#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ರೀಲ್ಸ್‌ಗಾಗಿ ಗ್ಯಾಸ್ ಸ್ಟೌವ್ ಮೇಲೆ ಪರ್ಫ್ಯೂಮ್‌ ಸ್ಪ್ರೇ ಮಾಡಿದ ಯುವಕರು -ಶಾಕಿಂಗ್‌ ವಿಡಿಯೊ ವೈರಲ್

ಬೆಂಕಿಯ ಬಳಿ ಡಿಯೋಡ್ರಂಟ್‌ ಬಳಸುವುದು ಸಾಕಷ್ಟು ಅಪಾಯಕಾರಿ. ಅವುಗಳು ಸ್ಫೋಟಕ ಇಂಧನವನ್ನು ಉಂಟುಮಾಡುವ ಸುಡುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಆದರೂ ಯುವಕರಿಬ್ಬರು ಉರಿಯು ತ್ತಿರುವ ಗ್ಯಾಸ್ ಸ್ಟೌವ್ ಡಿಯೋಡರೆಂಟ್ ಸಿಂಪಡಿಸಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಇದರಿಂದ ಬೆಂಕಿಯ ಜ್ವಾಲೆ ಹೆಚ್ಚಾಗಿ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೊ ನೋಡಿದ ಹಲವು ನೆಟ್ಟಿಗರು ಇವರ ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉರಿಯುತ್ತಿದ್ದ ಗ್ಯಾಸ್ ಸ್ಟವ್ ಮೇಲೆ ಪರ್ಫ್ಯೂಮ್‌ ಸ್ಪ್ರೇ ಮಾಡಿದ ಕಿಡಿಗೇಡಿಗಳು; ಆಮೇಲೆ ಆಗಿದ್ದೇ ಬೇರೆ!

Viral Video

Profile Pushpa Kumari Jan 27, 2025 1:48 PM

ನವದೆಹಲಿ: ರೀಲ್ಸ್‌, ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಲು‌, ಹೆಚ್ಚು ವ್ಯೂವ್ಸ್‌ ಪಡೆಯಲು ಇತ್ತೀಚೆಗೆ ಯುವಕ ಯುವತಿಯರು ಏನ್ ಬೇಕಾದ್ರೂ ಮಾಡಲು ರೆಡಿ ಇರ್ತಾರೆ. ಇಲ್ಲೊಂದು ಕಡೆ ಯುವಕರಿಬ್ಬರು ಗ್ಯಾಸ್ ಸ್ಟೌವ್ ಮೇಲೆ ಡಿಯೋಡ್ರೆಂಟ್‌ ಸ್ಪ್ರೇ ಮಾಡುವ ಮೂಲಕ ಅಪಾಯಕಾರಿಯಾಗಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ((Viral Video) ಸೃಷ್ಟಿಸಿದೆ.

ಬೆಂಕಿಯ ಬಳಿ ಡಿಯೋಡ್ರೆಂಟ್‌ ಬಳಸುವುದು ಸಾಕಷ್ಟು ಅಪಾಯಕಾರಿ. ಅವುಗಳು ಸುಡುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಆದರೂ ಯುವಕರಿಬ್ಬರು ಉರಿಯುತ್ತಿರುವ ಗ್ಯಾಸ್ ಸ್ಟೌವ್ ಡಿಯೋಡ್ರೆಂಟ್‌ ಸಿಂಪಡಿಸಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಇದರಿಂದ ಬೆಂಕಿಯ ಜ್ವಾಲೆ ಹೆಚ್ಚಾಗಿ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೊ ನೋಡಿದ ಹಲವು ನೆಟ್ಟಿಗರು ಇವರ ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಬ್ಬರು ಯುವಕರು ಗ್ಯಾಸ್ ಸ್ಟವ್ ಉರಿಸಿ ಚಹಾ ತಯಾರಿಸುತ್ತಿರುವುದನ್ನು ವಿಡಿಯೊ ಸೂಚಿಸಿದೆ. ಒಲೆಯ ಮೇಲೆ ಇಟ್ಟಿದ್ದ ಹಾಲು ತುಂಬಿದ ಪಾತ್ರೆಗೆ ಸಕ್ಕರೆ ಸೇರಿಸುವ ಮೂಲಕ ವಿಡಿಯೊ ಪ್ರಾರಂಭ ವಾಗುತ್ತದೆ. ಮತ್ತೊಬ್ಬ ವ್ಯಕ್ತಿ ಗ್ಯಾಸ್ ಸ್ಟೌವ್‌ನ ಜ್ವಾಲೆಗೆ ಡಿಯೋಡ್ರಂಟ್‌ ಸ್ಪ್ರೇ ಮಾಡುತ್ತಿರುವುದು ಕಂಡು ಬಂದಿದೆ. ಗ್ಯಾಸ್ ಒಲೆಯ ಮೇಲೆ ಡಿಯೋಡರೆಂಟ್ ಅನ್ನು ಸಿಂಪಡಿಸುತ್ತಿದ್ದಂತೆ ಬೆಂಕಿಯ‌ ಜ್ವಾಲೆಯು ಮತ್ತಷ್ಟು ಹೆಚ್ಚಾಗಿದೆ.

ಇದನ್ನು ಓದಿ: Viral Video: ಹಾವಿನ ಜತೆ ಸ್ಟಂಟ್ ಮಾಡಿದ ರಷ್ಯಾದ ಡ್ಯಾನ್ಸರ್‌; ಮುಂದೇನಾಯ್ತು? ವಿಡಿಯೊ ನೋಡಿ

ಈ ವಿಡಿಯೊವನ್ನು zydus_wellness Instagram ಖಾತೆಯಲ್ಲಿ ಈ ವಿಡಿಯೊ ಹಂಚಿ ಕೊಂಡಿದ್ದು ಬಳಕೆದಾರರು ಈ ವಿಡಿಯೊ ನೋಡಿ ಗರಂ ಆಗಿದ್ದಾರೆ. ಈ ರೀತಿಯ ವಿಡಿಯೊ ಚಿತ್ರೀಕರಣವು ತಮಗಷ್ಟೇ ಅಲ್ಲ, ಇತರರಿಗೂ ಅಪಾಯವನ್ನು ಉಂಟು ಮಾಡಬಹುದು. ಬೆಂಕಿಯ ಬಳಿ ಡಿಯೋಡ್ರಂಟ್‌ ಬಳಸುವುದು ಸಾಕಷ್ಟು ಅಪಾಯಕಾರಿ ಎಂದು ತಿಳಿದಿದ್ದರೂ ಈ ರೀತಿಯ ಕೃತ್ಯಕ್ಕೆ ನೆಟ್ಟಿಗರು ಯುವಕರಿಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.