ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಕುಶಲಾಧಾರಿತ ಉದ್ಯೋಗ ಸೃಷ್ಟಿಯತ್ತ ಇಂದಿನ ನವಭಾರತ

ಸ್ವಾತಂತ್ರಪೂರ್ವ ಕಾಲದ 1947ರ ಪರಿಸ್ಥಿತಿ ಗಮನಿಸಿದಾಗ, ಬಹುತೇಕ ಕೃಷಿ ಆಧಾರಿತ ಕ್ಷೇತ್ರದಲ್ಲಿ ಅಂದಿನ ಸಮಾಜ ತೊಡಗಿತ್ತು. ಅಸಂಘಟಿತ ವಲಯದ ಅತಿದೊಡ್ಡ ಕ್ಷೇತ್ರ ಕೃಷಿ ಕ್ಷೇತ್ರವಾಗಿತ್ತು. ಅಂದಿನ ಅಂಕಿ ಅಂಶಗಳನ್ನು ಅಂದಾಜು ಗಮನಿಸಿದಾಗ, ಒಟ್ಟು ದುಡಿಯುವ ವರ್ಗ 13 ಕೋಟಿಯಷ್ಟಿದ್ದು, ಕೃಷಿ ಉದ್ಯೋಗ ದಲ್ಲಿಯೇ ಶೇ.70ರಿಂದ 75ರಷ್ಟು ಪಾಲಿರುತ್ತಿತ್ತು.

ಕುಶಲಾಧಾರಿತ ಉದ್ಯೋಗ ಸೃಷ್ಟಿಯತ್ತ ಇಂದಿನ ನವಭಾರತ

ಗಂಟಾಘೋಷ

ಭಾರತ ಇಂದು ಜಾಗತಿಕವಾಗಿ ಕಾರ್ಮಿಕ ಶಕ್ತಿ ಕೇಂದ್ರವಾಗಿ ಮೂಡುತ್ತಿದೆ. ಹೆಚ್ಚುವರಿ ಆದಾಯ, ವೃತ್ತಿಪರ ತರಬೇತಿ, ಜಾಗತಿಕ ಬೇಡಿಕೆಗಳಿಂದ ಉದ್ಯೋಗ ವಲಸೆಯು ಹೆಚ್ಚು ವೇಗಗೊಳ್ಳುತ್ತಿದೆ. ಭಾರತದ ಯುವಜನಸಂಖ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿ ಕೊಳ್ಳಲು, ತರಬೇತಿಗಳನ್ನು ಅಂತರರಾಷ್ಟ್ರೀಯ ಪ್ರಮಾಣಗಳಿಗೆ ಹೊಂದುವಂತೆ ಮಾಡ ಬೇಕು. ವೃತ್ತಿಪರ ಶಿಕ್ಷಣದ ಬಗ್ಗೆ, ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆ, ಇಂಗ್ಲಿಷ್ ಮತ್ತು ಸಾಫ್ಟ್‌ ಸ್ಕಿಲ್ಸ್ ತರಬೇತಿಗೆ ಪ್ರಾಮುಖ್ಯತೆ ನೀಡಬೇಕು.

ಭಾರತದ ಉದ್ಯೋಗ ಕ್ಷೇತ್ರವು ಕಳೆದ ನೂರು‌ ವರ್ಷಗಳಲ್ಲಿ ವಿಭಿನ್ನ ಮತ್ತು ವ್ಯಾಪಕ ಬದಲಾವಣೆ ಕಂಡಿದೆ. ಬ್ರಿಟಿಷ್ ಆಡಳಿತದಿಂದ ಹಿಡಿದು ಇಂದಿನ ಡಿಜಿಟಲ್ ಆಧಾರಿತ ಆರ್ಥಿಕತೆಯವರೆಗೆ ಉದ್ಯೋಗ, ಉದ್ಯಮ ಕ್ಷೇತ್ರಗಳು ಹೊಸದೊಂದು ಆಯಾಮಕ್ಕೆ ತೆರೆದುಕೊಂಡಿವೆ. ಸರಕಾರದ ಜೊತೆಗೆ ಖಾಸಗಿ ವಲಯಗಳು ಹೆಚ್ಚು ಬೆಳವಣಿಗೆ ಕಾಣುತ್ತಿರುವುದು ಮತ್ತು ಕಾರ್ಮಿಕ ವಲಯ ಸಂಘಟಿತರಾಗುತ್ತಿರುವುದು ದುಡಿಯುವ ವರ್ಗದ ಸ್ವತಂತ್ರ ಮನೋಭಾವವನ್ನು ತೋರಿಸುತ್ತದೆ.

