Dr Sadhanashree Column: ದಿನನಿತ್ಯದ ಬೇಳೆಗಳು: ಆಯುರ್ವೇದ ಹೇಳೋದೇನು ?
ಆಹಾರದ ಗುಣಮಟ್ಟವು ಕೇವಲ ಅಡುಗೆ ವಿಧಾನದಿಂದಲ್ಲ, ಅದು ಬೆಳೆಯುವ ಭೂಮಿ, ಹವಾಮಾನ ಮತ್ತು ಋತುವಿನ ಮೇಲೆಯೂ ಅವಲಂಬಿತವೆಂಬುದು ಆಯುರ್ವೇದದ ಸೂಕ್ಷ್ಮ ದೃಷ್ಟಿ. ಜಗತ್ತಿನಾ ದ್ಯಂತ ಲಭ್ಯವಿರುವ ಪದಾರ್ಥಗಳಲ್ಲಿ ಬೇಳೆಗಳ ಬಳಕೆ ಸರ್ವೇಸಾಮಾನ್ಯ. ಚಪಾತಿ ಪ್ರಧಾನ ವಾದ, ಅನ್ನ ಪ್ರಧಾನವಾದ, ಮಾಂಸ ಪ್ರಧಾನವಾದ ಆಹಾರವಿರಲಿ ಅದಕ್ಕೆ ಬೇಳೆಯಿಂದ ತಯಾರಾದ ಪಲ್ಯ/ಮೇಲೋಗರ ಜತೆಗೆ ಇದ್ದೇ ಇರುತ್ತದೆ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ನಮ್ಮ ಸಂಸ್ಕೃತಿಯಲ್ಲಿ ಬೇಳೆಗಳನ್ನು ಬಳಸಿದ ವಿಧಾನ ಅಂಧಾಚಾರದಿಂದ ಹುಟ್ಟಿದದ್ದಲ್ಲ. ಅದು ದೀರ್ಘಕಾಲದ ಅವಲೋಕನ, ಅನುಭವ ಮತ್ತು ಸೂಕ್ಷ್ಮ ವಿವೇಕದಿಂದ ರೂಪು ಗೊಂಡ ಜೀವನ ವಿಜ್ಞಾನ. ಅಜ್ಜಿಯ ಅಡುಗೆಮನೆ, ರೈತನ ಹೊಲ, ವೈದ್ಯನ ಗ್ರಂಥ- ಇವೆಲ್ಲ ವೂ ಒಂದೇ ಜ್ಞಾನ ಧಾರೆಯ ವಿಭಿನ್ನ ಮುಖಗಳು. ನಾವು ಮತ್ತೆ ಆ ಜ್ಞಾನಕ್ಕೆ ಹಿಂತಿರುಗ ಬೇಕೆಂದರೆ, ಹಳೆಯ ಕಾಲಕ್ಕೆ ಹಿಂದಿರುಗಬೇಕೆಂದಿಲ್ಲ.
ಒಂದು ಕಾಲದಲ್ಲಿ, ಮನೆಯ ಅಂಗಳದಲ್ಲಿ ಬಿಸಿಲಲ್ಲಿ ಒಣಗಿಸುತ್ತಿದ್ದ ಬೇಳೆಗಳ ಮೇಲೆ ಕಣ್ಣು ಇಟ್ಟುಕೊಂಡು ಅಜ್ಜಿ ಕೂತಿರುತ್ತಿದ್ದಳು. “ಇವತ್ತು ಹೆಸರುಬೇಳೆ" ಎಂದು ಹೇಳುತ್ತಾ, ಆಕೆ ಬೆರಳಲ್ಲಿ ಒಂದು ಕಾಳನ್ನು ಎತ್ತಿ ನೋಡಿ, “ಇದು ಲಘು, ಹೊಟ್ಟೆಗೆ ಹಗುರ" ಎಂದಳು. ಮತ್ತೊಂದು ದಿನ ಉದ್ದಿನ ಬೇಳೆ ಒಣಗುತ್ತಿದ್ದಾಗ, “ಇದು ಎಲ್ಲರಿಗೂ ಅಲ್ಲ ಕಣೇ, ಬಲ ಬೇಕಾದವರಿಗೆ ಮಾತ್ರ" ಎಂದು ಎಚ್ಚರಿಸುತ್ತಿದ್ದಳು. ಆಗ ನಮಗೆ ಅದು ಅಡುಗೆ ಜ್ಞಾನವೋ, ಆಯುರ್ವೇದವೋ ಎಂದು ಗೊತ್ತಿರ ಲಿಲ್ಲ.
