ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ರಣಾಂಗಣವಾದ ಸ್ಟೂಡೆಂಟ್ಸ್ ಫೇರ್‌ವೆಲ್‌ ಪಾರ್ಟಿ – ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ!

ಕಾಲೇಜು ಅಂದ್ಮೇಲೆ ಅಲ್ಲಿ ಜಗಳ-ಹೊಡೆದಾಟ ಕಾಮನ್! ಅಂತದ್ದೇ ಒಂದು ಘಟನೆಯಲ್ಲಿ ಪಿಯು ಕಾಲೇಜು ವಿದ್ಯಾರ್ಥಿಗಳ ಫೇರ್‌ವೆಲ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ತಂಡವೊಂದು ಇನ್ನೊಬ್ಬ ವಿದ್ಯಾರ್ಥಿಯ ಮೇಲೆ ಒಟ್ರಾಶಿ ಹಲ್ಲೆ ಮಾಡಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಕಾಲೇಜಿನ ಫೇರ್‌ವೆಲ್‌ ಪಾರ್ಟಿಯಲ್ಲಿ ಸ್ಟೂಡೆಂಟ್ಸ್ ಬಿಗ್‌ ಫೈಟ್…!

ಕಾಲೇಜಿನ ಫೇರ್‌ವೆಲ್ ಪಾರ್ಟಿಯಲ್ಲಿ ಸ್ಟೂಡೆಂಟ್ಸ್‌ ಫೈಟ್…!

Profile Sushmitha Jain Jan 22, 2025 1:33 PM

ಜೈಪುರ: ಅತ್ತ ಕೇರಳದಲ್ಲಿ (Kerala) ಹೈಸ್ಕೂಲ್ (high school) ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್ ತೆಗೆದಿಟ್ಟುಕೊಂಡ ಶಿಕ್ಷಕರಿಗೆ ಮತ್ತು ಪ್ರಾಂಶುಪಾಲರಿಗೆ ಆವಾಜ್ ಹಾಕಿದ ಸುದ್ದಿ ಹಾಗೂ ಅದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿರುವ ಬೆನ್ನಲ್ಲೇ, ಇತ್ತ ರಾಜಸ್ಥಾನದ (Rajasthan) ಜೈಪುರದಲ್ಲಿ (Jaipur) ವಿದಾಯ ಕೂಟದಲ್ಲಿ (Farewell Party) ವಿದ್ಯಾರ್ಥಿಗಳ ನಡುವೆ ಮಾರಾಮಾರಿ (Gatecrash) ನಡೆದಿರುವ ಘಟನೆಯ ಸುದ್ದಿ ಹಾಗೂ ವಿಡಿಯೋ ಇದಿಗ ಎಲ್ಲೆಡೆ ವೈರಲ್ (Viral Video) ಆಗುತ್ತಿದ್ದು, ‘ಈ ಮಕ್ಕಳಿಗೆ ಏನಾಗಿದೆ..?’ ಎಂದು ಪ್ರಜ್ಞಾವಂತರು ಪ್ರಶ್ನಿಸುವಂತಾಗಿದೆ.

ರಾಜಸ್ಥಾನದ ಜೈಪುರದಲ್ಲಿರುವ ಎಸ್.ಎಂ.ಎಸ್. ಸ್ಕೂಲ್ ನಲ್ಲಿ (SMS School) 12ನೇ ತರಗತಿ ವಿದ್ಯಾರ್ಥಿಗಳ ವಿದಾಯ ಕೂಟದಲ್ಲಿ ಸ್ಟೂಡೆಂಟ್ಸ್ ಫೈಟ್ ನಡೆದಿದೆ. ಈ ಗಲಾಟೆಯ ವಿಡಿಯೊ ಒಂದು ಇದಿಗ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೊದಲ್ಲಿರುವಂತೆ ವಿದ್ಯಾರ್ಥಿಗಳ ತಂಡವೊಂದು ಇನ್ನೊಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸುತ್ತಿರುವುದು ರೆಕಾರ್ಡ್ ಆಗಿದ್ದು, ಅಲ್ಲಿದ್ದವರು ಯಾರೂ ಈ ಗಲಾಟೆಯನ್ನು ಬಿಡಿಸಲು ಹೋಗದೇ ಇರುವುದು ಇನ್ನಷ್ಟು ಅಚ್ಚರಿಗೆ ಕಾರಣವಾಗಿದೆ. ಅಲ್ಲಿದ್ದವರೆಲ್ಲಾ ವಿದ್ಯಾರ್ಥಿಗಳ ಈ ಗಲಾಟೆಯನ್ನು ಮೂಕಪ್ರೇಕ್ಷಕರಂತೆ ನೋಡುತ್ತಾ ಅದನ್ನು ವಿಡಿಯೋ ರೆಕಾರ್ಡ್ ಮಾಡೋದ್ರಲ್ಲೇ ಬ್ಯುಸಿಯಾಗಿದ್ದರು.