ಇದನ್ನು ಮೂರು ಪ್ರಮುಖ ಕಾಲಘಟ್ಟದಲ್ಲಿ ವಿಶ್ಲೇಷಿಸಬಹುದು. ಸ್ವಾತಂತ್ರಪೂರ್ವ ಕಾಲದ 1947ರ ಪರಿಸ್ಥಿತಿ ಗಮನಿಸಿದಾಗ, ಬಹುತೇಕ ಕೃಷಿ ಆಧಾರಿತ ಕ್ಷೇತ್ರದಲ್ಲಿ ಅಂದಿನ ಸಮಾಜ ತೊಡಗಿತ್ತು. ಅಸಂಘಟಿತ ವಲಯದ ಅತಿದೊಡ್ಡ ಕ್ಷೇತ್ರ ಕೃಷಿ ಕ್ಷೇತ್ರವಾಗಿತ್ತು. ಅಂದಿನ ಅಂಕಿ ಅಂಶಗಳನ್ನು ಅಂದಾಜು ಗಮನಿಸಿದಾಗ, ಒಟ್ಟು ದುಡಿಯುವ ವರ್ಗ 13 ಕೋಟಿಯಷ್ಟಿದ್ದು, ಕೃಷಿ ಉದ್ಯೋಗ ದಲ್ಲಿಯೇ ಶೇ.70ರಿಂದ 75ರಷ್ಟು ಪಾಲಿರುತ್ತಿತ್ತು.

ಬ್ರಿಟಿಷ್ ಆಡಳಿತ, ರೈಲ್ವೆ, ಅಂಚೆ, ಪೊಲೀಸ್ ಸೇವೆ ಸೇರಿದಂತೆ 20 ಲಕ್ಷಗಳಷ್ಟು ಸರ್ಕಾರಿ ಉದ್ಯೋಗ ಗಳು ಮತ್ತು ಬ್ರಿಟಿಷ್ ಮಾಲಿಕತ್ವದ ಕಾರ್ಖಾನೆಗಳು, ತೋಟಗಳಂತಹ ಖಾಸಗಿ ಉದ್ಯೋಗಗಳಿದ್ದವು. ಶೇ.90ಕ್ಕಿಂತ ಹೆಚ್ಚು ಅಸಂಘಟಿತ ವಲಯವಾಗಿಯೇ ದುಡಿಯುತ್ತಿತ್ತು.

1947ಕ್ಕೂ ಮೊದಲು, 12 ಕೋಟಿಯಷ್ಟು ಒಟ್ಟು ಉದ್ಯೋಗದಲ್ಲಿ, 90ಲಕ್ಷ ಸರ್ಕಾರಿ ಉದ್ಯೋಗ, ಅಷ್ಟಕ್ಕಷ್ಟೆ ಎಂಬಂತೆ ಖಾಸಗಿ ಉದ್ಯೋಗವಲಯವಿತ್ತು. 2013ಕ್ಕೂ ಪೂರ್ವದಲ್ಲಿ ಒಟ್ಟು 45 ಕೋಟಿ ಉದ್ಯೋಗಗಳಲ್ಲಿ, ಒಂದೂವರೆ ಕೋಟಿ ಸರ್ಕಾರಿ ಉದ್ಯೋಗಗಳು, 2 ಕೋಟಿಯಷ್ಟು ಖಾಸಗಿ ಉದ್ಯೋಗಗಳ ಜೊತೆಗೆ ಅಸಂಘಟಿತ ಉದ್ಯೋಗಗಳು ಚಾಲ್ತಿಯಲ್ಲಿದ್ದವು.

