ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಡೆವಾಲ್ಡ್‌ ಬ್ರೆವಿಸ್‌ಗೆ ಡಿಆರ್‌ಎಸ್ ಮನವಿ ತಿರಸ್ಕರಿಸಿದ ಅಂಪೈರ್‌; ನಿಯಮ ಹೇಗಿದೆ?

ಕಳೆದ ಮುಂಬೈ ಇಂಡಿಯನ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವಣ ಪಂದ್ಯದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆದರೆ ಆ ವೇಳೆ ಅಂಪೈರ್‌ಗಳು ಸಮಯ ಮುಕ್ತಾಯವಾಗಿದ್ದರೂ ರೋಹಿತ್‌ ಶರ್ಮಗೆ ಡಿಆರ್‌ಎಸ್ ಅವಕಾಶ ನೀಡಿದ್ದರು. ಡಿಆರ್‌ಎಸ್ ಪರೀಕ್ಷೆ ವೇಳೆ ನಾಟೌಟ್‌ ಆಗಿದ್ದ ರೋಹಿತ್‌ ಅರ್ಧಶತಕ ಬಾರಿಸಿ ಮಿಂಚಿದ್ದರು.

ಬ್ರೆವಿಸ್‌ಗೆ ಡಿಆರ್‌ಎಸ್ ಮನವಿ ತಿರಸ್ಕರಿಸಿದ ಅಂಪೈರ್‌; ನಿಯಮ ಹೇಗಿದೆ?

Profile Abhilash BC May 4, 2025 8:10 AM

ಬೆಂಗಳೂರು: ಆರ್‌ಸಿಬಿ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌(RCB vs CSK) ವಿರುದ್ಧ ಶನಿವಾರ ನಡೆದಿದ್ದ ಐಪಿಎಲ್‌(IPL 2025) ಪಂದ್ಯದಲ್ಲಿ ಎಲ್‌ಬಿಡಬ್ಲ್ಯು ಆದ ಚೆನ್ನೈ ತಂಡದ ಡೆವಾಲ್ಡ್‌ ಬ್ರೆವಿಸ್‌(Dewald Brevis)ಗೆ ಅಂಪೈರ್‌ಗಳು ಡಿಆರ್‌ಎಸ್ ತೆಗೆದುಕೊಳ್ಳುವ ಅವಕಾಶ ನೀಡಲಿಲ್ಲ. ಇದೀಗ ಅಂಪೈರ್‌ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಅವಕಾಶವಿದ್ದರೂ ಅವರಿಗೆ ಏಕೆ ಅಂಪೈರ್‌ಗಳು ಡಿಆರ್‌ಎಸ್ ನೀಡಲಿಲ್ಲ ಎಂಬ ಕುರಿತು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಲುಂಗಿ ಎನ್‌ಗಿಡಿ ಅವರ ಲೋವರ್‌ ಫುಲ್‌ಟಾಸ್ ಎಸೆತವು ಬ್ರೇವಿಸ್‌ ಪ್ಯಾಡ್‌ಗೆ ತಗುಲಿ ಹಿಂದೆ ಸಾಗಿತು. ಅಂಪೈರ್ ಎಲ್‌ಬಿ ನೀಡಿದರು. ಆಗಲೇ ಮನವಿ ಸಲ್ಲಿಸುವ ಬದಲು ಒಂದು ರನ್‌ಗಾಗಿ ಬ್ರೆವಿಸ್ ಮತ್ತು ಜಡೇಜ ಓಡಿದರು. ನಂತರ ಪರಸ್ಪರ ಮಾತನಾಡಿ ಡಿಆರ್‌ಎಸ್ ಮನವಿ ಸಲ್ಲಿಸಿದರು. ಆದರೆ ಅಂಪೈರ್ ಪುರಸ್ಕರಿಸಲಿಲ್ಲ. ಏಕೆಂದರೆ ಒಮ್ಮೆ ಅಂಪೈರ್ ಔಟ್ ಎಂದು ತೀರ್ಪು ಕೊಟ್ಟಾಗ ಬಾಲ್ ಡೆಡ್ ಆಗುತ್ತದೆ. ಜೊತೆಗೆ ಡಿ ಆರ್‌ಎಸ್‌ ಪಡೆಯುವ ಕ್ಷಣಗಣನೆಯೂ ಆರಂಭವಾಗಿರುತ್ತದೆ. ಡೆವಾಲ್ಡ್‌ ಅವರು ಡಿಆರ್‌ಎಸ್‌ ಕೇಳುವಾಗ ನಿಗದಿಯ ಸಮಯ ಮುಗಿದಿತ್ತು. ಹೀಗಾಗಿ ಡೆವಾಲ್ಡ್‌ ಪೆವಿಲಿಯನ್‌ಗೆ ಮರಳಿದರು.

