ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Science world: ಜ್ಞಾನಭಾರತಿಯಲ್ಲಿ 'ವಿಜ್ಞಾನಲೋಕ' ಅನಾವರಣ

Science for Exploring, Inspiring and Connecting the Society ಎಂಬ ಘೋಷವಾಕ್ಯ ದೊಂದಿಗೆ ನಡೆಯುವ ಈ ವಿಜ್ಞಾನ ಹಬ್ಬವನ್ನು ಬೆಂಗಳೂರು ವಿಶ್ವವಿದ್ಯಾಲಯದ ಸೈ ಫೋರಮ್ (ಬಿಯುಎಸ್‌ಎಫ್) ಆಯೋಜಿಸಿದ್ದು, ಇದಕ್ಕೆ ಪಿಎಂ ಉಷಾ ಯೋಜನೆಯ ಬೆಂಬಲ ದೊರಕಿದೆ. ‌ಎರಡು ದಿನಗಳ ಕಾಲ ನಡೆಯಲಿರುವ ಈ ವಿಜ್ಞಾನ ಹಬ್ಬವು ವಿಶ್ವವಿದ್ಯಾಲಯದ ಆವರಣವನ್ನು ವಿಜ್ಞಾನ, ನವೀನತೆ ಮತ್ತು ಅನ್ವೇಷಣೆಯ ಉತ್ಸವವಾಗಿ ಪರಿವರ್ತಿಸಲಿದೆ.

Science world: ಜ್ಞಾನಭಾರತಿಯಲ್ಲಿ 'ವಿಜ್ಞಾನಲೋಕ' ಅನಾವರಣ

-

Ashok Nayak
Ashok Nayak Mar 13, 2026 9:44 AM

ವೈಭವ ಸಿ. ಕೊಳ್ಳಿ ಬೆಂಗಳೂರು

17,18 ರಂದು ಬೆಂಗಳೂರು ವಿವಿಯಲ್ಲಿ ವಿಜ್ಞಾನ ಹಬ್ಬ

ವಿಜ್ಞಾನಾಸಕ್ತರು, ಸಂಶೋಧಕರು, ಸಾರ್ವಜನಿಕರಿಗೆ ವಿಶಿಷ್ಟ ವೇದಿಕೆ

ವಿಜ್ಞಾನ ಕೇವಲ ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಗಳಿಗೆ ಮಾತ್ರ ಸೀಮಿತ ವಾಗಿರುವ ವಿಷಯವಲ್ಲ, ಅದು ನಮ್ಮ ದೈನಂದಿನ ಬದುಕಿನ ಪ್ರತಿಯೊಂದು ಅಂಶವನ್ನೂ ರೂಪಿಸುವ ಶಕ್ತಿ. ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಸಂಶೋ ಧನೆಗಳ ಮೂಲಕ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುವ ಶಕ್ತಿ ವಿಜ್ಞಾನದಲ್ಲಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಮಾ. 17 ಮತ್ತು 18ರಂದು ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ಹಬ್ಬ-2026 ಆಯೋಜಿಸ ಲಾಗಿದ್ದು, ಆ ಮೂಲಕ ವಿಜ್ಞಾನಾಸಕ್ತರು, ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾರ್ವಜನಿಕರಿಗೆ ವಿಶಿಷ್ಟ ವೇದಿಕೆಯೊಂದನ್ನು ಸೃಷ್ಟಿಸಿದೆ.

Science for Exploring, Inspiring and Connecting the Society ಎಂಬ ಘೋಷವಾಕ್ಯ ದೊಂದಿಗೆ ನಡೆಯುವ ಈ ವಿಜ್ಞಾನ ಹಬ್ಬವನ್ನು ಬೆಂಗಳೂರು ವಿಶ್ವವಿದ್ಯಾಲಯದ ಸೈ ಫೋರಮ್ (ಬಿಯುಎಸ್‌ಎಫ್) ಆಯೋಜಿಸಿದ್ದು, ಇದಕ್ಕೆ ಪಿಎಂ ಉಷಾ ಯೋಜನೆಯ ಬೆಂಬಲ ದೊರಕಿದೆ. ‌ಎರಡು ದಿನಗಳ ಕಾಲ ನಡೆಯಲಿರುವ ಈ ವಿಜ್ಞಾನ ಹಬ್ಬವು ವಿಶ್ವವಿದ್ಯಾಲಯದ ಆವರಣವನ್ನು ವಿಜ್ಞಾನ, ನವೀನತೆ ಮತ್ತು ಅನ್ವೇಷಣೆಯ ಉತ್ಸವವಾಗಿ ಪರಿವರ್ತಿಸಲಿದೆ.

