Viral Video: ಚಿರತೆಯ ಕಾಟಕ್ಕೆ ಬೇಸತ್ತ ಗ್ರಾಮಸ್ಥರು ಕೊನೆಗೆ ಮಾಡಿದ್ದೇನು? ವಿಡಿಯೊ ನೋಡಿ
ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆಯಂತೆ.ಈ ಚಿರತೆಯ ಕಾಟದಿಂದ ಹೆದರಿದ ಜನರು ಕೊನೆಗೆ ತಾವೇ ಕೈಯಾರೆ ಚಿರತೆಯನ್ನು ಹಿಡಿದು ಹಾಕಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
![Profile](https://vishwavani.news/static/img/user.png)
ಚಿರತೆ ದಾಳಿಯ ಬಗ್ಗೆ ಆಗಾಗ ಸುದ್ದಿಯನ್ನು ಓದುತ್ತಿರುತ್ತೇವೆ. ಕಾಡು ಬಿಟ್ಟು ಊರಲ್ಲಿ ಕಾಣಿಸಿಕೊಂಡ ಚಿರತೆಗಳ ವಿಡಿಯೊ ಕೂಡ ಆಗಾಗ ವೈರಲ್ ಆಗುತ್ತಿರುತ್ತದೆ. ಈಗ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆಯಂತೆ. ಈ ಚಿರತೆಯ ಕಾಟದಿಂದ ಹೆದರಿದ ಜನ ಕೊನೆಗೆ ತಾವೇ ಕೈಯಾರೆ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಚಿರತೆಯ ಕಾಟದ ಬಗ್ಗೆ ಅರಣ್ಯ ಇಲಾಖೆಗೆ ಪದೇ ಪದೇ ದೂರು ನೀಡಿದರೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲವಂತೆ. ಹಾಗಾಗಿ ಇನ್ನು ಕಾದರೆ ಪ್ರಯೋಜನವಿಲ್ಲವೆಂದು ಊರಿನ ಗ್ರಾಮಸ್ಥರೆ ಚಿರತೆ ಹಿಡಿಯುವ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ವೈರಲ್ ವಿಡಿಯೊದಲ್ಲಿ ಗ್ರಾಮದ ಯುವಕರು ಚಿರತೆ ತಮ್ಮ ಕೈ ತಪ್ಪಿ ಹೋಗಬಾರದು ಎಂದು ಅದರ ಕಾಲು, ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದಾರೆ. ಚಿರತೆಯನ್ನು ಹಿಡಿದ ಬಗ್ಗೆ ಅರಣ್ಯ ಇಲಾಖೆಯವರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯವರು ಬಂದು ಚಿರತೆಯನ್ನು ತೆಗೆದುಕೊಂಡು ಹೋಗಿದ್ದಾರೆ.
#UttarPradesh | #Maharajganj | In #Lalpur, Maharajganj, angry villagers captured a leopard after forest officials failed to act. The incident’s video went viral, prompting officials to take necessary action.#Leopard #Leoparcaptured #Forestofficer (Source- UttarPradeshOrg) pic.twitter.com/k8GpYlJuRj— Lokmat Times Nagpur (@LokmatTimes_ngp) December 4, 2024
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಇದಕ್ಕೆ ಕೆಲವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಗ್ರಾಮಸ್ಥರು ಚಿರತೆಯನ್ನು ಹಿಡಿದ ರೀತಿಯನ್ನು ಖಂಡಿಸಿದ್ದಾರೆ. ಇನ್ನು ಕೆಲವರು ಗ್ರಾಮಸ್ಥರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈರಲ್ ವಿಡಿಯೊ ನೋಡಿದ ನೆಟ್ಟಿಗರು ಅನೇಕ ಕಾಮೆಂಟ್‌ಗಳನ್ನು ಮಾಡಿದ್ದಾರೆ."ಚಿರತೆ ಏನು ತಪ್ಪು ಮಾಡಿದೆ? ಅದು ಮನುಷ್ಯರು ವಾಸಿಸುವ ಸ್ಥಳಕ್ಕೆ ಬಂದಿರುವುದೇ ತಪ್ಪಾ?ಮತ್ತು ನಾವ್ಯಾಕೆ ಅವುಗಳು ವಾಸಿಸುವ ಸ್ಥಳವನ್ನು ನಾಶಪಡಿಸುವುದು ಎಂದು ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಸಂಸದ ಶಶಿ ತರೂರ್ ತೊಡೆಯೇರಿದ ಕೋತಿ ಮಾಡಿದ್ದೇನು?
ಬರಿಗೈಯಲ್ಲಿ ಚಿರತೆಯನ್ನು ಹಿಡಿಯುವುದು ಸಣ್ಣ ಸಾಧನೆಯಲ್ಲ. ಅಂತಹ ಧೈರ್ಯ ಮತ್ತು ಶಕ್ತಿಗೆ ಸಾಕ್ಷಿಯಾಗಲು ನಿಜವಾಗಿಯೂ ಆಶ್ಚರ್ಯವಾಗುತ್ತದೆ! ಆದರೆ ಮಾನವರ ಜೊತೆಗೆ, ಪ್ರಾಣಿಯೂ ಸುರಕ್ಷಿತವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಮತ್ತೊಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.