72 ಋ

2024-25ಕ್ಕೆ ಒಟ್ಟು 55 ಕೋಟಿಯಷ್ಟು ಉದ್ಯೋಗಗಳಲ್ಲಿ, 2 ಕೋಟಿಯಷ್ಟು ಸರ್ಕಾರಿ, 5 ಕೋಟಿ ಯಷ್ಟು ಖಾಸಗಿ ಉದ್ಯೋಗ ವಲಯದ ಜೊತೆಗೆ ಅಸಂಘಟಿತ ಕಾರ್ಮಿಕ ವಲಯದಲ್ಲಿ ಗಣನೀಯ ಇಳಿಕೆಯಾಗಿದ್ದು ವಿಶೇಷ. ಕೇಂದ್ರದಲ್ಲಿ 2014ರ ನವೆಂಬರ್ 9ರಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮೋದ್ಯಮ ಮಂತ್ರಾಲಯ ರಚನೆಯಾದ ಮೇಲೆ, ಯುವಜನತೆಗೆ ಅಗತ್ಯವಿರುವ ಮತ್ತು ಪಾರಂಪರಿಕ ಕೌಶಲ್ಯಗಳನ್ನು ಇದರಡಿಯಲ್ಲಿ ತಂದು ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಲಾಯಿತು.

ಭಾರತವು ವಿಶ್ವದ ಅತಿ ದೊಡ್ಡ ಯುವಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಇದು ದೇಶದ ಭವಿಷ್ಯಕ್ಕಾಗಿ ಬಹುದೊಡ್ಡ ಸಂಪತ್ತು ಎನಿಸಿದ್ದರೂ, ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ಪ್ರತಿವರ್ಷ ಲಕ್ಷಾಂತರ ಯುವಕರು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಾರೆ, ಬಹುಪಾಲು ಮಂದಿ ನಿರುದ್ಯೋಗಿಗಳಾಗಿಯೇ ಉಳಿಯುತ್ತಾರೆ. ಈ ಸಮಸ್ಯೆಗೆ ಪ್ರಮುಖ ಪರಿಹಾರವೆಂದರೆ ಕೌಶಲ್ಯಾಭಿವೃದ್ಧಿ. ನಿರುದ್ಯೋಗದಿಂದ ಜಾಗತಿಕ ಕಾರ್ಯಶಕ್ತಿಯತ್ತ ಯುವಕರನ್ನು ಉತ್ತಮ ಕುಶಲ ಉದ್ಯೋಗಿಗಳನ್ನಾಗಿ ಮಾಡಲು ಕೌಶಲ್ಯ ಆಧಾರಿತ ತರಬೇತಿ, ಮಾರ್ಗದರ್ಶನದ ಕೊರತೆ ಎದ್ದುಕಾ ಣುತ್ತಿತ್ತು. ಇದನ್ನು ಹೋಗಲಾಡಿಸಲು, MSDE ಕಾರ್ಯತತ್ಪರವಾಯಿತು. ಇದು ದೇಶದ ಒಳಗಿನ ಉದ್ಯೋಗಾವಕಾಶಗಳಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಉದ್ಯೋಗ ಅವಕಾಶಗಳನ್ನು ನೀಡುತ್ತದೆ. ದೇಶದಲ್ಲಿ, ಒಂದು ಕಡೆ ಲಕ್ಷಾಂತರ ನಿರುದ್ಯೋಗಿ ಯುವಕರು ಇದ್ದಾರೆ, ಮತ್ತೊಂದೆಡೆ ಕೈಗಾರಿಕೆ ಗಳಿಗೆ ಬೇಕಾದ ತರಬೇತಿದಾರರು ಲಭ್ಯವಿಲ್ಲ.

ಇದಕ್ಕೆ, ಶಿಕ್ಷಣ ಹಾಗೂ ಕೈಗಾರಿಕಾ ಅಗತ್ಯಗಳ ನಡುವೆ ಹೊಂದಾಣಿಕೆಯ ಕೊರತೆ, ವೃತ್ತಿಪರ ಅಥವಾ ಪ್ರಾಯೋಗಿಕ ಕೌಶಲ್ಯದ ಅಭಾವ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳ ಕೊರತೆ, ಕೆಲಸಕ್ಕೆ ಬೇಕಾದ ಕೌಶಲ್ಯದ ಕೊರತೆಯಂತಹ ಪ್ರಮುಖ ಕಾರಣಗಳೆಂದು ಗುರುತಿಸಲಾಯಿತು. NSO (National Statistics Office) ಪ್ರಕಾರ, ದೇಶದಲ್ಲಿ ಶೇ.5.6ರಷ್ಟು ನಿರುದ್ಯೋಗ ಸಮಸ್ಯೆ ಇದೆ.

