Gururaj Gantihole Column: ಹೊಟೇಲ್ ಉದ್ಯಮದ ಸವಾಲುಗಳು ಮತ್ತು ಭವಿಷ್ಯತ್ತು
ಕರಾವಳಿಯ ಖ್ಯಾತಿಯನ್ನು ವಿಶ್ವದೆಲ್ಲೆಡೆ ಎತ್ತಿ ಹಿಡಿದರು. ಇಂದಿನ ತಲೆಮಾರಿನವರು ಯಾಕೋ ಸ್ವಂತ ಹೊಟೇಲ್ ಮಾಡುವ ಸಾಹಸಕ್ಕೆ ಕೈಹಾಕದೆ, ಹೊಟೇಲ್ ಆಧಾರಿತ ಉದ್ಯೋಗ, ಬ್ಯುಜಿನೆಸ್ ಮ್ಯಾನೇಜ್ ಮೆಂಟ್‌ನಂತಹ ವೃತ್ತಿಪರತೆ ಕಡೆಗೆ ವಾಲುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಇದು ನನ್ನನ್ನು ಯೋಚಿಸುವಂತೆ ಮಾಡಿತು.


ಗಂಟಾಘೋಷ
ಸಬ್ಸಿಡಿ, ಮೂಲ ಬಂಡವಾಳ ಇಲ್ಲದೇ ಸ್ವಂತ ಪರಿಶ್ರಮ ಮಾತ್ರವೇ ನಂಬಿ ಹೊಟೇಲ್ ಕಟ್ಟಿದವರ ಕತೆಯಿದು. ದೇಶದ ಹೊಟೇಲ್ ಉದ್ಯಮಕ್ಕೆ ಕರಾವಳಿಗರು ಕೊಟ್ಟ ಕೊಡುಗೆ ಯನ್ನು ಇಂದಿನ ತಲೆಮಾರು ಮರೆತು, ಹೊಟೇಲ್ ಕ್ಷೇತ್ರದಿಂದ ವಿಮುಖವಾಗುತ್ತಿರುವುದು ಮಾತ್ರ ಉದ್ಯಮ ಪಾಲಿಗೆ ಆತಂಕಕಾರಿ ಬೆಳವಣಿಗೆ.
ಕಾರ್ಯಕ್ರಮವೊಂದರಲ್ಲಿ ಸ್ವಾತಿ ಹೊಟೇಲ್ ಮಾಲಿಕರಾದ ಗೋಪಾಲಶೆಟ್ಟರು ಮಾತಿಗೆ ಸಿಕ್ಕರು. ಲೋಕಾರೂಢಿ ಮಾತನಾಡ್ತಾ, ಹೊಟೇಲ್ ಉದ್ಯಮಕ್ಕೆ ಪೂರಕವಾಗಿ, ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ FHRAI (Federation of Hotel Restaurant Associations of India) ಭಾರತದಲ್ಲಿನ ಅತಿಥಿ ಸತ್ಕಾರ ಮತ್ತು ಹೊಟೇಲ್ ಉದ್ಯಮಕ್ಕೆ ಸಂಬಂಧಿತ ಸಭೆ, ಇದೇ ಸೆಪ್ಟೆಂಬರ್ 18ರಿಂದ 20ರವರೆಗೆ ಬೆಂಗಳೂರಿನ ಕಾನ್ರಾಡ್ ಹೊಟೇಲ್‌ನಲ್ಲಿ ನಡೆಯುತ್ತಿದ್ದು, ಕೇಂದ್ರ, ರಾಜ್ಯ ಪ್ರವಾಸೋದ್ಯಮ ಸಚಿವರು ಮತ್ತು ಮುಖ್ಯಮಂತ್ರಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಹಿಂದೆ ನಮ್ಮ ಹಿರಿಯರು ಕೈಯಲ್ಲಿ ಬಿಡಿಗಾಸಿಲ್ಲದೆ ಹುಟ್ಟಿದ ಊರನ್ನು ತೊರೆದು, ನೆಲೆಸಿದ ಸ್ಥಳಕ್ಕೆ ಹೊಂದಿಕೊಂಡು ಬದುಕಿ, ಹೊಟೇಲ್ ಕಟ್ಟಿ ಉದ್ಯಮವನ್ನಾಗಿ ಬೆಳೆಸಿದರು. ಸ್ಥಳೀಯ ನೂರಾರು ಯುವಕರಿಗೆ ಕೆಲಸ ಕೊಟ್ಟರು. ಕೆಲವರನ್ನು ಸ್ವಂತ ಹೊಟೇಲ್ ಮಾಲೀಕರನ್ನಾಗಿ ಮಾಡಿದರು. ಉಡುಪಿಯನ್ನು ರಾಜ್ಯ, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದು ಹೆಸರುವಾಸಿ ಯಾದರು.