ಡೆವಾಲ್ಡ್‌ ಪೆವಿಲಿಯನ್‌ಗೆ ಮರಳಿದ ಬಳಿಕ ಟಿ.ವಿ. ರಿಪ್ಲೆಯಲ್ಲಿ ಮೂಡಿದ ದೃಶ್ಯದಲ್ಲಿ ಅವರು ನಾಟ್‌ಔಟ್ ಆಗಿರುವುದು ಸ್ಪಷ್ಟವಾಗಿತ್ತು. ಆದರೆ ರನ್‌ ಓಡುವ ಮೊದಲೇ ಅವರು ಡಿಆರ್‌ಎಸ್ ಪಡೆಯುತ್ತಿದ್ದರೆ ನಾಟೌಟ್‌ ಆಗಿ ಆಡಬಹುದಿತ್ತು.

ಕಳೆದ ಮುಂಬೈ ಇಂಡಿಯನ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವಣ ಪಂದ್ಯದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆದರೆ ಆ ವೇಳೆ ಅಂಪೈರ್‌ಗಳು ಸಮಯ ಮುಕ್ತಾಯವಾಗಿದ್ದರೂ ರೋಹಿತ್‌ ಶರ್ಮಗೆ ಡಿಆರ್‌ಎಸ್ ಅವಕಾಶ ನೀಡಿದ್ದರು. ಡಿಆರ್‌ಎಸ್ ಪರೀಕ್ಷೆ ವೇಳೆ ನಾಟೌಟ್‌ ಆಗಿದ್ದ ರೋಹಿತ್‌ ಅರ್ಧಶತಕ ಬಾರಿಸಿ ಮಿಂಚಿದ್ದರು.



ಕೊನೆಯ ಓವರ್‌ ಥ್ರಿಲ್‌

ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯ ಕೊನೆಯ ಎಸೆತದ ವರೆಗೂ ಉಭಯ ತಂಡಗಳ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವಂತೆ ಮಾಡಿತು. ಯಶ್ ದಯಾಳ್ ಎಸೆತ ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ ಕೇವಲ 16 ರನ್‌ಗಳ ಅಗತ್ಯವಿತ್ತು. ಮೊದಲ ಎರಡು ಎಸೆತದಲ್ಲಿ ಧೋನಿ ಮತ್ತು ಜಡೇಜ ತಲಾ ಒಂದು ರನ್ ಗಳಿಸಿದರು. ಆದರೆ ಮೂರನೇ ಎಸೆತದಲ್ಲಿ ಧೋನಿಯನ್ನು ಎಲ್‌ಬಿ ಬಲೆಗೆ ಬೀಳಿಸುವಲ್ಲಿ ದಯಾಳ್ ಯಶಸ್ವಿಯಾದರು.

ಆ ಬಳಿಕ ಕ್ರೀಸ್‌ಗೆ ಬಂದ ಶಿವಂ ದುಬೆ ಮೊದಲ ಎಸೆತವನ್ನೇ ಸಿಕ್ಸರ್‌ ಹೊಡೆದರು. ಆ ಎಸೆತ ನೋಬಾಲ್ ಆಗಿ ಒಟ್ಟು ಏಳು ರನ್‌ಗಳು ಸಿಕ್ಕವು. ಈ ವೇಳೆ ಆರ್‌ಸಿಬಿ ಅಭಿಮಾನಿಗಳು ಪಂದ್ಯ ಸೋತೆವು ಎಂದು ತಲೆ ಮೇಲೆ ಕೈಹೊತ್ತು ಕುಳಿತರು. ಆದರೆ ಯಶ್ ದಯಾಳ್ ಎದೆಗುಂದಲಿಲ್ಲ. ನಂತರದ ಮೂರು ಎಸೆತಗಳಲ್ಲಿ ಕೇವಲ 3 ರನ್‌ಗಳನ್ನಷ್ಟೇ ಬಿಟ್ಟುಕೊಟ್ಟು ತಂಡಕ್ಕೆ 2 ರನ್‌ ಅಂತರದ ರೋಚಕ ಗೆಲುವು ತಂದುಕೊಟ್ಟರು.

ಇದನ್ನೂ ಓದಿ IPL 2025 Points Table: ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ

ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 213 ರನ್‌ ಗಳಿಸಿತು. ಜವಾಬಿತ್ತ ಚೆನ್ನೈ 5 ವಿಕೆಟ್‌ಗೆ 211 ರನ್‌ ಬಾರಿಸಲಷ್ಟೇ ಶಕ್ತವಾಯಿತು.