ಎಸ್.ಎಂ.ಎಸ್. ಶಾಲಾ ವತಿಯಿಂದ ಆಯೋಜಿಸಲಾಗಿದ್ದ ವಿದಾಯ ಕೂಟದಲ್ಲಿ ಈ ಗಲಾಟೆ ನಡೆದಿದೆ. ಶಾಲಾ ಆಡಳಿತ ಮಂಡಳಿ ಹೇಳುವ ಪ್ರಕಾರ ಇಲ್ಲಿ ಗಲಾಟೆ ಮಾಡಿದವರು ಶಾಲೆಯ ಈಗಿನ ವಿದ್ಯಾರ್ಥಿಗಳಲ್ಲವಂತೆ, ಬದಲಾಗಿ, 11ನೇ ತರಗತಿಯಲ್ಲಿ ಫೇಲಾಗಿ ಈ ಮೊದಲು ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದ ವಿದ್ಯಾರ್ಥಿಗಳ ತಂಡ ಇಲ್ಲಿ ಬಂದು ಗಲಾಟೆ ಮಾಡಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಯವರು ಈ ಗಲಾಟೆ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.



ವಿದಾಯ ಕೂಟದಲ್ಲಿ ಭಾಗವಹಿಸಲೆಂದು ಈ ವಿದ್ಯಾರ್ಥಿಗಳ ತಂಡ ಸಮಾರಂಭ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದೆ. ಆ ಸಂದರ್ಭದಲ್ಲಿ ಅಲ್ಲಿದ್ದ ವಿದ್ಯಾರ್ಥಿಯೊಬ್ಬ ಅವರನ್ನು ಪ್ರಶ್ನಿಸಿ ಅವರ ಬರುವಿಕೆಯನ್ನು ವಿರೋಧಿಸಿದ್ದಾನೆ. ಇದರಿಂದ ಕೋಪಗೊಂಡ ಆ ವಿದ್ಯಾರ್ಥಿಗಳ ತಂಡ ಈ ವಿದ್ಯಾರ್ಥಿಯ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ವಿಡಿಯೋದಲ್ಲಿರುವಂತೆ ಸೂಟ್ ಧಾರಿ ವಿದ್ಯಾರ್ಥಿಗಳಿಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಈ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿ ಇನ್ನೊಬ್ಬನ ಗಂಟಲನ್ನು ಅಮುಕುತ್ತಾನೆ ಮತ್ತು ಅವರಿಬ್ಬರ ನಡುವೆ ಮಾತಿನ ಸಮರ ತಾರಕಕ್ಕೇರುತ್ತದೆ. ಬಳಿಕ ಆ ವಿದ್ಯಾರ್ಥಿ ಈತನನ್ನು ತನ್ನ ಜೊತೆಗಾರರತ್ತ ತಳ್ಳುತ್ತಾನೆ ಮತ್ತು ಅವರೆಲ್ಲಾ ಸೇರಿ ಈ ವಿದ್ಯಾರ್ಥಿಗೆ ಹಿಗ್ಗಾಮಗ್ಗ ಥಳಿಸುತ್ತಾರೆ.

ಇದನ್ನೂ ಓದಿ: Viral Video: ಪ್ರಿನ್ಸಿಪಾಲ್‌ಗೆ ಆಜಾಜ್ ಹಾಕಿದ ಸ್ಟೂಡೆಂಟ್- ವಿಡಿಯೊ ಫುಲ್‌ ವೈರಲ್‌

ಇಷ್ಟೆಲ್ಲಾ ಆಗುತ್ತಿರುವ ಸಂದರ್ಭದಲ್ಲೂ ಯಾರೊಬ್ಬರೂ ಇವರ ಜಗಳವನ್ನು ಬಿಡಿಸುವ ಪ್ರಯತ್ನಕ್ಕೆ ಕೈಹಾಕುವುದಿಲ್ಲ. ಬದಲಾಗಿ ತಮ್ಮ ತಮ್ಮ ಮೊಬೈಲ್ ಗಳಲ್ಲಿ ಈ ಘಟನೆಯನ್ನು ರೆಕಾರ್ಡ್ ಮಾಡಿಕೊಂಡು ಅದನ್ನೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.

ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದ ವಿದ್ಯಾರ್ಥಿಗಳ ಗುಂಪು ಈ ವಿದ್ಯಾರ್ಥಿಯನ್ನು ಊಟದ ಟೇಬಲ್ ಮೇಲೆ ತಳ್ಳಿ ಹೊಡೆಯುತ್ತಿರುವ ಸಂದರ್ಭದಲ್ಲಿ ಓರ್ವ ವಿದ್ಯಾರ್ಥಿನಿ ಮಧ್ಯಪ್ರವೇಶಿಸಿ ಆತನನ್ನು ಕಾಪಾಡುವ ಪ್ರಯತ್ನವನ್ನು ಮಾಡುತ್ತಾಳೆ. ವಿದ್ಯಾರ್ಥಿಗಳ ಗುಂಪಿನಿಂದ ಥಳಿತಕ್ಕೊಳಗಾದ ವಿದ್ಯಾರ್ಥಿ ತನ್ನೆರಡೂ ಕೈಗಳನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ನಿಂತಿರುವುದೂ ಸಹ ಇ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ವಿದ್ಯಾರ್ಥಿಯ ಹೆತ್ತವರು ಯಾವುದೇ ದೂರನ್ನು ಸಲ್ಲಿಸದಿರುವ ಕಾರಣ ಪುಂಡ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮ ತೆಗೆದುಕೊಳ್ಳಲಾಗಿಲ್ಲವೆಂದು ತಿಳಿದುಬಂದಿದೆ. ಮತ್ತು ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲಿಸ್ ದೂರು ಸಹ ದಾಖಲಾಗಿಲ್ಲವೆಂದು ತಿಳಿದುಬಂದಿದೆ.