#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಕುರ್ಸಿಯಾಂಗ್‌ನಲ್ಲಿ ಪತ್ತೆಯಾಯ್ತು ಅಪರೂಪದ ಕಪ್ಪು ಚಿರತೆ: ವಿಡಿಯೊ ವೈರಲ್

ಇತ್ತೀಚೆಗೆ ಪಶ್ಚಿಮ ಬಂಗಾಳದ ಕುರ್ಸಿಯಾಂಗ್‌ನಲ್ಲಿ ಕಪ್ಪು ಚಿರತೆಯೊಂದು ಪತ್ತೆಯಾಗಿದೆ. ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಹೋದ ಪ್ರವಾಸಿಗರಿಗೆ ಈ ಚಿರತೆ ಕಾಣಿಸಿಕೊಂಡಿದೆ. ಕಪ್ಪು ಚಿರತೆಯ ವಿಡಿಯೊವನ್ನು ಪರ್ವೀನ್ ಕಸ್ವಾನ್ ಎನ್ನುವವರು ಹಂಚಿಕೊಂಡಿದ್ದು, ಇದರ ವಿಶಿಷ್ಟ ಲಕ್ಷಣಗಳನ್ನು ವಿವರಿಸಿದ್ದಾರೆ.

ಕುರ್ಸಿಯಾಂಗ್‌ನಲ್ಲಿ ಕಪ್ಪು ಚಿರತೆ ಪತ್ತೆ; ಇಲ್ಲಿದೆ ನೋಡಿ ವೈರಲ್​ ವಿಡಿಯೊ

ಕರಿ ಚಿರತೆ.

Profile Pushpa Kumari Jan 25, 2025 4:06 PM

ಕೋಲ್ಕತಾ: ಪ್ರಸ್ತುತ ನಾವು‌ ವಿಶಿಷ್ಟ ವನ್ಯಜೀವ ಪ್ರಭೇದಗಳನ್ನು ನೋಡುವುದು ಅಪರೂಪವಾದರೂ ಪಶ್ಚಿಮ ಬಂಗಾಳದ ಕುರ್ಸಿಯಾಂಗ್‌ನಲ್ಲಿ ಕಪ್ಪು ಚಿರತೆಯೊಂದು ಪತ್ತೆಯಾಗಿದೆ. ಅರಣ್ಯ ಪ್ರದೇಶದಲ್ಲಿ ‌ಸಫಾರಿಗೆ ಪ್ರವಾಸಿಗರು ತೆರಳುತ್ತಿದ್ದ ಸಂದರ್ಭದಲ್ಲಿ ಈ ಕರಿ ಚಿರತೆ ಕಾಣಿಸಿಕೊಂಡಿದೆ. ಇದರ ವಿಡಿಯೊ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅರಣ್ಯ ಅಧಿಕಾರಿಯೊಬ್ಬರು‌ ಕಪ್ಪು ಪ್ಯಾಂಥರ್ ಓಡಾಡುವ ವಿಡಿಯೊ ವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಬಹಳಷ್ಟು ವೈರಲ್ ಆಗುತ್ತಿದೆ (Viral Video).

ಅರಣ್ಯ ಪ್ರದೇಶದ ರಸ್ತೆ ಪಕ್ಕವೊಂದರಲ್ಲಿ ಸಫಾರಿಗೆ ಅಂತ ತೆರಳಿದ್ದ ಕಪ್ಪು ಚಿರತೆಯ ವಿಡಿಯೊವನ್ನು ಪರ್ವೀನ್ ಕಸ್ವಾನ್ ಎನ್ನುವವರು ಹಂಚಿಕೊಂಡಿದ್ದಾರೆ.‌ ಉತ್ತರ ಬಂಗಾಳದ ಈ ಕಪ್ಪು ಪ್ಯಾಂಥರ್‌ಗಳ ವಿಶಿಷ್ಟ ಲಕ್ಷಣಗಳನ್ನು ಅವರು ವಿವರಿಸಿದ್ದಾರೆ. ಇತ್ತೀಚಿನ ದಿನದಲ್ಲಿ ಈ ಅರಣ್ಯ ಪ್ರದೇಶದಲ್ಲಿ ಅಪರೂಪದ ಪ್ರಾಣಿ-ಪಕ್ಷಿ‌ ಪತ್ತೆಯಾಗಿದ್ದವು. ಇಲ್ಲಿನ ಅಪರೂಪದ ಪ್ರಾಣಿಗಳ ಪಟ್ಟಿಗೆ ಇದೀಗ ಕಪ್ಪು ಚಿರತೆಯೂ ಸೇರ್ಪಡೆಯಾದಂತಾಗಿದೆ.



