ವಿಶ್ವದ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾ ಮೇಲೆ ಇರಾನ್ ಕ್ಷಿಪಣಿ ದಾಳಿ? ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್
ಅಮೆರಿಕ ಇಸ್ರೇಲ್ ಇರಾನ್ ನಡುವಿನ ಯುದ್ಧ ನಡೆಯುತ್ತಲೇ ಇದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ. ಇದೀಗ ಇಸ್ರೇಲ್ ಹಾಗೂ ಅಮೆರಿಕ ವಿಶ್ವದ ಅತೀ ಎತ್ತರವಾದ ಕಟ್ಟಡ ಬುರ್ಜ್ ಖಲೀಫಾ ಮೇಲೆ ದಾಳಿ ನಡೆಸಿದೆ.
ಸಂಗ್ರಹ ಚಿತ್ರ -
ದುಬೈ: ಅಮೆರಿಕ ಇಸ್ರೇಲ್ ಇರಾನ್ ನಡುವಿನ ಯುದ್ಧ ನಡೆಯುತ್ತಲೇ ಇದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Dubai's Burj Khalifa) ಸಾವನ್ನಪ್ಪಿದ್ದಾರೆ. ಇದೀಗ ಇಸ್ರೇಲ್ ಹಾಗೂ ಅಮೆರಿಕ ವಿಶ್ವದ ಅತೀ ಎತ್ತರವಾದ ಕಟ್ಟಡ ಬುರ್ಜ್ ಖಲೀಫಾ ಮೇಲೆ ದಾಳಿ ನಡೆಸಿದೆ. ಬುರ್ಜ್ ಖಲೀಫಾ ಬಳಿ ಇರಾನಿನ ಡ್ರೋನ್ ಕಾಣಿಸಿಕೊಂಡ ವರದಿಯಾದ ಕೂಡಲೇ ದೂರದ ವೀಡಿಯೊದಲ್ಲಿ ಕಪ್ಪು ಹೊಗೆ ಏರುತ್ತಿರುವುದು ಕಂಡುಬಂದಿದೆ. ದುಬೈನ ಪ್ರತಿಷ್ಠಿತ ಗಗನಚುಂಬಿ ಕಟ್ಟಡವು ದಾಳಿಗೆ ಗುರಿಯಾಗಿತ್ತೇ ಮತ್ತು ಅದಕ್ಕೆ ಯಾವುದೇ ಹಾನಿಯಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ದುಬೈನ ಹೃದಯಭಾಗದಲ್ಲಿ 828 ಮೀಟರ್ ಎತ್ತರದಲ್ಲಿರುವ ಬುರ್ಜ್ ಖಲೀಫಾ ಅಂದಾಜು 1.5 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ಈ ಬೃಹತ್ ಕಟ್ಟಡಕ್ಕೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಗಮಿಸುತ್ತಾರೆ. 124, 125 ಮತ್ತು 148 ನೇ ಮಹಡಿಗಳಲ್ಲಿರುವ ಅದರ ವೀಕ್ಷಣಾ ಡೆಕ್‌ಗಳಿವೆ. ಈ ಕಟ್ಟಡದ ಡೆವಲಪರ್ ಎಮಾರ್ ಪ್ರಾಪರ್ಟೀಸ್‌ಗೆ ಸರಿಸುಮಾರು 1.5 ಬಿಲಿಯನ್ ಡಾಲರ್ ವಿಮೆ ಮಾಡಿಸಲಾಗಿದೆ. ಜತೆಗೆ ಕಟ್ಟದೊಳಗಿನ ವೈಯಕ್ತಿಕ ಅಪಾರ್ಟ್‌ಮೆಂಟ್‌ಗಳು, ಹೋಟೆಲ್ ಒಳಾಂಗಣಗಳು ಮತ್ತು ಕಚೇರಿಗಳನ್ನು ಅವುಗಳ ಮಾಲೀಕರು ಪ್ರತ್ಯೇಕವಾಗಿ ವಿಮೆ ಮಾಡಿದ್ದಾರೆ.
ವಿಡಿಯೋ ವೈರಲ್
The entire Middle East is about to suffer the consequences of America's stubbornness ⚠️
— Rahul (@RahulRahul37635) February 28, 2026
Watch this video:- missiles are being fired around Dubai situated Burj Khalifa by Iran 💥💥
Any missile could hit the Burj Khalifa anytime...!!#Tehran #MiddleEastConflict #WorldWar3 pic.twitter.com/E95oYm6YrH
ಅಮೆರಿಕ ಜಂಟಿ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಪ್ರತಿದಾಳಿ ಆರಂಭಿಸಿದ್ದು, ಗಲ್ಫ್‌ನಲ್ಲಿರುವ ಅಮೆರಿಕದ ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದೀಗ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಇರಾನ್ ದಾಳಿ ನಡೆಸಿದೆ. ದುಬೈ ವಿಮಾನ ನಿಲ್ದಾಣವನ್ನು ನೇರವಾಗಿ ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎಂಬ ಕುರಿತು ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ದಾಳಿಯ ನಂತರ ವಿಮಾನ ನಿಲ್ದಾಣದ ಪ್ರಯಾಣಿಕರ ಲಾಂಜ್ ಭಾಗಕ್ಕೆ ಹಾನಿಯಾಗಿದೆ ಎಂದು ವರದಿಗಳು ಹೇಳಿವೆ. ವೀಡಿಯೋದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದ್ದು, ದಟ್ಟಹೊಗೆ ಕಾಣಿಸಿಕೊಂಡ ಹಿನ್ನೆಲೆ ಪ್ರಯಾಣಿಕರು ಹೆದರಿ ಓಡುವ ದೃಶ್ಯಗಳು ಕಂಡುಬಂದಿದೆ.
ಅಮೆರಿಕ-ಇಸ್ರೇಲ್ ಜಂಟಿ ದಾಳಿ; ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಹತ್ಯೆ
ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನ ವಿವಿಧ ಪ್ರದೇಶಗಳಲ್ಲಿ ತುರ್ತು ಎಚ್ಚರಿಕೆ ಸಂದೇಶಗಳನ್ನು ರವಾನಿಸಿದ್ದು, ನಿವಾಸಿಗಳು ಹಾಗೂ ಪ್ರವಾಸಿಗರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಕ್ಷಿಪಣಿ ದಾಳಿ ಹಿನ್ನೆಲೆ ಭದ್ರತೆಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.