Live Long Life: ಈ ಸಲಹೆ ಪಾಲಿಸಿದ್ರೆ ನೀವೂ ಯಾವುದೇ ಔಷಧ ಇಲ್ಲದೆ ದೀರ್ಘಾಯುಷ್ಯ ಹೊಂದಬಹುದು
Live Long Life: ವೈದ್ಯರು ತಿಳಿಸಿದ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ದೀರ್ಘಾಯುಷ್ಯದವರೆಗೆ ಬದುಕಬಹುದು.

ನವ ದೆಹಲಿ: ಪ್ರತಿಯೊಬ್ಬರೂ ಆರೋಗ್ಯದಿಂದ ಕೂಡಿರುವ ದೀರ್ಘಾಯುಷ್ಯವನ್ನು(Live Long Life) ಪಡೆಯಬೇಕೆಂದು ಬಯಸುತ್ತಾರೆ. ಆದರೆ ಇಂದು ಮಧ್ಯ ವಯಸ್ಸಿನಲ್ಲೇ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಅನುಸರಿಸುತ್ತಿರುವ ಅನಾರೋಗ್ಯಕರ ಜೀವನಶೈಲಿ. ಹಾಗಾಗಿ ವೈದ್ಯರು ತಿಳಿಸಿದ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ದೀರ್ಘಾಯುಷ್ಯದ ಜತೆಗೆ ಉತ್ತಮ ಆರೋಗ್ಯ ಹೊಂದಬಹುದು.
ದೀರ್ಘಾಯುಷ್ಯ ಪಡೆಯಲು ಅನುಸರಿಸಬೇಕಾದ ಸೂತ್ರಗಳು
ಆಹಾರ ಕ್ರಮ: ಆರೋಗ್ಯವಾಗಿರಲು ನಾವು ಸೇವಿಸುವ ಆಹಾರ ಕೂಡ ಪ್ರಮುಖ ಪಾತ್ರ ವಹಿಸಲಿದೆ. ನಾವು ಹೆಚ್ಚು ಕಾಲ ಬದುಕಲು ಬಯಸಿದರೆ ನಮ್ಮ ಆಹಾರವು ಹಲವು ಅಗತ್ಯ ಪೋಷಕಾಂಶಗಳಿಂದ ಕೂಡಿರಬೇಕು. ನೀವು ಏನು ತಿನ್ನುತ್ತೀರೋ ಅದು ನಿಮ್ಮ ವಯಸ್ಸನ್ನು ನಿರ್ಧರಿಸಲಿದೆ. ಹಾಗಾಗಿ ನೈಸರ್ಗಿಕ ಆಹಾರ ಸೇವನೆ ಹಣ್ಣುಗಳು, ತರಕಾರಿಗಳು, ಇಡೀ ಧಾನ್ಯಗಳು, ಬೀಜಗಳು ತರಕಾರಿ, ಸೊಪ್ಪು, ಹಾಲು ಇತ್ಯಾದಿ ಆಹಾರ ಪದಾರ್ಥಗಳನ್ನು ಸೇವಿಸಿದರೆ ಉತ್ತಮ.
ಸರಿಯಾದ ನಿದ್ದೆ: ನಿದ್ರೆ ದೀರ್ಘಾಯುಷ್ಯದ ಮುಖ್ಯ ಸೂತ್ರ ಆಗಿದ್ದು ಸರಿಯಾದ ನಿದ್ರೆ ಮಾಡುವವರು ದೀರ್ಘ ಕಾಲದ ಕಾಯಿಲೆಗಳಿಲ್ಲದೆ 50ರಿಂದ 75 ವರ್ಷದವರೆಗೆ ಬದುಕುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ ಸರಿಯಾದ ನಿದ್ದೆ ಕೂಡ ಮುಖ್ಯ.
ಧೂಮಪಾನ ತ್ಯಜಿಸಿ: ಧೂಮಪಾನ, ತಂಬಾಕು ಮತ್ತು ಮದ್ಯ ಸೇವನೆಯಿಂದ ದೂರ ಇರಬೇಕು. ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಇತ್ಯಾದಿ ಆರೋಗ್ಯಕ್ಕೆ ಬಹಳ ಕೆಡುಕು ಉಂಟು ಮಾಡುತ್ತವೆ. ಹೀಗಾಗಿ ಈ ದುರಾಭ್ಯಾಸಗಳನ್ನು ತ್ಯಜಿಸುವುದರಿಂದ ಆರೋಗ್ಯ ಕಾಪಾಡಬಹುದು.
ಸರಿಯಾದ ತೂಕ ಕಾಪಾಡಿಕೊಳ್ಳಿ: ಅಧಿಕ ತೂಕ ಇದ್ದರೆ ಆರೋಗ್ಯ ಸಮಸ್ಯೆ ಹೆಚ್ಚು. ಹಾಗಾಗಿ ಕಡಿಮೆ ಸಕ್ಕರೆಯ ಅಂಶವನ್ನು ಹೊಂದಿರುವ ತಿಂಡಿಗಳನ್ನು ಸೇವಿಸಬೇಕು. ತಿನ್ನುವುದರಲ್ಲಿ ಸಮತೋಲನ ಕಾಪಾಡಬೇಕು. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಅದರ ಜತೆ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ಸಹ ನಿಯಂತ್ರಣದಲ್ಲಿ ಇಟ್ಟು ಕೊಳ್ಳಬೇಕು.
ನಕಾರಾತ್ಮಕ ವಿಚಾರದಿಂದ ದೂರ ಇರಿ: ಇನ್ನು ದೀರ್ಘಾಯುಷ್ಯವನ್ನು ಹೊಂದಲು ನಿಮ್ಮ ಮನಸ್ಸನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು ಕೂಡ ಮುಖ್ಯ. ನಕಾರಾತ್ಮಕ ವಿಚಾರಗಳಿಂದ ನಿಮ್ಮ ಮನಸ್ಸನ್ನು ರಕ್ಷಿಸಿಕೊಳ್ಳಿ. ದೈನಂದಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅಲ್ಪ ಸಮಯ ನಿದ್ದೆ ಮಾಡುವುದು ಅಥವಾ ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ.
ವ್ಯಾಯಾಮ ಮಾಡಿ: ರೋಗಗಳನ್ನು ದೂರವಿಡಲು ಮತ್ತೊಂದು ಸಲಹೆ ಎಂದರೆ ವ್ಯಾಯಾಮ. ಇದು ದೇಹ ಮತ್ತು ಮನಸ್ಸನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಯೋಗಾಭ್ಯಾಸ ಮಾಡಿದರೆ ಒಳಿತು.
ಇದನ್ನು ಓದಿ:Puttakkana Makkalu: ಕಂಠಿಯ ವಿರುದ್ಧ ಮೊದಲ ಬಾರಿ ಸಿಡಿದೆದ್ದ ಸ್ನೇಹಾ! ಮಹಾತಿರುವಿನಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್