ಚಿರತೆ ಕಪ್ಪು ಬಣ್ಣದಲ್ಲಿ ಇರಲು ಕಾರಣವೇನು ಎಂಬುದನ್ನು ಇವರು ತಿಳಿಸಿದ್ದಾರೆ. ದೇಹದಲ್ಲಿ ಮೆಲಾನಿನ್ ಅಂಶ ಹೆಚ್ಚಾದರೆ ಅಥವಾ ಮೆಲನಿಸಮ್ ಎಂಬ ಆನುವಂಶಿಕ ಕಾರಣದಿಂದಾಗಿ ಈ ಪ್ರಾಣಿಗಳು ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಪ್ರಾಣಿಗಳು ತಮ್ಮ ಸಾಮಾನ್ಯ ಬಣ್ಣ ಕಳೆದುಕೊಳ್ಳುತ್ತದೆ. ಅದೇ ರೀತಿ ಚಿರತೆ ಕೂಡ ತಮ್ಮ ಸಹಜವಾದ ಬಣ್ಣ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗಿದೆ. ಬಣ್ಣ ಹೊರತುಪಡಿಸಿದರೆ ಇತರ ಗುಣಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

ಕಪ್ಪು ಪ್ಯಾಂಥರ್‌ಗಳು ಸಾಮಾನ್ಯವಾಗಿ ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಗೋವಾ ಮತ್ತು ಈಶಾನ್ಯದ ಪ್ರದೇಶಗಳಲ್ಲಿ ದಟ್ಟವಾದ ಕಾಡುಗಳಲ್ಲಿ ಕಂಡುಬರುತ್ತವೆ ಎಂದು ಅವರು ಉಲ್ಲೇಖಿಸಿದ್ದಾರೆ. ಸುಮಾರು 11 ಪ್ರತಿಶತದಷ್ಟು ಚಿರತೆಗಳು ಈ ವಿಶಿಷ್ಟ ಬಣ್ಣವನ್ನು ಹೊಂದಿದ್ದು, ಇವು ಜನರಿಗೆ ಕಾಣಿಸಿಕೊಳ್ಳುವುದು ಬಹಳ ಅಪರೂಪದ ದೃಶ್ಯ. ಈ ಹಿಂದೆ ಮಯೂರ್‌ಭಂಜ್ ಜಿಲ್ಲೆಯ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿತ್ತು.

ಇದನ್ನು ಓದಿ: Viral Video: ದೇಹಕ್ಕೆ ಮುಪ್ಪಾದರೂ ಪ್ರೀತಿಗೆ ಮುಪ್ಪಿಲ್ಲ...ವೃದ್ಧ ದಂಪತಿಯ ವಿಡಿಯೊ ನೋಡಿ ನೆಟ್ಟಿಗರು ಫಿದಾ!!

ಇದೀಗ ಅನೇಕ ವನ್ಯಜೀವಿ ಉತ್ಸಾಹಿಗಳು ಈ ವಿಡಿಯೊವನ್ನು ಹಂಚಿಕೊಂಡಿದ್ದು ‌ಇದುವರೆಗೆ 79,000ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಅರಣ್ಯ ಅಧಿಕಾರಿಯ ಪ್ರಯತ್ನವನ್ನು ಶ್ಲಾಘಿಸಿದ ಬಳಕೆದಾರರೊಬ್ಬರು “ಬ್ಲ್ಯಾಕ್ ಬ್ಯೂಟಿ ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳುʼʼ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರ ಈ ವಿಶಿಷ್ಟ ಪ್ರಭೇದಗಳನ್ನು ನಾವು ಸಂರಕ್ಷಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.