Sadguru Sri Madhusudan Sai: ಮುಂಬರುವ ದಿನಗಳಲ್ಲಿ ಭಾರತ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುತ್ತದೆ: ಶ್ರೀ ಮಧುಸೂದನ ಸಾಯಿ
Sathya sai grama: ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಆಶೀರ್ವಚನ ನೀಡಿದ್ದಾರೆ. ನಿಸ್ವಾರ್ಥ ಜನರು ಮಾತ್ರ ನಿರ್ಭಯವಾಗಿರಲು ಸಾಧ್ಯವಾಗುತ್ತದೆ. ಒಳ್ಳೆಯದನ್ನು ಮಾಡಬೇಕಾದಾಗ ನಾಚಿಕೆ, ಸಂಕೋಚ ಪಡಬಾರದು. ಯಾವುದೇ ಹಿಂಜರಿಕೆ ಇಲ್ಲದೆ ಮುಂದುವರಿಯಬೇಕು ಎಂದು ಸಲಹೆ ನೀಡಿದ್ದಾರೆ.
-
ಚಿಕ್ಕಬಳ್ಳಾಪುರ, ನ.7: ಮುಂಬರುವ ದಿನಗಳಲ್ಲಿ ಭಾರತ ಆರ್ಥಿಕ ಕ್ಷೇತ್ರ ಸೇರಿದಂತೆ ಎಲ್ಲಾ ವಿಭಾಗಗಳಿಂದಲೂ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 84ನೇ ದಿನವಾದ ಶುಕ್ರವಾರ ಆಶೀರ್ವಚನ ನೀಡಿದ ಸದ್ಗುರು ಅವರು, ಇದು ಯುವ ದೇಶವಾಗಿದೆ. ಆದರೆ ಹೆಚ್ಚು ಮುಖ್ಯವಾಗಿ ಆಧ್ಯಾತ್ಮಿಕ ಶಕ್ತಿಯು ಜಗತ್ತನ್ನು ಭಾರತಕ್ಕೆ ತರುತ್ತದೆ ಎಂದು ಹೇಳಿದ್ದಾರೆ.
ಧೈರ್ಯವಿಲ್ಲದಿದ್ದರೆ ಈ ಜಗತ್ತಿನಲ್ಲಿ ಏನೂ ನಡೆಯುವುದಿಲ್ಲ, ಯಾವಾಗಲೂ ನಿರ್ಭಯವಾಗಿರಿ, ಸ್ವಾರ್ಥಿಗಳಾಗಬೇಡಿ ಎಂದು ಭಗವಾನ್ ಸತ್ಯ ಸಾಯಿ ಬಾಬಾ ಹೇಳಿದ್ದಾರೆ. ನಿಸ್ವಾರ್ಥ ಜನರು ಮಾತ್ರ ನಿರ್ಭಯವಾಗಿರಲು ಸಾಧ್ಯವಾಗುತ್ತದೆ. ಒಳ್ಳೆಯದನ್ನು ಮಾಡಬೇಕಾದಾಗ ನಾಚಿಕೆ, ಸಂಕೋಚ ಪಡಬಾರದು. ಯಾವುದೇ ಹಿಂಜರಿಕೆ ಇಲ್ಲದೆ ಮುಂದುವರಿಯಬೇಕು. ಕುತೂಹಲಕಾರಿ ನಾಯಕತ್ವ, ಸೃಜನಶೀಲ ನಾಯಕತ್ವ ಹಾಗೂ ಅತಿ ಮುಖ್ಯವಾಗಿ ಸಹಾನುಭೂತಿಯ ನಾಯಕತ್ವವನ್ನು ಗುರುತಿಸುವ ಕೆಲಸವಾಗುತ್ತಿದೆ ಎಂದರು.