ಆದರೆ ಇಂದು ಹಿಂದಿರುಗಿ ನೋಡಿದಾಗ ಅರ್ಥವಾಗುತ್ತದೆ- ನಮ್ಮೆಲ್ಲರ ಅಡುಗೆಮನೆಗಳಲ್ಲಿ ಆಯು ರ್ವೇದ ಬದುಕುತ್ತಿತ್ತು; ಬೇಳೆಗಳನ್ನು ರುಚಿಗೆ ಮಾತ್ರವಲ್ಲ, ದೇಹದ ಸ್ಥಿತಿ, ಋತು ಮತ್ತು ಅಗತ್ಯವನ್ನು ಅರಿತು ಬಳಸುವ ಬುದ್ಧಿಮತ್ತೆ ಅದು ಅಂತ. ಭಾರತೀಯ ಅಡುಗೆಮನೆಗೆ ಬೇಳೆಗಳು ಕೇವಲ ಆಹಾರ ವಲ್ಲ- ಅವು ಆರೋಗ್ಯ, ಸಂಸ್ಕೃತಿ ಮತ್ತು ಜೀವನಶೈಲಿಯ ಅವಿಭಾಜ್ಯ ಅಂಗಗಳು.
ಶತಮಾನಗಳಿಂದ ನಮ್ಮ ಪೂರ್ವಜರು ಬೇಳೆಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸುತ್ತಾ ಬಂದಿದ್ದಾರೆ. ಆಯುವೇ ದವು ಬೇಳೆಗಳನ್ನು ಪ್ರೋಟೀನ್ ಮೂಲವೆಂದು ಮಾತ್ರ ನೋಡದೆ, ಅವುಗಳ ರಸ, ಗುಣ, ವೀರ್ಯ, ವಿಪಾಕ ಮತ್ತು ದೋಷಗಳ ಮೇಲೆ ಬೀರುವ ಪರಿಣಾಮಗಳನ್ನೂ ವಿಶ್ಲೇಷಿಸಿದೆ.
ಆಹಾರದ ಗುಣಮಟ್ಟವು ಕೇವಲ ಅಡುಗೆ ವಿಧಾನದಿಂದಲ್ಲ, ಅದು ಬೆಳೆಯುವ ಭೂಮಿ, ಹವಾಮಾನ ಮತ್ತು ಋತುವಿನ ಮೇಲೆಯೂ ಅವಲಂಬಿತವೆಂಬುದು ಆಯುರ್ವೇದದ ಸೂಕ್ಷ್ಮ ದೃಷ್ಟಿ. ಜಗತ್ತಿನಾದ್ಯಂತ ಲಭ್ಯವಿರುವ ಪದಾರ್ಥಗಳಲ್ಲಿ ಬೇಳೆಗಳ ಬಳಕೆ ಸರ್ವೇಸಾಮಾನ್ಯ. ಚಪಾತಿ ಪ್ರಧಾನ ವಾದ, ಅನ್ನ ಪ್ರಧಾನವಾದ, ಮಾಂಸ ಪ್ರಧಾನವಾದ ಆಹಾರವಿರಲಿ ಅದಕ್ಕೆ ಬೇಳೆಯಿಂದ ತಯಾರಾದ ಪಲ್ಯ/ಮೇಲೋಗರ ಜತೆಗೆ ಇದ್ದೇ ಇರುತ್ತದೆ.
