Video Viral: ವಿಮಾನದಲ್ಲಿ ಭಾವಿ ಪತಿಯ ಪ್ರಕಟಣೆ ಕೇಳಿ ಕಣ್ಣೀರಿಟ್ಟ ಮಹಿಳೆ: ಹೃದಯಸ್ಪರ್ಶಿ ವಿಡಿಯೊ ವೈರಲ್
ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಭಾವಿ ಪತಿಯಿಂದ ಭಾವನಾತ್ಮಕ ಪ್ರಕಟಣೆಯನ್ನು ಸ್ವೀಕರಿಸಿದ್ದಾರೆ. ಈ ದೃಶ್ಯವನ್ನು ವಿಡಿಯೊದಲ್ಲಿ ಸೆರೆಹಿಡಿದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ಹೃದಯಸ್ಪರ್ಶಿ ಕ್ಷಣವು ಇದೀಗ ವೈರಲ್(Video Viral) ಆಗಿದ್ದು, ಸೋಶಿಯಲ್ ಮಿಡಿಯಾದ ವೀಕ್ಷಕರ ಹೃದಯಗಳನ್ನು ಕರಗಿಸಿದೆ.
Vishwavani News
January 13, 2025
ಇಂಡಿಗೊ ವಿಮಾನದಲ್ಲಿ ಸಂಚರಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಈ ಪ್ರಯಾಣ ಮರೆಯಲಾಗದ ಅನುಭವ ನೀಡಿದೆ. ಇದಕ್ಕೆ ಕಾರಣ ಅವರು ತಮ್ಮ ಭಾವಿ ಪತಿಯಿಂದ ಸ್ವೀಕರಿಸಿದ ಭಾವನಾತ್ಮಕ ಮತ್ತು ಅನಿರೀಕ್ಷಿತ ಪ್ರಸ್ತಾಪ. ಈ ದೃಶ್ಯವನ್ನು ವಿಡಿಯೊದಲ್ಲಿ ಸೆರೆಹಿಡಿದು, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ಹೃದಯಸ್ಪರ್ಶಿ ಕ್ಷಣವು ಸಿಕ್ಕಾಪಟ್ಟೆ ವೈರಲ್(Video Viral) ಆಗಿದೆ.
ಸೃಷ್ಟಿ ಮತ್ತು ಅವಂತಿಕಾ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ, ಮದುವೆಗೆ ಕೆಲವೇ ದಿನಗಳು ಬಾಕಿ ಇದ್ದು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದ ಅವಂತಿಕಾ ವಿಮಾನ ಪ್ರಯಾಣದ ಮಧ್ಯದಲ್ಲಿ ಬಹಳ ಕಿರಿಕಿರಿಗೆ ಒಳಗಾಗಿದ್ದರು. ಆಗ ವಿಮಾನದಲ್ಲಿ ಅವರ ಭಾವಿ ಪತಿಯ ಪರವಾಗಿ ವಿಮಾನಯಾನ ಸಿಬ್ಬಂದಿಯಿಂದ ಹೃತ್ಪೂರ್ವಕ ಪ್ರಕಟಣೆಯೊಂದನ್ನು ಸ್ವೀಕರಿಸಿದ್ದಾರೆ.
