Extra Marital Affair: ಪೋಷಕರ ಅನೈತಿಕ ಸಂಬಂಧ ಮಕ್ಕಳ ಮಾನಸಿಕ ಆರೋಗ್ಯಕ್ಕೂ ಕುತ್ತು ಆಗ್ಬೋದು... ಎಚ್ಚರ!
ಪೋಷಕರ ಅನೈತಿಕ ಸಂಬಂಧವು ಮಕ್ಕಳ ಮನಸ್ಸಿಗೆ ಅತೀ ಹೆಚ್ಚು ಪರಿಣಾಮ ಬೀರಲಿದೆ. ಅದರಲ್ಲಿಯೂ ಪ್ರೌಢಾವಸ್ಥೆ ಹಾಗೂ ಹದಿಹರೆಯದ ವಯಸ್ಸಿನಲ್ಲಿರುವ ಮಕ್ಕಳಿಗೆ ಈ ವಿಚಾರದಿಂದ ಪೋಷಕರ ಮೇಲಿನ ಪ್ರೀತಿ, ವಿಶ್ವಾಸ, ನಂಬಿಕೆಗೆ ಹೆಚ್ಚಿನ ಭಿನ್ನಾಭಿಪ್ರಾಯ ಬರಲಿದೆ. ಪೋಷಕರ ಅನೈತಿಕ ಸಂಬಂಧ ತಿಳಿದಾಗ ಸಹಜವಾಗಿ ಮಕ್ಕಳಿಗೆ ಅಭದ್ರತೆಯ ಜೊತೆಗೆ ಏಕಾಂಗಿ ಭಾವನೆಯು ಕಾಡಬಹುದು.


ನವದೆಹಲಿ: ಇತ್ತೀಚೆಗೆ ಡಿವೋರ್ಸ್, ಅಕ್ರಮ ಸಂಬಂಧ(Extra Marital Affair) ಇವೆಲ್ಲ ಸರ್ವೇ ಸಾಮಾನ್ಯ ಎಂಬಷ್ಟರ ಮಟ್ಟಿಗೆ ನಡೆಯುತ್ತಿದೆ. ಈ ವಿಚಾರದಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸದೆ ಪೋಷಕರೇ ಎಡವುತ್ತಿರುವುದು ಖೇದಕರ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಮಕ್ಕಳ ಎಳೆ ಮನಸ್ಸಿಗೆ ಪೋಷಕರ ಅನೈತಿಕ ಸಂಬಂಧದ ವಿಚಾರ ತಿಳಿದರೆ ಏನಾಗಬಹುದು? ಪೋಷಕರು ಅನ್ಯರೊಂದಿಗೆ ಹೊಂದಿ ದ್ದ ಅನೈತಿಕ ಸಂಬಂಧ ಮಕ್ಕಳ ನಡವಳಿಕೆ ಮೇಲೆ ಪ್ರಭಾವ ಬೀರಬಹುದೆ? ಅವರ ಭಾವನೆಯ ಮೇಲೆ ಯಾವ ರೀತಿ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇಲ್ಲಿದೆ.
ಪೋಷಕರ ಅನೈತಿಕ ಸಂಬಂಧವು ಮಕ್ಕಳ ಮನಸ್ಸಿನ ಮೇಲೆ ಎಷ್ಟ ಮಟ್ಟಿಗೆ ಘಾಸಿಗೊಳಿಸಬಹುದೆಂದರೆ ಅದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅದರಲ್ಲಿಯೂ ಪ್ರೌಢವಸ್ಥೆ ಹಾಗೂ ಹದಿಹರೆಯದ ವಯಸ್ಸಿನಲ್ಲಿರುವ ಮಕ್ಕಳಿಗೆ ಈ ವಿಚಾರದಿಂದ ಪೋಷಕರ ಮೇಲಿನ ಪ್ರೀತಿ, ವಿಶ್ವಾಸ, ನಂಬಿಕೆಗೆ ಹೆಚ್ಚಿನ ಭಿನ್ನಾಭಿಪ್ರಾಯ ಬರಲಿದೆ. ಪೋಷಕರ ಅನೈತಿಕ ಸಂಬಂಧ ತಿಳಿದಾಗ ಸಹಜವಾಗಿ ಮಕ್ಕಳಿಗೆ ಅಭದ್ರತೆಯ ಜೊತೆಗೆ ಏಕಾಂಗಿ ಭಾವನೆಯು ಕಾಡಬಹುದು.
