WPL 2025: ನ್ಯಾಟ್ ಸಿವರ್ ಬ್ರಂಟ್ ಆಲ್‌ರೌಂಡ್ ಆಟದ ಬಲದಿಂದ ಗೆದ್ದ ಮುಂಬೈ ಇಂಡಿಯನ್ಸ್!
MIW vs GGTW Match Highlights: ನ್ಯಾಟ್ ಸಿವರ್ ಬ್ರಂಟ್ ಅವರ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 2025ರ ಮಹಿಳಾ ಪ್ರೀಮಿಯರ್ ಲೀಗ್‌ನ 5ನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ವಿರುದ್ದ 5 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಗುಜರಾತ್ ಜಯಂಟ್ಸ್ ಟೂರ್ನಿಯಲ್ಲಿ ಸತತ ಎರಡು ಸೋಲುಗಳನ್ನು ಅನುಭವಿಸಿದಂತಾಯಿತು. ಆದರೆ ಮುಂಬೈ ಇಂಡಿಯನ್ಸ್ ಪಾಲಿಗೆ ಇದು ಮೊದಲು ಜಯವಾಗಿದೆ.

ಮುಂಬೈ ಇಂಡಿಯನ್ಸ್‌ಗೆ ಮೊದಲ ಜಯ!

ವಡೋದರಾ: ನ್ಯಾಟ್ ಸಿವರ್ ಬ್ರಂಟ್ ( 57 ರನ್ ಹಾಗೂ 2 ವಿಕೆಟ್) ಅವರ ಆಲ್‌ರೌಂಡ್ ಆಟದ ಬಲದಿಂದ ಮುಂಬೈ ಇಂಡಿಯನ್ಸ್ ತಂಡ, 2025ರ ಮಹಿಳಾ ಪ್ರೀಮಿಯರ್ ಲೀಗ್ (WPL 2025) ಐದನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ಪಡೆದಿದೆ. ಇದು ಪ್ರಸಕ್ತ ಆವೃತಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗಕ್ಕೆ ಮೊದಲ ಗೆಲುವಾದರೆ, ಗುಜರಾತ್ ಜಯಂಟ್ಸ್ ತಂಡಕ್ಕೆ ಸತತ ಎರಡನೇ ಸೋಲಾಗಿದೆ. ಅಷ್ಟೇ ಅಲ್ಲದೆ, ಮುಂಬೈ ತಂಡವು ಡಬ್ಲ್ಯುಪಿಎಲ್‌ನಲ್ಲಿ ಗುಜರಾತ್ ವಿರುದ್ಧ ತನ್ನ ಅಜೇಯ ದಾಖಲೆಯನ್ನು ಸಹ ಉಳಿಸಿಕೊಂಡಿದೆ. ಇದು ಒಟ್ಟಾರೆಯಾಗಿ ಗುಜರಾತ್ ವಿರುದ್ಧ ಮುಂಬೈ ಗಳಿಸಿದ ಐದನೇ ಗೆಲುವು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜಯಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 120 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದಕ್ಕೆ ಪ್ರತಿಯಾಗಿ ಮುಂಬೈ ತಂಡವು ನ್ಯಾಟ್ ಸಿವರ್ ಬ್ರಂಟ್ ಅವರ ಬಲವಾದ ಅರ್ಧಶತಕದ ಬಲದ ನೆರವಿನಿಂದ 16.1 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ಗಳ ನಷ್ಟಕ್ಕೆ 122 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಇದು 2025ರ ಡಬ್ಲ್ಯುಪಿಎಲ್‌ನಲ್ಲಿ ಮುಂಬೈ ತಂಡದ ಮೊದಲ ಗೆಲುವಾಗಿದೆ.
WPL 2025: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ದಾಖಲೆ ಬರೆದ ಜಿ ಕಮಲಿನಿ!
