ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: ಬಾಲ್ಯದಲ್ಲಿಯೇ ಮಕ್ಕಳಲ್ಲಿ ಸದ್ಭಾವನೆಗಳನ್ನು ಬೆಳೆಸಿದಾಗ ಇದು ಸಾಧ್ಯ: ಮಂಗಳನಾಥಸ್ವಾಮೀಜಿ ಸಲಹೆ

ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು, ಗಿಡ ವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ? ಎಂಬ ಎಂಬ ಗಾದೆಗಳನ್ನು ಉಲ್ಲೇಖಿಸಿ ತಂದೆ ತಾಯಂದಿರು ಮಕ್ಕಳನ್ನು ಬಾಲ್ಯದಿಂದಲೇ ಸರಿದಾರಿಗೆ ತರುವ ಕೆಲಸ ಮಾಡಬೇಕು. ಭಕ್ತ ಪ್ರಹ್ಲಾದನಿಗೆ ಸ್ವತಃ ತಂದೆಗೇ ಸಂಸ್ಕಾರವನ್ನು ನೀಡುವ ಸಾಮರ್ಥ್ಯವಿತ್ತು

ಪೋಷಕರೇ ನಿಮ್ಮ ಮಕ್ಕಳನ್ನು ವಿಶ್ವಮಾನವರಾಗಿ ಬೆಳೆಸಲು ಶ್ರಮಪಡಿ

ಸಹೋದರ ಭಾವ, ಸಹಬಾಳ್ವೆಯ ಬದುಕನ್ನು ತಿಳಿಸಿ,ಜತೆಗೆ ನಮ್ಮ ನೆಲದ ಗುಣವುಳ್ಳ ಸದ್ಭಾವನೆಗಳನ್ನು ಬೆಳಸಬೇಕು.ಇದಾದಲ್ಲಿ ಮಾತ್ರ ದೇಶಕ್ಕೆ ಸತ್ಪçಜೆಗಳನ್ನು ಕೊಡಲು ಸಾಧ್ಯವಾಗಲಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥಸ್ವಾಮೀಜಿ ತಿಳಿಸಿದರು.

Profile Ashok Nayak Feb 15, 2025 10:06 PM

ಚಿಕ್ಕಬಳ್ಳಾಪುರ: ಪೋಷಕರೇ ತಮ್ಮ ಮಕ್ಕಳನ್ನು ವಿಶ್ವಮಾನವರಾಗಿ ಬೆಳೆಯಲು ಬಿಡಿ. ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಸಹೋದರ ಭಾವ, ಸಹಬಾಳ್ವೆಯ ಬದುಕನ್ನು ತಿಳಿಸಿ,ಜತೆಗೆ ನಮ್ಮ ನೆಲದ ಗುಣವುಳ್ಳ ಸದ್ಭಾವನೆಗಳನ್ನು ಬೆಳಸಬೇಕು.ಇದಾದಲ್ಲಿ ಮಾತ್ರ ದೇಶಕ್ಕೆ ಸತ್ಪ್ರಜೆಗಳನ್ನು ಕೊಡಲು ಸಾಧ್ಯವಾಗಲಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥಸ್ವಾಮೀಜಿ ತಿಳಿಸಿದರು. ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಯು.ಕೆ.ಜಿ ಮಕ್ಕಳಿಗೆ 'ಗ್ರಾಜುಯೇಷನ್ ಡೇ' ವiತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ 'ಮಾತಾ ಪಿತೃ ವಂದನಾ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಂಗಳನಾಥಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು, ಗಿಡ ವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ? ಎಂಬ ಎಂಬ ಗಾದೆಗಳನ್ನು ಉಲ್ಲೇಖಿಸಿ ತಂದೆ ತಾಯಂದಿರು ಮಕ್ಕಳನ್ನು ಬಾಲ್ಯದಿಂದಲೇ ಸರಿದಾರಿಗೆ ತರುವ ಕೆಲಸ ಮಾಡಬೇಕು. ಭಕ್ತ ಪ್ರಹ್ಲಾದನಿಗೆ ಸ್ವತಃ ತಂದೆಗೇ ಸಂಸ್ಕಾರವನ್ನು ನೀಡುವ ಸಾಮರ್ಥ್ಯವಿತ್ತು. ತ್ಯಾಗದ ಭೂಮಿ ಭಾರತದಲ್ಲಿ ಇಂತಹ ಸಂಪ್ರದಾಯಗಳು ಸಹಜವಾಗಿ ಬರುತ್ತವೆ.ಇದನ್ನು ಮನಗಂಡು ಪೋಷಕರು ಮಕ್ಕಳಿಗೆ ಮೊದಲ ಗುರುಗಳಾಗಿ ಒಳ್ಳೆಯ ಗುಣಗಳನ್ನು ಅವರಲ್ಲಿ ಬೆಳೆಸಲು ಮನಸ್ಸು ಮಾಡಬೇಕು ಎಂದು ತಿಳಿಸಿದರು.