ಇದನ್ನೂ ಓದಿ: K V Chandramouli Column: ಮೌನವೇ ? ತಂತ್ರವೇ ? ವಿವೇಕವೇ ? ಭಾರತದ ನಿಲುವಿನ ಅರ್ಥವೇನು ?

ವಿಜ್ಞಾನ ಕುತೂಹಲಕ್ಕೆ ಚೈತನ್ಯ ತುಂಬುವ ಪ್ರದರ್ಶನ: ಈ ಎರಡು ದಿನಗಳ ವಿಜ್ಞಾನ ಹಬ್ಬದ ಪ್ರಮುಖ ಆಕರ್ಷಣೆಯಾಗಿ ವಿವಿಧ ವಿಜ್ಞಾನ ವಿಭಾಗಗಳಲ್ಲಿ ವಿಜ್ಞಾನ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.

ವಿದ್ಯಾರ್ಥಿಗಳು ಮತ್ತು ಸಂಶೋಧಕರು ರೂಪಿಸಿರುವ ವಿಜ್ಞಾನ ಮಾದರಿಗಳು, ಸಂಶೋ ಧನಾ ಪೋಸ್ಟರ್‌ಗಳು ಹಾಗೂ ಹೊಸ ವೈeನಿಕ ಯೋಜನೆಗಳ ಮಾಹಿತಿಯು ಪ್ರದರ್ಶನ ವಾಗಲಿವೆ. ಆ ಮೂಲಕ ವಿಜ್ಞಾನ ತತ್ವಗಳು ನೈಜ ಜೀವನದಲ್ಲಿ ಹೇಗೆ ಉಪಯೋಗ ವಾಗುತ್ತವೆ ಎಂಬುದನ್ನು ಸರಳವಾಗಿ ಅರ್ಥ ಮಾಡಿಸುವ ಪ್ರಯತ್ನವನ್ನು ಬೆಂಗಳೂರು ವಿಶ್ವವಿದ್ಯಾಲಯ ಮಾಡಲಿದೆ. ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಸಂಶೋಧನಾ ಮನೋಭಾವಕ್ಕೆ ಈ ಪ್ರದರ್ಶನಗಳು ಸ್ಪೂರ್ತಿಯಾಗಲಿವೆ.

ರಾಷ್ಟ್ರೀಯ ವಿಚಾರ ಸಂಕಿರಣ, ಚರ್ಚಾಗೋಷ್ಠಿ: ವಿಶ್ವವಿದ್ಯಾಲಯದಲ್ಲಿರುವ ಆರು ಸ್ನಾತಕೋತ್ತರ ವಿಜ್ಞಾನ ವಿಭಾಗಗಳಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಹೆಸರಾಂತ ವಿಜ್ಞಾನಿಗಳು ಮತ್ತು ಪರಿಣತರ ಉಪನ್ಯಾಸಗಳು ನಡೆಯಲಿದ್ದು, ಸಂಶೋಧನಾ ಪ್ರಸ್ತುತಿಗಳು ಹಾಗೂ ಶೈಕ್ಷಣಿಕ ಚರ್ಚೆಗಳು ವಿಜ್ಞಾನ ಕ್ಷೇತ್ರದ ಹೊಸ ಪ್ರವೃತ್ತಿಗಳನ್ನು ಪರಿಚಯಿಸಲಿವೆ.

ವಿಜ್ಞಾನಿಗಳು ಮತ್ತು ಸಂಶೋಧಕರೊಂದಿಗೆ ನೇರ ಸಂವಾದ ನಡೆಸುವ ಅವಕಾಶವೂ ಲಭ್ಯವಿರುತ್ತದೆ. ವಿಜ್ಞಾನ, ನವೀನತೆ ಮತ್ತು ಅನ್ವೇಷಣೆಯ ಈ ಮಹೋತ್ಸವವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದರ ಜತೆಗೆ ಸಮಾಜದಲ್ಲಿ ವಿಜ್ಞಾನದ ಮಹತ್ವವನ್ನು ಅರಿಯುವಂತೆ ಮಾಡಲಿದೆ. ವಿದ್ಯಾರ್ಥಿಗಳು ಮತ್ತು ಸಂಶೋ ಧಕರಿಗೆ ಇದು ತಮ್ಮ eನವನ್ನು ವಿಸ್ತರಿಸಿಕೊಳ್ಳಲು ಮತ್ತು ಹೊಸ ಆಲೋಚನೆ ಗಳನ್ನು ಹಂಚಿಕೊಳ್ಳಲು ಉತ್ತಮ ಅವಕಾಶವಾಗಲಿದೆ.

