Viral Video: ಮುಂಬೈ ಪೊಲೀಸ್ ಕೊಳಲಿನ ಮಾಧುರ್ಯಕ್ಕೆ ಮನಸೋಲದವರೇ ಇಲ್ಲ- ವಿಡಿಯೊ ವೈರಲ್
ಜನವರಿ 26ರ ಭಾರತದ ಗಣರಾಜ್ಯೋತ್ಸವದ ದಿನವನ್ನು ಈ ವರ್ಷ ಮುಂಬೈ ಪೊಲೀಸರು ವಿಭಿನ್ನವಾಗಿ ಆಚರಿಸಿದ್ದಾರೆ. ಆರ್‌ಎ ಕಿದ್ವಾಯಿ ಮಾರ್ಗ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ದಾದಾಸಾಹೇಬ್ ತುಕಾರಾಮ್ ಖುಲೆ ಬಾಲಿವುಡ್ನ 'ರಾಝಿ' ಚಿತ್ರದ 'ಏ ವತನ್, ವತನ್ ಮೇರೆ' ಹಾಡಿನ ರಾಗವನ್ನು ಕೊಳಲಿನ ಮೂಲಕ ನುಡಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

police Inspecter viral video

ಜನವರಿ 26ರಂದು ಭಾರತದ ಗಣರಾಜ್ಯೋತ್ಸವ ದಿನವನ್ನು ದೇಶಾದ್ಯಂತ ಜನರು ಆಚರಿಸಿ ಸಂಭ್ರಮಪಡುತ್ತಾರೆ. ಮುಂಬೈ ಪೊಲೀಸರೊಬ್ಬರು ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಅವರು ಈ ದಿನ ಭಾವಪೂರ್ಣವಾಗಿ ಕೊಳಲು ನುಡಿಸುವ ಮೂಲಕ ಜನರ ಮನ ಸೆಳೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಮುಂಬೈ ಪೊಲೀಸರು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ಆರ್‌ಎ ಕಿದ್ವಾಯಿ ಮಾರ್ಗ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ದಾದಾಸಾಹೇಬ್ ತುಕಾರಾಮ್ ಖುಲೆ ಬಾಲಿವುಡ್ನ 'ರಾಝಿ' ಚಿತ್ರದ 'ಏ ವತನ್, ವತನ್ ಮೇರೆ ದೇಶಭಕ್ತಿ ಗೀತೆಗೆ ಕೊಳಲು ನುಡಿಸಿದ್ದಾರೆ.
ಈ ಸಿನಿಮಾದಲ್ಲಿ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗೇ ಈ ಹಾಡನ್ನು ಮೂಲತಃ ಅರಿಜಿತ್ ಸಿಂಗ್ ಹಾಡಿದ್ದಾರೆ. "ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರಿಂದ ಹಿಡಿದು ದೇಶಭಕ್ತಿಯ ಮಧುರ ಗೀತೆಗಳನ್ನು ಆಯೋಜಿಸುವವರೆಗೆ, ಆರ್.ಎ.ಕಿದ್ವಾಯಿ ಮಾರ್ಗದ ಪಿಎಸ್ಐ ದಾದಾಸಾಹೇಬ್ ತುಕಾರಾಮ್ ಖುಲೆ ಈ #RepublicDayಗೆ ತಮ್ಮ ಭಾವಪೂರ್ಣ ಕೊಳಲು ವಾದನದಿಂದ ಪರಿಪೂರ್ಣವಾದ ರಾಗವನ್ನು ನುಡಿಸಿದ್ದಾರೆ" ಎಂದು ಮುಂಬೈ ಪೊಲೀಸರು ಈ ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:Nelamangala News: ವಿಎಒ ಹಣಕ್ಕೆ ಬೇಡಿಕೆ ಇಡುವ ಹಳೇ ವಿಡಿಯೊ ವೈರಲ್; ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದ ತಹಸೀಲ್ದಾರ್
ನೆಟ್ಟಿಗರು ಸರಣಿ ಕಾಮೆಂಟ್‍ಗಳನ್ನು ಮಾಡುವ ಮೂಲಕ ಈ ಕೊಳಲು ವಾದನವನ್ನು ಹೊಗಳಿದ್ದಾರೆ. ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿ ಕೆಲವರು "ಹ್ಯಾಪಿ ಗಣರಾಜ್ಯೋತ್ಸವ" ಎಂದು ಬರೆದರೆ, ಇತರರು ಕಾಮೆಂಟ್ ವಿಭಾಗದಲ್ಲಿ 'ಹಾರ್ಟ್' ಮತ್ತು 'ಚಪ್ಪಾಳೆ' ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಇಲ್ಲಿಯವರೆಗೆ, ಈ ವಿಡಿಯೊ ನೂರಾರು ಲೈಕ್‍ಗಳನ್ನು ಮತ್ತು 10,000 ವ್ಯೂವ್‍ಗಳನ್ನು ಗಳಿಸಿದೆ.