ಪ್ರತ್ಯೇಕ ಇರಲು ಬಯಸುತ್ತಾರೆ
ಪೋಷಕರ ಅನೈತಿಕ ಸಂಬಂಧ ಮಕ್ಕಳನ್ನು ಅಪರಾಧದ ಪಾಪ ಪ್ರಜ್ಞೆಗೆ ನೂಕುವ ಸಾಧ್ಯತೆ ಇದೆ.ತನ್ನಿಂದ ಅಪ್ಪ ಅಮ್ಮ ಜೊತೆಯಾಗಿ ಬಾಳಲಾಗು ತ್ತಿಲ್ಲವೇ ಎಂಬ ಅನೇಕ ಮಾನಸಿಕ ತುಮುಲತೆ ಕಾಡಲಿದೆ. ಇನ್ನು ಕೆಲವು ಮಕ್ಕಳು ತಮ್ಮ ಪೋಷಕರನ್ನೇ ಶತ್ರುಗಳಂತೆ ಕಂಡು ಅವರಿಂದ ಪ್ರತ್ಯೇಕ ಇರಲು ಬಯಸುವುದು ಸಹ ಇದೆ. ಮಕ್ಕಳಲ್ಲಿ ತಮ್ಮ ಪೋಷಕರ ಬಗ್ಗೆ ನಂಬಿಕೆ ಇರದೆ ಪ್ರತೀ ವಿಚಾರಕ್ಕೂ ಪೋಷಕರನ್ನು ಅನುಮಾನಿಸುವ ಮನೋಭಾವನೆ ಉಂಟಾಗುವ ಸಾಧ್ಯತೆಯು ಇದೆ.
ಉದ್ರೇಕಗೊಳ್ಳುವ ಸಾಧ್ಯತೆ ಇದೆ
ಮಕ್ಕಳಿಗೆ ಪೋಷಕರ ಅನೈತಿಕ ಸಂಬಂಧ ತಿಳಿದು ಏಕಾಗ್ರತೆ ಇರದೆ ಪ್ರತೀ ವಿಚಾರಕ್ಕೂ ಉದ್ರೇಕಗೊಳ್ಳಬಹುದು. ಇದಕ್ಕಾಗಿ ಪೋಷಕರ ಜೊತೆ ಕೋಪಗೊಳ್ಳುವ ಸಾಧ್ಯತೆ ಇದೆ. ಸಹಜವಾಗಿ ಮಕ್ಕಳಿಗೆ ಅಭದ್ರತೆ ಜೊತೆ ತನ್ನ ಪೋಷಕರು ಪರಸ್ಪರ ಬೇರ್ಪಟ್ಟರೆ ಮುಂದಿನ ಭವಿಷ್ಯ ಹೇಗೆ ಎಂಬ ಚಿಂತೆ ಕಾಡುವ ಸಾಧ್ಯತೆ ಇದೆ. ಅನೇಕ ಮಕ್ಕಳು ಈ ಕಾರಣಕ್ಕೆ ಪೋಷ ಕರು, ಕುಟುಂಬ ಎಲ್ಲ ಇದ್ದರೂ ಒಂಟಿಯಾಗಿ ಇರಲು ಇಷ್ಟ ಪಡುತ್ತಾರೆ.