ಕರಾವಳಿಯ ಖ್ಯಾತಿಯನ್ನು ವಿಶ್ವದೆಲ್ಲೆಡೆ ಎತ್ತಿ ಹಿಡಿದರು. ಇಂದಿನ ತಲೆಮಾರಿನವರು ಯಾಕೋ ಸ್ವಂತ ಹೊಟೇಲ್ ಮಾಡುವ ಸಾಹಸಕ್ಕೆ ಕೈಹಾಕದೆ, ಹೊಟೇಲ್ ಆಧಾರಿತ ಉದ್ಯೋಗ, ಬ್ಯುಜಿನೆಸ್ ಮ್ಯಾನೇಜ್‌ಮೆಂಟ್‌ನಂತಹ ವೃತ್ತಿಪರತೆ ಕಡೆಗೆ ವಾಲುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಇದು ನನ್ನನ್ನು ಯೋಚಿಸುವಂತೆ ಮಾಡಿತು.
ಇದನ್ನೂ ಓದಿ: Gururaj Gantihole Column: ಹೊಟೇಲ್ ಉದ್ಯಮದ ಸವಾಲುಗಳು ಮತ್ತು ಭವಿಷ್ಯತ್ತು
ಅವರನ್ನು ಬೀಳ್ಕೊಟ್ಟ ಮೇಲೆ, ಯೋಚಿಸುವಂತೆ ಮಾಡಿದ ಅವರ ಮಾತು ಎಷ್ಟು ನಿಜವಲ್ಲವೇ ಎನಿಸಿತು. ನಮ್ಮ ಉಡುಪಿ ಹೊಟೇಲ್ ಹೆಸರಿಗೆ ಬಹುದೊಡ್ಡ ಇತಿಹಾಸವೇ ಇದೆ. ಕೈಯಲ್ಲಿ ಮೂಲ ಬಂಡವಾಳದಂತಹ ಯಾವೊಂದು ಹಣವಿಲ್ಲದೆ ಊರು ಬಿಟ್ಟು ಹೋಗಿ ಸ್ವಂತ ಪರಿಶ್ರಮ, ಆತ್ಮಬಲದ ಮೇಲೆ ನಂಬಿಕೆಯಿಟ್ಟು ಕಟ್ಟಿದ ಕ್ಷೇತ್ರ ಹೊಟೇಲ್ ಉದ್ಯಮ.
ಎಲ್ಲಿದ್ದರೂ ಬದುಕಬಲ್ಲೆವು ಎಂಬ ಆತ್ಮಸ್ಥೈರ್ಯ ಅಂದಿನ ತಲೆಮಾರಿನವರಲ್ಲಿ ಎದ್ದು ತೋರು ತ್ತಿತ್ತು. ಹೊಟೇಲ್ ಎಂಬುದು ಊಟ, ಗ್ರಾಹಕ ಸೇವೆಯ ಜೊತೆಗೆ ಕರಾವಳಿಗರ ಸೂಕ್ಷ್ಮ ಸಂವೇದನೆಯ ಪ್ರತೀಕವೂ ಹೌದು ಎಂಬಂತೆ ಬದುಕಿ ತೋರಿದವರು. ಯಾವ ಊರಿಗೆ ಹೋಗಿ ನೆಲೆಸುವರೋ, ಅಲ್ಲಿಯೇ ಬೆರೆತು ಒಂದಾಗಿ ಬಿಡುವವರು. ಅದೇ ನಮ್ಮ ಊರು, ನಮ್ಮ ಜನರೇ ಇವರು ಎಂಬ ಭಾವದಿಂದ ಅನ್ನಲಕ್ಷ್ಮೀಯ ಸೇವೆಗೆ ನಿಂತವರು.
ಜಪಾನಿನ 38ನೇ ದೊರೆಯ ಮಗ ಫುಜಿವಾರಾ ಮಹಿಟೊ ಸ್ಥಾಪಿಸಿದ ‘ನಿಷಿಯಾಮಾ’ ಹೊಟೇಲ್ ಜಗತ್ತಿನ ಮೊಟ್ಟಮೊದಲ ಮತ್ತು ಅತ್ಯಂತ ಹಳೆಯ ಹೊಟೇಲ್ ಆಗಿದ್ದು, ಇದನ್ನು ಕ್ರಿ.ಶ.705ರಲ್ಲಿ ಸ್ಥಾಪಿಸಲಾಗಿತ್ತು. ನಂತರದಲ್ಲಿ, ಭಾರತದ ‘ಸಿಲ್ಕ್ ರೂಟ್’ ವ್ಯವಹಾರಕ್ಕೆ ಬೆಂಬಲವಾಗಿ ಹಲವು ಅತಿಥಿಗೃಹ, ತಂಗುದಾಣಗಳನ್ನು ನಿರ್ಮಿಸಲಾಗಿದ್ದ ಮಾಹಿತಿ ನಮಗೆ ತಿಳಿದುಬರುತ್ತದೆ.
