ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Himani Mor: ನೀರಜ್ ಚೋಪ್ರಾ ಕೈ ಹಿಡಿದ ಯುವತಿ ಯಾರು?

Himani Mor: 2016 ರಲ್ಲಿ ಮಲೇಷ್ಯಾದಲ್ಲಿ ನಡೆದ ವಿಶ್ವ ಜೂನಿಯರ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಹಿಮಾನಿ ಮೋರ್‌ ಚಿನ್ನದ ಪದಕವೂ ಜಯಿಸಿದ್ದಾರೆ ಎನ್ನಲಾಗಿದೆ.

Himani Mor: ನೀರಜ್ ಚೋಪ್ರಾ ಕೈ ಹಿಡಿದ ಯುವತಿ ಯಾರು?

Himani Mor

Profile Abhilash BC Jan 20, 2025 8:42 AM

ಬೆಂಗಳೂರು: ಎರಡು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತ, ಭಾರತ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಿಚಾರವನ್ನು ಭಾನುವಾರ ಸಾಮಾಜಿಕ ಮಾಧ್ಯಮದ ಮೂಲಕ ರಿವೀಲ್‌ ಮಾಡಿದ್ದರು. ಇದೀಗ ಇವರ ಪತ್ನಿ ಹಿಮಾನಿ ಮೋರ್‌ ಯಾರು?, ಇವರ ಹಿನ್ನೆಲೆ ಏನು? ಹೀಗೆ ಹಲವು ವಿವಾರಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹುಡುಕಾಟ ಆರಂಭಿಸಿದ್ದಾರೆ.

25 ವರ್ಷದ ಹಿಮಾನಿ ಮೋರ್‌ ಸೋನಿಪತ್‌ನವರಾಗಿದ್ದು, ಪ್ರಸ್ತುತ ನ್ಯೂ ಹ್ಯಾಂಪ್‌ಶೈರ್‌ನಲ್ಲಿರುವ ಫ್ರಾಂಕ್ಲಿನ್ ಪಿಯರ್ಸ್‌ ವಿಶ್ವವಿದ್ಯಾಲಯದಲ್ಲಿ ಕ್ರೀಡಾ ನಿರ್ವಹಣೆಯಲ್ಲಿ (ಮೇಜರ್) ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.



ದೆಹಲಿಯ ಮಿರಾಂಡಾ ಹೌಸ್‌ನ ಹಳೆಯ ವಿದ್ಯಾರ್ಥಿಯಾಗಿದ್ದು, ಅಲ್ಲಿ ಅವರು ರಾಜಕೀಯ ವಿಜ್ಞಾನ ಮತ್ತು ದೈಹಿಕ ಶಿಕ್ಷಣದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಟೆನಿಸ್ ಆಟಗಾರ್ತಿಯೂ ಆಗಿರುವ ಅವರು, ಈ ಹಿಂದೆ ದೆಹಲಿ ವಿಶ್ವವಿದ್ಯಾನಿಲಯ ಪರ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ್ದರು. 2017ರಲ್ಲಿ ತೈಪೆಯಲ್ಲಿ ನಡೆದಿದ್ದ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿಯೂ ಭಾಗವಹಿಸಿದ್ದರು. 2016 ರಲ್ಲಿ ಮಲೇಷ್ಯಾದಲ್ಲಿ ನಡೆದ ವಿಶ್ವ ಜೂನಿಯರ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವೂ ಜಯಿಸಿದ್ದಾರೆ ಎನ್ನಲಾಗಿದೆ.



ಸದ್ದಿಲ್ಲದೆ 2 ದಿನಗಳ ಹಿಂದೆಯೇ ಖಾಸಗಿ ಕಾರ್ಯಕ್ರಮವೊಂದರಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಿದ್ದರು. ನೀರಜ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಬಳಿಕವಷ್ಟೇ ವಿವಾಹದ ವಿಚಾರ ಬಹಿರಂಗವಾಯಿತು .

'ಇನ್‌ಸ್ಟಾಗ್ರಾಮ್‌ ಮತ್ತು ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಮದುವೆಯ ಫೋಟೊ ಹಂಚಿಕೊಂಡು, 'ನನ್ನ ಕುಟುಂಬದೊಂದಿಗೆ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ನಮ್ಮನ್ನು ಈ ಕ್ಷಣದವರೆಗೆ ತಂದು ನಿಲ್ಲಿಸಿದೆ. ನಾವೀಗ ಪ್ರೀತಿಯಲ್ಲಿ ಬಂಧಿತರಾಗಿದ್ದೇವೆ' ಎಂದು ಬರೆದುಕೊಂಡಿದ್ದರು.