Viral Video: ಕುಂಭಮೇಳದಲ್ಲಿ ರಿಪೋರ್ಟರ್‌ನ ಮೈಕ್ರೋಫೋನ್ ಕಸಿದು ಓಡಿಹೋದ ಕಳ್ಳ!
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕಳ್ಳನೊಬ್ಬ ವರದಿಗಾರನ ಕೈಯಲ್ಲಿದ್ದ ಮೈಕ್ ಅನ್ನು ಕಸಿದುಕೊಂಡು ಓಡಿಹೋಗಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಶಾಕ್ ಆಗಿದ್ದಾರೆ.

kumbha mela viral video

ಲಖನೌ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕಳ್ಳತನದ ಪ್ರಕರಣವೊಂದು ವರದಿಯಾಗಿದೆ. ವ್ಯಕ್ತಿಯೊಬ್ಬ ವರದಿಗಾರನ ಮೈಕ್ರೋಫೋನ್ ಅನ್ನು ಕಸಿದುಕೊಂಡು ಜನಸಮೂಹದೊಳಗೆ ತಪ್ಪಿಸಿಕೊಂಡಿದ್ದಾನೆ. ಇದರಿಂದಾಗಿ ವರದಿಗಾರನಿಗೆ ತನ್ನ ಮೈಕ್ ಅನ್ನು ಮರಳಿ ಪಡೆಯಲು ಆಗಲಿಲ್ಲ ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವರದಿಗಾರನಿಗೆ ಆತನ ಮೈಕ್ರೋಫೋನ್ ಮರಳಿ ಸಿಕ್ಕಿದೆಯೇ? ಇಲ್ಲವೇ ? ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
महाकुंभ मे माहौल पूरी तरह हंसी मजाक का बना रखा है लोगो ने....
— Ganesh Bhamu (@GaneshBhamu87) January 27, 2025
अब रिपोर्टर साहब का माइक लेकर लड़का फरार 😅😃 pic.twitter.com/03ndTJvlxa
ಈ ಸುದ್ದಿಯನ್ನೂ ಓದಿ:Aghori Baba Chanchal Nath: ಅಘೋರಿ ಬಾಬಾ ಚಂಚಲ್‌ನಾಥ್ ರೀಲ್‌ಗಳು ವೈರಲ್, ಇವರು ಸಾಧುವೋ, ಸಾಧ್ವಿಯೋ?
ಈ ವೈರಲ್ ವಿಡಿಯೊದಲ್ಲಿ ಪತ್ರಕರ್ತ ಜನರೊಂದಿಗೆ ಸಂವಹನ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ವರದಿಗಾರ ಭಕ್ತನೊಬ್ಬನ ಜೊತೆ ಮಹಾಕುಂಭಮೇಳದ ಅನುಭವ ಕೇಳುತ್ತಿದ್ದಾಗ ಅಲ್ಲೇ ನಿಂತಿದ್ದ ಕಳ್ಳನು ಮೈಕ್ರೊಫೋನ್ ಕಡೆಗೆ ವಾಲುವ ಮೂಲಕ ತೊಂದರೆ ನೀಡಿದ್ದಾನೆ. ಆಗ ವರದಿಗಾರ ಅವನನ್ನು ತಡೆದಿದ್ದಾನೆ. ನಂತರ ಈ ವ್ಯಕ್ತಿ ಮೈಕ್ರೋಫೋನ್ ಹತ್ತಿರ ಬಂದು ಅದನ್ನು ಕಸಿದುಕೊಂಡು ಓಡಿಹೋಗಿದ್ದಾನೆ. ವರದಿಗಾರ ಮತ್ತು ಅವನನ್ನು ಸುತ್ತುವರಿದ ಇತರ ಜನರು ಕಳ್ಳನ ಹಿಂದೆ ಓಡಿದ್ದಾರೆ. ಆದರೆ ಮೈಕ್ ಸಿಕ್ಕಿದ ಬಗ್ಗೆ ಮಾಹಿತಿ ಖಚಿತವಾಗಿಲ್ಲ.
ಕುಂಭಮೇಳದಲ್ಲಿ ಕಾಲ್ತುಳಿತ
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆ 10ಕೋಟಿಗೂ ಅಧಿಕ ಜನ ಪುಣ್ಯಸ್ನಾನಕ್ಕೆ ಜಮಾಯಿಸಿದ್ದಾರೆ. ಇನ್ನು ಇಂದು ಬೆಳಗ್ಗೆಯೇ ಜನ ದಟ್ಟಣೆ ಹೆಚ್ಚಾದ ಕಾರಣ ಕಾಲ್ತುಳಿತ ಸಂಭವಿಸಿದ್ದು, 15ಕ್ಕೂ ಅಧಿಕ ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.