ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Superstar Rajinikanth: ರಜನಿಕಾಂತ್ ಸಹೋದರನಿಗೆ ಹೃದಯಾಘಾತ; ಚೆನ್ನೈನಿಂದ ಬೆಂಗಳೂರಿಗೆ ಓಡೋಡಿ ಬಂದ ಸೂಪರ್‌ ಸ್ಟಾರ್‌

ಸೂಪರ್ ಸ್ಟಾರ್ ರಜಿನಿಕಾಂತ್ (Superstar Rajinikanth) ಹಿರಿಯ ಸಹೋದರನಿಗೆ (Rajinikanth Brother) ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ಅಣ್ಣ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರು ಹೃದಯಾಘಾತಕ್ಕೆ (Heart Attack) ಒಳಗಾಗಿದ್ದಾರೆ. ಖುದ್ದು ರಜನಿಕಾಂತ್‌ ಅವರೇ ಆಸ್ಪತ್ರಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ರಜನಿಕಾಂತ್ ಸಹೋದರನಿಗೆ ಹೃದಯಾಘಾತ

ಸಹೋದರನ ಜೊತೆ ರಜನಿಕಾಂತ್‌ -

Vishakha Bhat
Vishakha Bhat Nov 7, 2025 10:44 PM

ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ (Superstar Rajinikanth) ಹಿರಿಯ ಸಹೋದರನಿಗೆ (Rajinikanth Brother) ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ಅಣ್ಣ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರು ಹೃದಯಾಘಾತಕ್ಕೆ (Heart Attack) ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಣ್ಣನನ್ನು ಖುದ್ದು ರಜನಿಕಾಂತ್‌ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. ಇಂದು ಬೆಳಗ್ಗೆ ಹೃದಯಾಘಾತವಾಗಿದ್ದು, ರಜನಿ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯದಲ್ಲಿ ಸತ್ಯನಾರಾಯಣ ರಾವ್‌ಗೆ ಚಿಕಿತ್ಸೆ ಮುಂದುವರೆದಿದೆ.

ಬೆಂಗಳೂರಿನ ಹೊಸಕೆರೆಹಳ್ಳಿಯ ನಿವಾಸಿಯಾಗಿರುವ ಸತ್ಯನಾರಾಯಣ್‌ ಇಂದು ಬೆಳಗ್ಗೆ ಹೃದಯಾಘಾತವಾಗಿತ್ತು. ಸತ್ಯನಾರಾಯಣ್ ರಾವ್ ಗಾಯಕ್ವಾಡ್ ಅವರನ್ನು ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯ ಆಸ್ಪತ್ರೆಗೆ ರಜನಿಕಾಂತ್ ಅವರೇ ದಾಖಲಿಸಿದ್ದಾರೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ರಜನಿಕಾಂತ್ ಅಣ್ಣನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

ತಲೈವಾ 173 ನೇ ಚಿತ್ರ ಘೋಷಣೆ

ಇತ್ತೀಚೆಗಷ್ಟೇ ರಜನಿಕಾಂತ್‌ ತಮ್ಮ 173 ನೇ ಚಿತ್ರವನ್ನು ಘೋಷಿಸಿದ್ದಾರೆ. ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಕಮಲ್ ಹಾಸನ್ ತಮ್ಮದೇ ನಿರ್ಮಾಣ ಸಂಸ್ಥೆಯಾದ ರಾಜ್‌ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಕಂಪನಿ ಮೂಲಕ ರಜನಿಕಾಂತ್ ಚಿತ್ರ ನಿರ್ಮಾಣ ಮಾಡಲಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ಖುಷ್ಬು ಸುಂದರ್ ಅವರ ಪತಿ ಸಿ. ಸುಂದರ್ ತಲೈವಾ ಅವರ 173ನೇ ಚಿತ್ರ (Thalaivar 173) ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರವನ್ನು 2027ರ ಪೊಂಗಲ್ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

ರಜನಿ ಹಾಗೂ ಕಮಲ್‌ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದು ಕೆಲ ದಿನಗಳ ಹಿಂದೆ ಸುಳಿವು ನೀಡಿದ್ದರು. ನಾನು ಮತ್ತು ಕಮಲ್ ಹಾಸನ್ ಸೇರಿ ಸಿನಿಮಾ ಮಾಡಬೇಕೆಂದು ಬಯಸುತ್ತೇನೆ. ಸೂಕ್ತ ಕಥೆ, ಪಾತ್ರ ಸಿಕ್ಕರೆ ಒಟ್ಟಿಗೆ ನಟಿಸುತ್ತೇವೆ. ಆದರೆ ಕಥೆ, ಪಾತ್ರ ಅಥವಾ ನಿರ್ದೇಶಕರಿನ್ನೂ ಆಯ್ಕೆ ಆಗಿಲ್ಲ. ಈ ಬಗ್ಗೆ ಕೆಲಸಗಳು ಸಾಗಿವೆ" ಎಂದು ತಿಳಿಸಿದ್ದರು. ಕಳೆದ ಕೆಲ ತಿಂಗಳಲ್ಲಿ ರಜನಿ ಹಾಸನ್​ ಸಿನಿಮಾ ಬರಲಿದೆ ಎಂಬ ಸುದ್ದಿ ಎಲ್ಲಡೆ ಹರಡಿತ್ತು. ಅಪೂರ್ವ ರಾಗಂಗಳ್​, ಮೂಂಡ್ರು ಮುಡಿಚು, ತಪ್ಪು ತಲಂಗಲ್, ನಿತ್ನಾಥಲ್ಲೇ ಇನಿಕ್ಕುಂ ಸೇರಿ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.