Viral Video: ದೇಹಕ್ಕೆ ಮುಪ್ಪಾದರೂ ಪ್ರೀತಿಗೆ ಮುಪ್ಪಿಲ್ಲ...ವೃದ್ಧ ದಂಪತಿಯ ವಿಡಿಯೊ ನೋಡಿ ನೆಟ್ಟಿಗರು ಫಿದಾ!!
60 ವರ್ಷದ ವೃದ್ಧ ದಂಪತಿಯ ಹೃದಯಸ್ಪರ್ಶಿ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೊದಲ್ಲಿ ಅಜ್ಜ-ಅಜ್ಜಿಯರ ಪ್ರೇಮಕಥೆಯನ್ನು ಮೊಮ್ಮಗ ಸೊಗಸಾಗಿ ವಿವರಿಸಿದ್ದಾನೆ. ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಯಿಂದ ಮನೆಗೆ ಬಂದ ಅಜ್ಜನಿಗಾಗಿ ಅಜ್ಜಿ ತೋರಿದ ಪ್ರೀತಿ, ಕಾಳಜಿಯನ್ನು ಇಲ್ಲಿ ಕಾಣಬಹುದು.

love story viral video

ಒಂದು ಗಂಡಿಗೊಂದು ಹೆಣ್ಣು/ಹೇಗೊ ಏನೊ ಹೊಂದಿಕೊಂಡು/ದುಃಖ ಹಗುರ ಎನುತಿರೆ/ಪ್ರೇಮವೆನಲು ಹಾಸ್ಯವೆ.... ನರಸಿಂಹಸ್ವಾಮಿಯವರ ಈ ಕವಿತೆ ಕೇಳುತ್ತಿದ್ದರೆ ಗಂಡು-ಹೆಣ್ಣಿನ ನಡುವಿನ ನವಿರಾದ ಪ್ರೇಮ ಮನಸ್ಸಿಗೆ ಕಚಗುಳಿ ಇಡುತ್ತದೆ. ಪತಿ-ಪತ್ನಿಯ ನಡುವಿನ ಸಂಬಂಧ ಹೇಗಿರಬೇಕು ಎಂದು ಈ ಕವಿತೆ ಹೇಳುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ದಂಪತಿಯ ಹೃದಯಸ್ಪರ್ಶಿ ವಿಡಿಯೊವೊಂದು ಸಖತ್ ವೈರಲ್ ಆಗಿದೆ.
ಕ್ರಿಯೇಟರ್ ಅನೀಶ್ ಭಗತ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಅಜ್ಜ-ಅಜ್ಜಿಯರ ನಡುವಿನ ಸುಮಧುರವಾದ ಬಾಂಧವ್ಯವನ್ನು ಕಣ್ತುಂಬಿಕೊಳ್ಳಬಹುದು. ದೇಹಕ್ಕೆ ಮುಪ್ಪಾದರೂ ಪ್ರೀತಿಗೆ ಮುಪ್ಪಿಲ್ಲ ಎಂಬುದನ್ನು ಈ ವಿಡಿಯೊ ತಿಳಿಸುತ್ತದೆ.
ಈ ವೈರಲ್ ವಿಡಿಯೊವನ್ನು ಮೊಮ್ಮಗ ಭಗತ್ ಹಂಚಿಕೊಂಡಿದ್ದು ಇದರಲ್ಲಿ ತನ್ನ ಅಜ್ಜ-ಅಜ್ಜಿಯ ಇಳಿ ವಯಸ್ಸಿನ ಸುಂದರವಾದ ದಾಂಪತ್ಯ ಜೀವನದ ಕುರಿತು ಹೇಳಿದ್ದಾನೆ. ಅಜ್ಜನಿಗೆ ಹುಷಾರು ತಪ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬರುವಾಗ ಅಜ್ಜಿ ಅಜ್ಜನನ್ನು ಸ್ವಾಗತಿಸಿದ ಕ್ಷಣಗಳ ಸುಂದರ ದೃಶ್ಯ ಈ ವಿಡಿಯೊದಲ್ಲಿ ಸೆರೆಯಾಗಿತ್ತು. ಹಾಗೇ ಅಜ್ಜಿ ತನ್ನ ಕೈಯಾರೆ ಅಜ್ಜನಿಗೆ ಅಡುಗೆ ತಯಾರಿಸಿ ತಿನ್ನಿಸಿದ ಪ್ರೀತಿಯ ಕ್ಷಣವೂ ಕಾಣಬಹುದು. ಒಟ್ಟಾರೆ ಇದು ಒಂದು ಸುಂದರ ದಾಂಪತ್ಯ ಜೀವನವನ್ನು ಕಣ್ಮುಂದೆ ತರುತ್ತದೆ.
ಈ ಸುದ್ದಿಯನ್ನೂ ಓದಿ:Viral Video: ಪ್ರಿನ್ಸಿಪಾಲ್‌ಗೆ ಆಜಾಜ್ ಹಾಕಿದ ಸ್ಟೂಡೆಂಟ್- ವಿಡಿಯೊ ಫುಲ್ ವೈರಲ್
ಸಾಕಷ್ಟು ನೆಟ್ಟಿಗರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಒಬ್ಬ ನೆಟ್ಟಿಗರು, "ಅವರಿಗೆ ಯಾರ ಕೆಟ್ಟ ದೃಷ್ಟಿ ತಗುಲದಿರಲಿ” ಎಂದರೆ ಇನ್ನೊಬ್ಬರು, "ದೇವರು ಅವರನ್ನು ಆಶೀರ್ವದಿಸಲಿ” ಎಂದು ಹಾರೈಸಿದ್ದಾರೆ. "ದಾದಾ ಜಿ ನೆ ಕೋನ್ ಸಾ ವ್ರತ ಕಿಯಾ ಥಾ?" ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ.