Viral News: ರಾಷ್ಟ್ರ ಧ್ವಜದ ಮೇಲೆ ಕರ್ನಾಟಕದ ಮ್ಯಾಪ್; ವಿದ್ಯಾರ್ಥಿ ವಿರುದ್ಧ ನೆಟ್ಟಿಗರು ಆಕ್ರೋಶ
ಬೆಂಗಳೂರಿನ ಆರ್‌ವಿಐಟಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಬಿಡಿಸಿದ ಭಾರತದ ಧ್ವಜದ ಡಿಸೈನ್ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಬಿಡಿಸಿ ಮಧ್ಯದಲ್ಲಿ ಅಶೋಕ ಚಕ್ರದ ಬದಲಿಗೆ ಕರ್ನಾಟಕದ ನಕ್ಷೆಯನ್ನು ಬಿಡಿಸಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿ ಆಕ್ರೋಶಕ್ಕೆ ಕಾರಣವಾಗಿದೆ.

student replaces Ashoka Chakra

ಬೆಂಗಳೂರು: ಆರ್‌ವಿಐಟಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆಗಾಗಿ ರಚಿಸಲಾದ ಭಾರತದ ಧ್ವಜದ ಡಿಸೈನ್ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ರೆಡ್ಡಿಟ್ ಪೋಸ್ಟ್‌ನಲ್ಲಿ ಕಾಣಿಸಿಕೊಂಡಿರುವ ಈ ಡಿಸೈನ್‍ನಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಬಿಡಿಸಿ ಮಧ್ಯದಲ್ಲಿ ಅಶೋಕ ಚಕ್ರದ ಬದಲಿಗೆ ಕರ್ನಾಟಕದ ನಕ್ಷೆಯನ್ನು ಬಿಡಿಸಿದ್ದಾರೆ. ಇದು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದಂತಾಗಿದೆ ಎಂಬ ಆರೋಪಗಳಿಗೆ ಕಾರಣವಾಗಿದೆ. ಹಾಗಾಗಿ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ಹಲವಾರು ನೆಟ್ಟಿಗರು ಈ ಡಿಸೈನ್ ಅನ್ನು ಟೀಕಿಸಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ, "ಆದರೆ ನಾನು ಇದನ್ನು ತಪ್ಪು ಎಂದು ಭಾವಿಸುತ್ತೇನೆ. ನೀವು ಇದರಲ್ಲಿ ಅಶೋಕ ಚಕ್ರವನ್ನು ಬದಲಿಸಿದ್ದೀರಿ." ಎಂದಿದ್ದಾರೆ. ಇನ್ನೊಬ್ಬರು ಕಾನೂನುಬದ್ಧತೆಯನ್ನು ಪ್ರಶ್ನಿಸಿ, "ಇದು ಧ್ವಜಕ್ಕೆ ಮಾಡಿರುವ ಅಪಮಾನ ಅಲ್ಲವೇ?" ಎಂದು ಕೇಳಿದ್ದಾರೆ.
ವಿವಾದದ ಮಧ್ಯೆ, ಕಾಲೇಜಿನ ಮೂರನೇ ವರ್ಷದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‍ಸಿಸಿ) ಈ ಸಮಸ್ಯೆಯನ್ನು ಪರಿಹರಿಸಲು ಮುಂದೆ ಬಂದಿದ್ದಾರೆ. ಅದೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೆಡೆಟ್, ಧ್ವಜ ಡೆಕೋರೇಷನ್ ಎನ್‍ಸಿಸಿ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ನಡೆಯುವ ಸಾಂಪ್ರದಾಯಿಕ ಚಟುವಟಿಕೆಯ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
"ಇದು ಡಿಜಿ ಎನ್‍ಸಿಸಿ ಗಣರಾಜ್ಯೋತ್ಸವ ಶಿಬಿರದಲ್ಲಿ ನಡೆಸುವ ಸಾಮಾನ್ಯ ಚಟುವಟಿಕೆಯಾಗಿದೆ. ಹಾಗೆಯೇ ಎನ್‍ಸಿಸಿ ಘಟಕಗಳನ್ನು ಹೊಂದಿರುವ ಹೆಚ್ಚಿನ ಶಾಲೆಗಳು ಮತ್ತು ಕಾಲೇಜುಗಳು ಅನುಸರಿಸುವ ಸಂಪ್ರದಾಯವಾಗಿದೆ. ಅತ್ಯುತ್ತಮ ಧ್ವಜ ಪ್ರದೇಶದ ಡೆಕೋರೇಷನ್‍ಗಳನ್ನು ನಿರ್ಣಯಿಸಲು ಸ್ಪರ್ಧೆಗಳನ್ನು ನಡೆಸಲಾಗುತ್ತದೆ ಮತ್ತು ಡಿಸೈನ್‍ಗಳು ಹೆಚ್ಚಾಗಿ ಆಯಾ ರಾಜ್ಯ ಅಥವಾ ನಿರ್ದೇಶನಾಲಯವನ್ನು ಪ್ರತಿನಿಧಿಸುತ್ತವೆ" ಎಂದು ಕೆಡೆಟ್ ಬರೆದಿದ್ದಾರೆ.
ಈ ಡಿಸೈನ್ ರಾಷ್ಟ್ರೀಯ ಚಿಹ್ನೆಗಳನ್ನು ದುರ್ಬಲಗೊಳಿಸುವ ಅಥವಾ ರಾಜ್ಯದ ಪ್ರಾಬಲ್ಯವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಕೆಡೆಟ್ ಒತ್ತಿ ಹೇಳಿದ್ದಾರೆ. "ಈ ಡೆಕೋರೇಷನ್‍ನ ಹಿಂದಿನ ಉದ್ದೇಶವು ಕರ್ನಾಟಕವು ಸರ್ವೋಚ್ಛ ಎಂದು ತೋರಿಸುವುದು ಅಥವಾ ಕಾಮೆಂಟ್‍ಗಳಲ್ಲಿ ಆರೋಪಿಸಲಾದ ಯಾವುದೇ ವಿಷಯಗಳನ್ನು ತೋರಿಸುವುದು ಅಲ್ಲ, ಆದರೆ ಇದು ಈ ಸುಂದರ ರಾಷ್ಟ್ರದ ಭಾಗವಾಗಿ ನಮ್ಮನ್ನು ಪ್ರತಿನಿಧಿಸುವುದು" ಎಂದು ಅವರು ಹೇಳಿದ್ದಾರೆ.
ಆಚರಣೆಯ ಬಗ್ಗೆ ಹೇಳಿದ ಕೆಡೆಟ್ ,"ನಾವು ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಿದ್ದೇವೆ - ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮೊದಲ ವರ್ಷದ ಕೆಡೆಟ್‍ಗಳು ಪ್ರದರ್ಶಿಸಿದ ದೇಶಭಕ್ತಿ ಗೀತೆಯೊಂದಿಗೆ ಆಚರಿಸಿದ್ದೇವೆ. ಎನ್‍ಸಿಸಿಯ ಧ್ಯೇಯವಾಕ್ಯವೆಂದರೆ ಏಕತೆ ಮತ್ತು ಶಿಸ್ತು... ಅದರ ಬದಲು ನಾವು ಏಕೆ ವಿಭಜಿಸಲು ಬಯಸುತ್ತೇವೆ?” ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ರೀಲ್ಸ್‌ಗಾಗಿ ಗ್ಯಾಸ್ ಸ್ಟೌವ್ ಮೇಲೆ ಪರ್ಫ್ಯೂಮ್ ಸ್ಪ್ರೇ ಮಾಡಿದ ಯುವಕರು -ಶಾಕಿಂಗ್ ವಿಡಿಯೊ ವೈರಲ್
ಇನ್ನು ಕೆಲವು ನೆಟ್ಟಿಗರು ಕಾಲೇಜು ಪರ ಬ್ಯಾಟ್ ಬೀಸಿದ್ದು, ಎಸ್‌ಸಿಸಿಯ ಚಟುವಟಿಕೆಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದರು.