Viral Video: ಚಿಕನ್ ಪೀಸ್‌ನಲ್ಲಿ ಹರಿದಾಡಿದ ಹುಳು! ಶಾಕಿಂಗ್ ವಿಡಿಯೊ ವೈರಲ್
ಬಿರಿಯಾನಿ ಆರ್ಡರ್ ಮಾಡಿ ಇನ್ನೇನು ಬಾಯಿಗಿಡಬೇಕು ಎಂದಕೊಂಡ ಮಹಿಳೆ ಅದರಲ್ಲಿ ಹುಳುಗಳು ಹರಿದಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾಳೆ. ಇದನ್ನು ಆಕೆ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

chicken briyani viral video

ಐಸ್‌ಕ್ರೀಂನಲ್ಲಿ ಕೈ ಬೆರಳು, ಚಾಕೊಲೆಟ್‌ನಲ್ಲಿ ಹುಳು ಹೀಗೆ ತಿನ್ನುವ ಆಹಾರವನ್ನು ನಂಬಲಾರದಂತಹ ಕಾಲ ಬಂದು ಬಿಟ್ಟಿದೆ. ಈಗ ಅಂಥದ್ದೇ ಒಂದು ಘಟನೆ ಮರುಕಳಿಸಿದೆ. ನಾನ್‌ವೆಜ್ ಪ್ರಿಯರಿಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟ! ಇಲ್ಲೊಬ್ಬಳು ಮಹಿಳೆ ಹಸಿವೆಯಾಗಿದೆಯಂದು ಬಿರಿಯಾನಿ ತಿನ್ನಲು ಹೋದರೆ ಅಲ್ಲಿ ಬಿರಿಯಾನಿ ತಟ್ಟೆ ತುಂಬಾ ಹುಳುಗಳು ಹರಿದಾಡಿದೆಯಂತೆ. ಈಕೆ ತಡಮಾಡದೇ ಅದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ ತನ್ನನ್ನು 'ಕ್ರೇಜಿ ಬೀ' ಎಂದು ಗುರುತಿಸಿಕೊಂಡ ಮಹಿಳೆ ಚಿಕನ್ ಬಿರಿಯಾನಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಅದರಲ್ಲಿ ಮಾಂಸದೊಳಗೆ ಜೀವಂತ ಹುಳುಗಳು ಹರಿದಾಡುವುದು ಕಂಡುಬಂದಿವೆ. "ಚಿಕನ್‍ಯೊಂದಿಗೆ ಉಚಿತ" ಎಂಬ ಶೀರ್ಷಿಕೆ ನೀಡಿ ಮಹಿಳೆ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾಳೆ.
ಮಹಿಳೆ ಚಿಕನ್ ಪೀಸ್ ತೆಗೆಯುತ್ತಿದ್ದಂತೆ ಅದರೊಳಗೆ ಇದ್ದ ಹುಳಗಳು ಹರಿದಾಡಲು ಶುರು ಮಾಡಿದ್ದಾವೆಯಂತೆ. ಈ ಬಿರಿಯಾನಿ ಕಂಡು ನೆಟ್ಟಿಗರು 'ಅಸಹ್ಯ' ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಬಾಯಿಯಲ್ಲಿ ನೀರೂರಿಸುವ ಬಿರಿಯಾನಿಯಲ್ಲಿ ಜೀವಂತ ಹುಳುಗಳನ್ನು ನೋಡಿ ಅನೇಕರು ಶಾಕ್ ಆಗಿದ್ದಾರೆ.
"ಬೇಯಿಸಿದ ಚಿಕನ್ ಅನ್ನು ಹಲವು ದಿನಗಳವರೆಗೆ ಸಂಗ್ರಹಿಸಲಾಗುತ್ತದೆ ಮತ್ತು ನಂತರ ಮತ್ತೆ ಬೇಯಿಸಲಾಗುತ್ತದೆ. ನೀವು ನಾನ್-ವೆಜ್ ತಿನ್ನುತ್ತಿದ್ದರೆ, ತಾಜಾ ಚಿಕನ್ ಆರ್ಡರ್ ಮಾಡುವ ರನ್ನಿಂಗ್ ರೆಸ್ಟೋರೆಂಟ್‍ನಲ್ಲಿ ತಿನ್ನಿ. ನಾನು 5ಸ್ಟಾರ್ ಹೋಟೆಲ್‍ಗಳಲ್ಲಿ ಕೆಲಸ ಮಾಡಿದ್ದೇನೆ, ಈ ರೀತಿಯ ಅಭ್ಯಾಸವೂ ಅಲ್ಲಿ ನಡೆಯುತ್ತದೆ "ಎಂದು ಒಬ್ಬರು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ITC ಹೊಟೇಲ್‌ನಲ್ಲಿ ವಾಚ್‌ಮ್ಯಾನ್ ಆಗಿದ್ದ ತಂದೆಗೆ ಅದೇ ಹೋಟೆಲ್‌ನಲ್ಲಿ ಪುತ್ರನ ರಾಜಾತಿಥ್ಯ- ಹೃದಯಸ್ಪರ್ಶಿ ಪೋಸ್ಟ್ ವೈರಲ್
"ಎಐ ಹೆಚ್ಚು ಅಪಾಯಕಾರಿ" ಎಂದು ಮತ್ತೊಬ್ಬರು ಹೇಳಿದ್ದಾರೆ. “ಆಹಾರವನ್ನು ಬೇಯಿಸಿದಾಗ ಅಲ್ಲಿ ಹುಳಗಳು ಜೀವಂತವಾಗಿರಲು ಹೇಗೆ ಸಾಧ್ಯ?” ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಈ ಘಟನೆ ನಿಜವಾದುದ್ದೇ? ಅಥವಾ ಎಡಿಟ್ ಮಾಡಿದ್ದೆ? ಎಂದು ಪರಿಶೀಲಿಸಲಾಗಿಲ್ಲ. ಆದರೆ ಇದು ಮಾತ್ರ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.