ಇದನ್ನೂ ಓದಿ: Gururaj Gantihole Column: ಹೊಟೇಲ್‌ ಉದ್ಯಮದ ಸವಾಲುಗಳು ಮತ್ತು ಭವಿಷ್ಯತ್ತು

ಅಂದರೆ, ಹೆಚ್ಚುಕಡಿಮೆ ೨೦ ಕೋಟಿ ಜನಸಂಖ್ಯೆಗೆ ಉದ್ಯೋಗದ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.4.9ರಷ್ಟಿದ್ದರೆ, ನಗರಪ್ರದೇಶ ಗಳಲ್ಲಿ ಶೇ.೭ರಷ್ಟಿದೆ. ನಿರುದ್ಯೋಗ ಪುರುಷರ ಸಂಖ್ಯೆ ಶೇ.5.6 ರಷ್ಟಿದ್ದರೆ, ಮಹಿಳೆಯರಲ್ಲಿ ಶೇ.5.6 ಇದೆ. ಇನ್ನು, ಜಗತ್ತಿನಾದ್ಯಂತ 205 ಮಿಲಿಯನ್ ನಿರುದ್ಯೋಗ ಸಮಸ್ಯೆಯಿದೆಂದು ವರದಿ ಹೇಳುತ್ತದೆ.

ತಂತ್ರಜ್ಞಾನ, ಮಾನವ ಕೌಶಲ್ಯಗಳ ಮೇಲೆ ಆಧಾರಿತವಾಗಿರುವ ನಿರ್ಮಾಣ, ಆರೋಗ್ಯಸೇವೆ (ನರ್ಸಿಂಗ್, ಪ್ಯಾರಾಮೆಡಿಕ್ಸ್), ಐಟಿ-ಡಿಜಿಟಲ್ ಸೇವೆಗಳು, ಆತಿಥ್ಯವಲಯ ( hospitality), ತಯಾರಿಕೆ ಮತ್ತು ಲಾಜಿಸ್ಟಿಕ್ಸ್ ನಂತಹ ಕ್ಷೇತ್ರಗಳಿಗೆ ಕೌಶಲ್ಯ ಆಧಾರಿತ ಉದ್ಯೋಗಕ್ಕೆ ಹೆಚ್ಚು ಮಹತ್ವ ನೀಡಲಾಯಿತು. ಸ್ಕಿಲ್ ಇಂಡಿಯಾ ಪ್ರೋಗ್ರಾಂ ( MSDE) ಮೂಲಕ 2022ರಿಂದ 2025ರವರೆಗೆ 9 ಸಾವಿರ ಕೋಟಿ ಅನುದಾನ ನೀಡಿ PMKVY-4.0, PM-NAPS ಮೂಲಕ 3 ಕೋಟಿ ಜನರಿಗೆ ಲಾಭ ವಾಗುವಂತೆ ನೋಡಿಕೊಳ್ಳಲಾಗಿದೆ ಎಂಬುದು ಮಾಹಿತಿ. ಇದರಲ್ಲಿ ಅಐ, ಸೈಬರ್ ಸೆಕ್ಯುರಿಟಿ, ಹಸಿರು ಹೈಡ್ರೋಜನ, ಡ್ರೋನ್, 5ಎ ಸೇರಿದಂತೆ 400ಕ್ಕೂ ಅಧಿಕ ಹೊಸ ತರಬೇತಿ ಕೋರ್ಸ್‌ಗಳು ಸೇರಿಸಲಾಗಿದೆ.

ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಯೋಜನೆಗಳು ಸಹ ಉದ್ಯೋಗಿಗಳಿಗೆ ಸಹಾಯಕವಾಗಿ ನಿಂತವು. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ( PMKVY) ಮೂಲಕ ವಿವಿಧ ಕ್ಷೇತ್ರಗಳಲ್ಲಿ ಉಚಿತ ತರಬೇತಿ ನೀಡಿ ಸ್ಕಿಲ್ ಇಂಡಿಯಾ ಮಿಷನ್ ಯೋಜನೆಯಡಿ ಕೋಟ್ಯಾಂತರ ಯುವಕರಿಗೆ ತರಬೇತಿ ನೀಡುವ ಗುರಿ, ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ( DDU-GKY ), ಗ್ರಾಮೀಣ ಯುವಕರಿಗೆ ನ್ಯಾಷನಲ್ ಅಪ್ರೆಂಟಿಸ್ ಪ್ರೋತ್ಸಾಹ ಯೋಜನೆ (NAPS )ಗಳನ್ನು ಜಾರಿಗೆ ತರಲಾಯಿತು.

