#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Union Budget 2025: ವಿದೇಶಿ ಹಸ್ತಕ್ಷೇಪವಿಲ್ಲದ ಮೊದಲ ಸಂಸತ್ ಅಧಿವೇಶನ; ಸಂಸತ್‌ ಉದ್ದೇಶಿಸಿ ಪ್ರಧಾನಿ ಮೋದಿ ಖಡಕ್‌ ಮಾತು

ಸಂಸತ್‌ ಬಜೆಟ್‌ ಅಧಿವೇಶನ (Union Budget) ಪ್ರಾರಂಭವಾಗಿದ್ದು, ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಹಲವು ವಿಷಯಗಳ ಪ್ರಸ್ತಾಪ ಮಾಡಿದ ಪ್ರಧಾನಿ ವಿಕಸಿತ ಭಾರತ ನಮ್ಮ ಗುರಿ ಎಂದು ಹೇಳಿದ್ದಾರೆ. ವಿಪಕ್ಷಗಳ ವಿರುದ್ಧ ಹರಿಹಾಯ್ದ ಅವರು ವಿದೇಶಿ ಹಸ್ತಕ್ಷೇಪವಿಲ್ಲದ ಮೊದಲ ಸಂಸತ್ ಅಧಿವೇಶನ ಇದು ಎಂದು ಹೇಳಿದ್ದಾರೆ.

ಸಂಸತ್‌ನಲ್ಲಿ ಮಹಾಲಕ್ಷ್ಮಿಯನ್ನು ಸ್ಮರಿಸಿದ ಮೋದಿ

Narendra Modi

Profile Vishakha Bhat Jan 31, 2025 12:51 PM

ನವದೆಹಲಿ: ಇಂದಿನಿಂದ ಸಂಸತ್‌ ಬಜೆಟ್‌ ಅಧಿವೇಶನ (Union Budget) ಪ್ರಾರಂಭವಾಗಿದ್ದು, ನರೇಂದ್ರ ಮೋದಿ (Narendra Modi) ಅವರು ಸಂಸತ್‌ನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ವಿಪಕ್ಷಗಳ ಮೇಲೆ ಹರಿಹಾಯ್ದ ಅವರು ವಿದೇಶಿ ಹಸ್ತಕ್ಷೇಪವಿಲ್ಲದ (Foreign Interference) ಮೊದಲ ಸಂಸತ್ ಅಧಿವೇಶನ ಇದಾಗಿದೆ ಎಂದು ಹೇಳಿದರು. ಈ ಮೊದಲು ನಾನು ಪ್ರತಿ ಬಾರಿಯ ಬಜೆಟ್‌ನಲ್ಲಿಯೂ ಗಮನಿಸುತ್ತಿದ್ದೆ. ವಿದೇಶಿ ಹಸ್ತಕ್ಷೇಪವಾಗುತ್ತಿತ್ತು. ಆದರೆ ಈಗ ಹಾಗಲ್ಲ ಎಂದು ಹೇಳಿದ್ದಾರೆ. ಸಂಸತ್‌ನಲ್ಲಿ ಮಹಾಲಕ್ಷ್ಮಿಯನ್ನು ಸ್ಮರಿಸಿದ ಮೋದಿ, ದೇಶದ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಆಶೀರ್ವದಿಸಲಿ ಎಂದು ಮಾ ಲಕ್ಷ್ಮಿಯನ್ನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಈ ಬಜೆಟ್ ಅಧಿವೇಶನವು ನಮ್ಮ ಗುರಿಯಾದ 'ವಿಕಸಿತ ಭಾರತ' ವನ್ನು ಸಾಧಿಸುವಲ್ಲಿ ಹೊಸ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ತುಂಬುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ" ನಾವೀನ್ಯತೆ, ಸೇರ್ಪಡೆ ಮತ್ತು ಹೂಡಿಕೆಯು ಆರ್ಥಿಕ ಚಟುವಟಿಕೆಗಳಿಗೆ ನಮ್ಮ ಮಾರ್ಗಸೂಚಿಯ ಆಧಾರವಾಗಿದೆ ಎಂದು ಮೋದಿ ಹೇಳಿದ್ದಾರೆ. ಭಾರತವು 100 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯನ್ನು ಪೂರ್ಣಗೊಳಿಸಿದಾಗ ಭಾರತ ಸಂಪೂರ್ಣ ವಿಕಸಿತ ಭಾರತವಾಗಿರಬೇಕು . ಈ ಹಿನ್ನಲೆಯಲ್ಲಿ ಬಜೆಟ್‌ ರೂಪಿಸಲಾಗಿದ್ದು, ದೇಶಕ್ಕೆ ಹೊಸ ಶಕ್ತಿ ಹಾಗೂ ಭರವಸೆಯನ್ನು ನೀಡಲಿದೆ ಎಂದು ಹೇಳಿದ್ದಾರೆ.



ನಾರಿ ಶಕ್ತಿಯ ಬಗ್ಗೆ ಉಲ್ಲೇಖಿಸಿದ ಮೋದಿ ಈ ಬಾರಿಯ ಬಜೆಟ್‌ ಉದ್ದೇಶ ಮಹಿಳಾ ಸಬಲೀಕರಣ ಕೂಡಾ ಆಗಿದೆ ಎಂದು ಹೇಳಿದ್ದಾರೆ. ಜಾತಿ ಮತ್ತು ಧರ್ಮದ ಯಾವುದೇ ಪರಿಯಿಲ್ಲದೆ ಪ್ರತಿಯೊಬ್ಬ ಮಹಿಳೆಯೂ ಗೌರವದಿಂದ ಬದುಕಬೇಕು ಹಾಗೂ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Union Budget: ಇಂದಿನಿಂದ ಸಂಸತ್‌ ಬಜೆಟ್‌ ಅಧಿವೇಶನ ಆರಂಭ ; ರಾಷ್ಟ್ರಪತಿ ಭಾಷಣದ ಬಳಿಕ ಆರ್ಥಿಕ ಸಮೀಕ್ಷಾ ವರದಿ ಮಂಡನೆ

ಇಂದಿನಿಂದ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಬಜೆಟ್‌ ಮಂಡನೆ ಮಾಡಲಿದ್ದಾರೆ.