ಅತಿಥಿ ದೇಶ ಆಸ್ಟ್ರೇಲಿಯಾ ಬಗ್ಗೆ ಮಾತನಾಡಿದ ಸದ್ಗುರು ಅವರು, ಆಸ್ಟ್ರೇಲಿಯಾ ಅದ್ಭುತ ದೇಶವಾಗಿದೆ. ಭಾರತೀಯ ಆಧ್ಯಾತ್ಮಿಕತೆ ಬಗ್ಗೆ ತಿಳಿದುಕೊಳ್ಳಲು ಅಲ್ಲಿನ ಜನರ ಉತ್ಸಾಹ ನನ್ನ ಹೃದಯವನ್ನು ಮುಟ್ಟಿದೆ. ಕಲಿಯುವುದು, ತಿಳಿದುಕೊಳ್ಳುವುದು ಮತ್ತು ತಮ್ಮನ್ನು ತಾವು ಬದಲಾಯಿಸಿಕೊಳ್ಳುವುದರ ಬಗ್ಗೆ ನಿಜವಾಗಿಯೂ ಗಂಭೀರವಾಗಿದ್ದಾರೆ. ಸಹಜವಾಗಿ ಅವರು ಬಹಳಷ್ಟು ಮಾತನಾಡುತ್ತಾರೆ ಎಂದರು.
ಈ ಸುದ್ದಿಯನ್ನೂ ಓದಿ | Sri Sathya Sai University: ಮೌಲ್ಯಾಧಾರಿತ ಶಿಕ್ಷಣ; ಕರ್ನಾಟಕ ಸಂಸ್ಕೃತ ವಿವಿ ಜತೆ ಸತ್ಯ ಸಾಯಿ ವಿವಿ ಒಡಂಬಡಿಕೆ
ಟೀಂ ಇಂಡಿಯಾದ ಖ್ಯಾತ ಮಾಜಿ ಕ್ರಿಕೆಟರ್, ಜಾಗತಿಕ ನಾಯಕತ್ವ ಪುರಸ್ಕಾರ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಡಾ ಸುನಿಲ್ ಗವಾಸ್ಕರ್ ಮಾತನಾಡಿ, ಭಾರತಕ್ಕಾಗಿ ಅದ್ಭುತ ಕೆಲಸಗಳನ್ನು ಮಾಡಿದ ಸಾಕಷ್ಟು ನಾಯಕರಿದ್ದಾರೆ. ನನ್ನ ಕ್ಷೇತ್ರ ಕ್ರೀಡೆಯಾಗಿದ್ದು, ಇಲ್ಲಿನ ಜವಾಬ್ದಾರಿ ನನಗೆ ಸಂಪೂರ್ಣವಾಗಿ ಹೊಸ ವಿಷಯವಾಗಿತ್ತು. ಆಯ್ಕೆ ಸಮಿತಿಯ ಮಾರ್ಗದರ್ಶನದೊಂದಿಗೆ ಪ್ರಶಸ್ತಿಗೆ ನಾಯಕರನ್ನು ಆಯ್ಕೆ ಮಾಡುವ ಬಗ್ಗೆ ವಿವರಿಸಿದರು.
ಟೀ ಇಂಡಿಯಾ ಆಸೀಸ್ ವಿರುದ್ಧದ ಟಿ20 ಸರಣಿಯಲ್ಲಿ ಗೆಲ್ಲಲಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿದೆ.
ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ, ಪದ್ಮಭೂಷಣ ಪುರಸ್ಕೃತ ಎನ್. ಚಂದ್ರಶೇಖರ್ ಮಾತನಾಡಿ, ತಂತ್ರಜ್ಞಾನಗಳ ಮೂಲಕ ಎಷ್ಟೆಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದನ್ನು ತಿಳಿಯುವುದು ಮುಖ್ಯ. ಇತಿಹಾಸದುದ್ದಕ್ಕೂ ಯಾವಾಗಲೂ ವೈಜ್ಞಾನಿಕ ಪ್ರಗತಿಯಾಗಿದೆ. ಸಂಶೋಧನೆಯ ನಾವೀನ್ಯತೆಯ ವೇಗ ಪ್ರಗತಿಯ ಭಾಗವಾಗುತ್ತಿರುವುದು ಬದಲಾವಣೆಯ ಹಂತವಾಗಿದೆ. ಡಿಜಿಟಲ್ ಸಾಕ್ಷರತೆ ಮಾನವ ಸಮಸ್ಯೆಗಳನ್ನು ಪರಿಹರಿಸುವ ತಂತ್ರಜ್ಞಾನವಾಗಿದೆ ಎಂದು ಹೇಳಿದರು.
