹಾಗೂ ಸಾಕಿಬ್ ಮಹ್ಮೂದ್ ಅವರಿಗೆ ಮೊದಲ ಪವರ್‌ಪ್ಲೇ ಒಳಗಡೆ ಅವರು ವಿಕೆಟ್ ಒಪ್ಪಿಸಿದ್ದಾರೆ.