ಇದನ್ನೂ ಓದಿ: Dr Sadhanashree Column: ಆಹಾರ-ಆಸನ-ಆಯುಷ್ಯ: ನಮ್ಮ ಸಂಸ್ಕೃತಿಯ ಆರೋಗ್ಯ ವಿಜ್ಞಾನ
ಅದಕ್ಕೆ ಯಜುರ್ವೇದದ ಚಮಕವೆಂಬ ಮಂತ್ರಗಳಲ್ಲಿ ಭಗವಂತನ ಕುರಿತು ಹೀಗೆ ಪ್ರಾರ್ಥಿ ಸಲಾಗುತ್ತದೆ: ‘ವ್ರೀಹಯಶ್ಚಮೆ ಯವಾಶ್ಚ ಮೇ ಮಾಷಾಶ್ಚ ಮೇ ತಿಲಾಶ್ಚ ಮೇ ಮುದ್ಗಾಶ್ಚ ಮೇ ಖಲ್ವಾಶ್ಚ ಮೇ ಗೋಧೂಮಾಶ್ಚ ಮೇ ಮಸೂರಾಶ್ಚ ಮೇ ಪ್ರಿಯಂಗವಶ್ಚ ಮೇಣವಶ್ಚ ಮೇ ಶ್ಯಾಮಾಕಾಶ್ಚ ಮೇ ನೀವಾರಾಶ್ಚ ಮೇ’. ಅಂದರೆ- ಭತ್ತ, ಬಾರ್ಲಿ, ಉದ್ದು, ಎಳ್ಳು, ಹೆಸರುಬೇಳೆ, ತೊಗರಿಬೇಳೆ, ಗೋಧಿ, ಮಸೂರಿ, ನವಣೆ, ಸಣ್ಣಕ್ಕಿ, ಸಾಮೆ, ಅಕ್ಕಿ ಮುಂತಾದ ಧಾನ್ಯಗಳು ನನಗೆ ದೊರಕುವಂತಾಗಲಿ ಎಂದು ಪ್ರಾರ್ಥಿಸುತ್ತೇವೆ.
ಕಾರಣ ಬೇಳೆಗಳು ನಮಗೆ ಅಗತ್ಯವಿರುವ ಬಹಳ ಮುಖ್ಯವಾದ ಪೋಷಕಾಂಶಗಳಲ್ಲಿ ಒಂದು. ಈ ಲೇಖನದಲ್ಲಿ ನಮ್ಮ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುವ ಐದು ಬೇಳೆಗಳು- ಚೆನ್ನಂಗಿ, ಹೆಸರು, ತೊಗರಿ, ಕಡಲೆ, ಉದ್ದಿನ ಬೇಳೆ- ಇವುಗಳನ್ನು ಆಯುರ್ವೇದ ಮತ್ತು ಪ್ರಕೃತಿ ಎರಡರ ಬೆಳಕಿನಲ್ಲಿ ಅರಿಯೋಣ.
1 ಚೆನ್ನಂಗಿ ಬೇಳೆ: ಮಸೂರ್ ದಾಲ್ ಎಂದು ಪ್ರಸಿದ್ಧವಾಗಿರುವ ಈ ಬೇಳೆಯು ಸೋಯಾ ಬೀನ್ ನಂತರ ಅತ್ಯಂತ ಪ್ರೋಟೀನ್ ಹೊಂದಿದೆ. ಇದು ಎಲ್ಲಿ ಬೆಳೆಯುತ್ತದೆ? ಮಸೂರು ಬೇಳೆ ಸಾಮಾನ್ಯ ವಾಗಿ ಶೀತ ಮತ್ತು ಒಣ ಹವಾಮಾನಕ್ಕೆ ಹೊಂದಿಕೊಳ್ಳುವ ಬೆಳೆ. ಉತ್ತರ ಭಾರತ, ಮಧ್ಯ ಭಾರತ ಮತ್ತು ಹಿಮಾಲಯದ ಪಾದಭಾಗಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಮಳೆಯ ಅವಲಂಬನೆ ಕಡಿಮೆ ಇರುವ ಪ್ರದೇಶಗಳಲ್ಲಿ ಇದು ಉತ್ತಮವಾಗಿ ಬೆಳೆಯುತ್ತದೆ.