ವಿಜ್ಞಾನವನ್ನು ಕೇವಲ ಓದುತ್ತಲೇ ಅಲ್ಲ, ಅನುಭವಿಸುವ ಮೂಲಕ ಕಲಿಯುವ ಅವಕಾಶ ವನ್ನು ಈ ವಿಜ್ಞಾನ ಹಬ್ಬ ಒದಗಿಸುತ್ತಿದೆ. ವಿವಿಧ ಸ್ನಾತಕೋತ್ತರ ವಿಜ್ಞಾನ ವಿಭಾಗಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದ್ದು, ಇಲ್ಲಿ ಭಾಗವಹಿಸುವವರು ವೈಜ್ಞಾನಿಕ ತಂತ್ರಗಳು, ಸಂಶೋಧನಾ ಉಪಕರಣಗಳು ಹಾಗೂ ಪ್ರಯೋಗಾತ್ಮಕ ವಿಧಾನಗಳನ್ನು ನೇರವಾಗಿ ಅನುಭವಿಸಬಹುದು.

ಕಾರ್ಯಾಗಾರಗಳಲ್ಲಿ ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ. ಅಲ್ಲದೇ, ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ ಎಂಬುದು ವಿಶೇಷ. ಈ ವಿಜ್ಞಾನ ಹಬ್ಬದ ಮತ್ತೊಂದು ವಿಶೇಷ ಆಕರ್ಷಣೆಯೆಂದರೆ, ವಿಜ್ಞಾನ ವಿಭಾಗಗಳಲ್ಲಿರುವ ಸಂಗ್ರಹಾಲಯಗಳ ವೀಕ್ಷಣೆಗೆ ಮುಕ್ತ ಅವಕಾಶ.

ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಭೂವಿಜ್ಞಾನ ವಿಭಾಗಗಳ ಸಂಗ್ರಹಾಲಯಗಳಲ್ಲಿ ಜೈವ ವೈವಿಧ್ಯ ಸಂಗ್ರಹಗಳು, ವಿವಿಧ ಜೀವಿಗಳ ಮಾದರಿಗಳು ಹಾಗೂ ಭೂವೈಜ್ಞಾನಿಕ ಪ್ರದರ್ಶನಗಳನ್ನು ನೋಡುವ ಅಪೂರ್ವ ಅವಕಾಶ ಲಭ್ಯವಾಗಲಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಇದು ವಿಜ್ಞಾನ ಜಗತ್ತಿನ ವೈವಿಧ್ಯತೆಯನ್ನು ನೇರವಾಗಿ ಅರಿಯುವ ಅವಕಾಶವಾಗಲಿದೆ.

ವಿಜ್ಞಾನ ಮತ್ತು ಸಮಾಜದ ನಡುವೆ ಸೇತುವೆ

ಈ ವಿಜ್ಞಾನ ಹಬ್ಬದ ಪ್ರಮುಖ ಉದ್ದೇಶವೇನೆಂದರೆ, ವಿಜ್ಞಾನವನ್ನು ಸಮಾಜದೊಂದಿಗೆ ಸಂಪರ್ಕಿಸುವುದು. ಸಂಶೋಧನೆಗಳು ಮಾನವನ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಈ ವಿಜ್ಞಾನ ಹಬ್ಬದಲ್ಲಿ ಪ್ರದರ್ಶನ ಏರ್ಪಡಿಸ ಲಾಗಿದೆ. ಆ ಮೂಲಕ ವಿಜ್ಞಾನವು ಕೇವಲ ಸಿದ್ಧಾಂತಗಳಲ್ಲ, ಅದು ಸಮಾಜದ ಅಭಿವೃದ್ಧಿಗೆ ನೆರವಾಗುವ ಪ್ರಾಯೋಗಿಕ ಶಕ್ತಿಯೆಂಬ ಅರಿವು ಮೂಡಿಸಲಾಗುತ್ತದೆ. ಅಲ್ಲದೆ, ವಿಜ್ಞಾನವು ಕೇವಲ ಪ್ರಯೋಗಾಲಯಗಳ ಸೀಮಿತವಲ್ಲ, ಅದು ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಶಕ್ತಿಯೆಂಬ ಸಂದೇಶವನ್ನು ನೀಡಲಿದೆ ಎಂದು ವಿಜ್ಞಾನ ವಿಭಾಗದ ಡೀನ್‌ ಗಳಾದ ಪ್ರೊ. ಎನ್.ನಾಗೇಶ್ ತಿಳಿಸಿದರು.

