Viral Video: ಆಫ್ರಿಕಾದಲ್ಲಿ ಸದ್ದು ಮಾಡಿದ ತಮಿಳು ನಟ ವಿಜಯ್ ʼನಾ ರೆಡಿ...ʼ ಸಾಂಗ್; ಕಿಲಿ ಪೌಲ್ ಹೇಳಿದ್ದೇನು?
ಕಾಲಿವುಡ್‍ನ ಖ್ಯಾತ ನಟ ವಿಜಯ್‌ಗೆ ಭಾರತದಲ್ಲಿ ಮಾತ್ರವಲ್ಲ ಆಫ್ರಿಕಾದಲ್ಲಿ ಕೂಡ ಅಭಿಮಾನಿಗಳಿದ್ದಾರೆ. ಈ ವಿಚಾರವನ್ನು ವೈರಲ್ ಲಿಪ್-ಸಿಂಕ್ ವಿಡಿಯೊಗಳು ಮತ್ತು ನೃತ್ಯ ಪ್ರದರ್ಶನಗಳಿಗೆ ಹೆಸರುವಾಸಿಯಾದ ಸೋಶಿಯಲ್ ತಾಂಜೇನಿಯಾದ ಮೀಡಿಯಾ ಸೆನ್ಸೇಷನ್ ಕಿಲಿ ಪೌಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಪುಟದಲ್ಲಿ ತಿಳಿಸಿದ್ದಾರೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ.


ಚೆನ್ನೈ: ನಟ ವಿಜಯ್ ಕಾಲಿವುಡ್‍ನ ಖ್ಯಾತ ನಟರಲ್ಲಿ ಒಬ್ಬರು. ದೇಶ-ವಿದೇಶಗಳಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಇವರು ಹೊಂದಿದ್ದಾರೆ. ಇದೀಗ ತಾಂಜೇನಿಯಾದ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಕಿಲಿ ಪೌಲ್ ಆಫ್ರಿಕಾದಲ್ಲಿ ವಿಜಯ್ ಪೋಟೊ ಇರುವಂತಹ ಟಿ-ಶರ್ಟ್ ಧರಿಸಿದ ವ್ಯಕ್ತಿಯನ್ನು ಗುರುತಿಸಿ ಹೃದಯಸ್ಪರ್ಶಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ವೈರಲ್ (Viral Video) ಆಗಿ ಹಲವರ ಗಮನ ಸೆಳೆದಿದೆ.
ವೈರಲ್ ಲಿಪ್-ಸಿಂಕ್ ವಿಡಿಯೊಗಳು ಮತ್ತು ನೃತ್ಯಗಳಿಗೆ ಹೆಸರುವಾಸಿಯಾದ ಕಿಲಿ ಪೌಲ್, ನಟ ವಿಜಯ್ ಅಪ್ಪಟ ಅಭಿಮಾನಿಯಾಗಿರುವ ಸ್ಥಳೀಯ ವ್ಯಕ್ತಿಯನ್ನು ಇನ್‌ಸ್ಟಾಗ್ರಾಂನಲ್ಲಿ ತೋರಿಸಿದ್ದಾರೆ. ಅವರು ಆಫ್ರಿಕಾದ ಬೀದಿ ಬದಿಯ ಉಪಾಹಾರ ಗೃಹಕ್ಕೆ ಭೇಟಿ ನೀಡಿದಾಗ, ದಕ್ಷಿಣ ಭಾರತದ ಚಲನಚಿತ್ರ ನಟ ವಿಜಯ ಫೋಟೊ ಇರುವಂತಹ ಟಿ-ಶರ್ಟ್ ಧರಿಸಿದ ವ್ಯಕ್ತಿಯನ್ನು ನೋಡಿದ್ದಾರೆ. ಹಾಗಾಗಿ ಕಿಲಿ ಪೌಲ್ ವಿಜಯ್ ಅಭಿಮಾನಿಯನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಪ್ರದರ್ಶಿಸಿದ್ದಾರೆ.
ಈ ವಿಡಿಯೊದಲ್ಲಿ 2023ರ ತಮಿಳು ಚಿತ್ರ 'ಲಿಯೋ' ನಟ ವಿಜಯ್ ಅವರ ಜನಪ್ರಿಯ ಹಾಡುಗಳಲ್ಲಿ ಒಂದಾದ 'ನಾ ರೆಡಿ' ಹಾಡಿನ ಚಿತ್ರವಿರುವ ಟೀ ಶರ್ಟ್ ಅನ್ನು ಆಫ್ರಿಕನ್ ವ್ಯಕ್ತಿ ಧರಿಸಿರುವುದು ಕಂಡು ಬಂದಿದೆ. ಕಿಲಿ ಪೌಲ್ ಆತನನ್ನು ಭೇಟಿಯಾಗಿ ʼನಾ ರೆಡಿʼ ಹಾಡನ್ನು ಎರಡು ಸಾಲ ಹಾಡಿ ಹೆಜ್ಜೆ ಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಆಂಬ್ಯುಲೆನ್ಸ್‌ಗೆ ಸೈಡ್ ಕೊಡದೇ ಆಟೋ ಚಾಲಕನ ಉದ್ಧಟತನ; ವಿಡಿಯೊ ವೈರಲ್!
ಕಿಲಿ ಪೌಲ್ ಜನವರಿ 19ರಂದು ಇನ್‌ಸ್ಟಾಗ್ರಾಂನಲ್ಲಿ ಈ ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು 1.2 ಮಿಲಿಯನ್ ವ್ಯೂವ್ಸ್ ಮತ್ತು ಒಂದು ಲಕ್ಷಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ.