ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶಾಲೆಯಲ್ಲೇ ಶಿಕ್ಷಕರ ರೊಮ್ಯಾನ್ಸ್‌- ವಿಡಿಯೊ ಫುಲ್‌ ವೈರಲ್‌

ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯ ಗಂಗ್ರಾರ್ ಬ್ಲಾಕ್‍ನ ಅಜೋಲಿಯಾ ಖೇಡಾ ಗ್ರಾಮ ಪಂಚಾಯತ್‍ನ ಸಲೇರಾದಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕ –ಶಿಕ್ಷಕಿ ಇಬ್ಬರು ಅಶ್ಲೀಲ ಕೃತ್ಯದಲ್ಲಿ ತೊಡಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

Teachers viral video

ಜೈಪುರ: ಶಾಲೆಯಲ್ಲೇ ಶಿಕ್ಷಕ ಹಾಗೂ ಶಿಕ್ಷಕಿ ಇಬ್ಬರು ರೊಮ್ಯಾನ್ಸ್‌ ಮಾಡಿರುವ ಘಟನೆ ರಾಜಸ್ಥಾನದ ಚಿತ್ತೋರ್ಗಢದಲ್ಲಿ ನಡೆದಿದೆ. ಇಬ್ಬರು ಶಿಕ್ಷಕರು ಪರಸ್ಪರ ಸರಸದಲ್ಲಿ ತೊಡಗಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಹೀಗಾಗಿ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ವಿಡಿಯೊದಲ್ಲಿ ಅವರು ಪದೇ ಪದೇ ಪರಸ್ಪರ ಚುಂಬಿಸುವುದು ಮತ್ತು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾಜಸ್ಥಾನದ ಚಿತ್ತೋರ್‌ಗಢದ ಶಿಕ್ಷಣ ಸಂಸ್ಥೆಯೊಂದರಲ್ಲಿ ಈ ಘಟನೆ ನಡೆದಿದ್ದು, ಸ್ಟಾಪ್ ರೂಂನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಪುರುಷ ಮತ್ತು ಮಹಿಳಾ ಶಿಕ್ಷಕಿ ಪರಸ್ಪರ ಪ್ರೀತಿಯಿಂದ ಚುಂಬಿಸಿದ್ದು ಅನುಚಿತವಾಗಿ ವರ್ತಿಸುತ್ತಿರುವುದು ಸೆರೆಯಾಗಿದೆ.



ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯ ಗಂಗ್ರಾರ್ ಬ್ಲಾಕ್‍ನ ಅಜೋಲಿಯಾ ಖೇಡಾ ಗ್ರಾಮ ಪಂಚಾಯತ್‍ನ ಸಲೇರಾದಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಶಾಲಾ ಆವರಣದಲ್ಲಿ ಅವರ ಅಶ್ಲೀಲ ಕೃತ್ಯದ ತುಣುಕುಗಳು ವೈರಲ್ ಆದ ನಂತರ, ಜಿಲ್ಲಾ ಶಿಕ್ಷಣ ಅಧಿಕಾರಿ ಅವರನ್ನು ತಕ್ಷಣ ಕೆಲಸದಿಂದ ಅಮಾನತುಗೊಳಿಸಿದ್ದಾರೆ ಎಂದು ವರದಿಯಾಗಿದೆ. ಶಿಕ್ಷಕನನ್ನು ರಾಜಸ್ಥಾನದ ಸದರಿ ಶಾಲೆಯ ಲೆವೆಲ್ 2 ಸಮಾಜ ವಿಜ್ಞಾನ ಶಿಕ್ಷಕ ಅರವಿಂದ್ ನಾಥ್ ವ್ಯಾಸ್ ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನೂ ಓದಿ:Physical Abuse: ಸಿಗರೇಟ್‌, ಎಣ್ಣೆ ಬೇಡ ಎಂದ ಶಿಕ್ಷಕಿಗೆ ಕಂಠಪೂರ್ತಿ ಕುಡಿದಿದ್ದ ಪ್ರಿನ್ಸಿಪಾಲ್‌ ಮಾಡಿದ್ದೇನು ಗೊತ್ತಾ?

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಶಿಕ್ಷಕರ ನಡವಳಿಕೆಯ ಬಗ್ಗೆ ಅಸಮಾಧಾನಗೊಂಡ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಹಾಗೂ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಪ್ರದರ್ಶಿಸಿದ ಅಶ್ಲೀಲ ಕೃತ್ಯವನ್ನು ಗ್ರಾಮಸ್ಥರು ಖಂಡಿಸಿದ್ದಾರೆ ಮತ್ತು ಅವರ ಕೃತ್ಯಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.