ಕೇಂದ್ರ ಸರ್ಕಾರದ 15 ಸಚಿವಾಲಯಗಳಲ್ಲಿ 19 ಯೋಜನೆಗಳ ಮೂಲಕ 5 ವರ್ಷಗಳಲ್ಲಿ 42 ಲಕ್ಷ ಯುವಕರಿಗೆ ವಿವಿಧ ಕೌಶಲ್ಯಗಳ ಆಧಾರಿತ ನಿಗದಿತ ಸಮಯ ನೀಡಿ ತರಬೇತಿಗೊಳಿಸುವ ಮತ್ತು ಪೂರ್ಣ ಅನುಷ್ಟಾನಗೊಳಿಸಲು ಯೋಜನೆ ರೂಪಿಸಿದ್ದು, ಮುಂದಿನ 50 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ದೊರಕಿಸುವ ಯೋಜನೆಗೆ ಚಾಲನೆ ದೊರೆತಿದೆ.

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಎಲ್ಲಾ ವಲಯಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸಲು, ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು, ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಲು ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ( ELI) ಯೋಜನೆಗೆ ಅನುಮೋದನೆ ನೀಡಿದ್ದು, 2025ರ ಆಗಸ್ಟ್ 01 ರಿಂದ 2027ರ ಜುಲೈ 31ರ ನಡುವೆ ಜಾರಿಯಾಗಲಿದೆ.

ಈ ಯೋಜನೆಯಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಿಗಳು ಒಂದು ತಿಂಗಳ ವೇತನವನ್ನು(ರೂ. 15000/-ವರೆಗೆ) ಪಡೆಯುತ್ತಾರೆ, ಹೊಸ ಉದ್ಯೋಗಿಗೆ ಮಾಸಿಕ 3000ದಂತೆ ಎರಡು ವರ್ಷಗಳವರೆಗೆ ವೇತನ ಪ್ರೋತ್ಸಾಹ ಧನ ಮತ್ತು ಉತ್ಪಾದನಾವಲಯಕ್ಕೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತೃತ ಪ್ರಯೋಜನ ನೀಡಲಾಗುತ್ತದೆ. ಇದಕ್ಕಾಗಿ, 1 ಲಕ್ಷ ಕೋಟಿ ರೂ. ಗಳ ಯೋಜನೆ ರೂಪಿಸಿದ್ದು, 2.60 ಕೋಟಿ ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ.

ಐಟಿಐ ಹಾಗೂ ನ್ಯಾಷನಲ್ ಸ್ಕಿಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ( NSTI)ಗಳ ನವೀಕರಣಕ್ಕಾಗಿ 60000 ಕೋಟಿ ಯೋಜನೆ ರೂಪಿಸಲಾಗಿದ್ದು, 1000 ಐಟಿಐ ಹಾಗೂ 5 NSTI ಗಳನ್ನು ಉನ್ನತದರ್ಜೆ ಗೇರಿಸ ಲಾಗುತ್ತಿದೆ. ಇದರಡಿಯಲ್ಲಿ 5 ವರ್ಷಗಳಲ್ಲಿ 20 ಲಕ್ಷ ಯುವಕರಿಗೆ ದೇಶ, ವಿದೇಶಗಳಲ್ಲಿ ಕೌಶಲ್ಯಾ ಧಾರಿತ ಉದ್ಯೋಗ ಕೈಗೊಳ್ಳಲು ಉತ್ತಮ ತರಬೇತಿ ಕಡೆಗೂ ಗಮನಹರಿಸಲಾಗಿದೆ.

ಜಾಗತಿಕ ಸಂಸ್ಥೆಯಾದ OECD (organisation for Economic Cooperation and Development) ಪ್ರಕಾರ, 2030ರ ವೇಳೆಗೆ ಜಗತ್ತಿನಲ್ಲಿ 1.5 ಬಿಲಿಯನ್ ಉದ್ಯೋಗಗಳು ಸೃಷ್ಟಿಯಾಗುವ ಮೂಲಕ ಕೌಶಲ್ಯಯುಳ್ಳ ಯುವ ಉದ್ಯೋಗಿಗಳಿಗಾಗಿ ಕಾಯುತ್ತಿರುತ್ತವೆ ಎಂದಿದೆ. ಜೊತೆಗೆ, ಅನುಭವ, ಕುಶಲ ಕೆಲಸಗಾರರ ಕೊರತೆಯನ್ನೂ ಒತ್ತಿ ಹೇಳಿದೆ.

