ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chanakya Niti: ಚಾಣಕ್ಯರ ಪ್ರಕಾರ ಗಂಡನ ಮುಂದೆ ತಪ್ಪಿಯೂ ಇಂತಹ ಮಾತುಗಳನ್ನು ಆಡಬೇಡಿ, ಸಂಬಂಧ ದೂರ ಆಗೋದು ಪಕ್ಕಾ!

ಚಾಣಕ್ಯರ ನೀತಿಯ ಪ್ರಕಾರ, ಪತ್ನಿಯು ಗಂಡನೊಂದಿಗೆ ಮಾತನಾಡುವಾಗ ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಿಕೊಳ್ಳಬಾರದು ಎಂಬ ಸಲಹೆಯನ್ನು ನೀಡುತ್ತಾರೆ. ಏಕೆಂದರೆ ಅಜಾಗರೂಕವಾಗಿ ಆಡಿದ ಕೆಲ ಮಾತುಗಳೇ ದಾಂಪತ್ಯ ಜೀವನದಲ್ಲಿ ಅಂತರ ಉಂಟುಮಾಡುವ ಸಾಧ್ಯತೆ ಎದುರಾಗುತ್ತದೆ ಎಂಬುದು ಅವರ ಅಭಿಪ್ರಾಯ. ಹಾಗಾದರೆ, ಚಾಣಕ್ಯರ ಪ್ರಕಾರ ಹೆಂಡತಿ ಗಂಡನ ಮುಂದೆ ಯಾವ ರೀತಿಯ ಮಾತುಗಳನ್ನು ಆಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಗಂಡನ ಬಗ್ಗೆ ತಪ್ಪಿಯೂ ಹೀಗೆ ಹೇಳಬೇಡಿ ಅಂತಾರೆ ಚಾಣಕ್ಯ!

ಚಾಣಕ್ಯ -

Profile
Sushmitha Jain Dec 18, 2025 7:29 AM

ಬೆಂಗಳೂರು: ಪ್ರತಿ ಸಂಬಂಧವೂ ಪರಸ್ಪರ ಪ್ರೀತಿ, ನಂಬಿಕೆ ಮತ್ತು ಅರ್ಥೈಸಿಕೊಳ್ಳುವಿಕೆಯಿಂದ ಗಟ್ಟಿಯಾಗುತ್ತದೆ. ಅದರಲ್ಲೂ ಗಂಡ–ಹೆಂಡತಿಯ(Husband-Wife) ಸಂಬಂಧ ಅತ್ಯಂತ ಪವಿತ್ರವಾದದ್ದು ಎಂದು ಹೇಳಲಾಗುತ್ತದೆ. ಈ ಸಂಬಂಧದಲ್ಲಿ ಮುಚ್ಚುಮರೆಗಿಂತ ಮುಕ್ತ ಸಂವಹನ ಮುಖ್ಯ. ಆದರೂ ಆಚಾರ್ಯ ಚಾಣಕ್ಯರ ನೀತಿಯ(Chanakya Niti) ಪ್ರಕಾರ, ಪತ್ನಿಯು ಗಂಡನೊಂದಿಗೆ ಮಾತನಾಡುವಾಗ ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಿಕೊಳ್ಳಬಾರದು ಎಂಬ ಸಲಹೆಯನ್ನು ನೀಡುತ್ತಾರೆ. ಏಕೆಂದರೆ ಅಜಾಗರೂಕವಾಗಿ ಆಡಿದ ಕೆಲ ಮಾತುಗಳೇ ದಾಂಪತ್ಯ ಜೀವನದಲ್ಲಿ ಅಂತರ ಉಂಟುಮಾಡುವ ಸಾಧ್ಯತೆ ಎದುರಾಗುತ್ತದೆ ಎಂಬುದು ಅವರ ಅಭಿಪ್ರಾಯ. ಹಾಗಾದರೆ, ಚಾಣಕ್ಯರ ಪ್ರಕಾರ ಹೆಂಡತಿ ಗಂಡನ ಮುಂದೆ ಯಾವ ರೀತಿಯ ಮಾತುಗಳನ್ನು ಆಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಹೋಲಿಕೆ ಮಾಡಬೇಡಿ