ಆಧುನಿಕ ಭಾರತದ ಮೊದಲ ಹೊಟೇಲ್ ಅಂದಿನ ಕಲ್ಕತ್ತೆಯಲ್ಲಿ 1830ರಲ್ಲಿ ಸ್ಪೆನ್ಸ್‌ಭಿಸ್ ಹೊಟೇಲ್ ಸ್ಥಾಪಿಸಲಾಗಿತ್ತು. 1840ರಲ್ಲಿ ಗ್ರೇಟ್ ಈಸ್ಟರ್ನ್ ಹೊಟೇಲ್ ಆರಂಭಿಸಲಾಗಿದ್ದು, ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಭಾರತದ ಪ್ರತಿಬಿಂಬವೆಂಬಂತೆ 1902ರಲ್ಲಿ ವಿಶ್ವದರ್ಜೆಯ, ಕಲ ಸೌಲಭ್ಯಯುಳ್ಳ ತಾಜ್ ಹೊಟೇಲ್ ಆರಂಭಿಸಿದ ಕೀರ್ತಿ ಜಮೆಶೆಡ್‌ಜಿ ಟಾಟಾ ಅವರಿಗೆ ಸಲ್ಲುತ್ತದೆ. ಟಾಟಾ ಸಂಸ್ಥೆಯ ಸ್ಥಾಪಕ ಜಮೆಶೆಡ್‌ಜಿ ಟಾಟಾ ಅಂದಿನ ಬಾಂಬೆಯಲ್ಲಿ ಸಮಾನ ಮನಸ್ಕರ ಜೊತೆ ಸೇರಿ IHCL (Indian Hotels Company Limited) ಸ್ಥಾಪಿಸುತ್ತಾರೆ, ಇದರ ಮರುವರ್ಷವೇ ತಾಜ್ ಹೊಟೇಲ್ ಪ್ರಾರಂಭವಾಗುತ್ತದೆ.
ಇದೆಲ್ಲ ರಾಷ್ಟ್ರಮಟ್ಟದ ವಿಚಾರವಾಗಿದ್ದರೆ, ಸ್ಥಳೀಯವಾಗಿ ಉಡುಪಿ, ಕುಂದಾಪುರ, ಮಂಗಳೂರು ಭಾಗದ ಉದ್ದಿಮೆದಾರರು ತಮ್ಮ ನಿರಂತರ ಪರಿಶ್ರಮದ ಮೂಲಕ ದಿನನಿತ್ಯ ದುಡಿದು ಬದುಕು ವವರಿಗೆ, ವಿದ್ಯಾರ್ಥಿಗಳಿಗೆ, ಮಧ್ಯಮ ವರ್ಗದವರ ನಿತ್ಯ ಊಟೋಪಚಾರಕ್ಕೆ ಆಸರೆಯಾಗಿ ನೂರಾರು ಹೊಟೆಲುಗಳನ್ನು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದೆಡೆ ತೆರೆದಿದ್ದಾರೆ. ಮದ್ಯಮ ಮತ್ತು ಕೆಳವರ್ಗದ, ಕೂಲಿ ಮಾಡಿ ಅವತ್ತಿನ ಊಟ ಅವತ್ತೇ ಸಂಪಾದಿಸುವವರಿಗೂ ಸಹ ಕೈಗೆಟಕುವ ದರದಲ್ಲಿ ಸಿಗುವುದು ಕರಾವಳಿಗರ ಉಡುಪಿ ಹೊಟೆಲುಗಳು ಎಂಬುದರಲ್ಲಿ ಎರಡು ಮಾತಿಲ್ಲ!