ಆತ್ಮೀಯ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ರಾಜ್ ಕೋಟ್‌ನ ಆತ್ಮೀಯ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡವು. ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಮ್ಮುಖದಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಕುಲಪತಿ ಪ್ರೊಫೆಸರ್ ಶ್ರೀಕಂಠ ಮೂರ್ತಿ ಮತ್ತು ಆತ್ಮೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊಫೆಸರ್ ರಾಕೇಶ್ ಮುದುಗಲ್ ಅವರು ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು. ಮೌಲ್ಯಾಧಾರಿತ ಶಿಕ್ಷಣ, ಉನ್ನತ ಶಿಕ್ಷಣದಲ್ಲಿ ಶ್ರೇಷ್ಠತೆ, ಶೈಕ್ಷಣಿಕ, ಸಂಶೋಧನೆ, ವಿನಿಮಯ, ಮಾನವೀಯ ಮೌಲ್ಯಗಳನ್ನು ಶೈಕ್ಷಣಿಕ ಚೌಕಟ್ಟಿನಲ್ಲಿ ಸಂಯೋಜನೆ, ಬೋಧನಾ ವಿಭಾಗದ ಸಿಬ್ಬಂದಿಗೆ ನಿರ್ದಿಷ್ಟಪಡಿಸಿದ ತರಬೇತಿ ಕಾರ್ಯಕ್ರಮ ಕುರಿತ ಸಂಶೋಧನೆಯನ್ನು ಈ ಒಡಂಬಡಿಕೆ ಒಳಗೊಂಡಿದೆ.
ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ, ಪದ್ಮಭೂಷಣ ಪುರಸ್ಕೃತ ಎನ್. ಚಂದ್ರಶೇಖರ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಲಾಯಿತು.
ಸತ್ಯ ಸಾಯಿ ಸಂಸ್ಥೆಯ ವಿವಿಧ ಕ್ಷೇತ್ರಗಳಿಗೆ ಆರೋಗ್ಯ ಕ್ಷೇತ್ರಕ್ಕೆ ಬೆಂಬಲ ನೀಡುತ್ತಿರುವ ಕೊವಾಸಂಟ್ ಕಂಪನಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿವಿ ಸುಬ್ರಹ್ಮಣ್ಯಂ ಅವರು ಪ್ರಶಸ್ತಿ ಸ್ವೀಕರಿಸಿದರು. ವೈದ್ಯಕೀಯ ಶಿಕ್ಷಣಕ್ಕೆ ಬೆಂಬಲ ನೀಡುತ್ತಿರುವ ಡೆಲ್ ಟೆಕ್ನಾಲಜೀಸ್ ಕಂಪನಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಂಪನಿಯ ಪ್ರತಿನಿಧಿ ಅರ್ಚನಾ ಜೈನ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಬೆಂಬಲ ನೀಡುತ್ತಿರುವ ಪಿಇಇ ಎಎಎ ಇಂಪೆಕ್ಸ್ ಕಂಪನಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಎಸ್. ವಿಘ್ನೇಶ್ ರಾಮಕುಮಾರ್ ಮತ್ತು ಶಕ್ತಿವೇಲ್ ವಿ. ಅವರು ಪ್ರಶಸ್ತಿ ಸ್ವೀಕರಿಸಿದರು. ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಬೆಂಬಲ ನೀಡುತ್ತಿರುವ ರೋಟರಿ ಡಿಸ್ಟ್ರಿಕ್ 3011 ಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿನಿಧಿ ವಂದನಾ ಭಲ್ಲಾ ಅವರು ಪ್ರಶಸ್ತಿ ಸ್ವೀಕರಿಸಿದರು.
