ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chanakya Niti: ಪತಿಯಿಂದ ಪತ್ನಿ ಬಯಸೋದು ಈ ಗುಣಗಳನ್ನು ಮಾತ್ರ

ಆಚಾರ್ಯ ಚಾಣಕ್ಯರ ಪ್ರಕಾರ, ಗಂಡನು ಹೆಂಡತಿಯ ಮನಸ್ಸನು ಅರಿತುಕೊಂಡು, ಆಂತರಿಕ ನಿರೀಕ್ಷೆಗಳನ್ನು ಅರ್ಥೈಸಿಕೊಂಡು ನಡೆದುಕೊಂಡರೆ, ದಾಂಪತ್ಯ ಜೀವನದಲ್ಲಿ ಕಲಹ ಕಡಿಮೆಯಾಗಿ ಸುಖ ಶಾಂತಿ ನೆಲೆಸುತ್ತದೆ. ಗಂಡನ ಈ ಗುಣಗಳು ಹೆಂಡತಿಯನ್ನು ಸಂತೋಷಗೊಳಿಸಲಿದ್ದು, ಸುಖ ಸಂಸಾರಕ್ಕೆ ನಾಂದಿ ಹಾಡುತ್ತದೆ.

ಚಾಣಕ್ಯ ಮತ್ತು ಸಾಂದರ್ಭಿಕ ಚಿತ್ರ

ಬೆಂಗಳೂರು: ವೈವಾಹಿಕ ಜೀವನವು ಕೇವಲ ಗಂಡ-ಹೆಂಡತಿಯ (Husband-Wife) ನಡುವಿನ ಒಪ್ಪಂದ ಆಗಿರದೇ, ಪರಸ್ಪರ ಪ್ರೀತಿ, ಗೌರವ ಮತ್ತು ಮನಸ್ಸಿನ ತಿಳುವಳಿಕೆಯಿಂದ ಬೆಳೆಸಿಕೊಳ್ಳಬೇಕಾದ ಪವಿತ್ರ ಸಂಬಂಧ. ಈ ಸಂಬಂಧದಲ್ಲಿ ಇಬ್ಬರಿಗೂ ತಮ್ಮದೇ ಆದ ನಿರೀಕ್ಷೆಗಳು ಸಹಜವಾಗಿಯೇ ಇರುತ್ತವೆ. ಗಂಡನು ತನ್ನ ಹೆಂಡತಿ ಹೀಗೆ ಇರಬೇಕು ಎಂದು ಬಯಸುವಂತೆ, ಹೆಂಡತಿಯ ಮನಸ್ಸಿನಲ್ಲೂ ಗಂಡ ತನ್ನನ್ನು ವಿಶೇಷವಾಗಿ ನೋಡಿಕೊಳ್ಳಬೇಕು, ಅರ್ಥಮಾಡಿಕೊಳ್ಳಬೇಕು ಎಂಬ ಆಸೆಗಳು ಇರುತ್ತವೆ. ಪ್ರತಿ ಹೆಜ್ಜೆ ಹೆಜ್ಜೆಗೂ ಗಂಡ ತನ್ನ ಜತೆ ಇರಬೇಕು, ಅವನ ಕೈ ಹಿಡಿದು ಇಡೀ ದೇಶ ಸುತ್ತಬೇಕು ಎಂಬ ಕನಸೇ ಇರುತ್ತದೆ. ಆಚಾರ್ಯ ಚಾಣಕ್ಯ (Acharya Chanakya) ಪ್ರಕಾರ, ಗಂಡನು ಹೆಂಡತಿಯ ಮನಸ್ಸನು ಅರಿತುಕೊಂಡು, ಆಂತರಿಕ ನಿರೀಕ್ಷೆಗಳನ್ನು ಅರ್ಥೈಸಿಕೊಂಡು ನಡೆದುಕೊಂಡರೆ, ದಾಂಪತ್ಯ ಜೀವನದಲ್ಲಿ ಕಲಹಗಳೇ ಕಡಿಮೆಯಾಗಿ ಸುಖ ಶಾಂತಿ ನೆಲೆಸುತ್ತದೆ. ಚಾಣಕ್ಯ ನೀತಿಯಲ್ಲಿ(Chanakya Niti) ಈ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಿದ್ದು, ಗಂಡನಿಂದ ಹೆಂಡತಿ ಏನು ಬಯಸುತ್ತಾಳೆ? ಅವಳ ನಿರೀಕ್ಷೆಗಳು ಏನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಚಾಣಕ್ಯ ಹೇಳುವಂತೆ, ಹೆಂಡತಿಯು ಗಂಡನಿಂದ ಮೊದಲಿಗೆ ನಿರೀಕ್ಷಿಸುವ ಗುಣವೇ ಪ್ರಾಮಾಣಿಕತೆ. ತನ್ನ ಗಂಡ ತನ್ನೊಂದಿಗೆ ಸತ್ಯವಾಗಿ ನಡೆದುಕೊಳ್ಳಬೇಕು, ಯಾವುದೇ ವಿಚಾರದಲ್ಲೂ ಸುಳ್ಳು ಹೇಳಬಾರದು ಮತ್ತು ತನ್ನ ನಂಬಿಕೆಗೆ ಧಕ್ಕೆ ತರಬಾರದು ಎಂಬುದು ಪ್ರತಿಯೊಬ್ಬ ಮಹಿಳೆಯ ಮನದಾಳದ ಆಸೆ. ಗಂಡನು ಪ್ರಾಮಾಣಿಕತೆಯನ್ನು ಜೀವನದ ಭಾಗವಾಗಿಸಿಕೊಂಡರೆ, ಅನೇಕ ಸಮಸ್ಯೆಗಳು ಸ್ವತಃ ಪರಿಹಾರವಾಗುತ್ತವೆ ಮತ್ತು ದಾಂಪತ್ಯವು ಗಟ್ಟಿಯಾಗುತ್ತದೆ.

