Children Death: ಆಟವಾಡುವಾಗ ಸಂಪ್‌ಗೆ ಬಿದ್ದು ಇಬ್ಬರು ಮಕ್ಕಳ ದುರ್ಮರಣ
ಆಟವಾಡುತ್ತಿದ್ದ ಇಬ್ಬರು ಮಕ್ಕಳು ಇದ್ದಕ್ಕಿದ್ದಂತೆ ಕಣ್ಮರೆ ಆಗಿದ್ದರು. ಪೋಷಕರು ಎಷ್ಟೇ ಹುಡುಕಾಡಿದರೂ ಮಕ್ಕಳು ಸಿಕ್ಕಿರಲಿಲ್ಲ. ಕೊನೆಗೆ ಪೊಲೀಸರು ನೀರಿನ ಸಂಪ್ ತೆರೆದು ನೋಡಿದಾಗ ಮಕ್ಕಳು ಒಳಗೆ ಬಿದ್ದಿರುವುದು ಗೊತ್ತಾಗಿದೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಕಲಬುರಗಿ: ಕಲಬುರಗಿಯಲ್ಲಿ (Kalaburagi news) ಒಂದು ಘೋರ ದುರಂತ ಸಂಭವಿಸಿದೆ. ಆಟವಾಡುತ್ತಿದ್ದ ಇಬ್ಬರು ಮಕ್ಕಳು ನೀರಿನ ಸಂಪ್‌ಗೆ (water Sump) ಬಿದ್ದು ದುರ್ಮರಣ (children death) ಹೊಂದಿದ ಘಟನೆ (Crime News) ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೋಳಕೂರ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತ ಮಕ್ಕಳನ್ನು ಗಿರೀಶ್ ತಿಪ್ಪಣ್ಣ (3) ಹಾಗೂ ತಿಪ್ಪಣ್ಣ ಅವರ ಸಹೋದರಿಯ ಮಗಳು ಶ್ರೇಷ್ಠಾ ಮಹೇಶ್ (2) ಎಂದು ಗುರುತಿಸಲಾಗಿದೆ.
ಆಟವಾಡುತ್ತಿದ್ದಾಗ ಇಬ್ಬರು ಮಕ್ಕಳು ಕಣ್ಮರೆ ಆಗಿದ್ದರು. ಪೋಷಕರು ಎಷ್ಟೇ ಹುಡುಕಾಡಿದರೂ ಮಕ್ಕಳು ಸಿಕ್ಕಿರಲಿಲ್ಲ. ಮಕ್ಕಳು ಕಾಣದೆ ಇದ್ದಾಗ ಗಾಬರಿಯಾದ ಪೋಷಕರು ಗ್ರಾಮದ ಸಿದ್ದಬಸವೇಶ್ವರ ದೇವಸ್ಥಾನದ ಮೈಕ್ ಮೂಲಕ ಮಕ್ಕಳು ಕಾಣೆಯಾಗಿರುವ ಬಗ್ಗೆ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದರು. ಕೊನೆಗೆ ಪೊಲೀಸರು ಸಂಪ್ ತೆರೆದು ನೋಡಿದಾಗ ಮಕ್ಕಳು ಒಳಗೆ ಬಿದ್ದಿರುವುದು ಗೊತ್ತಾಗಿದೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟವಾಡುತ್ತ ಸಂಪ್ ಬಳಿಗೆ ಹೋದ ಮಕ್ಕಳು ಕುತೂಹಲದಿಂದ ಸಂಪ್‌ಗೆ ಬಾಗಿ ನೋಡಿದಾಗ ಬಿದ್ದಿರಬಹುದು ಎಂದು ಅನುಮಾನಿಸಲಾಗಿದೆ. ಆದರೆ ದುಷ್ಕೃತ್ಯದ ಸಾಧ್ಯತೆಯನ್ನು ಪೊಲೀಸರು ಪೂರ್ತಿ ನಿರಾಕರಿಸಿಲ್ಲ. ಹೆಚ್ಚಿನ ತನಿಖೆ ಪೊಲೀಸರಿಂದ ನಡೆಯುತ್ತಿದೆ.