ಮಸೂರು ಬೇಳೆ ಆಯುರ್ವೇದದಲ್ಲಿ ಲಘು ಮತ್ತು ಶುಷ್ಕ ಗುಣ ಹೊಂದಿರುವ ಬೇಳೆ. ಇದು ಒಗರು ಮತ್ತು ಸಿಹಿ ರಸದಿಂದ ಕೂಡಿದೆ. ಇದು ಜೀರ್ಣಕ್ಕೆ ಹಗುರವಾಗಿದ್ದು ಮಲಬದ್ಧತೆಯನ್ನು ಉಂಟು ಮಾಡುವ ಸ್ವಭಾವ ಹೊಂದಿದೆ. ದೇಹದಲ್ಲಿ ಅತಿಯಾದ ಬೊಜ್ಜು , ಮಧುಮೇಹ, ಕಫದ ತೊಂದರೆ ಗಳಲ್ಲಿ, ರಕ್ತಇಪಿತ್ತ ವಿಕಾರಗಳಲ್ಲಿ ಹಿತ.
ಹೆಸರು ಬೇಳೆ: ಹೆಸರು ಬೇಳೆ ಆಯುರ್ವೇದದಲ್ಲಿ ಅತ್ಯಂತ ಶ್ರೇಷ್ಠ ಹಾಗೂ ತ್ರಿದೋಷ ಶಾಮಕ ಬೇಳೆ. ಇದು ನಿತ್ಯೋಪಯೋಗಕ್ಕೆ ಯೋಗ್ಯವಾದ ಬೇಳೆ. ಇದರ ಉತ್ತಮ ಗುಣಗಳನ್ನು ಗಮನಿಸಿ ಆಯುರ್ವೇದವು ಇದನ್ನು ‘ಬೇಳೆಗಳ ರಾಜ’ ಎಂದು ಶ್ಲಾಸಿದೆ.ಇದು ಎಲ್ಲಿ ಬೆಳೆಯುತ್ತದೆ? ಹೆಸರು ಬೇಳೆ ಬೇಸಗೆ ಮತ್ತು ಮಧ್ಯಮ ಮಳೆಯ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಭಾರತದ ಬಹು ತೇಕ ಭಾಗಗಳಲ್ಲಿ- ಉತ್ತರ, ದಕ್ಷಿಣ ಮತ್ತು ಮಧ್ಯ ಭಾರತದಲ್ಲಿಯೂ- ಈ ಬೆಳೆ ಕಂಡುಬರುತ್ತದೆ. ಕಡಿಮೆ ನೀರಿನಲ್ಲಿಯೇ ಬೆಳೆಯುವ ಗುಣ ಇದಕ್ಕಿದೆ.
ಗುಣಗಳು: ಇದು ಎಲ್ಲಾ ಕಾಲದಲ್ಲೂ, ಎಲ್ಲರಿಗೂ ಹಿತವಾದ ಧಾನ್ಯ. ಬೇರೆ ಎಲ್ಲಾ ಬೇಳೆಗಳು ಅತ್ಯಧಿಕವಾಗಿ ವಾತವನ್ನು ಹೆಚ್ಚಿಸುತ್ತವೆ. ಆದರೆ ಹೆಸರು ಬೇಳೆ ಅತ್ಯಲ್ಪವಾಗಿ ವಾತವನ್ನು ವೃದ್ಧಿಸು ತ್ತದೆ. ಕಫ, ಪಿತ್ತವನ್ನು ಶಮನ ಮಾಡುತ್ತದೆ. ಇದು ಜೀರ್ಣಕ್ಕೆ ಅತ್ಯಂತ ಲಘು. ಇದು ಶೀತ ವೀರ್ಯ ವಿರುವ ಕಾರಣ ಉಷ್ಣ ಹೆಚ್ಚಾಗಿ ಉಂಟಾಗುವ ತೊಂದರೆಗಳಿಗೆ ರಾಮಬಾಣ. ಅತಿಯಾಗಿ ಸೇವಿಸಿದರೆ ಮಲಬದ್ಧತೆಯಾಗಬಹುದು.
ವಿಶೇಷತೆ: ಪ್ರಕೃತಿಯಲ್ಲಿ ಲಘುವಾಗಿ ಬೆಳೆಯುವ ಈ ಬೇಳೆ, ದೇಹದಲ್ಲೂ ಲಘುತ್ವವನ್ನು ತರುತ್ತದೆ- ಇದು ಆಯುರ್ವೇದದ ಪ್ರಕೃತಿ-ದೇಹ ಸಾದೃಶ್ಯದ ಉತ್ತಮ ಉದಾಹರಣೆ.