ಮದುವೆಯ ನಂತರ ಪತ್ನಿಯು ತನ್ನ ಹೆತ್ತವರ ಮನೆಯವರನ್ನು ಗಂಡನ ಮನೆಯವರೊಂದಿಗೆ ಹೋಲಿಕೆ ಮಾಡಿ ಮಾತನಾಡುವುದು ಸೂಕ್ತವಲ್ಲ ಎಂದು ಚಾಣಕ್ಯರು ಎಚ್ಚರಿಸುತ್ತಾರೆ. ಪ್ರತಿಯೊಂದು ಕುಟುಂಬಕ್ಕೂ ಅದರದೇ ಆದ ಪರಿಸ್ಥಿತಿ, ಸಂಪ್ರದಾಯ ಮತ್ತು ಜೀವನ ಶೈಲಿ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಗಂಡನ ಮನೆಯನ್ನು ತನ್ನ ತಾಯಿಯ ಮನೆಯೊಂದಿಗೆ ಹೋಲಿಸುವುದು ಅವನಿಗೆ ನೋವುಂಟು ಮಾಡುವುದು ಒಳ್ಳೆಯ ಗುಣವಲ್ಲ ಎನ್ನುತ್ತಾರೆ. ಇಂತಹ ಹೋಲಿಕೆ ಮಾತುಗಳು ಮನೆಯ ಶಾಂತಿಯನ್ನು ಕದಡುವುದರ ಜೊತೆಗೆ ದಾಂಪತ್ಯದಲ್ಲಿ ಬಿರುಕು ಮೂಡಿಸಬಹುದು.

ನಂಬಿಕೆಯನ್ನು ಹುಸಿಗೊಳಿಸಬೇಡಿ

ಚಾಣಕ್ಯನ ನೀತಿಯ ಪ್ರಕಾರ, ಯಾವುದೇ ಸಂಬಂಧದ ಅಡಿಪಾಯ ನಂಬಿಕೆಯೇ ಆಗಿದೆ. ಪತ್ನಿ ಗಂಡನೊಂದಿಗೆ ಸುಳ್ಳು ಮಾತುಗಳನ್ನು ಆಡಿದರೆ, ಆ ನಂಬಿಕೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಒಮ್ಮೆ ಸುಳ್ಳು ಹೇಳಿದ್ದು ಗೊತ್ತಾಗಿ ಮತ್ತೆ ನಂಬಿಕೆ ಗಳಿಸುವುದು, ವಿಶ್ವಾಸವನ್ನು ಸಂಪಾದಿಸುವುದು ಕಷ್ಟಸಾಧ್ಯ. ಆದ್ದರಿಂದ ಸಣ್ಣ ವಿಷಯಗಳಲ್ಲಾದರೂ ಸತ್ಯವನ್ನೇ ಹೇಳುವುದು ದಾಂಪತ್ಯ ಜೀವನವನ್ನು ಗಟ್ಟಿಗೊಳಿಸುತ್ತದೆ. ಪ್ರಾಮಾಣಿಕತೆ ದಾಂಪತ್ಯಕ್ಕೆ ಶಕ್ತಿಯನ್ನು ನೀಡುತ್ತದೆ.

ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡಬೇಡಿ

ಕೆಲವೊಮ್ಮೆ ಮಹಿಳೆಯರು ತಮ್ಮ ಗಂಡನನ್ನು ಇತರ ಪುರುಷರೊಂದಿಗೆ ಹೋಲಿಸಿ ಮಾತನಾಡುತ್ತಾರೆ. ಉದಾಹರಣೆಗೆ, “ಅವಳ ಗಂಡ ಆಕೆಗೆ ಇದು ಕೊಟ್ಟಿದ್ದಾರೆ, ನೀವೇನು ಮಾಡಿದ್ದೀರಿ?” ಅಥವಾ “ಅವನು ಎಷ್ಟು ಚೆನ್ನಾಗಿ ಇದ್ದಾನೆ, ನೀವೇಕೆ ಹೀಗಿಲ್ಲ?” ಎಂಬ ರೀತಿಯ ಮಾತುಗಳು ಗಂಡನ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ. ಇಂತಹ ಹೋಲಿಕೆಗಳು ಗಂಡನ ಮನಸ್ಸಿಗೆ ನೋವುಂಟು ಮಾಡಲಿದ್ದು, ಸಂಬಂಧದಲ್ಲಿ ಅಂತರ ಹೆಚ್ಚಾಗುವಂತೆ ಮಾಡಬಹುದು. ಆದ್ದರಿಂದ ಇತರರೊಂದಿಗೆ ಹೋಲಿಕೆ ಮಾಡುವ ಮಾತುಗಳನ್ನು ಆಡದೇ ಇರುವುದು ಉತ್ತಮ ಎಂದು ಚಾಣಕ್ಯರು ಹೇಳುತ್ತಾರೆ.

