Mobile Addiction: ನಿಮ್ಮ ಮಕ್ಕಳಿಗೆ ಟಿವಿ, ಮೊಬೈಲ್ ಗೀಳಿದೆಯೇ? ಹಾಗಾದ್ರೆ ಇದನ್ನು ಫಾಲೋ ಮಾಡಿ
ಪ್ರಾಪ್ತ ವಯ್ಯಸ್ಸು, ದೈಹಿಕ ಬದಲಾವಣೆ, ಶೈಕ್ಷಣಿಕ ಒತ್ತಡ ಮತ್ತು ಸ್ನೇಹಿತರ ಪ್ರಭಾವ ಮತ್ತು ಮುಂತಾದ ಅಂಶಗಳು ಮಕ್ಕಳ ಮನಸ್ಸು ಮತ್ತು ನಡವಳಿಕೆಯ ಮೇಲೆ ಭಾರಿ ಪರಿಣಾಮ ಬೀರಿರುತ್ತವೆ. ಹೀಗಾಗಿ, ಸಿಟ್ಟು, ಹಟ, ಚಂಚಲ ಮನಸ್ಸನ್ನು ಈ ವಯ್ಯಸ್ಸಿನ ಮಕ್ಕಳಲ್ಲಿ ಕಾಣಬಹುದು.
-
ನನ್ನ ಮಗಳು 7ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಚುರುಕು ಇದ್ದಾಳೆ. ಆದರೆ ಮೊಬೈಲ್ ಹುಚ್ಚು. ಶಾಲೆಯಿಂದ ಮನೆಗೆ ಬಂದಾಕ್ಷಣವೇ ಮೊಬೈಲ್ ಅಥವ ಟೀವಿ ಬೇಕೆ ಬೇಕು . ತುಂಬಾ ಸಿಟ್ಟು ಮತ್ತು ಹಟವಿದೆ. ಓದು ಮತ್ತು ಬೇರೆ ಚಟುವಟಿಕೆಗಳ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾಳೆ. ಹೇಳಿದ ಮಾತು ಕೇಳಲ್ಲ. ಹಗಲು ರಾತ್ರಿ ಅವಳದೇ ಚಿಂತೆಯಾಗಿದೆ. ದಯವಿಟ್ಟು ಅವಳನ್ನು ಮೊಬೈಲ್ ಮತ್ತು ಟಿವಿಯಿಂದ ದೂರವಿಡುವುದಕ್ಕೆ ಮಾಗ೯ದಶ೯ನ ನೀಡಿ
- ಗೀತ ಆಚಾರ್, ಬೆಂಗಳೂರು
ಧನ್ಯವಾದಗಳು. ಮಕ್ಕಳು ನಿಮ್ಮ ಚಿಂತೆ ಸಹಜ. ಮಕ್ಕಳು ಬಾಲ್ಯದಿಂದಲೇ ಮೊಬೈಲ್ ಮತ್ತು ಟೀವಿಯ ಬಳಕೆ ಹೆಚ್ಚನ ಅಭ್ಯಾಸಮಾಡಿಕೊಂಡಿದ್ದರೆ, ದೊಡ್ಡವರಾದ ಮೇಲೆ ಚಟಕ್ಕೆ ಬಿದ್ದಿರುತ್ತಾರೆ. ದೀಘ೯ಕಾಲದವರೆಗೆ ಚಟವಾಗಿದ್ದರೆ, ದೀಢೀರನೆ ಇದರಿಂದ ಹೊರಬರಲು ಸಾಧ್ಯವಾಗುವುದಿಲ್ಲ, ಸ್ವಲ್ಪ ಸಮಯ ನೀಡಬೇಕಾಗುತ್ತದೆ.