ಕಾಮಪಿಪಾಸು ತಂದೆಯಿಂದ ಮಗಳ ಮೇಲೇ ಅತ್ಯಾಚಾರ
ದೇವನಹಳ್ಳಿ: ತಂದೆಯೇ ಮಗಳ ಮೇಲೆ ಕಾಮಪಿಶಾಚಿಯಂತೆ ಅತ್ಯಾಚಾರ (physicial Abuse) ಎಸಗಿದ ಘಟನೆ ಹೊಸಕೋಟೆ (Hosakote) ನಗರದಲ್ಲಿ ವರದಿಯಾಗಿದೆ. ತಂದೆಯಿಂದ ಅತ್ಯಾಚಾರಕ್ಕೊಳಗಾದ ಮತ್ತು ಬೆದರಿಕೆ ಹಾಕಲ್ಪಟ್ಟ (threat) ಯುವತಿಯೊಬ್ಬಳು ಮನೆ ಬಿಟ್ಟು ಪಿಜಿಯಲ್ಲಿ ಆಶ್ರಯ ಪಡೆದ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಂದೆಯೇ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹೊಸಕೋಟೆ ಮಹಿಳಾ ಠಾಣೆ ಪೊಲೀಸರು (Hosakote Women Police) ಆರೋಪಿ ಮಂಜುನಾಥ್ನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.
19 ವರ್ಷ ವಯಸ್ಸಿನ ಮಗಳ ಮೇಲೆ ತಂದೆ ಮಂಜುನಾಥ ಅತ್ಯಾಚಾರ ಮಾಡಿದ್ದರ ಜತೆಗೆ ಈ ವಿಷಯವನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಆಕೆಗೆ ಬೆದರಿಕೆಯನ್ನೂ ಹಾಕಿದ್ದಾನೆ. ಕಾರು ಚಾಲಕನಾಗಿರುವ ಮಂಜುನಾಥ್ಗೆ ಮೂರು ಜನ ಮಕ್ಕಳು. ಇಬ್ಬರು ಹೆಣ್ಣು, ಒಂದು ಗಂಡು ಮಗು. ಹಿರಿಯ ಮಗಳ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಹಾಗೂ ದೂರು ದಾಖಲಾಗಿದೆ. ತಂದೆಯ ಕಾಟ ತಾಳಲಾರದೆ ಯುವತಿ ಪಿಜಿಯಲ್ಲಿ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ವಿಷಯ ತಿಳಿಸಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಈತ ಹಾಕಿದ್ದ. ಹೀಗಾಗಿ ಜೀವ ಭಯದಿಂದ ಯುವತಿ ಮನೆಯಿಂದ ದೂರ ಉಳಿದಿದ್ದಳು.
ತಂದೆಯಿಂದಾದ ಅತ್ಯಾಚಾರಕ್ಕೆ ನ್ಯಾಯ ಒದಗಿಸುವಂತೆ ಯುವತಿ ಆಗ್ರಹಿಸಿದ್ದು, ಸದ್ಯ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಮಂಜುನಾಥನನ್ನು ಬಂಧಿಸಲಾಗಿದ್ದು, ಬಾಯಿ ಬಿಡಿಸಲಾಗುತ್ತಿದೆ. ಈತ ಇನ್ನಿತರರ ಮೇಲೂ ಇಂಥ ಕೃತ್ಯ ಎಸಗಿದ್ದಾನೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: Accident News: ಬೆಂಗಳೂರಿನಲ್ಲಿ ವಿದ್ಯುತ್ ಕಂಬ ಮುರಿದುಬಿದ್ದು ಇಬ್ಬರು ಮಹಿಳೆಯರು ಸಾವು