- ತೊಗರಿ ಬೇಳೆ: ನಮ್ಮ ದಿನನಿತ್ಯದ ಸಾಂಬಾರಿನ ಅವಿಭಾಜ್ಯ ಭಾಗ ಈ ತೊಗರಿ ಬೇಳೆ. ಇದು ಎಲ್ಲಿ ಬೆಳೆಯುತ್ತದೆ? ತೊಗರಿ ಬೇಳೆ ಉಷ್ಣ ಹವಾಮಾನ ಮತ್ತು ಉತ್ತಮ ಸೂರ್ಯಪ್ರಕಾಶ ಇರುವ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಮುಂತಾದ ದಕ್ಷಿಣ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ಇದು ಪ್ರಮುಖ ಬೆಳೆ.
ಗುಣಗಳು: ಇದು ಒಗರು ಮತ್ತು ಸಿಹಿ ರುಚಿ ಹೊಂದಿದ್ದು, ಪಾಕದ ನಂತರ ಕಟು ರಸ. ಜೀರ್ಣಕ್ಕೆ ಹಗುರವಾಗಿದ್ದು ವಾತವನ್ನು ಹೆಚ್ಚಿಸಿ ಮಲವನ್ನು ಅವರೋಧಿಸುತ್ತದೆ. ಕಫ, ಪಿತ್ತ, ಮೇದಸ್ಸು ಮತ್ತು ರಕ್ತವನ್ನು ಶಮನಮಾಡುತ್ತದೆ.
ಸೂಚನೆ: ಬಳಸುವ ಮೊದಲು ಸ್ವಲ್ಪ ಹೊತ್ತು ನೀರಲ್ಲಿ ನೆನೆಸಿ, ಬೇಯಿಸುವಾಗ ಎಣ್ಣೆ-ಹಿಂಗುಗಳನ್ನು ಬಳಸಿದರೆ ವಾತದ ತೋದರೆಯನ್ನು ತಪ್ಪಿಸಬಹುದು.
- ಕಡಲೆ ಬೇಳೆ: ಗಣನಾಯಕನಿಗೆ ಪ್ರಿಯವಾದ ಕಡಲೆ ಬೇಳೆಯು ದೇಹಕ್ಕೆ ಬಲ ನೀಡುವ ಬೇಳೆ. ಇದು ಎಲ್ಲಿ ಬೆಳೆಯುತ್ತದೆ? ಕಡಲೆ ಬೇಳೆ ಸಾಮಾನ್ಯವಾಗಿ ಒಣ ಮತ್ತು ಅಲ್ಪ ಮಳೆಯ ಪ್ರದೇಶ ಗಳಲ್ಲಿ ಬೆಳೆಯುತ್ತದೆ. ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮುಂತಾದ ರಾಜ್ಯಗಳು ಇದನ್ನು ಬೆಳೆಯುವ ಪ್ರಮುಖ ಪ್ರದೇಶಗಳು.
ಗುಣಗಳು: ಇದು ಒಣಗಿಸುವ ಗುಣ ಹೊಂದಿದ್ದು ಅತ್ಯಧಿಕವಾಗಿ ವಾತವನ್ನು ಹೆಚ್ಚಿಸುತ್ತದೆ.
ಕಫ-ಪಿತ್ತವನ್ನು ಶಮನ ಮಾಡುತ್ತದೆ. ಇದು ಜೀರ್ಣಕ್ಕೆ ಲಘು ಮತ್ತು ಒಗರು ರಸವನ್ನು ಹೊಂದಿದೆ. ಇದು ಜೀರ್ಣವಾದ ನಂತರ ಸಿಹಿ ರುಚಿಯzಗಿದೆ. ಇದು ದೇಹಕ್ಕೆ ತಂಪು. ಮಲವನ್ನು ಅವರೋಧ ಮಾಡುವ ಸ್ವಭಾವ ಹೊಂದಿದೆ. ಕಡಲೆ ಹಿಟ್ಟು ಜೀರ್ಣಕ್ಕೆ ಜಡ.
ಅರ್ಥಪೂರ್ಣ ಗಮನ: ಒಣ ಭೂಮಿಯಲ್ಲಿ ಬೆಳೆಯುವ ಈ ಬೇಳೆಯ ಶುಷ್ಕ ಗುಣ ದೇಹದಲ್ಲಿಯೂ ಪ್ರತಿಫಲಿಸುತ್ತದೆ.