ಜೀವನ ಪರ್ಯಂತ ಆತಂಕ
ಪೋಷಕರ ಅನೈತಿಕ ಸಂಬಂಧಗಳು ಬಯಲಾದರೆ ಮಕ್ಕಳಿಗೆ ಜೀವನ ಪರ್ಯಂತ ಆತಂಕದ ಸ್ಥಿತಿಗೆ ತಳ್ಳುವ ಸಾಧ್ಯತೆ ಇದೆ. ಈ ವಿಚಾರ ಮಗುವಿಗೆ ನಾಚಿಕೆ ಆಗಬಹುದು, ಮುಜುಗರ ಆಗಬಹುದು ಇಲ್ಲವೇ ಜೀವನ ಪರ್ಯಂತ ಸಾಮಾಜಿಕ ಜನರೊಂದಿಗೆ ದೂರ ಉಳಿಯುವಂತೆಯೂ ಮಾಡಬಹುದು. ಇತರ ಜನರೊಂದಿಗೆ ಬೆರೆಯದೆ ಒಂಟಿಯಾಗಿ ಇರ ಬಯಸುವ ಸಾಧ್ಯತೆ ಸಹ ಇದೆ.
ಇದನ್ನು ಓದಿ: Live Long Life: ಈ ಸಲಹೆ ಪಾಲಿಸಿದ್ರೆ ನೀವೂ ಯಾವುದೇ ಔಷಧ ಇಲ್ಲದೆ ದೀರ್ಘಾಯುಷ್ಯ ಹೊಂದಬಹುದು
ಪೋಷಕರು ಏನು ಮಾಡಬೇಕು?
ಮಗುವಿಗೆ ಈ ವಿಚಾರ ತಿಳಿದಿದೆ ಎಂದು ಪೋಷಕರಿಗೆ ಖಾತರಿ ಆದರೆ ಮೊದಲು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ಮಗುವಿನ ಮನಸ್ಸಿನಲ್ಲಿ ಈ ವಿಚಾರ ಏನೆಲ್ಲ ಪ್ರಭಾವ ಬಿದ್ದಿರಬಹುದು ಎಂಬುದನ್ನು ಪೋಷಕರು ಅರ್ಥೈಸಿಕೊಳ್ಳಬೇಕು. ಎಲ್ಲದಕ್ಕಿಂತಲೂ ಮಗುವಿನ ಬಗ್ಗೆ ತನಗೆ ಕಾಳಜಿ ಇದೆ ಎಂಬುದನ್ನು ಮೊದಲು ಸಾಬೀತು ಪಡಿಸಬೇಕು. ತಮ್ಮ ಮಗುವನ್ನು ಯಾವುದೇ ಕಾರಣಕ್ಕೂ ಮುಜುಗರದ ಪರಿಸ್ಥಿತಿಯಲ್ಲಿ ಒಳಗಾಗುವಂತೆ ಮಾಡಬಾರದು. ಪೋಷಕರ ದಾಂಪತ್ಯದ ಬಿರುಕು ಮಗುವಿನ ಅತ್ಯಮೂಲ್ಯ ಜೀವನದ ಮೇಲೆ ಪರಿಣಾಮ ಬೀರದೆ ಮಗುವಿನ ಭವಿಷ್ಯದ ಬಗ್ಗೆಯು ಪೋಷಕರು ಚಿಂತಿಸಬೇಕು. ಸಣ್ಣ ಪುಟ್ಟ ಮನಸ್ತಾಪಕ್ಕೆಲ್ಲ ಪೋಷಕರ ದಾಂಪತ್ಯದ ಬಿರುಕು ಎಳೆ ಮಕ್ಕಳಿಗೆ ಇದುವೆ ಜೀವನಪರ್ಯಂತ ಶಿಕ್ಷೆ ಆಗಬಹುದು ಎಂಬ ಪರಿಜ್ಞಾನ ಪೋಷಕರಲ್ಲಿ ಇರಬೇಕು.