ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Uniform Civil Code: ಉತ್ತರಾಖಂಡದಲ್ಲಿ ಇಂದಿನಿಂದ ಜಾರಿಗೆ ಬರಲಿದೆ ಏಕರೂಪ ನಾಗರಿಕ ಸಂಹಿತೆ; ಏನೆಲ್ಲಾ ಬದಲಾಗಲಿವೆ?

ಹಲವು ಪರ ವಿರೋಧಗಳ ನಂತರ ಉತ್ತರಾಖಂಡ್‌ನಲ್ಲಿ ಇಂದಿನಿಂದ ಏಕರೂಪ ನೀತಿ ಸಂಹಿತೆ ಜಾರಿಗೆ ಬರಲಿದೆ. ಮಧ್ಯಾಹ್ನ 12.30 ರ ನಂತರ ಈ ಕಾನೂನು ಜಾರಿಯಾಗಲಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ಕಾಯಿದೆಯನ್ನು ಜಾರಿಗೆ ತಂದಿದೆ.

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ- ಇಂದಿನಿಂದ ಎಲ್ಲರಿಗೂ ಒಂದೇ ಕಾನೂನು

UCC

Profile Vishakha Bhat Jan 27, 2025 10:04 AM

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ( Uttarakhand) ಜನವರಿ 27 ರಿಂದ ಏಕರೂಪ ನೀತಿ ಸಂಹಿತೆ (Uniform Civil Code) ಜಾರಿಗೆ ಬರಲಿದೆ. ಮಧ್ಯಾಹ್ನ 12.30ರ ನಂತರ ಈ ಕಾನೂನು ಜಾರಿಯಾಗಲಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ( Pushkar Singh Dhami) ಯುಸಿಸಿ ಪೋರ್ಟಲ್ ಅನ್ನು ಉದ್ಘಾಟಿಸಲಿದ್ದಾರೆ.

ಯುಸಿಸಿ ಅಡಿಯಲ್ಲಿ ಮದುವೆ, ವಿಚ್ಚೇದನ , ಆಸ್ತಿ, ದತ್ತು ಸೇರಿದಂತೆ ಕೆಲ ನಿಯಮಗಳು ಎಲ್ಲಾ ಧರ್ಮ, ಜಾತಿ, ಸಮುದಾಯಗಳಿಗೂ ಒಂದೇ ಆಗಲಿದೆ. ಪ್ರಮುಖವಾಗಿ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಿಕೊಳ್ಳುವ ಜೊತೆಗೆ ವ್ಯಕ್ತಿಯ ಮೂಲಭೂತ ಹಕ್ಕುಗಳ ರಕ್ಷಣೆ ಮಾಡುವುದು ಏಕರೂಪ ನಾಗರೀಕ ಸಂಹಿತೆಯ ಮೂಲ ಉದ್ದೇಶವಾಗಿದೆ. ಯುಸಿಸಿ ಅಡಿಯಲ್ಲಿ ಯಾರೇ ಮದುವೆಯಾದರೂ 60 ದಿನಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮದುವೆ ಅವರವರ ಸಂಪ್ರದಾಯ, ಧರ್ಮಕ್ಕೆ ಅನುಸಾರವಾಗಿ ಮಾಡಬಹುದು. ಆದರೆ ನೋಂದಣಿ ಕಡ್ಡಾಯವಾಗಿದೆ. ಈ ಮೂಲಕ ಎಲ್ಲಾ ಮದುವೆಗಳಿಗೆ ಕಾನೂನಾತ್ಮಕ ರಕ್ಷಣೆ ಸಿಗಲಿದೆ.

ಉತ್ತರಾಖಂಡ್‌ನಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದಲ್ಲಿರುವ ಬಿಜೆಪಿ 2022 ರ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ಏಕರೂಪ ನೀತಿ ಸಂಹಿತೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿತ್ತು. ಇದೀಗ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರ್ಕಾರ ಇದಿನಿಂದ ಜಾರಿಗೆ ತರಲಿದೆ.

ಈ ಸುದ್ದಿಯನ್ನೂ ಓದಿ : Koratagere News: ಸಿಎಂ, ಡಿಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್; 15 ಕೇಸ್‌ಗಳ ಆರೋಪಿ, ಹಿಂದೂ ಕಾರ್ಯಕರ್ತ ಉತ್ತರಾಖಂಡ್‌ನಲ್ಲಿ ಅರೆಸ್ಟ್

ಯುಸಿಸಿ ನಿಯಮಗಳ ಮುಖ್ಯ ಅಂಶಗಳು

  • ಈ ಕಾಯಿದೆಯ ಅಡಿಯಲ್ಲಿ ಬಹುಪತ್ನಿತ್ವ ಅಥವಾ ಬಹುಪತಿತ್ವವನ್ನು ನಿಷೇಧಿಸಲಾಗುವುದು.
  • ಲಿವ್-ಇನ್ ಸಂಬಂಧಗಳಲ್ಲಿ ವಾಸಿಸುವ ಜನರು ತಮ್ಮ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ ಹಾಗೂ ಪೊಲೀಸರಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
  • ಬಾಲಕಿಯರಿಗೂ ಆನುವಂಶಿಕ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಸಮಾನ ಪಾಲು ಸಿಗಲಿದೆ
  • ಇನ್ನು ಮುಂದೆ ಈ ಕಾಯಿದೆಯ ಪ್ರಕಾರ ಮುಸ್ಲಿಂ ಮಹಿಳೆಯರಿಗೆ ದತ್ತು ಪಡೆಯುವ ಹಕ್ಕು ಸಿಗಲಿದೆ.
  • ಮುಸ್ಲಿಂ ಸಮುದಾಯದಲ್ಲಿ ನಡೆಯುವ ಹಲಾಲಾ ಮತ್ತು ಇದ್ದತ್‌ಗಳನ್ನು ನಿಷೇಧಿಸಲಾಗುವುದು.
  • ಮದುವೆಯ ನಂತರ ನೋಂದಣಿ ಕಡ್ಡಾಯವಾಗಿರುತ್ತದೆ. ಒಂದು ವೇಳೆ ನೋಂದಣಿ ಮಾಡಿಕೊಳ್ಳದಿದ್ದರೆ ಅಂತಹ ವಿವಾಹವನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಸರ್ಕಾರಿ ಸೌಲಭ್ಯದ ಪ್ರಯೋಜನ ಸಿಗುವುದಿಲ್ಲ.
  • ಇದೆ ಅಷ್ಟೇ ಅಲ್ಲ ಯುಸಿಸಿ ಅಡಿಯಲ್ಲಿ ಇನ್ನೂ ಹಲವಾರು ಅಂಶಗಳು ಸೇರ್ಪಡೆಯಾಗಿವೆ.