ಅಮೇರಿಕಾದಲ್ಲಿ 10 ಮಿಲಿಯನ್ ಉದ್ಯೋಗಗಳು ಕುಶಲ ಕೆಲಸಗಾರರನ್ನು ಎದುರು ನೋಡುತ್ತಿವೆ. ವಿಶ್ವಬ್ಯಾಂಕ್ 2028ರ ವೇಳೆಗೆ 1.2 ಬಿಲಿಯನ್ ಕುಶಲ ಉದ್ಯೋಗಿಗಳ ಕೊರತೆ ಇಡೀ ಜಗತ್ತನ್ನು ಕಾಡಲಿದೆ ಎಂದಿದೆ. ಇದೇ ಸಮಯದಲ್ಲಿ, ಭಾರತವು 2014-15 ರಿಂದ 2024್ಕೆ ಉತ್ತಮ ಕೌಶಲ್ಯ ಆಧಾರಿತ ತರಬೇತಿ ಹೊಂದಿದ ಉದ್ಯೋಗಿಗಳಲ್ಲಿ ಶೇ.36ರಷ್ಟು ಅಭಿವೃದ್ಧಿ ಕಂಡಿರುವುದು ಸಂತಸದ ವಿಚಾರ.

ಸದ್ಯ 3.6 ಬಿಲಿಯನ್ ಉದ್ಯೋಗಿಗಳು ಜಗತ್ತಿನಾದ್ಯಂತ ಕೆಲಸ ಮಾಡುತ್ತಿದ್ದಾರೆ. 2030ರ ವೇಳೆಗೆ ಮತ್ತೆ 1.5 ಬಿಲಿಯನ್ ಕೆಲಸಗಳು ಸೃಷ್ಟಿಯಾಗಲಿದ್ದು, ಇವುಗಳಿಗೆ 420 ಮಿಲಿಯನ್ ಉದ್ಯೋಗಿಗಳು ಮಾತ್ರ ಕೆಲಸಕ್ಕೆ ಸಿಗಲಿದ್ದಾರೆ ಎಂದು ಜಾಗತಿಕ ವರದಿಗಳು ಹೇಳುತ್ತಿವೆ. ಭಾರತೀಯ ಕಾರ್ಮಿಕರು ಇತರರಿ ಗಿಂತ ಹೆಚ್ಚು ಕೌಶಲ್ಯವುಳ್ಳವರಾದ್ದರಿಂದ ಯುಏಇ, ಸೌದಿ, ಕುವೈತ್, ಕತಾರ್ ಮತ್ತು ಒಮನ್‌ಗಳಲ್ಲಿ ಹಾಗೂ ಅಮೇರಿಕ, ಕೆನಡಾ, ಮಲೇಷಿಯಾಗಳಲ್ಲಿ ಭಾರತೀಯ ನೌಕರರಿಗೆ ಹೆಚ್ಚು ಬೇಡಿಕೆಯಿದೆ. 36 ಮಿಲಿಯನ್ ಭಾರತೀಯರು ವಿದೇಶಗಳಲ್ಲಿ ಕೆಲಸಮಾಡುತ್ತಿದ್ದು, 2.5 ಮಿಲಿಯನ್ ಪ್ರತಿವರ್ಷ ಭಾರತೀಯರು ವಿದೇಶಗಳಿಗೆ ಹೋಗುತ್ತಿರುವುದು ಸಾಮಾನ್ಯವಾಗಿದೆ.

ಇಸ್ರೇಲ್, ಜಪಾನ್, ಮಾಲೇಶಿಯಾ, ಮಾರಿಷಸ್, ಪೋರ್ಚುಗಲ, ತೈವಾನ್ ಸೇರಿದಂತೆ ‌6 ದೇಶ ಗಳೊಂದಿಗೆ ಭಾರತ Workforce exchange ನಂತಹ ಒಪ್ಪಂದಗಳನ್ನು ಮಾಡಿಕೊಂಡಿದ್ದು, 2023 ರಲ್ಲಿ ಸುಮಾರು 3.98 ಲಕ್ಷ ಅರ್ಧಕುಶಲ ಭಾರತೀಯರಿಗೆ ಉದ್ಯೋಗಕ್ಕಾಗಿ ವಲಸೆ ಅನುಮತಿ ( Emigration Clearance) ದೊರೆತಿದೆ.