ಪ್ರಾಪ್ತ ವಯ್ಯಸ್ಸು, ದೈಹಿಕ ಬದಲಾವಣೆ, ಶೈಕ್ಷಣಿಕ ಒತ್ತಡ ಮತ್ತು ಸ್ನೇಹಿತರ ಪ್ರಭಾವ ಮತ್ತು ಮುಂತಾದ ಅಂಶಗಳು ಮಕ್ಕಳ ಮನಸ್ಸು ಮತ್ತು ನಡವಳಿಕೆಯ ಮೇಲೆ ಭಾರಿ ಪರಿಣಾಮ ಬೀರಿರುತ್ತವೆ. ಹೀಗಾಗಿ, ಸಿಟ್ಟು, ಹಟ, ಚಂಚಲ ಮನಸ್ಸನ್ನು ಈ ವಯ್ಯಸ್ಸಿನ ಮಕ್ಕಳಲ್ಲಿ ಕಾಣಬಹುದು. ಈ ಕಾರಣದಿಂದ, ಪೋಷಕರು, ಮಕ್ಳಳ ಬಳಿ ಹೆಚ್ಚು ವಾದಕ್ಕಿಳಿಯದೇ, ನಿಂದಿಸದೇ ಸಂಯಮ ಮತ್ತು ಕಟ್ಟುನಿಟ್ಟಾದ ವತ೯ನೆಯಿಂದ ಇವರ ಸಮಸ್ಯೆಯನ್ನು ಬಗೆಹರಿಸಬೇಕು.
ಕೆಳಕಂಡ ಅಂಶಗಳನ್ನು ಕೂಡ ಪಾಲಿಸಿ:
- ಅನಗತ್ಯ ವಸ್ತುಗಳ ನಿಮೂ೯ಲನೆ (Removing the distraction) ಓದುವ ಸಮಯದಲ್ಲಿ ಮಕ್ಕಳನ್ನು ಮೊಬೈಲ್ ಮತ್ತು ಟಿವಿಯಿಂದ ದೂರವಿಡಿ. ಮಕ್ಕಳು ಓದುವ ಕೊಠಡಿಯಲ್ಲಿ ಮಕ್ಕಳ ಮನಸ್ಸನ್ನು ಚಂಚಲಗೊಳಿಸುವ ಮತ್ತು ವಿಚಲಿತಗೊಳಿಸುವ ಯಾವುದೇ ವಸ್ತುಗಳನ್ನು ಇಡಬೇಡಿ.
- ಪೋಷಕರೇ ಮಾದರಿ - ನೀವು ಕೂಡ ನಿಮ್ಮ ಮಗಳು ಶಾಲೆಯಿಂದ ಮನೆಗೆ ಬಂದಾಗ ಮತ್ತು ಅವಳು ಓದುವಾಗ ಮೊಬೈಲ್ ಮತ್ತು ಟಿವಿ ಬಳಕೆಯನ್ನು ಮಾಡಬೇಡಿ.
- ನಿಮ್ಮ ಮಾತುಗಳು ಬೆಂಬಲ ನೀಡುವಂತಿರಲಿ - ಅವಳು ಮನೆಗೆ ಬಂದಾಗ ಓದಿನ ಕುರಿತಾಗಲಿ, ಶಾಲೆಯ ಕುರಿತಾಗಲಿ ದೀಢೀರನೇ ಮಾತಾನಾಡಬೇಡಿ. ಬದಲು, ಅವಳನ್ನು ಮೌನವಾಗಿ ಗಮನಿಸಿ. ಸ್ವಲ್ಪ ಸಮಯವನ್ನು ನೀಡಿ, ನಂತರ ಮಾತಾನಾಡಿ. ಉದಾ: A. ಆಯಾಸವಾಗಿದೆಯಾ? ನೀರು ಬೇಕೆ ಅಥವ ಊಟ ಬಡಿಸಲೇ” ಎಂದು ಕೇಳಿರಿ. B. ಶಾಲೆಯಲ್ಲಿ ಹೊಸ ವಿಷಯವನ್ನು ತಿಳಿದುಕೊಂಡಿದ್ದರೇ ನಿಮ್ಮ ದೊತೆ ಹಂಚಿಕೊಳ್ಳಲು ಸಾಧ್ಯವೇ ಕೇಳಿ. C. ಓದುವ ವಿಚಾರದಲ್ಲಿ ಅಥವ ಬೇರೆ ಯಾವುದೇ ಸಮಸ್ಯೆ ಕಾಡುತ್ತಿದ್ದರೆ, ನೀವು ನೆರಲು ನೀಜಲು ಸಿದ್ಧರಿದ್ದೀರವೆಂದು ಸ್ಪಷ್ಟನೆ ನೀಡಿ