ಕೋಟದವರಾದ ರಾಮ ಹೊಳ್ಳ ಎಂಬುವರು ಬಳೆಪೇಟೆ ಸರ್ಕಲ್‌ನಲ್ಲಿ 1902ರಲ್ಲಿ ಮೊಟ್ಟಮೊದಲ ಉಡುಪಿ ಹೊಟೇಲ್ ತೆರೆದವರು. ಸೋದರಳಿಯ ಚ್.ವಿ. ಜನಾರ್ದನಯ್ಯ ಮುಂದುವರೆಸಿಕೊಂಡು, ಬಳೆಪೇಟೆ ಮುಖ್ಯರಸ್ತೆಯಲ್ಲಿ 1926ರಲ್ಲಿ ಅಧಿಕೃತವಾಗಿ ‘ಉಡುಪಿ ಶ್ರೀಕೃಷ್ಣಭವನ’ ರೆಸ್ಟೋರೆಂಟ್ ತೆರೆದು ಪ್ರಸಿದ್ಧರಾದರು. ಪ್ರಸ್ತುತದಲ್ಲಿ ಸುಬ್ರಮಣ್ಯ ಅವರು ಹೊಟೇಲ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಉಡುಪಿ ಹೊಟೆಲುಗಳು ಉತ್ತರ ಭಾರತದಲ್ಲಿ ಆರಂಭಗೊಂಡಿದ್ದರ ಹಿಂದೆ ಒಂದು ಸ್ವಾರಸ್ಯವಿದೆ. ಕೆ.ವೆಂಕಪ್ಪಯ್ಯ ಎಂಬುವರು ಉಡುಪಿಯಿಂದ 1911ರಲ್ಲಿ ಐದನೇ ಕಿಂಗ್ ಜಾರ್ಜ್‌ಗೆ ಏರ್ಪಡಿಸಿದ್ದ ದಿಲ್ಲಿ ದರ್ಬಾರ್ ನೋಡಲು ದಿಲ್ಲಿಗೆ ಹೋಗಿದ್ದರಂತೆ!
ಊರಿಗೆ ಮರಳುವಾಗ ಬಾಂಬೆಯಲ್ಲಿ ಉಳಿದುಕೊಂಡಿದ್ದರು. ಕೂರ್ಗ್ (ಮಡಿಕೇರಿ)ನ ಸೈನಿಕರು ಹೊಟ್ಟೆನೋವು, ಆಮಶಂಕೆಯಿಂದ ನರಳಿದಾಡಿದ್ದನ್ನು ಕೇಳಿದಾಗ, ಇಲ್ಲಿನ ಆಹಾರವೇ ನಮಗೆ ಸರಿ ಹೊಂದುತ್ತಿಲ್ಲ. ನಮ್ಮ ಕಡೆಯ ಜನರು ಇದರಿಂದ ಬೇಸತ್ತು ಹೋಗಿದ್ದಾರೆ ಎಂದುದನ್ನು ಗಂಭೀರ ವಾಗಿ ತೆಗೆದುಕೊಂಡ ವೆಂಕಪ್ಪಯ್ಯನವರು ಆರಂಭಿಸಿದ ಉಡುಪಿ ರೆಸ್ಟೊರೆಂಟ್ ಇಂದಿಗೂ Catering revolution in North states ಎಂದೇ ಗುರುತಿಸಲಾಗುತ್ತಿದೆ.
1898ರಲ್ಲಿ ಉಡುಪಿಯ ಕಡಂದಲೆ ಎಂಬ ಹಳ್ಳಿಯಲ್ಲಿ ಜನಿಸಿದ ಕೃಷ್ಣರಾವ್, ಉದರ ನಿಮಿತ್ತ ಪುತ್ತಿಗೆ ಮಠದಲ್ಲಿ ಕೆಲಸಕ್ಕೆ ಸೇರಿ, ನಂತರ ಮದ್ರಾಸ್ ಗೆ ಪ್ರಯಾಣ ಬೆಳಸಿ, ಉಡುಪಿ ಹೋಟೆಲ್ ಕಟ್ಟುತ್ತಾರೆ. ಇಲ್ಲಿಂದ ಬೆಂಗಳೂರು, ಕೊಯಮತ್ತೂರು, ಸೇಲಂ, ಅಹಮದಾಬಾದ್, ಬಾಂಬೆ ಜೊತೆಗೆ ಲಂಡನ್, ನ್ಯೂಯಾರ್ಕ್, ಸಿಂಗಾಪುರದಲ್ಲೂ ಉದ್ಯಮ ಬೆಳೆಸುತ್ತಾರೆ. 1938ರಲ್ಲಿ ‘ನ್ಯೂ ವುಡ್‌ಲ್ಯಾಂಡ್’ ಹೊಟೇಲ್ ಕಟ್ಟಿ ಬೆಳೆಸಿದ್ದು ಮತ್ತು ನಾವೆಲ್ಲ ಬಾಯಿ ಚಪ್ಪರಸಿ ಇಂದು ತಿನ್ನುತ್ತಿರುವ ‘ಮಸಾಲಾ ದೋಸೆ’ ಪರಿಚಯಿಸಿದ್ದು ಸಹ ಇದೇ ಕಡಂದಲೆ ಕೃಷ್ಣರಾವ್ !
