Vivek Ramswamy: ವಿವೇಕ್ ರಾಮಸ್ವಾಮಿ ಟ್ರಂಪ್ ಸಂಪುಟ ಬಿಡಲು ಎಲಾನ್ ಮಸ್ಕ್ ಕಾರಣನಾ?
ಇತ್ತೀಚೆಗೆ ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು DOGE ಗೆ ರಾಜಿನಾಮೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಅವರ ದಿಢೀರ್ ರಾಜೀನಾಮೆಗೆ ಎಲೋನ್ ಮಸ್ಕ್ ಕೂಡ ಕಾರಣ ಎಂದು ಹೇಳಲಾಗಿತ್ತು. ಇದೀಗ ಖುದ್ದು ವಿವೇಕ್ ಅವರೇ ತಮ್ಮ ರಾಜಿನಾಮೆಯ ಕಾರಣವನ್ನು ತಿಳಿಸಿದ್ದಾರೆ.

Vivek Ramswamy

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಅಧಿಕಾರ ವಹಿಸಿಕೊಂಡ ನಂತರ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramswamy) ಅವರು ಕಾರ್ಯದಕ್ಷತಾ ಇಲಾಖೆಯ ಉಸ್ತುವಾರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಚುನಾವಣೆಯಲ್ಲಿ ಟ್ರಂಪ್ ಗೆಲುವನ್ನು ಸಾಧಿಸುತ್ತಲೇ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಹಾಗೂ ರಾಮಸ್ವಾಮಿ ಅವರನ್ನು DOGE ಉಸ್ತುವಾರಿಗಳನ್ನಾಗಿ ನೇಮಿಸಿದ್ದರು. ಆದರೆ ರಾಮಸ್ವಾಮಿ ಅವರ ದೀಢೀರ್ ರಾಜಿನಾಮೆ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿತ್ತು. ಆದರೆ ಇದೀಗ ಖುದ್ದು ಅವರೇ ತಮ್ಮ ರಾಜಿನಾಮೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ರಾಮಸ್ವಾಮಿ ರಾಜೀನಾಮೆ ನೀಡಿದ ತಕ್ಷಣ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಎಲಾನ್ ಮಸ್ಕ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಅವರು DOGE ನಿಂದ ಹೊರ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಅವರು ಎಲ್ಲದಕ್ಕೂ ತೆರೆ ಎಳೆದಿದ್ದಾರೆ. ಅವರು ಓಹಿಯೋದ ಗವರ್ನರ್ ಹುದ್ದೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾವು ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
🚨BREAKING: Vivek Ramaswamy clarifies why he left DOGE. He says he was more on the constitutional law side and Elon was more on the technology side and that’s what’s needed right now. He says there’s no bad blood between them and it was a mutual decision. pic.twitter.com/L1lpcJgXLf
— Autism Capital 🧩 (@AutismCapital) January 28, 2025
ಈ ಸುದ್ದಿಯನ್ನೂ ಓದಿ : Vivek Ramaswamy : ಟ್ರಂಪ್ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ‘DOGE’ ಗೆ ವಿವೇಕ್ ರಾಮಸ್ವಾಮಿ ರಾಜೀನಾಮೆ! ಕಾರಣವೇನು ಗೊತ್ತಾ ?
ಮಸ್ಕ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಅವರು ರಾಮಸ್ವಾಮಿ ಅವರು ನಾವಿಬ್ಬರು ಉತ್ತಮ ಸ್ನೇಹಿತರು. ಎಲಾನ್ ಮಸ್ಕ್ ಒಬ್ಬ ದಕ್ಷ ಆಡಳಿತಗಾರ, ತಂತ್ರಜ್ಞಾನ ವಿಷಯದಲ್ಲಿ ದೂರದೃಷ್ಟಿಯನ್ನು ಹೊಂದಿದ್ದಾರೆ. ತಂತ್ರಜ್ಞಾನ ಡಿಜಿಟಲ್ ವಿಧಾನವನ್ನು ಮುನ್ನಡೆಸಲು ಎಲೋನ್ ಮಸ್ಕ್‌ಗಿಂತ ಉತ್ತಮ ವ್ಯಕ್ತಿ ಯಾರೂ ಇಲ್ಲ ಎಂದು ಹೇಳಿದ್ದಾರೆ.