- ಉದ್ದಿನ ಬೇಳೆ: ಉದ್ದಿನ ಬೇಳೆಯನ್ನು ಆಯುರ್ವೇದದಲ್ಲಿ ಅತ್ಯಂತ ಪೋಷಕ ಮತ್ತು ಬಲವರ್ಧಕ ಎಂದು ಪರಿಗಣಿಸಲಾಗಿದೆ.
ಇದು ಎಲ್ಲಿ ಬೆಳೆಯುತ್ತದೆ? ಉದ್ದಿನ ಬೇಳೆ ಉಷ್ಣ ಮತ್ತು ಆರ್ದ್ರ ಹವಾಮಾನದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ದಕ್ಷಿಣ ಭಾರತ, ಕರಾವಳಿ ಪ್ರದೇಶಗಳು ಹಾಗೂ ಮಧ್ಯ ಭಾರತದ ಕೆಲ ಭಾಗಗಳಲ್ಲಿ ಇದು ಸಾಮಾನ್ಯ.
ಗುಣಗಳು: ಇದು ಗುರು- ಅಂದರೆ ಜೀರ್ಣಕ್ಕೆ ಜಡ. ಇದು ಸ್ನಿಗ್ಧವಾಗಿರುವ ಕಾರಣ ದೇಹಕ್ಕೆ ಬಲವನ್ನು ನೀಡುತ್ತದೆ. ಉಷ್ಣವೀರ್ಯ ಹೊಂದಿದ್ದು ವಾತ ಶಮನಕ್ಕೆ ಸಹಾಯಕಾರಿ. ಆದರೆ ಕಫ-ಪಿತ್ತಗಳನ್ನು ಹೆಚ್ಚಿಸುತ್ತದೆ. ಜೀರ್ಣಕ್ಕೆ ಜಡವಾದ ಕಾರಣ ಅತಿಯಾಗಿ ಸೇವಿಸಿದರೆ ಜೀರ್ಣಶಕ್ತಿಯನ್ನು ಹಾಳು ಮಾಡಿ ಹಲವಾರು ತೊಂದರೆಯನ್ನು ಉಂಟುಮಾಡುತ್ತದೆ. ನಿಯಮಿತ ಸೇವನೆಯಿಂದ ನರದೌರ್ಬಲ್ಯಕ್ಕೆ, ಶರೀರಪುಷ್ಟಿಗೆ ಮತ್ತು ಸಂತಾನೋತ್ಪತ್ತಿಗೆ ಸಹಾಯಕಾರಿ.
ವಿಶೇಷ ಗಮನ: ಆರ್ದ್ರ ಪ್ರದೇಶಗಳಲ್ಲಿ ಬೆಳೆಯುವ ಈ ಬೇಳೆಯ ಸ್ನಿಗ್ಧ ಗುಣ ದೇಹಕ್ಕೆ ಪೋಷಕತೆ ಯನ್ನು ನೀಡುತ್ತದೆ. ಆದರೆ, ಇಡ್ಲಿ /ದೋಸೆ/ ಪಡ್ಡುಗಳ ರೂಪದಲ್ಲಿ ಹುಳಿ ಬರಿಸಿದ ಹಿಟ್ಟನ್ನು ವಾರಗಳ ಗಟ್ಟಲೆ ಫ್ರಿಜ್‌ನಲ್ಲಿ ಶೇಖರಿಸಿ ಪದೇಪದೆ ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಕೆಟ್ಟದು. ಉದ್ದಿನಿಂದ ಮಾಡಿದ ಹಿಟ್ಟನ್ನು ಅಂದೇ ಉಪಯೋಗಿಸಿ, ವಾರಕ್ಕೊಮ್ಮೆ ನಿಯಮಿತವಾಗಿ ಬಳಸಿದರೆ ತೊಂದರೆ ಇಲ್ಲ.