ಇದರ ಜತೆಗೆ, ಪ್ರೀತಿ ಮತ್ತು ವಾತ್ಸಲ್ಯವೂ ಅತ್ಯಂತ ಮುಖ್ಯವಾದ ಅಂಶ. ಪ್ರೀತಿಯೇ ಎಲ್ಲ ಸಂಬಂಧಗಳ ಜೀವಾಳ ಎಂದು ಚಾಣಕ್ಯ ಹೇಳುತ್ತಾರೆ. ಹೆಂಡತಿಯು ತನ್ನ ಗಂಡನಿಂದ ಕೇವಲ ಜವಾಬ್ದಾರಿಯನ್ನಲ್ಲ, ಹೃದಯಪೂರ್ವಕ ಪ್ರೀತಿಯನ್ನೂ ನಿರೀಕ್ಷಿಸುತ್ತಾಳೆ. ಸಣ್ಣ ಮಾತು, ಕಾಳಜಿಯ ಸ್ಪರ್ಶ, ಆಕೆಯ ಭಾವನೆಗಳಿಗೆ ನೀಡುವ ಮಹತ್ವ - ಇವೆಲ್ಲವೂ ಆಕೆಗೆ ಅಪಾರ ಸಂತೋಷವನ್ನು ನೀಡುತ್ತವೆ. ಗಂಡನು ತನ್ನ ಪ್ರೀತಿಯನ್ನು ಮುಚ್ಚಿಡದೆ ವ್ಯಕ್ತಪಡಿಸಿದರೆ, ದಾಂಪತ್ಯ ಜೀವನದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ.

ಚಾಣಕ್ಯರ ಪ್ರಕಾರ ಗಂಡನ ಮುಂದೆ ತಪ್ಪಿಯೂ ಇಂತಹ ಮಾತುಗಳನ್ನು ಆಡಬೇಡಿ

ಗೌರವವೂ ಹೆಂಡತಿಗೆ ಅತ್ಯಂತ ಅಗತ್ಯವಾದ ಭಾವನೆ. ಗಂಡನು ಎಲ್ಲ ಸಂದರ್ಭದಲ್ಲೂ ತನ್ನ ಹೆಂಡತಿಯನ್ನು ಗೌರವದಿಂದ ನೋಡಬೇಕು, ಮನೆ ಕೆಲಸಗಳಲ್ಲಿ ಸಹಕಾರ ನೀಡಬೇಕು ಮತ್ತು ಸ್ನೇಹಿತರು ಅಥವಾ ಕುಟುಂಬಸ್ಥರ ಮುಂದೆ ಆಕೆಯನ್ನು ಕೀಳಾಗಿ ಕಾಣಬಾರದು ಎಂಬುದು ಆಕೆಯ ನಿರೀಕ್ಷೆ. ಕೋಪ ಅಥವಾ ಅಸಮಾಧಾನ ಇದ್ದರೂ ಸಹ, ಅವಳ ಮೇಲೆ ರೇಗದೆ ಗೌರವಯುತವಾಗಿ ಮಾತನಾಡಿಸುವುದು ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗುವಂತೆ ಮಾಡುತ್ತದೆ.

ಇವೆಲ್ಲದರ ನಡುವೆ ಸಮಯದ ಪಾತ್ರವೂ ಬಹಳ ಮಹತ್ವದ್ದು. ಇಂದಿನ ವೇಗದ ಜೀವನ ಶೈಲಿಯಲ್ಲಿ ಸಮಯದ ಕೊರತೆ ಸಾಮಾನ್ಯವಾದರೂ, ಹೆಂಡತಿಗೆ ತನ್ನ ಗಂಡ ತನ್ನಿಗಾಗಿ ಸಮಯ ಮೀಸಲಿಡಬೇಕು ಎಂಬ ಆಸೆ ಸದಾ ಇರುತ್ತದೆ. ದಿನದಲ್ಲಿ ಸ್ವಲ್ಪ ಸಮಯವಾದರೂ ಒಟ್ಟಿಗೆ ಮಾತನಾಡುವುದು, ಊಟ ಮಾಡುವುದು ಅಥವಾ ಮನದಾಳದ ಮಾತುಗಳನ್ನು ಹಂಚಿಕೊಳ್ಳುವುದು ಸಂಬಂಧವನ್ನು ಇನ್ನಷ್ಟು ಹತ್ತಿರ ತರುತ್ತದೆ. ಈ ಸಣ್ಣ ಸಣ್ಣ ಪ್ರಯತ್ನಗಳೇ ದಾಂಪತ್ಯ ಜೀವನವನ್ನು ಸುಖಕರವಾಗಿಸುತ್ತವೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.