ಯು.ಕೆ.ಜಿ ಮಕ್ಕಳಿಗೆ 'ಗ್ರಾಜುಯೇಷನ್ ಡೇ' ಎನ್ನುವುದು ಶಾಲಾ ಪ್ರಮಾಣಪತ್ರ ನೀಡುವ ಕಾರ್ಯ ಕ್ರಮವೇ ವಿನಃ ಬೇರೆಯಲ್ಲ. ಶಿಕ್ಷಕರ ಸಾಮರ್ಥ್ಯ ಅಗಣಿತವಾದದ್ದು.ಉತ್ತಮ ಶಿಕ್ಷಕ ಮಕ್ಕಳಲ್ಲಿನ ಪ್ರತಿಭೆಯನ್ನು ಗುರ್ತಿಸಿ ಅದಕ್ಕೆ ತಕ್ಕಂತೆ ಸದ್ವಿಚಾರಗಳನ್ನು ತುಂಬಬೇಕು. ಆಗ ಮಾತ್ರ ಅವರು ಒಳ್ಳೆಯ ವಿಚಾರಗಳನ್ನು ಕಲಿಯುತ್ತಾರೆ.ಇದಕ್ಕೆ ತಕ್ಕಂತೆ ಮನೆಯಲ್ಲಿ  ಕೂಡ ಪೋಷಕರು ಮಕ್ಕಳ ಮುಂದೆ ಒಳ್ಳೆಯ ವಿಚಾರಗಳನ್ನು ಮಾತನಾಡಬೇಕು. ಮನೆಯಲ್ಲಿನ ವಾತಾವರಣವು ಮಕ್ಕಳು ಒಳ್ಳೆಯವರಾಗಲು ಹಾಗೂ ಕೆಟ್ಟವರಾಗಲು ಪ್ರಮುಖಪಾತ್ರ ವಹಿಸುತ್ತದೆ. ವಿಶ್ವಮಾನವರಾಗಿ ಜನಿಸಿದ ಮಕ್ಕಳನ್ನು ಸಮಾಜವು ಅಲ್ಪಮಾನವನ್ನಾಗಿಸುತ್ತದೆ. ಆದುದರಿಂದ ಶಿಕ್ಷಣ ಮತ್ತು ಸಮಾಜ ಅವರನ್ನು ವಿಶ್ವಮಾನವರಾಗಿಯೇ ಬೆಳೆಯುವಂತೆ ವಾತಾವರಣವನ್ನು ಕಲ್ಪಿಸಬೇಕು. ಮಕ್ಕಳಲ್ಲಿ ಅಪಾರ ಪ್ರತಿಭೆಯಿದ್ದು ಅದನ್ನು ಹೊರತರಲು ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ ಎಂದು ತಿಳಿಸಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ|| ಎನ್. ಶಿವರಾಮರೆಡ್ಡಿ ಮಾತನಾಡುತ್ತ ಈದಿನ ವಿದ್ಯಾರ್ಥಿಗಳಾದ ನೀವು ತಂದೆ ತಾಯಿಗಳಿಗೆ ಪಾದ ಮುಟ್ಟಿ ನಮಸ್ಕರಿಸಿದ್ದೀರಿ.ಈ ಮುಖೇನ ನಿಮ್ಮನ್ನು ಗೌರವಯುತವಾಗಿ ನೋಡುತ್ತೇನೆ.ತಲೆಬಾಗಿ ಹೇಳುತ್ತೇನೆ. ನಿಮ್ಮನ್ನು ತಲೆಯೆತ್ತಿ ತಿರುಗು ವಂತೆ ಮಾಡುತ್ತೇನೆ ಎಂಬ ಪ್ರತಿಜ್ಞೆಯನ್ನು ಮಾಡಿದ್ದೀರಿ.ಜೀವನದುದ್ದಕ್ಕೂ ಇದೇ ಭಾವನೆ ನಿಮ್ಮಲ್ಲಿ ಇರಬೇಕು.ಇರುವಂತೆ ನೋಡಿಕೊಳ್ಳಿ ಎಂದು ಕರೆ ನೀಡಿದರು.
