Viral News: ಇದು ಓಯೋ ರೂಂ ಅಲ್ಲ... ʻರೋಮ್ಯಾನ್ಸ್ʼ ಮಾಡಿದರೆ ಹುಷಾರ್ ಎಂದ ಆಟೋ ಚಾಲಕ; ತಮಾಷೆ ಮಾಡಿದ ನೆಟ್ಟಿಗರು!
ಆಟೋರಿಕ್ಷಾ ಚಾಲಕನೊಬ್ಬ ತನ್ನ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಧಿಸಿದ ಕಠಿಣ ನಿಯಮಗಳನ್ನು ನೆಟ್ಟಿಗರೊಬ್ಬರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿ ಇದಕ್ಕೆ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
Vishwavani News
Jan 7, 2025 2:42 PM
ಕೆಲವೊಂದು ಆಟೋ ಡ್ರೈವರ್ ತಮ್ಮ ಆಟೋದಲ್ಲಿ ಪ್ರಯಾಣಿಕರಿಗೆ ಓದುವುದಕ್ಕೆ ಪುಸ್ತಕ ಇಟ್ಟುಕೊಂಡಿರುವುದು, ಇನ್ನು ಕೆಲವೊಂದು ಆಟೋಡ್ರೈವರ್ ಯಾವುದ್ಯಾವುದೋ ಜಾಹೀರಾತು ಹಾಕಿಕೊಂಡಿರುವುದನ್ನು ನೀವು ನೋಡಿರಬಹುದು.ಆದರೆ ಇಲ್ಲೊಬ್ಬ ಚಾಲಕ ತನ್ನ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಧಿಸಿದ ಕಠಿಣ ನಿಯಮಗಳನ್ನು ನೆಟ್ಟಿಗರೊಬ್ಬರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿ ಇದಕ್ಕೆ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಚಾಲಕನ ಈ ಎಚ್ಚರಿಕೆಯ ನಿಯಮಗಳಿರುವ ಪ್ರಿಂಟ್ ಬೋರ್ಡ್ ಅನ್ನು ಆಟೋದ ಹಿಂಭಾಗದಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಸರಿಯಾಗಿ ಕಾಣುವಂತೆ ಡ್ರೈವರ್ ಸೀಟಿನ ಹಿಂಭಾಗದಲ್ಲಿ ಅಂಟಿಸಿದ್ದಾರೆ. ಈ ಸಂದೇಶದಲ್ಲಿ, ಚಾಲಕ ತನ್ನ ಪ್ರಯಾಣಿಕರಿಗೆ ರೋಮ್ಯಾನ್ಸ್ ವಿರುದ್ಧ ಎಚ್ಚರಿಕೆ ನೀಡಿದ್ದಾರೆ ಮತ್ತು ಪ್ರಯಾಣಿಕರನ್ನು ಗೌರವದಿಂದ ಇರುವಂತೆ ಕೇಳಿಕೊಂಡಿದ್ದಾರೆ. "ಎಚ್ಚರಿಕೆ!! ರೋಮ್ಯಾನ್ಸ್ ಮಾಡುವ ಹಾಗೇ ಇಲ್ಲ. ಇದು ಕ್ಯಾಬ್ ನಿಮ್ಮ ಖಾಸಗಿ ಸ್ಥಳ ಅಥವಾ ಓಯೋ ಅಲ್ಲ. ಆದ್ದರಿಂದ ದಯವಿಟ್ಟು ದೂರವಿರಿ ಮತ್ತು ಶಾಂತವಾಗಿರಿ. ಗೌರವ ನೀಡಿ, ಗೌರವ ಪಡೆಯಿರಿ. ಧನ್ಯವಾದಗಳು" ಎಂದು ಬರೆಯಲಾಗಿತ್ತು.
🚖 ⚠️ 😂📸: @venkatesh_2204 #Hyderabad pic.twitter.com/xwjel4VQiI— Hi Hyderabad (@HiHyderabad) October 20, 2024
ಈ ಪೋಸ್ಟ್‌ಗೆ ಸಾವಿರಾರು ವ್ಯೂವ್ಸ್ ಬಂದಿವೆ. ಇದು ಕಳೆದ ವರ್ಷ ರೆಡ್ಡಿಟ್‍ನಲ್ಲಿ ಕೂಡ ಇಂತಹ ಒಂದು ವಿಚಾರದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತ್ತು. ಚಾಲಕ ತನ್ನ ಪ್ರಯಾಣಿಕರಿಗೆ ಸಭ್ಯ ಮತ್ತು ಗೌರವಯುತವಾಗಿರಲು ಮತ್ತು ಅವನನ್ನು "ಅಣ್ಣ" ಎಂದು ಕರೆಯುವುದನ್ನು ತಪ್ಪಿಸಲು ಕೇಳಿಕೊಂಡಿದ್ದನು. "ನಿಮ್ಮ ವರ್ತನೆಯನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಳ್ಳಿ. ದಯವಿಟ್ಟು ನಮಗೆ ತೋರಿಸಬೇಡಿ. ಏಕೆಂದರೆ ನೀವು ನಮಗೆ ಹೆಚ್ಚಿನ ಹಣವನ್ನು ನೀಡುತ್ತಿಲ್ಲ" ಎಂದು ಅವರ ನಿಯಮಗಳಲ್ಲಿ ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅನೇಕರು ಅವರ ಪ್ರಾಮಾಣಿಕತೆಯನ್ನು ಮೆಚ್ಚಿದ್ದರು.
ಈ ಸುದ್ದಿಯನ್ನೂ ಓದಿ:ಅತ್ತಿಗೆಯ ಜೊತೆ ನಾದಿನಿಯ ಲವ್ವಿಡವ್ವಿ- ಮನೆಯವರು ಒಪ್ಪದಿದ್ದಕ್ಕೆ ಈ ಜೋಡಿ ಮಾಡಿದ್ದೇನು ಗೊತ್ತಾ?
ಈ ಪೋಸ್ಟ್ ತ್ವರಿತವಾಗಿ ಸೋಶಿಯಲ್ ಮೀಡಿಯಾ ನೆಟ್ಟಿಗರ ಗಮನ ಸೆಳೆಯಿತು. ಅವರು ಚಾಲಕನನ್ನು ಹೊಗಳಿದ್ದಾರೆ. ಅವರಲ್ಲಿ ಅನೇಕರು ಎಚ್ಚರಿಕೆಯನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಮೀರತ್‍ನಲ್ಲಿ ಅವಿವಾಹಿತ ದಂಪತಿಗಳಿಗೆ ಇನ್ನು ಮುಂದೆ ಚೆಕ್-ಇನ್ ಮಾಡಲು ಅನುಮತಿಸಲಾಗುವುದಿಲ್ಲ ಎಂದು ಓಯೋ ಹೊರಡಿಸಿದ ಇತ್ತೀಚಿನ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಇತರರು ಅವರ ಓಯೋ ಎಚ್ಚರಿಕೆಯ ಬಗ್ಗೆ ತಮಾಷೆ ಮಾಡಿದ್ದಾರೆ. "ಸ್ಪಷ್ಟವಾಗಿ ಓಯೋಗೆ ಪ್ರಣಯದಲ್ಲಿ ಸಮಸ್ಯೆ ಇದೆ" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.