2022ರಲ್ಲಿ 5.6 ಲಕ್ಷ ಭಾರತೀಯರು OEC ರಾಷ್ಟ್ರಗಳಿಗೆ ವಲಸೆ ಹೋಗಿದ್ದು, ಭಾರತವನ್ನು ಅತ್ಯಧಿಕ ವಲಸೆ ನೀಡಿದ ರಾಷ್ಟ್ರವನ್ನಾಗಿ ಮಾಡಿದೆ. 1.25 ಲಕ್ಷ ಜನರು ಅಮೇರಿಕಾಗೆ, 1.12 ಲಕ್ಷ ಜನರು ಬ್ರಿಟನ್‌ಗೆ ವಲಸೆ ಹೋಗಿದ್ದಾರೆ.

ಒಂದು ಲಕ್ಷದವರೆಗೆ ನರ್ಸ್‌ಗಳು ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 2025ಕ್ಕೆ ಇದು ಶೇ.30ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಐಟಿ, ಆರೋಗ್ಯ ಸೇವೆ, ಇಂಜಿನಿಯರಿಂಗ್, ಸಾರಿಗೆ, ಆತಿಥ್ಯ, ಶಿಕ್ಷಕರು, ಪಾಲನೆ ಕೆಲಸಗಾರರು ಸೇರಿ, ಜಪಾನಿನಲ್ಲಿ 250% ಹೆಚ್ಚಳವಾಗಿದ್ದು, ಭಾರತೀಯರು Specified Skilled Worker ವೀಸಾ ಮೂಲಕ ಜಪಾನ್ ಪ್ರವೇಶಿಸುತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಅಲ್ಪಕುಶಲ ಉದ್ಯೋಗಿಗಳ ವೇತನ 298% ಹೆಚ್ಚಿದೆ.

ಅಂತರಾಷ್ಟ್ರೀಯ ಸಹಕಾರನೀತಿ ಅಡಿಯಲ್ಲಿ ಭಾರತವು NSQF (National Skill Qualification Framework) ಮೂಲಕ ಜಾಗತಿಕವಾಗಿ ಮಾನ್ಯತೆ ಪಡೆಯುವ ತರಬೇತಿ ಗಳನ್ನು ನೀಡುತ್ತಿದೆ. ಆಸ್ಟ್ರೇಲಿಯಾ, ಡೆನ್ಮಾರ್ಕ್, ಜಪಾನ್, ಕತಾರ್, ಯುಎಇ ಮೊದಲಾದ ರಾಷ್ಟ್ರಗಳೊಂದಿಗೆ ಶ್ರಮ ಕೊಡುಕೊಳ್ಳುವಿಕೆ ಒಪ್ಪಂದಗಳಿವೆ.

ಭಾರತವು ವರ್ಷಕ್ಕೆ 2.5 ಮಿಲಿಯನ್ ಉದ್ಯೋಗಿಗಳನ್ನು ವಿದೇಶಗಳಿಗೆ ಕಳಿಸಬಹುದಾದ ಸಾಮರ್ಥ್ಯ ಹೊಂದಿದ್ದು, ಮುಂಬರುವ ದಿನಗಳಲ್ಲಿ 40 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ವರದಿ ಹೇಳುತ್ತದೆ. ಸ್ಥಳೀಯ ಯುಜನತೆಯನ್ನು, ಹಿಂದುಳಿದ ಮತ್ತು ಆಧುನಿಕ ಸೌಕರ್ಯಗಳಿಂದ ದೂರವಿರುವ ಗುಡ್ಡಗಾಡು ಪ್ರದೇಶಗಳನ್ನು ತಲುಪಿ, ಕೌಶಲ್ಯಾಧಾರಿತ ತರಬೇತಿ ನೀಡಲು ಕೆಲವೊಂದು ಸಂಘ ಸಂಸ್ಥೆಗಳಿರುತ್ತವೆ.