ವಿವಿಧ ಸ್ಫರ್ಧೆಗಳಿಗೆ ವೇದಿಕೆ

ಈ ವಿಜ್ಞಾನ ಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸ ಲಾಗಿದೆ. ವಿಜ್ಞಾನ ಮಾದರಿ ಸ್ಪರ್ಧೆ, ವಿಜ್ಞಾನ ಪೋಸ್ಟರ್ ಪ್ರಸ್ತುತಿ, ಕ್ವಿಜ್ ಸ್ಪರ್ಧೆ, ಪ್ರಬಂಧ ಬರವಣಿಗೆ ಮತ್ತು ಪಿಕ್ ಆಂಡ್ ಸ್ಪೀಕ್ ಸ್ಪರ್ಧೆ ಗಳು ನಡೆಯಲಿದ್ದು, ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಬೆಂಗಳೂರು ವಿಶ್ವವಿದ್ಯಾಲಯದ ವಿದಾರ್ಥಿಗಳಿಗೆ ಪ್ರತಿ ಸ್ಪರ್ಧೆಗೆ 100ರು. ಮತ್ತು ಇತರ ವಿದ್ಯಾರ್ಥಿಗಳಿಗೆ 200ರು. ಶುಲ್ಕ ನಿಗದಿಪಡಿಸಲಾಗಿದೆ.

image

ಬೆಂಗಳೂರು ವಿವಿ ಸೈನ್ಸ್ ಫೆಸ್ಟಿವಲ್-2026 ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿ ಬೆಳೆಸುವ ಮಹತ್ವದ ಕಾರ್ಯ ಕ್ರಮವಾಗಿದೆ. ವಿಜ್ಞಾನ ಪ್ರದರ್ಶನಗಳು, ಕಾರ್ಯಾ ಗಾರಗಳು ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ, ವಿಚಾರ ಸಂಕಿರಣದ ಮೂಲಕ ಹೊಸ ಆಲೋಚನೆಗಳಿಗೆ ವೇದಿಕೆ ಸಿಗಲಿದೆ. ಈ ಕಾರ್ಯ ಕ್ರಮ ಸಂಶೋಧನೆ ಹಾಗೂ ನವೀನತೆಯನ್ನು ಪ್ರೇರೆಪಿಸ ಲಿದ್ದು ಶಾಲೆ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ವಿಜ್ಞಾನ ಮನೋಭಾವನ್ನು ಸಮಾಜದಲ್ಲಿ ವಿಸ್ತರಿಸುವುದು ಪ್ರಮುಖ ಉದ್ದೇಶವಾಗಿದೆ.

- ಡಾ.ಜಯಕರ ಎಸ್.ಎಂ,ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ
image

ಜನಸಾಮಾನ್ಯರಲ್ಲಿ ವಿಜ್ಙಾನದ ಅರಿವು ಹೆಚ್ಚಿಸಲು ಹಾಗೂ ವಿವಿಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ಪರಿಚಯಿಸುವ ಉದ್ದೇಶದಿಂದ ವಿಜ್ಞಾನ ಹಬ್ಬ-2026 ಅನ್ನು ಎರಡು ದಿನಗಳ ಕಾಲ ಆಯೋಜಿಸಲಾಗುತ್ತಿದೆ. ವಿಜ್ಞಾನದ ಜ್ಞಾನವನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವುದು ಮತ್ತು ಯುವಜನರಲ್ಲಿ ವಿಜ್ಞಾನಾಸಕ್ತಿ ಬೆಳೆಸುವುದು ಇದರ ಮುಖ್ಯ ಉದ್ದೇಶ. ವಿಶ್ವವಿದ್ಯಾಲಯ ಹಾಗೂ ಅದರ ಅಧೀನದಲ್ಲಿರುವ ಎಲ್ಲ ಅಫಿಲಿ ಯೇಟೆಡ್ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು ಮಾತ್ರವಲ್ಲದೆ ಸಾರ್ವಜನಿಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ವಿಶೇಷವಾಗಿ ಸಾಮಾನ್ಯ ಜನರಿಗೆ ಮೂಲ ಭೂತ ವಿಜ್ಞಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಪ್ರದರ್ಶನಗಳು, ವಿಜ್ಞಾನ ಪ್ರದ ರ್ಶನ ಮಳಿಗೆಗಳು ಹಾಗೂ ವೈeನಿಕ ಸಾಧನೆಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಸೇರಿ ಎಲ್ಲ ವಿಜ್ಞಾನ ವಿಭಾಗಗಳು ತಮ್ಮ ಸಂಶೋಧನೆಗಳು ಹಾಗೂ ಇತ್ತೀಚಿನ ವೈಜ್ಞಾನಿಕ ಬೆಳವಣಿಗೆಗಳನ್ನು ಜನರಿಗೆ ಪರಿಚಯಿಸ ಲಿವೆ. ವಿವಿಯಲ್ಲಿ ನಡೆದಿರುವ ಪ್ರಮುಖ ಸಾಧನೆಗಳನ್ನೂ ಇಲ್ಲಿ ಪ್ರದರ್ಶಿಸಲಾಗುತ್ತದೆ.

ಪ್ರೊ.ವಿ.ಸುದೇಶ್, ನೋಡಲ್ ಆಫೀಸರ್ ಪಿಎಂ ಉಷಾ ಬೆಂವಿವಿ