ಆಸ್ಟ್ರೇಲಿಯಾದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಜ್ಯಾಕ್ ಆಂಡೆರ್ಸನ್ (Jack Anderson) ಅವರಿಗೆ ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಆಸ್ಪ್ರೇಲಿಯಾ ಪ್ರತಿನಿಧಿ ಸಾರಾ ಸ್ವೊರೊವ್ಸ್ಕಿ ಅವರು ತಮ್ಮ ದೇಶದ ಕಲೆ, ಸಂಸ್ಕೃತಿ, ಸಂಗೀತ, ಪ್ರಸಿದ್ಧ ತಾಣಗಳು, ಖಾದ್ಯಗಳು, ಸಾಂಪ್ರದಾಯಿಕ ಉಡುಪು, ಆಧ್ಯಾತ್ಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದರೆ, ಮತ್ತೊಬ್ಬ ಪ್ರತಿನಿಧಿ ಡಾ. ದೇವಿ ಮ್ಯಾಕ್ ಅಲ್ಪೈನ್ ಅವರು ತಮ್ಮ ಜೀವನದಲ್ಲಿ ಆಧ್ಯಾತ್ಮಿಕ ಬದಲಾವಣೆಯ ಅನುಭವನ್ನು ಹಂಚಿಕೊಂಡರು.
ತುಮಕೂರು ಜಿಲ್ಲೆಯ ಕಾಂತರಾಜು ಮತ್ತು ವೀಣಾ ಕೋರಾ ಅವರ 4 ವರ್ಷದ ಪುತ್ರಿ ಗನ್ವಿತಾಗೆ ಶ್ರೀ ಸತ್ಯ ಸಾಯಿ ವೈದ್ಯಕೀಯ ವಿಜ್ಞಾನ ಮತ್ತ ಸಂಶೋಧನಾ ಸಂಸ್ಥೆಯಲ್ಲಿ ಎಎಸ್‌ಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವರಿಗೆ 'ಚಿರಂಜೀವಿ ಭವ' ' ಗಿಫ್ಟ್ ಆಫ್ ಲೈಫ್' ಪ್ರಮಾಣಪತ್ರ ವಿತರಿಸಲಾಯಿತು. ಈ ಶಸ್ತ್ರಚಿಕಿತ್ಸೆಯು ಸಂಪೂರ್ಣವಾಗಿ ಉಚಿತವಾಗಿದೆ.
ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ರೈತರಿಗೆ ಸತ್ಯ ಸಾಯಿ ವಿವಿ ಕೌಶಲ್ಯ ಪ್ರಮಾಣ ಪತ್ರ: ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಣೆ
ಉತ್ತರ ಕರ್ನಾಟಕ ಮೂಲದ 30 ವರ್ಷದ ಛಾಯ ಕಿರಣ್ ಅವರಿಗೆ ಅಸಹಜವಾಗಿ ಜನಿಸಿದ್ದ 1 ತಿಂಗಳ ಮಗುವಿಗೆ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಅತ್ಯುತ್ತಮ ಚಿಕಿತ್ಸೆಯೊಂದಿಗೆ ಮಗು ಚೇತರಿಸಿಕೊಂಡಿದೆ. ಛಾಯಾ ಕಿರಣ್ ದಂಪತಿಗೆ 'ಚಿರಂಜೀವಿ ಭವ' 'ಗಿಫ್ಟ್ ಆಫ್ ಲೈಫ್' ಪ್ರಮಾಣ ಪತ್ರವನ್ನು ನೀಡಲಾಯಿತು.