Viral Video: ತ್ರಿವೇಣಿ ಸಂಗಮದಲ್ಲಿ ಸಾಕು ನಾಯಿಗೆ ʻಪವಿತ್ರ ಸ್ನಾನ' ಮಾಡಿಸಿದ ವ್ಯಕ್ತಿ; ವಿಡಿಯೊ ನೋಡಿ ನೆಟ್ಟಿಗರು ಫುಲ್ ಫಿದಾ!
ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಈ ಹಿಂದೆ ವ್ಯಕ್ತಿಯೊಬ್ಬ ತನ್ನ ಮೃತ ತಾಯಿಯ ಫೋಟೋದೊಂದಿಗೆ ಹಾಗೂ ಕ್ರಿಕೆಟ್ ಅಭಿಮಾನಿಯೊಬ್ಬ ಆರ್‌ಸಿಬಿ ಜೆರ್ಸಿಯನ್ನು ತಂದಿದ್ದ ಘಟನೆ ಸಿಕ್ಕಾಪಟ್ಟೆ ವೈರಲ್ (Viral Video)ಆಗಿತ್ತು. ಇದೀಗ ಮತ್ತೊಬ್ಬ ವ್ಯಕ್ತಿ ಪವಿತ್ರ ಸ್ನಾನ ಮಾಡಲು ತನ್ನ ಜೊತೆ ಸಾಕುನಾಯಿಯನ್ನು ಕರೆತಂದ ಪ್ರಸಂಗ ನಡೆದಿದೆ.
ಲಖನೌ: ಮಹಾ ಕುಂಭಮೇಳಕ್ಕೆ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತದ ಕೋಟ್ಯಂತರ ಜನರು ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ಮಹಾ ಕುಂಭಮೇಳದಲ್ಲಿ ವ್ಯಕ್ತಿಯೊಬ್ಬ ತನ್ನ ಮೃತ ತಾಯಿಯ ಫೋಟೋದೊಂದಿಗೆ ಪವಿತ್ರ ಸ್ನಾನ ಮಾಡಿದ ಕೆಲವು ದಿನಗಳ ನಂತರ, ಕ್ರಿಕೆಟ್ ಅಭಿಮಾನಿಯೊಬ್ಬ ತನ್ನ ಆರ್‌ಸಿಬಿ ಜೆರ್ಸಿಯನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿದ್ದ. ಇದೀಗ ವ್ಯಕ್ತಿಯೊಬ್ಬರು ತಮ್ಮ ಸಾಕು ನಾಯಿಯನ್ನು ಪ್ರಯಾಗ್‌ರಾಜ್‌ನ ಪವಿತ್ರ ನೀರಿನಲ್ಲಿ ಸ್ನಾನ ಮಾಡಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅವರಿಗಿದ್ದ ಪ್ರಾಣಿಪ್ರೇಮವನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ಸೂಫಿ ಅರೋರಾ ಎಂಬ ವ್ಯಕ್ತಿ ತನ್ನ ಸಾಕುನಾಯಿಯನ್ನು ಹಿಡಿದುಕೊಂಡು ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ಪವಿತ್ರ ನದಿಗಳ ಸಂಗಮದಲ್ಲಿ ಸ್ನಾನ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅರೋರಾ ಅಲ್ಲಿ ತನ್ನ ನಾಯಿಯೊಂದಿಗೆ ಸ್ನಾನ ಮಾಡುವುದನ್ನು ನೋಡಿ ಅಲ್ಲಿದ್ದ ಜನರು ಕೂಡ ಖುಷಿಪಟ್ಟಿದ್ದಾರೆ.
ವಿಡಿಯೊದಲ್ಲಿ ಅರೋರಾ ತನ್ನ ನಾಯಿಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯನ್ನು ಮೇಲಕ್ಕೆತ್ತಿ ನೀರಿನಲ್ಲಿ ಒಂದು ಮುಳುಗು ಹಾಕಿದ್ದಾನೆ. ತ್ರಿವೇಣಿ ಸಂಗಮದಲ್ಲಿ ನಾಯಿಯ ಜೊತೆ ಸ್ನಾನ ಮಾಡುವ ಮೂಲಕ ತನ್ನ ಸಾಕು ನಾಯಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video:ಐಐಟಿಯನ್ ಬಾಬಾ, ಮೊನಾಲಿಸಾ ಆಯ್ತು...ಈಗ ಮಹಾ ಕುಂಭಮೇಳದಲ್ಲಿ ಹ್ಯಾರಿ ಪಾಟರ್!
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೂಫಿ ಅರೋರಾ ನಾಯಿ ಕ್ಯಾಮಿ ಕುಂಭ ಉತ್ಸವದಲ್ಲಿ ಭಾಗವಹಿಸುತ್ತಿರುವುದನ್ನು ತೋರಿಸುವ ವಿಡಿಯೊಗಳು ನೆಟ್ಟಿಗರ ಹೃದಯವನ್ನು ಗೆದ್ದಿವೆ. ಶ‍್ವಾನ ಪ್ರಿಯರು ಕಾಮೆಂಟ್ ವಿಭಾಗದಲ್ಲಿ ಹಾರ್ಟ್ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ ಮತ್ತು ತನ್ನ ಸಾಕುಪ್ರಾಣಿಯನ್ನು ಮಹಾ ಕುಂಭಕ್ಕೆ ಕರೆದೊಯ್ದಿದ್ದಕ್ಕಾಗಿ ವ್ಯಕ್ತಿಯನ್ನು ಹೊಗಳಿದ್ದಾರೆ.