ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಪ್ಲೀಸ್‌ ಬಿಟ್ಬಿಡಿ ಸರ್... ವಾಪಸ್‌ ಬರ್ತಾ ಸ್ವೀಟ್‌ ತರುತ್ತೀನಿ....ಟ್ರಾಫಿಕ್‌ ಪೊಲೀಸ್‌ಗೆ ವಧುವಿನ ಮನವಿ

ಪಂಜಾಬ್‍ನಲ್ಲಿ ವಧು ಪ್ರಯಾಣಿಸುತ್ತಿದ್ದ ಕಾರನ್ನು ಟ್ರಾಫಿಕ್ ಪೊಲೀಸ್‌ರೊಬ್ಬರು ತಡೆದಿದ್ದಾರೆ. ಕೊನೆಗೆ ಯಾವುದೇ ದಂಡ ವಿಧಿಸದೇ ಸ್ವಲ್ಪ ಹೊತ್ತು ಕಾರನ್ನು ನಿಲ್ಲಿಸಿ ನಂತರ ಹೋಗಲು ಬಿಟ್ಟಿದ್ದಾರೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ಅರೆ...ಟ್ರಾಫಿಕ್‌ ಪೊಲೀಸ್‌ ಯಾಕೆ ಹೀಗೆ ಮಾಡಿದ್ದಾರೆ...? ಅಲ್ಲಿ ಏನಾಯಿತು ಎಂಬ ಕುತೂಹಲ ನಿಮಗೂ ಇದೆಯಾ...? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕಾರು ಅಡ್ಡಗಟ್ಟಿದ ಟ್ರಾಫಿಕ್‌ ಪೊಲೀಸ್‌ಗೆ ವಧು ಹೇಳಿದ್ದೇನು? ವಿಡಿಯೊ ವೈರಲ್‌

traffic police viral video

Profile pavithra Jan 24, 2025 1:47 PM

ಚಂಡೀಗಢ: ಟ್ರಾಫಿಕ್ ನಿಯಮ ಉಲ್ಲಂಘಿಸಿದವರು ಯಾರೇ ಆಗಿದ್ದರು ಪೊಲೀಸರು ಅವರಿಗೆ ಯಾವುದೇ ರೀತಿಯ ಕನಿಕರ ತೋರದೆ ದಂಡ ವಿಧಿಸುತ್ತಾರೆ. ಆದರೆ ಪಂಜಾಬ್‍ನಲ್ಲಿ ವಧು ಪ್ರಯಾಣಿಸುತ್ತಿದ್ದ ಕಾರನ್ನು ಟ್ರಾಫಿಕ್ ಪೊಲೀಸರು ತಡೆದು ನಂತರ ಹಾಗೇ ಹೋಗಲು ಬಿಟ್ಟಿದ್ದಾರಂತೆ. ಟ್ರಾಫಿಕ್‌ ಪೊಲೀಸರು ಕಾರು ತಡೆದಾಗ ವಧು ಹಳದಿ ಶಾಸ್ತ್ರಕ್ಕೆ ಹೋಗುತ್ತಿದ್ದೇನೆ. ಈಗಾಗಲೇ ತಡವಾಗಿದೆ. ದಯವಿಟ್ಟು ಹೋಗಲು ಬಿಡಿ ಎಂದು ಕೇಳಿಕೊಂಡಿದ್ದಾಳೆ. ಹಾಗಾಗಿ ಪೊಲೀಸ್‌ ವಧುವಿನ ಕಾರಿನ ಡ್ರೈವಿಂಗ್ ಲೈಸೆನ್ಸ್‌ ಕೂಡ ಪರಿಶೀಲಿಸಲಿಲ್ಲ ಹಾಗೇ ವಾಹನದ ಮೇಲೆ ದಂಡವಿಧಿಸಲಿಲ್ಲ, ಬದಲಾಗಿ ಕಾರನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ ಕಳುಹಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಹಳದಿ ಬಟ್ಟೆ ಧರಿಸಿದ ಕೆಲವು ಮಹಿಳೆಯರಿರುವ ಕಾರನ್ನು ಪಂಜಾಬ್‍ನ ಇಬ್ಬರು ಪೊಲೀಸ್ ಅಧಿಕಾರಿಗಳು ತಡೆದಿದ್ದಾರೆ. ಪೊಲೀಸರು ವಾಹನವನ್ನು ನಿಲ್ಲಿಸಿದ ಕಾರಣ ಬಹಿರಂಗವಾಗಿಲ್ಲ! ಆದರೆ ವಿಡಿಯೊದಲ್ಲಿ ವಧು ಮತ್ತು ಸಂಚಾರ ಪೊಲೀಸರ ಮಾತುಕತೆ ನಡೆದಿರುವುದು ರೆಕಾರ್ಡ್ ಆಗಿದೆ. ಪೊಲೀಸರು ಅವರಿಗೆ ಯಾವುದೇ ದಂಡ ವಿಧಿಸದೆ ಶುಭ ಹಾರೈಸಿ ಹೋಗಲು ಬಿಟ್ಟಿದ್ದಾರೆ. ಅದು ಅಲ್ಲದೇ ಹಿಂದಿರುಗಿ ಬರುವಾಗ ಪೊಲೀಸರಿಗೆ ಸಿಹಿತಿಂಡಿಗಳ ಬಾಕ್ಸ್‌ ಅನ್ನು ಉಡುಗೊರೆಯಾಗಿ ನೀಡುವುದಾಗಿ ಆಕೆ ಹೇಳಿದ್ದಾಳಂತೆ.

ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಆಂಚಲ್ ಅರೋರಾ ಎಂಬ ಮಹಿಳೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ 3.8 ಮಿಲಿಯನ್ ವ್ಯೂವ್ಸ್‌ ಗಳಿಸಿದೆ.

ಈ ಸುದ್ದಿಯನ್ನೂ ಓದಿ:Viral Video: ಪ್ರಿನ್ಸಿಪಾಲ್‌ಗೆ ಆಜಾಜ್ ಹಾಕಿದ ಸ್ಟೂಡೆಂಟ್- ವಿಡಿಯೊ ಫುಲ್‌ ವೈರಲ್‌

ಕಾಮೆಂಟ್ ವಿಭಾಗದಲ್ಲಿ, ಪರಿಸ್ಥಿತಿಯ ಬಗ್ಗೆ ತಿಳಿದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಹಲವು ವೀಕ್ಷಕರು ಪೊಲೀಸರನ್ನು ಹೊಗಳಿದ್ದಾರೆ. "ಸುಂದರವಾದ ವಿಡಿಯೊ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹುಡುಗಿಯರ ಬದಲು ಹುಡುಗರ ಗುಂಪನ್ನು ತಡೆದಿದ್ದರೆ ಪೊಲೀಸರು ಇಷ್ಟು ಚೆನ್ನಾಗಿ ವರ್ತಿಸುತ್ತಿರಲಿಲ್ಲ ಎಂದು ಅನೇಕರು ಕಾಮೆಂಟ್ ಮಾಡಿ ತಮಾಷೆ ಮಾಡಿದ್ದಾರೆ.