ಕೆ.ಸೀತಾರಾಂ, ಮಂಗಳೂರಿನಿಂದ ಅಣ್ಣನ ತಿಂಡಿ ಹೊಟೇಲ್ ವ್ಯಾಪಾರದಲ್ಲಿ ಸಹಾಯಕ್ಕೆಂದು 1921ರಲ್ಲಿ ಮೈಸೂರಿಗೆ ಬರುತ್ತಾರೆ. ಚೆನ್ನಾಗಿ ಓದಿಕೊಂಡಿದ್ದ ಸೀತಾರಾಂ, ದಕ್ಷತೆಯಿಂದ ಜನ ಮೆಚ್ಚುಗೆ ಪಡೆಯುತ್ತ, ಹಲವು ವರ್ಷಗಳ ಕಾಲ ಶ್ರಮಪಟ್ಟು ಸಹೋದರರು ದೊಡ್ಡ ಹೊಟೇಲ್ ಆರಂಭಿಸುತ್ತಾರೆ. ‘ಮಲ್ಲಿಗೆ ಇಡ್ಲಿ’ಯನ್ನು ಪರಿಚಯಿಸಿ, ಮೈಸೂರಿನ ಗ್ರಾಹಕರ ಮೆಚ್ಚುಗೆ ಗಳಿಸುತ್ತಾರೆ.
1930ರಿಂದ 1940ರ ಸಮಯದಲ್ಲಿ, ಉಡುಪಿ ಹೋಟೆಲುಗಳ ವ್ಯಾಪಾರ ವೃದ್ಧಿಗೊಂಡಿದ್ದರಿಂದ ಅಡುಗೆಯವ, ಕ್ಯಾಷಿಯರ್, ವೆಯಿಟರ್, ಕಿಚನ್ ಸಹಾಯಕ, ಪಾರ್ಸೆಲ್ ವಿಭಾಗ ಎಂದೆಲ್ಲ ಹುಟ್ಟಿಕೊಳ್ಳುತ್ತವೆ. ಸ್ವಂತ ಪರಿಶ್ರಮದ ಮೂಲಕ ಬೆಳೆಯುತ್ತ ಬಂದ ಇವರೆಲ್ಲ ಸಾಂಪ್ರದಾಯಿಕ ಶೈಲಿಯಲ್ಲಿ ತಮ್ಮ ಹೋಟೆಲ್‌ಗಳಿಗೆ ಹೆಸರಿಡುವುದರಲ್ಲಿ ಸಿದ್ಧಹಸ್ತರು. ಭವನ, ಸಾಗರ, ಉಪಾಹಾರ, ಉತ್ಸವ, ವೈಭವ, ಗ್ರ್ಯಾಂಡ್, ಕೈರುಚಿ, ಗಾರ್ಡೇನಿಯಾ, ಪ್ಯಾಲೇಸ್, ಪಾರ್ಕ್, ಕೆಫೆ ಎಂಬೆಲ್ಲ ಹೆಸರುಗಳ ಹಿಂದೆ ಕೃಷ್ಣ, ವಿಷ್ಣು, ಉಡುಪಿ ಎಂಬ ರುಚಿವತ್ತಾದ ಹೆಸರನ್ನು ಸೇರಿಸಲು ಮಾತ್ರ ಮರೆಯುವುದಿಲ್ಲ. ಇದು ಇವರ ಶಿಸ್ತು, ಬದ್ಧತೆ ಮತ್ತು ತಮ್ಮ ಊರಿನ ಮೇಲಿರುವ ಮಮತೆ!
ಉಡುಪಿ ಎಂಬುದು ಕೇವಲ ಹೋಟೆಲ್ ಮಾಡುವವರ ಊರಾಗಿರದೆ, ಒಂದು ಸ್ಥಳದ ಹೆಸರಾಗಿರದೆ, ಹಸಿದು ಬಂದ ಜನರಿಗೆ ಊಟ ಕೊಡುವ ಅನ್ನದಾನ ಕ್ಷೇತ್ರದ ಅನ್ವರ್ಥಕ ನಾಮವೇ ಎಂಬಂತಾಗಿದೆ. ನಾವೆಲ್ಲ ಹಣಕೊಟ್ಟು ಆಹಾರ ಕೊಳ್ಳಲು ಸಾಧ್ಯವಿಲ್ಲ. ಆ ಕ್ಷಣಕ್ಕೆ, ನಮಗೆ ಬೇಕಾದ ಆಹಾರವನ್ನು ಬಿಸಿಬಿಸಿಯಾಗಿ, ಸ್ವಲ್ಪವೂ ಲೋಪವಾಗದಂತೆ ಕೊಡುತ್ತಾರಲ್ಲ, ಈ ಒಂದು ಸೇವಾಭಾವಕ್ಕೆ ನಾವು ಬಿಲ್ ರೂಪದಲ್ಲಿ ನೀಡುತ್ತೇವೆ ಅಷ್ಟೆ ಎಂಬ ಹಿರಿಯರ ಮಾತು ನಿಜವೂ ಹೌದು!
‘ನಾವೆಲ್ಲ ಅಡುಗೆಮನೆಗೆ ಅಡ್ಡಲಾಗಿರುವ ಕೌಂಟರ್ ಹೊರಭಾಗದಿಂದ ನೋಡುತ್ತ ನಮ್ಮದೇ ಅಭಿಪ್ರಾಯ ಹೊಂದಿರುತ್ತೇವೆ. ಇದೇ ಕೌಂಟರ್ ಒಳಗಿನ ವ್ಯವಸ್ಥೆ, ನೌಕರರು, ಆಹಾರ ಸಾಮಗ್ರಿ, ಪದಾರ್ಥಗಳ ಖರೀದಿ ಸೇರಿದಂತೆ ಇತರೆ ವಿಚಾರಕ್ಕೆ ಬಂದರೆ ಈ ಉದ್ಯಮದ ಒತ್ತಡ ಅಷ್ಟಿಷ್ಟಲ್ಲ ಸರ್’ ಎಂದು ಒಂದು ಕ್ಷಣಗಂಭೀರಾಗುತ್ತಾರೆ ಹೊಟೇಲ್‌ವೊಂದರ ಉದ್ಯಮಿ!
ಮುಂದುವರೆದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲವೂ ಕ್ಷಣಮಾತ್ರದಲ್ಲಿ ನಮ್ಮ ಜನರಿಗೆ ಸಿಗಬೇಕು. ಇಂದಿನ ವೇಗದ ಬದುಕಿಗೆ ಹೊಂದಿಕೊಂಡಿರುವ ಗ್ರಾಹಕರಿಗೆ ತಕ್ಕಂತೆ ಸೇವಾವಲಯವು ಕೆಲಸಮಾಡದಿದ್ದರೆ, ಆ ಅವಕಾಶ ಕಣ್ಮುಂದೆಯೇ ಇನ್ನೊಬ್ಬರ ಪಾಲಾಗುತ್ತದೆ. ಆಹಾರ ತಿಂಡಿ ಗಳನ್ನು ಬಿಸಿಬಿಸಿಯಾಗಿ, ರುಚಿರುಚಿಯಾಗಿ ಮಾಡಿ ಕೂಡಲೇ ಗ್ರಾಹಕರಿಗೆ ಒದಗಿಸಬೇಕು. ಆದ್ದರಿಂದ ಈ ಹೊಟೇಲ್ ಉದ್ಯಮವು ಕಣ್ಣೆದುರಿಗೆ ಕಂಡಂತೆ ಘಮಘಮಿಸುವುದಿಲ್ಲ.
ಬದಲಾಗಿ, ಮೆಣಸಿನ ಘಾಟಿನಂತೆ ಕಾಡುತ್ತಲೇ ಇರುತ್ತದೆ ಎಂದು ತಮ್ಮ ಕಷ್ಟವನ್ನು ಥೇಟು ಅಡುಗೆ ದಾಟಿಯಲ್ಲಿ ಹೇಳುತ್ತಾರೆ. ದಿನಸಿಗಳ ಬೆಲೆ, ಅಡುಗೆ ಎಣ್ಣೆ, ಸಿಲಿಂಡರ್, ನಿತ್ಯ ಬೆಳೆದ ತರಕಾರಿಗಳ ಖರೀದಿ ಪ್ರಕ್ರಿಯೆ ಎಲ್ಲವೂ ದಿನದಿಂದ ದಿನಕ್ಕೆ ಏರುತ್ತಲೇ ಇರುತ್ತದೆ. ಇದೆಲ್ಲವನ್ನು ತೂಗಿಸಿಕೊಂಡು, ಅಡುಗೆ ಕೆಲಸ, ಸಹಾಯಕರಿಗೆ ಉಚಿತ ವಸತಿ ವ್ಯವಸ್ಥೆ, ಅವರ ಊಟ ಸಂಬಳ ನಿಭಾಯಿಸಿದ ಮೇಲೆ, ಉಳಿದಂತೆ ಕಟ್ಟಡದ ಬಾಡಿಗೆ, ವಿದ್ಯುತ್ ಬಿಲ್ ಇತ್ಯಾದಿಗಳನ್ನು ನಿಭಾಯಿಸಲು ದೊಡ್ಡ ಧೈರ್ಯಬೇಕೆನ್ನುತ್ತಾರೆ ಮತ್ತೊಂದು ಹೊಟೇಲ್‌ನ ಮಾಲೀಕರು.