Vastu Tips: ಮನೆಯ ಅಂಗಳದಲ್ಲಿ ಚೆಂಡು ಹೂವಿನ ಗಿಡ ನೆಡುವ ಮುನ್ನ ಈ ಸಂಗತಿ ತಿಳಿದಿರಲಿ

ಹಣಕಾಸಿನ ವಿಷಯದಲ್ಲಿ ಗುಪ್ತವಾಗಿರಿ

ಹಣಕಾಸಿನ ವಿಷಯದಲ್ಲಿ ಪತ್ನಿಯು ಸಂಪೂರ್ಣವಾಗಿ ಎಲ್ಲವನ್ನೂ ಗಂಡನೊಂದಿಗೆ ಹಂಚಿಕೊಳ್ಳಬೇಕೆಂಬ ಅವಶ್ಯಕತೆ ಇಲ್ಲ ಎಂದು ಚಾಣಕ್ಯನ ಅಭಿಪ್ರಾಯ. ತನ್ನ ಉಳಿತಾಯ ಅಥವಾ ವೈಯಕ್ತಿಕ ಖರ್ಚುಗಳ ಬಗ್ಗೆ ಕೆಲವೊಂದು ಗೌಪ್ಯತೆ ಇರಬಹುದು. ಇದು ಕೆಲ ಸಂದರ್ಭಗಳಲ್ಲಿ ಕುಟುಂಬದ ಆರ್ಥಿಕ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ. ಆದರೆ ದೊಡ್ಡ ನಿರ್ಧಾರಗಳು ಅಥವಾ ಕುಟುಂಬದ ಭವಿಷ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಇಬ್ಬರ ನಡುವಿನ ಸಂವಾದ ಅಗತ್ಯವೆಂದು ಅವರು ಸೂಚಿಸುತ್ತಾರೆ.

ಕೋಪವನ್ನು ನಿಗ್ರಹಿಸಿಕೊಳ್ಳಿ

ಕೋಪದ ಸಂದರ್ಭದಲ್ಲಿ ಆಡಿದ ಮಾತುಗಳು ಅತ್ಯಂತ ಅಪಾಯಕಾರಿ ಎಂದು ಚಾಣಕ್ಯರು ಎಚ್ಚರಿಸುತ್ತಾರೆ. ಕೋಪದಲ್ಲಿ ಹೇಳುವ ಒಂದು ಕಠೋರ ವಾಕ್ಯವೂ ಸಂಬಂಧವನ್ನು ಆಳವಾಗಿ ಗಾಯಗೊಳಿಸಬಹುದು. ಆ ಕ್ಷಣದಲ್ಲಿ ಹೇಳಿದ ಮಾತುಗಳು ಗಂಡನ ಮನಸ್ಸಿನಲ್ಲಿ ಆಳವಾದ ನೋವನ್ನು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೋಪ ಉಂಟಾದಾಗ ಮಾತನಾಡುವುದಕ್ಕಿಂತ ಮೌನವಾಗಿರುವುದೇ ಉತ್ತಮ. ಮೌನವು ಸಂಬಂಧವನ್ನು ಉಳಿಸುತ್ತದೆ ಮತ್ತು ಪ್ರೀತಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬುದು ಚಾಣಕ್ಯರ ಸಂದೇಶ.

ಒಟ್ಟಾರೆ, ದಾಂಪತ್ಯ ಜೀವನ ಸುಖಕರವಾಗಿರಲು ಮಾತುಗಳಲ್ಲಿ ಸಂಯಮ, ಮನಸ್ಸಿನಲ್ಲಿ ಸಹನೆ ಮತ್ತು ನಡೆಗಳಲ್ಲಿ ಪರಸ್ಪರ ಗೌರವ ಅಗತ್ಯವೆಂದು ಆಚಾರ್ಯ ಚಾಣಕ್ಯರ ನೀತಿ ತಿಳಿಸುತ್ತದೆ..