ಸ್ನೇಹಿತರೆ, ಆಹಾರವನ್ನು ನಾವು ಇಂದು ಕ್ಯಾಲೊರಿ, ಪ್ರೋಟೀನ್, ಕಾರ್ಬೋಹೈಡ್ರೇಟ್ ಎಂಬ ಪ್ರಮಾಣ- ಸಂಖ್ಯೆಗಳ ಮೂಲಕ ಅಳೆಯುತ್ತಿದ್ದೇವೆ. ಆದರೆ ಆಯುರ್ವೇದವು ಆಹಾರವನ್ನು ಸಂಖ್ಯೆ ಯಾಗಿ ಅಲ್ಲ, ಸಂಬಂಧವಾಗಿ ನೋಡುತ್ತದೆ- ಭೂಮಿ ಯೊಂದಿಗೆ, ಋತುವಿನೊಂದಿಗೆ, ದೇಹದೊಂದಿಗೆ ಮತ್ತು ಮನಸ್ಸಿನೊಂದಿಗೆ ಇರುವ ಸಂಬಂಧವಾಗಿ. ಯಾವ ಬೇಳೆ ಯಾವ ಮಣ್ಣಿ ನಲ್ಲಿ ಬೆಳೆಯುತ್ತದೆ, ಯಾವ ಬಿಸಿಲಲ್ಲಿ ಪಕ್ವವಾಗುತ್ತದೆ, ಯಾವ ಋತುವಿನಲ್ಲಿ ನಮ್ಮ ತಟ್ಟೆಗೆ ಬರುತ್ತದೆ- ಆ ಪ್ರಕೃತಿಯ ಗುಣವೇ ದೇಹದೊಳಗೆ ಪ್ರತಿಧ್ವನಿಸುತ್ತದೆ. ಅದಕ್ಕಾಗಿಯೇ, ಪ್ರಕೃತಿಗೆ ಹತ್ತಿರವಾಗಿ ಬೆಳೆಯುವ ಆಹಾರ ದೇಹಕ್ಕೆ ಹಿತವಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.
ನಮ್ಮ ಸಂಸ್ಕೃತಿಯಲ್ಲಿ ಬೇಳೆಗಳನ್ನು ಬಳಸಿದ ವಿಧಾನ ಅಂಧಾಚಾರದಿಂದ ಹುಟ್ಟಿದದ್ದಲ್ಲ. ಅದು ದೀರ್ಘಕಾಲದ ಅವಲೋಕನ, ಅನುಭವ ಮತ್ತು ಸೂಕ್ಷ್ಮ ವಿವೇಕದಿಂದ ರೂಪುಗೊಂಡ ಜೀವನ ವಿಜ್ಞಾನ. ಅಜ್ಜಿಯ ಅಡುಗೆಮನೆ, ರೈತನ ಹೊಲ, ವೈದ್ಯನ ಗ್ರಂಥ- ಇವೆಲ್ಲವೂ ಒಂದೇ ಜ್ಞಾನಧಾರೆಯ ವಿಭಿನ್ನ ಮುಖಗಳು.
ನಾವು ಮತ್ತೆ ಆ ಜ್ಞಾನಕ್ಕೆ ಹಿಂತಿರುಗಬೇಕೆಂದರೆ, ಹಳೆಯ ಕಾಲಕ್ಕೆ ಹಿಂದಿರುಗಬೇಕೆಂದಿಲ್ಲ. ಆದರೆ ಆಹಾರವನ್ನು ಮತ್ತೆ ಗಮನದಿಂದ, ಗೌರವದಿಂದ ಮತ್ತು ಜವಾಬ್ದಾರಿಯಿಂದ ನೋಡುವ ದೃಷ್ಟಿ ಬೇಕು. ಯಾವ ಬೇಳೆ ನನಗೆ ಸೂಕ್ತ? ಯಾವ ಋತುವಿನಲ್ಲಿ? ಯಾವ ಪ್ರಮಾಣದಲ್ಲಿ?
- ಈ ಪ್ರಶ್ನೆಗಳಲ್ಲಿಯೇ ಆರೋಗ್ಯದ ಬೀಜ ಅಡಗಿದೆ. ಆಹಾರವೇ ಔಷಧವಾಗಬೇಕು ಎಂಬುದು ಆಯುವೇ ದದ ಆಶಯ. ಆ ಔಷಧ ನಮ್ಮ ತಟ್ಟೆಯಲ್ಲಿ ಈಗಾಗಲೇ ಇದೆ- ನಾವು ಅದನ್ನು ಅರಿಯಬೇಕಷ್ಟೇ....