ಯುವಕರಿಗೆ ವಿದೇಶದಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ ಶಿಕ್ಷಣ, ತರಬೇತಿ ಮತ್ತು ಮಾರ್ಗ ದರ್ಶನ ಒದಗಿಸುತ್ತಿದೆ. ಭಾಷಾ ತರಬೇತಿ (ವಿದೇಶಗಳಲ್ಲಿ ಉದ್ಯೋಗ ಪಡೆಯಲು ಅಗತ್ಯವಿರುವ ಇಂಗ್ಲಿಷ್ ಪರೀಕ್ಷೆಗಳಾದ IELTS, OET, TOEFL, PTE ತರಬೇತಿ), ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತರಿಗಾಗಿ OET(Occupational English Test) ಸೇರಿದಂತೆ ಬಹುಭಾಷಾ ಕಲಿಕೆಯ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಜೊತೆಗೆ, ವೃತ್ತಿಪರ ಕೌಶಲ್ಯ ತರಬೇತಿ (ನರ್ಸಿಂಗ್, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿಸ್ಟ್, ಆರೈಕೆದಾರರು ಮುಂತಾದ ಪ್ರಾಯೋಗಿಕ ತರಬೇತಿ), ತಾಂತ್ರಿಕ ಉದ್ಯೋಗಗಳಿಗೆ (ಇಲೆಕ್ಟ್ರೀಷಿಯನ್, ಪ್ಲಂಬರ್ ವೆಲ್ಡರ್) ತರಬೇತಿ ಸೇರಿವೆ.

ವೀಸಾ ಪ್ರಕ್ರಿಯೆ, ಡಾಕ್ಯುಮೆಂಟ್ ಪರಿಶೋಧನೆ, ಜಾಬ್ ಅಪ್ಲಿಕೇಶನ್, ಇಂಟರ್‌ವ್ಯೂಗಳಿಗೆ ತಯಾರಿ, ವಿದ್ಯಾರ್ಥಿಗಳಿಗೆ ಸಿಎನ್‌ಡಿಡಿ (counselling) ಸೇವೆ, ಜೀವನ ವಿವರಣಾ ಪತ್ರ ( resume) ತಯಾರಿ, ಮಾಕ್ ಇಂಟರ್‌ವ್ಯೂ ಮುಂತಾದವುಗಳ ಮೂಲಕ ವಲಸೆ ಮಾರ್ಗದರ್ಶನ ಮತ್ತು ದಾಖಲೆಗಳ ಸಹಾಯ ಮಾಡುತ್ತವೆ.

ಭಾರತ ಇಂದು ಜಾಗತಿಕವಾಗಿ ಕಾರ್ಮಿಕ ಶಕ್ತಿ ಕೇಂದ್ರವಾಗಿ ಮೂಡುತ್ತಿದೆ. ಹೆಚ್ಚುವರಿ ಆದಾಯ, ವೃತ್ತಿಪರ ತರಬೇತಿ, ಜಾಗತಿಕ ಬೇಡಿಕೆಗಳಿಂದ ಉದ್ಯೋಗ ವಲಸೆಯು ಹೆಚ್ಚು ವೇಗಗೊಳ್ಳುತ್ತಿದೆ. ಭಾರತದ ಯುವಜನಸಂಖ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು, ತರಬೇತಿಗಳನ್ನು ಅಂತರರಾಷ್ಟ್ರೀಯ ಪ್ರಮಾಣಗಳಿಗೆ ಹೊಂದುವಂತೆ ಮಾಡಬೇಕು.

ವೃತ್ತಿಪರ ಶಿಕ್ಷಣದ ಬಗ್ಗೆ, ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆ, ಇಂಗ್ಲಿಷ್ ಮತ್ತು ಸಾಫ್ಟ್‌ ಸ್ಕಿಲ್ಸ್ ತರಬೇತಿಗೆ ಪ್ರಾಮುಖ್ಯತೆ ನೀಡಬೇಕು. ಮುಂದಿನ ದಿನಗಳು ಕೌಶಲ್ಯವಂತರಿಗೆ ಮಾತ್ರ ಎಂಬುದನ್ನು ಯುವ ಜನತೆ ಮರೆಯಬಾರದು. ಭಾರತವು‌ ಜಾಗತಿಕ ಮಾನವ ಸಂಪನ್ಮೂಲ ಕೇಂದ್ರವನ್ನಾಗಿ ಮಾಡುವ ಸಾಮರ್ಥ್ಯ ಹೊಂದಿದ್ದು, ಕೌಶಲ್ಯ ಭಾರತದ ಶಕ್ತಿ ಎಂಬ ದೃಷ್ಟಿಕೋನವು ಭಾರತೀಯ ಯುವಕರ ಭವಿಷ್ಯವನ್ನೂ, ದೇಶದ ಭವಿಷ್ಯವನ್ನೂ ಬೆಳಗಿಸಬಲ್ಲದು.