- ಅರಿವು ಮೂಡಿಸಿ(Educate children) - ಅನೇಕ ಮಕ್ಕಳು ಫೋನ್‌ಗಳನ್ನು ಕೇವಲ ಮನರಂಜನೆಯ ಸಾಧನಗಳಾಗಿ ನೋಡುತ್ತಾರೆ, ಅವುಗಳನ್ನು ಕಲಿಕೆ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಹೆಚ್ಚು ಬಳಸಿವುದಿಲ್ಲ. ನಿಮ್ಮ ಮಗಳಿಗೆ, ಮೊಬೈಲನ್ನು ಹೆಚ್ಚು ಬಳಸುವುದರಿಂದಾಗುವ ದೈಹಿಕ ಮತ್ತು ಮಾನಸಿಕ ಅಪಾಯಗಳ ಕುರಿತು ತಿಳಿಸಿ. ಮೊಬೈಲನ್ನು ಯಾವ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಆಗಾಗ್ಲೆ ಮನೆಯಲ್ಲಿ ಚಚಿ೯ಸಿ.
- ಶಿಸ್ತು- ನಿಗದಿತ ಸಮಯ- ಮಕ್ಕಳಿಗೆ ಮೊಬೈಲ್ ಬಳಕೆಯ ಕಾಲವನ್ನು ನಿಗಧಿ ಪಡಿಸಿ. ಎಷ್ಟು ಹೊತ್ತು ಬಳಕೆ ಮಾಡಬೇಕು ಎನ್ನುವುದನ್ನು ಮೊದಲೇ ಮಗಳ ಬಳಿ ಮಾತುಕತೆಯನ್ನಾಡಿ ನಂತರ ಕಾಲವನ್ನು ನಿಗಧಿಪಡಿಸಿ. ಮಗಳಿಗೆ ಮೊಬೈಲ್ ಬಳಕೆ ಎಷ್ಟು ಅಗತ್ಯವಿದೇ ಎಂದು ಪರೀಶೀಲೀಸಿ. ಶಾಲೆಗೆ ಸಂಬಧಿಸಿದ ಚಟುವಟಿಕೆಗಳಿಗೆ, ಸ್ನ್ನೇಹಿತರ ಬಳಿ ಮಾತುಕತೆ ನಡೆಸುವುದಕ್ಕೆ ಮೊಬೈಲ್ ಬಳಕೆಯ ಕಾಲವನ್ನು ನಿಗಧಿ ಪಡಿಸಿ. ನಿಗಧಿತ ವೇಳೆಯನ್ನು ಚಾಚು ತಪ್ಪದೇ ಪಾಲಿಸದರೇ ಮಾತ್ರ ನೀವು ಮೊಬೈಲ್ ಕೊಡುವುದಾಗಿ ಹೇಳಿ. ಇನ್ನು ಆಟ ಅಥವ ಮನರಂಜನೆಗಾಗಿ ಕೆಲವು ನಿಮಿಷ ಕೊಡುವುದಾಗಿ ಹೇಳಿ.
- ಇತರೆ ಚಟುವಟಿಕೆಗಳು/ಹವ್ಯಾಸ -
ಮಗಳು ಬಯಸಿದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ(ಸಂಗೀತ, ಕ್ರೀಡೆ ಇತ್ಯಾದಿ). ಇದರಿಂದ, ಬಿಡುವಿನ ಸಮಯವನ್ನು ಆದಷ್ಟು ಈ ಹವ್ಯಾಸಗಳಿಗೆ ನೀಡುವಂತೆ ನೋಡಿಕೊಳ್ಳಿ. ಇದರಿಂದ ಮೊಬೈಲ್ ಮತ್ತು ಟಿವಿ ಬಳಕೆಯನ್ನು ಖಂಡಿತವಾಗಿಯೂ ಕಡಿಮೆ ಮಾಡಬಹುದು.