ಮನೆಯಲ್ಲಿ ಪೋಷಕರೂ ಉತ್ತಮವಾದ ಅಭ್ಯಾಸಗಳನ್ನು ರೂಡಿಸಿಕೊಂಡಾಗ ಅವುಗಳನ್ನು ಮಕ್ಕಳು ಅನುಕರಣೆಮಾಡುತ್ತಾರೆ. ಆದುದರಿಂದ ಪೋಷಕರು ಮನೆಯಲ್ಲಿ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕೆಂದು ತಿಳಿಸಿದ ಅವರು ಎಸ್.ಎಸ್.ಎಲ್.ಸಿ ನಂತರ ವಿದ್ಯಾರ್ಥಿಗಳು ಪೋಷಕರ ಕನಸಿನಂತೆ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಕಾಲೇಜಿಗೆ ಹೋದ ಮೇಲೆ ತಮ್ಮ ಜವಾಬ್ಧಾರಿಯನ್ನು ಅರಿತು, ತಮ್ಮ ಭವಿಷ್ಯದ ಕಡೆಗೆ ಹೆಚ್ಚಿನ ಗಮನಕೊಡಬೇಕು ಎಂದು ತಿಳಿಸಿ ದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳ ಬೇಕೆಂದು ಹಾರೈಸಿದ ಅವರು  ಪರೀಕ್ಷಾ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಗಮನ ಇರಿಸಿ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ನಂತರ ಯು.ಕೆ.ಜಿ ಪುಟಾಣಿಗಳಿಂದ ಆಕರ್ಷಕ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಕಾರ್ಯ ಕ್ರಮದ ಬಗ್ಗೆ ಹಲವಾರು ಪೋಷಕರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ೧೬೫ ವಿದ್ಯಾರ್ಥಿಗಳು ಅವರವರ ತಂದೆ ತಾಯಂದಿರಿಗೆ ಪಾದಪೂಜೆಯನ್ನು ಮಾಡುವುದರ ಮೂಲಕ ಆಶೀರ್ವಾದವನ್ನು ಬೇಡಿದರು. ಇದೇ ವೇಳೆ ಯು.ಕೆ.ಜಿಯ ೧೮೦ ಪುಟಾಣಿ ಗಳಿಗೆ ಶಾಲಾ ಪ್ರಮಾಣ ಪತ್ರ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಿಜಿಎಸ್ ಇಂಗ್ಲೀಷ್ ಶಾಲೆಯ ಪ್ರಾಂಶುಪಾಲ ಮೋಹನ್ ಕುಮಾರ್ ಡಿ.ಸಿ, ಬಿಜಿಎಸ್ ಮುಖ್ಯ ನಿಲಯಾಧಿಕಾರಿ ಹೆಚ್. ಎಂ. ರಾಜು, ಶೈಕ್ಷಣಿಕ ಸಲಹೆಗಾರ ಎಸ್. ಮಂಜು ನಾಥ್,ಎಲ್ಲಾ ವಿದ್ಯಾರ್ಥಿಗಳ ತಂದೆ ತಾಯಿಂದರು ಮತ್ತು ಶಿಕ್ಷಕ ವೃಂದದವರು ಭಾಗವಹಿಸಿದ್ದರು.