View this post on Instagram A post shared by Srishti & Avantika | TheCisterCo (@thecisterco)
ಇಂಡಿಗೊ ಗಗನಸಖಿಯೊಬ್ಬರು ಇಂಟರ್‌ಕಾಮ್‌ನಲ್ಲಿ, " ಶೀಘ್ರದಲ್ಲೇ ನಿಮ್ಮ ಪತಿಯಾಗಲಿರುವ ದಿವ್ಯಾಂ ಅವರಿಂದ ವಿಶೇಷ ಸಂದೇಶ, ನೀವು ಶ್ರೀಮತಿ ಬಾತ್ರಾ ಆಗುವುದರ ಬಗ್ಗೆ ತುಂಬಾ ಖುಷಿಯಾಗುತ್ತಿದೆ. ಅವಂತಿಕಾ, ನಾವು ಒಟ್ಟಿಗೆ ಪ್ರಾರಂಭಿಸಲಿರುವ ಜೀವನಕ್ಕಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ. ನಿಮ್ಮನ್ನು ನನ್ನ ಹೆಂಡತಿ ಎಂದು ಕರೆಯಲು ಕಾತುರನಾಗಿದ್ದೇನೆ. ಇಂಡಿಗೊದಲ್ಲಿ ಪ್ರಯಾಣಿಸುತ್ತಿರುವ ನಿಮಗೆ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಈ ಪ್ರಕಟಣೆಯು ಒಂದು ಕ್ಷಣ ಅವಂತಿಕಾ ಅವರನ್ನು ಭಾವುಕರನ್ನಾಗಿ ಮಾಡಿತು ಮತ್ತು ಅವರ ಸಹ ಪ್ರಯಾಣಿಕರು ಈ ರೋಮ್ಯಾಂಟಿಕ್ ಪ್ರಕಟಣೆಯನ್ನು ಕೇಳಿ ಅವರನ್ನು ಹುರಿದುಂಬಿಸಿದ್ದಾರೆ ಮತ್ತು ಹೊಗಳಿದ್ದಾರೆ.
ಈ ಇನ್‌ಸ್ಟಾಗ್ರಾಂ ಪೋಸ್ಟ್‌ನ ಶೀರ್ಷಿಕೆಯಲ್ಲಿ ಅವಂತಿಕಾ ಅವರು ತಮ್ಮ ಭಾವನೆಗಳನ್ನ ವ್ಯಕ್ತಪಡಿಸಿದ್ದಾರೆ. "ನನ್ನ ಪತಿಯಿಂದ ಅತ್ಯುತ್ತಮ ಹಾಗೂ ಆಶ್ಚರ್ಯಕರವಾದುದ್ದನ್ನು ಸ್ವೀಕರಿಸಿದೆ. ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಆ್ಯಂಟಿ ಬಯಾಟಿಕ್‍ಗಳನ್ನು ತೆಗೆದುಕೊಂಡಿದ್ದೆ. ಇದರಿಂದ ನಾನು ದಣಿದಿದ್ದರಿಂದ ಎಚ್ಚರಗೊಂಡಾಗ ನನಗೆ ತುಂಬಾ ಕಿರಿಕಿರಿಯಾಯಿತು. ಆದರೆ ನಂತರ ನಾನು ಈ ಪ್ರಕಟಣೆಯನ್ನು ಕೇಳಿದಾಗ ಅದು ನನಗೆ ಅತ್ಯಂತ ಸಿಹಿಯಾದ ಅನುಭವವನ್ನು ನೀಡಿತು. ನನ್ನ ಸಹೋದರಿ ನನ್ನ ಪ್ರತಿಕ್ರಿಯೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾಳೆ” ಎಂದು ಬರೆದಿದ್ದಾರೆ.
"ನಾನು ಅದನ್ನು ನಿರೀಕ್ಷಿಸದ ಕಾರಣ ನಾನು ತುಂಬಾ ಮುಜುಗರಕ್ಕೊಳಗಾಗಿದ್ದೆ. ಆದರೆ ಅದು ನನ್ನ ಮುಖದಲ್ಲಿ ದೊಡ್ಡ ನಗುವನ್ನು ತಂದಿತು" ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಬಸ್ಸಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಕಂಡಕ್ಟರ್; ವಿಡಿಯೊ ವೈರಲ್
ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಈ ಜೋಡಿಯ ಬಗ್ಗೆ ನೆಟ್ಟಿಗರು ಕಾಮೆಂಟ್‍ಗಳ ಮೂಲಕ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿ, "ಇದು ತುಂಬಾ ಸುಂದರವಾಗಿದೆ; ಅವನು ಖಂಡಿತವಾಗಿಯೂ ಒಳ್ಳೆಯ ಗಂಡನಾಗಲಿದ್ದಾನೆ” ಎಂದಿದ್ದಾರೆ. ಇನ್ನೊಬ್ಬರು, "ಈ ಕಾಲ್ಪನಿಕ ಕ್ಷಣದ ಭಾಗವಾಗಿದ್ದಕ್ಕಾಗಿ ಇಂಡಿಗೊ ಪ್ರಶಸ್ತಿಗೆ ಅರ್ಹವಾಗಿದೆ" ಎಂದಿದ್ದಾರೆ.