ಹತ್ತಾರು ಹೊಟೇಲ್ ಮಲೀಕರ ಅಭಿಪ್ರಾಯ ಗಮನಿಸಿದಾಗ, ಮೂಲಭೂತವಾಗಿ ಕಾಡುವ ನಿರಂತರ ಸಮಸ್ಯೆಗಳೆಂದರೆ, ಕೆಲಸದ ಹುಡುಗರದು. ಕೆಲಸ ಕೇಳಿಕೊಂಡು ಬರುತ್ತಾರೆ. ಮಾಡುತ್ತಿರುತ್ತಾರೆ. ಇನ್ನೊಂದೆಡೆ ಹೆಚ್ಚಿನ ಸಂಬಳ ದೊರೆತು ಅತ್ತ ಹೋಗುತ್ತಾರೆ, ಇದು ಸಹಜವೇ. ಆದರೆ, ನಿಶ್ಚಿತ ಕಾರ್ಮಿಕ ವ್ಯವಸ್ಥೆಯಿಲ್ಲ, ಬಂದವರು ಯಾವಾಗ ಕೆಲ ಬಿಟ್ಟು ಹೋಗುತ್ತಾರೋ ಗೊತ್ತಿಲ್ಲ.
ಆಗಾಗ ಸರಕಾರದ ಹಲವು ಅನುಮತಿ ಪತ್ರಗಳನ್ನು ಪಡೆಯುವುದೂ ತ್ರಾಸದಾಯಕವಾಗಿದೆ. ಇವುಗಳನ್ನು ನಿರಂತರವಾಗಿ ನವೀಕರಿಸುವುದು ಇನ್ನೊಂದು ಸಮಸ್ಯೆ. ದಿಢೀರನೇ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ನಷ್ಟಕ್ಕೀಡಾಗುವ ಸಂಭವ ಜಾಸ್ತಿ. ವ್ಯವಹಾರ ಸ್ಪರ್ಧೆಗೆ ಬಿದ್ದು, ಪಕ್ಕದ ಎರಡೆರಡು ಹೊಟೇಲ್ ಮಾಡಿ, ನಷ್ಟ ಮಾಡಿಕೊಳ್ಳುವ Hotel Competition ಕುರಿತು ಹೊಟೇಲ್ ಸಂಘ ಗಮನಹರಿಸುವ ಅಗತ್ಯವಿದೆ.
ಹೊಟೇಲ್ ಉದ್ಯಮಿಗಳ, ಹೂಡಿಕೆ ಮಾಡುವವರ ರಕ್ಷಣೆ ಕುರಿತು ಕೆಲ ಮಾನದಂಡಗಳನ್ನು ಸಂಬಂಧಿಸಿದವರು ಜಾರಿಗೆ ತಂದರೆ ಉತ್ತಮವೆನಿಸುತ್ತದೆ. ಹೊಟೇಲ್ ಉದ್ಯಮಕ್ಕೆ ಸಂಬಂಧಿಸಿದಂತೆ, FHRAI ಕಾರ್ಯನಿರ್ವಹಿಸುತ್ತಿದ್ದು, 1955ರ ಏಪ್ರಿಲ್ 15ರಂದು ಸ್ಥಾಪಿತವಾಗಿ, ದೇಶದ 60 ಸಾವಿರಕ್ಕೂ ಹೆಚ್ಚು ಹೋಟೆಲ್ಸ್ ಮತ್ತು 5 ಲಕ್ಷಕ್ಕೂ ಅಧಿಕ ರೆಸ್ಟೋರೆಂಟ್‌ಗಳನ್ನು ಪ್ರತಿನಿಧಿಸುತ್ತಿದೆ.