ನ್ಯಾಟ್ ಸಿವರ್ ಬ್ರಂಟ್ ಆಲ್‌ರೌಂಡ್ ಆಟ
ಮುಂಬೈ ಇಂಡಿಯನ್ಸ್ ಪರ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿದ ನ್ಯಾಟ್ ಸಿವರ್ ಬ್ರಂಟ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಬ್ಯಾಟಿಂಗ್‌ಗೂ ಮುನ್ನ ಬ್ರಂಟ್ ಮುಂಬೈ ಪರ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಬೌಲಿಂಗ್‌ನಲ್ಲಿ ಅವರು 4 ಓವರ್‌ಗಳಿಗೆ ಕೇವಲ 26 ರನ್‌ಗಳನ್ನು ನೀಡುವ ಮೂಲಕ 2 ವಿಕೆಟ್‌ಗಳನ್ನು ಪಡೆದರು. ಮುಂಬೈ ಪರ ಹೇಯ್ಲೆ ಮ್ಯಾಥ್ಯೂಸ್ ಮೂರು ವಿಕೆಟ್ ಕಬಳಿಸಿದರೆ, ನ್ಯಾಟ್ ಸಿವರ್ ಬ್ರಂಟ್ ಎರಡು ವಿಕೆಟ್ ಪಡೆದರು. ಅಮೆಲಿಯಾ ಕೆರ್ ಕೂಡ ಎರಡು ವಿಕೆಟ್ ಪಡೆದರು.
Here are the winners of the #CurvvSuperStriker of the Match, #SintexSixesoftheMatch and #HerbalifeActiveCatchOfTheMatch awards 👌👌@TataMotors_Cars | @Sintex_BAPL_Ltd | #SintexTanks | @Herbalife #TATAWPL | #GGvMI pic.twitter.com/ql1YpDIp69
— Women's Premier League (WPL) (@wplt20) February 18, 2025
ಗುಜರಾತ್ ಜಯಂಟ್ಸ್ ಬ್ಯಾಟಿಂಗ್ ವೈಫಲ್ಯ
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಜಯಂಟ್ಸ್ ತಂಡದ ಪರ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಹರ್ಲೀನ್ ಡಿಯೋಲ್ 32 ರನ್‌ಗಳನ್ನು ಗಳಿಸಿ, ಜಯಂಟ್ಸ್ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಕೇಶವಿ ಗೌತಮ್ ಮಾತ್ರ 20 ರನ್ ನಿರ್ಣಾಯಕ ಕೊಡುಗೆ ನೀಡಿದರು ಮತ್ತು ಇಡೀ ತಂಡವು 20 ಓವರ್‌ಗಳಲ್ಲಿ 120 ರನ್‌ಗಳಿಗೆ ಆಲೌಟ್ ಆಯಿತು. ಇದು ಈ ಋತುವಿನಲ್ಲಿ ಒಂದು ತಂಡ ಕಲೆ ಹಾಕಿದ ಅತ್ಯಂತ ಕಡಿಮೆ ಮೊತ್ತವಾಗಿದೆ.
WPL 2025: ಸ್ಮೃತಿ ಮಂಧಾನ ಸ್ಫೋಟಕ ಅರ್ಧ ಶತಕ; ಡೆಲ್ಲಿ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬೌಲ್ ಮಾಡಲು ನಿರ್ಧರಿಸಿದರು ಮತ್ತು ಪವರ್‌ಪ್ಲೇನಲ್ಲಿಯೇ ಗುಜರಾತ್‌ನ 28 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಬೌಲರ್‌ಗಳು ತಮ್ಮ ನಿರ್ಧಾರವನ್ನು ಸರಿಯಾಗಿ ಸಾಬೀತುಪಡಿಸಿದರು. ಮೊದಲ ಆರು ಓವರ್‌ಗಳಲ್ಲಿ ಗುಜರಾತ್ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಇದು ಮೂರನೇ ಬಾರಿ. ಇದು ಬೇರೆ ಯಾವುದೇ ತಂಡಕ್ಕಿಂತ ಹೆಚ್ಚಾಗಿದೆ.