Viral Video: ಹಣ ನೀಡಿದರೂ ಫುಡ್ ವ್ಲಾಗರ್‌ಗೆ ಚಹಾ ನೀಡಲು ನಿರಾಕರಿಸಿದ ಮಹಿಳೆ; ಕಾರಣ ಏನ್ ಗೊತ್ತಾ?
ವಾರಣಾಸಿಯ ಘಾಟ್‍ನಲ್ಲಿ ಫುಡ್‌ವ್ಲಾಗರ್ ಒಬ್ಬರು ಚಹಾ ಮಾರಾಟ ಮಾಡುತ್ತಿರುವ ವಿದೇಶಿ ಮಹಿಳೆಯ ಬಳಿ ಹೋಗಿ ಒಂದು ಕಪ್ ಚಹಾ ಕೊಡಲು ಹೇಳಿ ಹಣ ನೀಡಿದರೆ ಆಕೆ ಅವರಿಗೆ ಚಹಾ ನೀಡಲು ನಿರಾಕರಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆದರೆ ಮಹಿಳೆ ಚಹಾ ನೀಡಲು ನಿರಾಕರಿಸಿದ್ದೇಕೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
![Viral Video: ಹಣ ನೀಡಿದರೂ ಫುಡ್ ವ್ಲಾಗರ್‌ಗೆ ಚಹಾ ನೀಡಲು ನಿರಾಕರಿಸಿದ ಮಹಿಳೆ; ಕಾರಣ ಏನ್ ಗೊತ್ತಾ?](https://cdn-vishwavani-prod.hindverse.com/media/original_images/image-35975d8c-f7a0-4402-961a-0e673ef80184.jpg)
![Profile](https://vishwavani.news/static/img/user.png)
ವಾರಣಾಸಿ: ವಾರಣಾಸಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯೊಬ್ಬಳು ಫುಡ್ ವ್ಲಾಗರ್ ಒಬ್ಬನಿಗೆ ಚಹಾ ನೀಡಲು ನಿರಾಕರಿಸಿರುವಂತಹ ಘಟನೆ ವರದಿಯಾಗಿದೆ. ವಾರಣಾಸಿಯ ಘಾಟ್‍ನಲ್ಲಿ ಫುಡ್‌ವ್ಲಾಗರ್ ಒಬ್ಬರು ಚಹಾ ಮಾರಾಟ ಮಾಡುತ್ತಿರುವ ವಿದೇಶಿ ಮಹಿಳೆಯ ಬಳಿ ಹೋಗಿ ಒಂದು ಕಪ್ ಚಹಾ ಕೊಡಲು ಹೇಳಿ ಹಣ ನೀಡಿದರೆ ಆಕೆ ಅವರಿಗೆ ಚಹಾ ನೀಡಲು ನಿರಾಕರಿಸಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ರೆಕಾರ್ಡ್ ಮಾಡಿದ ವ್ಲಾಗರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
View this post on Instagram A post shared by Kaisa Oljakka & Ankit Kumar (@videshi__indian)
ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ವಿಡಿಯೊದಲ್ಲಿ, ಅಂಕಿತ್ ಕುಮಾರ್ ಅವರು 'ಚಾಯ್ ವಾಲಿ' ಕೈಸಾಗೆ ಹಣ ನೀಡಿ ಚಹಾ ನೀಡುವಂತೆ ಕೇಳಿದ್ದಾರೆ. ಆ ವ್ಯಕ್ತಿಯಿಂದ ಹಣವನ್ನು ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ, ಚಹಾ ಮಾರಾಟ ಮಾಡುತ್ತಿದ್ದ ಮಹಿಳೆ ಅಂಕಿತ್ ನಿರಂತರವಾಗಿ ವಿಡಿಯೊವನ್ನು ಮಾಡುತ್ತಿರುವುದನ್ನು ಗಮನಿಸಿ ʼನೀವು ಫುಡ್‌ವ್ಲಾಗರ್...ʼ ಎಂದು ಕೇಳಿದ್ದಾಳೆ. ಆಗ ಅಂಕಿತ್ ಹೌದು ಎಂದಾಗ ಮಹಿಳೆ ಅವರಿಗೆ ಚಹಾ ತಯಾರಿಸಲು ನಿರಾಕರಿಸಿ ಅಂಕಿತ್ ನೀಡಿದ ಹಣವನ್ನು ಹಿಂದಿರುಗಿಸಿದ್ದಾಳೆ. "ತುಮ್ಕೊ ನಹೀ ಮಿಲೇಗಾ (ನಿಮಗೆ ಸಿಗುವುದಿಲ್ಲ)" ಎಂದು ಆಕೆ ಹೇಳಿದ್ದಾಳೆ."ನೀವು ವಿಡಿಯೊ ಮಾಡಿ ದುಡ್ಡು ಮಾಡ್ತಿರಿ ನಂತರ ಇದರ ಬಗ್ಗೆ ಕೆಟ್ಟದ್ದಾಗಿ ಹೇಳ್ತಿರಿ" ಎಂದು ಆಕೆ ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ:ಗೂಗಲ್ ಮ್ಯಾಪ್ ನಂಬಿ ಆರೋಪಿಯನ್ನು ಬೆನ್ನಟ್ಟುತ್ತಾ ಬಾರ್ಡರ್ ದಾಟಿದ ಪೊಲೀಸರಿಗೆ ಕೊನೆಗೆ ಆಗಿದ್ದೇನು?
ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಡಿಸೆಂಬರ್‌ನಲ್ಲಿ 'ವಿದೇಶಿ ಇಂಡಿಯನ್' ಎಂಬ ಪುಟವು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ. ಇಲ್ಲಿಯವರೆಗೆ, ಇದು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ 50 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.