FHRAI ಕೂಟವು ಸರಕಾರ, ಉದ್ದಿಮೆ, ಅಂತಾರಾಷ್ಟ್ರೀಯ ಸಂಘಟನೆಗಳೊಂದಿಗೆ ನೇರಸಂಪರ್ಕ ಹೊಂದಿದ್ದು, ತರಬೇತಿ, ಸಮ್ಮೇಳನ, ಮತ್ತು capacity building ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತದೆ. 2024-25ನೇ ಕಾರ್ಯಾವಧಿಯ ಅಧ್ಯಕ್ಷರಾಗಿ ಬೆಂಗಳೂರಿನ ಹೊಟೇಲ್ ಮೌರ್ಯದ ಎಂ.ಡಿ ಆಗಿರುವ ಕೆ. ಶ್ಯಾಮರಾಜು ಆಯ್ಕೆಯಾಗಿದ್ದರೆ, ಲಖನೌ, ಕೋಲ್ಕತಾ, ಮುಂಬೈ ಮೂಲದ ಉದ್ಯಮಿ ಗಳು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಡಿಸನ್ ಬ್ಲೂ ಏಟ್ರಿಯಾದ ಡೈರೆಕ್ಟರ್ ಇಲ್ಲಿ ಗೌರವಕಾರ್ಯದರ್ಶಿಯಾಗಿದ್ದರೆ, ಓಬೆರಾಯ್ ಹೊಟೇಲ್ ಭಾಗಿದಾರ ಗರೀಶ್ ಓಬೆರಾಯ್ ಖಜಾಂಚಿಯಾಗಿದ್ದು, ಇಂತಹ ದಿಗ್ಗಜರ ನಡುವೆ ಹೊಟೇಲ್ ಉದ್ಯಮ ಒಂದು ಒಕ್ಕೂಟ ದಡಿಯಲ್ಲಿ ಬೆಳೆಯುತ್ತ ಬರುತ್ತಿದೆ. ಇದರಡಿಯಲ್ಲಿ HRANI, HRAEI, SIHRA ನಂತಹ ಪ್ರಾದೇಶಿಕ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕವು ತನ್ನ ಐತಿಹಾಸಿಕ ನಗರ ಕ್ಷೇತ್ರಗಳು, ಧಾರ್ಮಿಕ ಕ್ಷೇತ್ರಗಳು ಮತ್ತು ನೈಸರ್ಗಿಕ ಸ್ಥಳಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ನಗರಪ್ರದೇಶ ಗಳಲ್ಲಿ ಮಿಡ್ರೇಂಜ್ ಮತ್ತು ಬಜೆಟ್ ವಸತಿವ್ಯವಸ್ಥೆಗಳು ಪ್ರವಾಸಿಗರಿಗೆ ಅನುಕೂಲವಾಗಿ ಪರಿಣಮಿ ಸಿವೆ.
ಇನ್ನುಳಿದಂತೆ ಹೋಮ್ಸ್ಟೇಗಳು, ಫಾರ್ಮ್ಸ್ಟೇಗಳು, ಇನ್ನುಳಿದಂತೆ ಹೋಮ್ಸ್ಟೇಗಳು, -ರ್ಮ್ಸ್ಟೇಗಳು, ಗರಿಗೆ ಸ್ಥಳೀಯ ಅನುಭೂತಿಯನ್ನೂ ನೀಡುತ್ತಿವೆ. ಇಂತಹ ಸ್ಪರ್ಧಾತ್ಮಯುಗದಲ್ಲಿ ಇಂದಿನ ಯುವಕರು ಹೊಟೇಲ್ ಉದ್ಯಮ ತೊರೆದು, ಅನ್ಯಕ್ಷೇತ್ರದತ್ತ ಹೋಗುತ್ತಿರುವುದು ಹೊಟೇಲ್ ಉದ್ಯಮವು ಆತಂಕದಲ್ಲಿರುವಂತೆ ಮಾಡಿದೆ. ಹಿಂದಿನವರಂತೆ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಇಂದಿನವರು ತಯಾರಿಲ್ಲ. ಕಾರ್ಮಿಕರನ್ನು ನಂಬಿ ಬದುಕುವ ಕ್ಷೇತ್ರವಾದ್ದರಿಂದ, ಅಷ್ಟೂ ಜವಾ ಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ, ನನಗೆ ಬೇಕಾದಷ್ಟು ಸಂಬಳಕ್ಕೆ ನಾನು ಉದ್ಯೋಗ ಮಾಡುತ್ತಿದ್ದೇ ನಲ್ಲ ಎನ್ನುವ ಮನಸ್ಥಿತಿಗೆ ಬಂದಿರುವಂತೆ ಕಾಣುತ್ತಿದೆ.
ಯುವಜನತೆ ಉದ್ದಿಮೆಯತ್ತ ಆಕರ್ಷಿಸಲು, ಇಂದಿನ ಆಧುನಿಕತೆಗೆ ತಕ್ಕಂತೆ ಉದ್ಯಮ ಕಟ್ಟಿ, ಪೋಷಿಸುವ ಕಾರ್ಯಕ್ಷಮತೆಯನ್ನು ಕಲಿಸುವ, ಬೆಂಬಲಿಸುವ ಅಗತ್ಯವಿದೆ.