Viral Video: ಹಾವಿನ ಜತೆ ಸ್ಟಂಟ್ ಮಾಡಿದ ರಷ್ಯಾದ ಡ್ಯಾನ್ಸರ್; ಮುಂದೇನಾಯ್ತು? ವಿಡಿಯೊ ನೋಡಿ
ಹಾವುಗಳು ಕಚ್ಚುತ್ತವೆ ಎಂದು ತಿಳಿದಿದ್ದರೂ ಕೂಡ ರಷ್ಯಾದ ನೃತ್ಯಗಾರ್ತಿಯೊಬ್ಬಳು ದೈತ್ಯ ಹಾವಿನೊಂದಿಗಿನ ಅಪಾಯಕಾರಿ ಸ್ಟಂಟ್ ಮಾಡಿದ್ದಾಳೆ. ಆ ವೇಳೆ ಕೋಪಗೊಂಡ ಹಾವು ಆಕೆಯ ಮೂಗಿಗೆ ಕಚ್ಚಿದೆ. ಈ ವಿಡಿಯೊ ಸಖತ್ ವೈರಲ್ ಆಗಿದೆ.


ಮಾಸ್ಕೋ: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಲೈಕ್ ಮತ್ತು ಫಾಲೋವರ್ಸ್‍ಗಳಿಗಾಗಿ ಕಂಟೆಂಟ್ ಕ್ರಿಯೇಟರ್‌ಗಳು ಕೆಲವೊಮ್ಮೆ ತೀವ್ರ ಅಪಾಯಕಾರಿ ಸ್ಟಂಟ್‍ಗಳನ್ನು ಮಾಡುತ್ತಾರೆ. ಇತ್ತೀಚೆಗೆ ರಷ್ಯಾದ ನೃತ್ಯಗಾರ್ತಿಯೊಬ್ಬಳು ದೈತ್ಯ ಹಾವಿನೊಂದಿಗಿನ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಕಚ್ಚಿಸಿಕೊಂಡಿದ್ದಾಳೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಕ್ರಿಯೇಟರ್ ಶ್ಕೋಡಲೇರಾ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ನೃತ್ಯಗಾರ್ತಿ ಬೃಹತ್ ಹಾವಿನೊಂದಿಗೆ ಪೋಸ್ ನೀಡಲು ಪ್ರಯತ್ನಿಸುತ್ತಿದ್ದಾಗ, ಅನಿರೀಕ್ಷಿತವಾಗಿ, ಅದು ಅವಳ ಮೂಗನ್ನು ಕಚ್ಚಿದೆ. ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ಆಘಾತಕಾರಿ ಕ್ಷಣವು ವೀಕ್ಷಕರನ್ನು ಆಘಾತಗೊಳಿಸಿದೆ. ಅದೃಷ್ಟವಶಾತ್ ಆ ಹಾವು ವಿಷಕಾರಿಯಾಗಿರಲಿಲ್ಲ. ನರ್ತಕಿಗೆ ಸಣ್ಣ ಗಾಯವಾಗಿದೆ ಎನ್ನಲಾಗಿದೆ. ಆ ವೇಳೆ ಅವಳು ಭಯ ಅಥವಾ ಕೋಪದಿಂದ ಪ್ರತಿಕ್ರಿಯಿಸುವ ಬದಲು, ಹಾವನ್ನು ನಿಧಾನವಾಗಿ ನೆಲದ ಮೇಲೆ ಇರಿಸಿ, ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ:Viral Video: ಒಂಬತ್ತು ತಿಂಗಳ ಮಗುವಿನೊಂದಿಗೆ ಮ್ಯಾನ್‌ಹೋಲ್‌ಗೆ ಬಿದ್ದ ಮಹಿಳೆ! ಶಾಕಿಂಗ್ ವಿಡಿಯೊ ವೈರಲ್
ಈ ಘಟನೆಯನ್ನು ಕಂಡು ಸೋಶಿಯಲ್ ಮೀಡಿಯಾದ ನೆಟ್ಟಿಗರು ಶಾಕ್ ಆಗಿದ್ದಾರೆ. ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿ "ಹುಡುಗಿ ತಾನು ಡಿಸ್ನಿ ರಾಜಕುಮಾರಿ ಎಂದು ಭಾವಿಸಿದ್ದಳು" ಎಂದು ತಮಾಷೆ ಮಾಡಿದ್ದಾರೆ. "ನಾನು ಹಾವಿನ ಪರವಾಗಿದ್ದೇನೆ" ಎಂದು ಕೆಲವರು ಹೇಳಿದ್ದಾರೆ. ಇನ್ನೊಬ್ಬರು "ಸೂಕ್ಷ್ಮ ಪ್ರಾಣಿಯನ್ನು ಒತ್ತಡಕ್ಕೆ ಒಳಪಡಿಸಬೇಡಿ. ಆಗ ಅದು ನಿಮ್ಮನ್ನು ಕಚ್ಚುವುದಿಲ್ಲ” ಎಂದು ಸಲಹೆ ನೀಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಇದು ಇನ್‌ಸ್ಟಾಗ್ರಾಂನಲ್ಲಿ ಸುಮಾರು 50 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ನೃತ್ಯಗಾರ್ತಿ ಹಾವು ಕಡಿತದಿಂದ ಅವಳಿಗೆ ಸಕಾರಾತ್ಮಕ ಅನುಭವವಾಗಿದೆ ಎಂದು ಬರೆದಿದ್ದಾರೆ.