ಬೆಂಗಳೂರು: ಆಚಾರ್ಯ ಚಾಣಕ್ಯರು (Acharya Chanakya) ರಚಿಸಿದ ಚಾಣಕ್ಯ ನೀತಿಗಳು (Chanakya Niti) ಕಾಲಾಂತರಕ್ಕೂ ಪ್ರಸ್ತುತ ಎಂಬುದರಲ್ಲಿ ಸಂಶಯವೇ ಇಲ್ಲ. ಅವರ ನೀತಿಗಳಲ್ಲಿ ಜೀವನದ ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದೆ. ಗಂಡ ಹೆಂಡತಿಯ ಸಂಬಂಧ, ಮಾನವೀಯ ಮೌಲ್ಯ, ಆರ್ಥಿಕತೆ ಹಾಗೂ ಆರೋಗ್ಯ ಇತ್ಯಾದಿ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಹಾಗೇ ಆಚಾರ್ಯ ಚಾಣಕ್ಯರ ಪ್ರಕಾರ, ಕೆಲವು ಕೆಲಸಗಳನ್ನು ಮಾಡುವಾಗ ನಾಚಿಕೆ ಅಥವಾ ಸಂಕೋಚ ತೋರಿಸುವುದು ಆ ವ್ಯಕ್ತಿಯ ಪೂರಕ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂದು ಹೇಳುತ್ತಾರೆ. ಯಾವ ಸಂದರ್ಭದಲ್ಲಿ ಹಿಂಜರಿಕೆಯ ಸ್ವಭಾವ ಅಥವಾ ನಾಚಿಕೆಯನ್ನು ಪಡಬಾರದು ಎಂದು ಅವರು ತಮ್ಮ ನೀತಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಹೌದು ಚಾಣಕ್ಯರು ತಮ್ಮ ನೀತಿಯಲ್ಲಿ ಯಾವುದೇ ವ್ಯಕ್ತಿಯ ಈ ಒಂದು ನಾಲ್ಕು ಸಂದರ್ಭಗಳಲ್ಲಿ ಹಿಂಜರಿಕೆ ಹಾಗೂ ನಾಚಿಕೆಯನ್ನು ಪಡೆಯಬಾರದು ಎಂದು ಹೇಳುತ್ತಾರೆ. ಆ ಸ್ವಭಾವದಿಂದ ನಿಮ್ಮ ಪಾಲಿಗೆ ಬರುವ ಅದೃಷ್ಟವೂ ಕೈ ತಳ್ಳಿ ಹೋಗುವುದು ಎಂದು ಅವರು ಎಚ್ಚರಿಕೆ ನೀಡುತ್ತಾರೆ. ಹಾಗಾದರೆ ಆ 4 ಕಾರ್ಯಗಳು ಯಾವುವು ಎಂದು ತಿಳಿದುಕೊಳ್ಳೋಣ
ಕೆಲಸದ ವಿಚಾರವಾಗಲಿ, ಊಟದ ವಿಚಾರವಾಗಲಿ ಅಥವಾ ಮತ್ತಾವುದೇ ಸಾಮಾನ್ಯ ಸಂದರ್ಭವಾಗಲಿ ಯಾರು ‘ಇದನ್ನು ಕೇಳೋಕೆ ಸರಿಯಾಗುತ್ತದಾ?’ ಎಂಬ ಗೊಂದಲ ಹಾಗೂ ಚಿಂತೆಯನ್ನ ಮಾಡಬಾರದು. ಆಚಾರ್ಯ ಚಾಣಕ್ಯರ ಮಾತಿನ ಪ್ರಕಾರ, ಕೆಲವೊಂದು ಕ್ಷಣಗಳಲ್ಲಿ ನಾಚಿಕೆ ತೋರಿಸುವುದು ಸ್ವಯಂ ನಷ್ಟಕ್ಕೆ ಕಾರಣವಾಗಬಹುದು. ಹಾಗಾಗಿ ಯಶಸ್ಸು, ಸಂತೋಷ ಮತ್ತು ಸಮೃದ್ಧ ಜೀವನವನ್ನು ಕಟ್ಟಿಕೊಳ್ಳಲು ಚಾಣಕ್ಯರು ನೀಡಿರುವ ಪ್ರಮುಖ ಮಾರ್ಗದರ್ಶನಗಳಲ್ಲಿ, ಈ ನಾಲ್ಕು ವಿಚಾರಗಳು ಅತ್ಯಂತ ಮುಖ್ಯ ಆಗುತ್ತವೆ.
1. ಜೀವನೋಪಾಯಕ್ಕಾಗಿ ಕೆಲಸ ಮಾಡುವಾಗ
ಜೀವನೋಪಾಯಕ್ಕಾಗಿ ಹಣ ಬೇಕೇಬೇಕು. ಹಾಗಾಗಿ ಹಣ ಗಳಿಸುವ ವಿಚಾರದಲ್ಲಿ ಯಾವುದೇ ನಾಚಿಕೆ, ಸಂಕೋಚ ಪಡಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಏಕೆಂದರೆ ಯಾವುದೇ ವ್ಯಕ್ತಿಯು ಕೆಲಸ ಮಾಡುವಾಗ ನಾಚಿಕೆ ಪಟ್ಟರೆ ಆತ ಒಂದು ರೂಪಾಯಿಯನ್ನು ಸಹ ಸಂಪಾದಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಷ್ಟವೇ ಹೆಚ್ಚು.
Astro Tips: ನಿಮ್ಮ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದರೆ ಶುಕ್ರವಾರ ಈ ಕೆಲಸಗಳನ್ನ ಮಾಡಿದ್ರೆ ಧನಾಗಮನ ಖಂಡಿತ
2. ಸಾಲವಾಗಿ ಕೊಟ್ಟ ಹಣವನ್ನು ಮರಳಿ ಕೇಳುವಾಗ
ಯಾರಿಗಾದರೂ ಸಾಲವಾಗಿ ನೀಡಿದ ಹಣವನ್ನು ಸಮಯಕ್ಕೆ ಮರಳಿ ಪಡೆಯುವುದು ನಿಮ್ಮ ಹಕ್ಕು. ಈ ವಿಚಾರದಲ್ಲಿ ನಾಚಿಕೆ ಪಡಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಸಂಕೋಚದಿಂದ ಹಣ ಕೇಳದೇ ಇರುವುದರಿಂದ ನಷ್ಟ ನಿಮ್ಮದಾಗುತ್ತದೆ. ಆದ್ದರಿಂದ ವಿನಯದಿಂದ, ಕೊಟ್ಟ ಹಣವನ್ನು ಮರಳಿ ಕೇಳುವುದರಲ್ಲಿ ಯಾವ ಹಿಂಜರಿಕೆಯೂ ಬೇಡ ಎನ್ನುತ್ತಾರೆ.
3. ಊಟದ ವಿಷಯದಲ್ಲಿ
ಹೆಣ್ಣು-ಗಂಡು ಯಾರೇ ಆಗಿರಲಿ, ಊಟ ಮಾಡುವಾಗ ನಾಚಿಕೆ ಬೇಡ ಎಂದು ಚಾಣಕ್ಯರು ಸಲಹೆ ನೀಡುತ್ತಾರೆ. ಅನೇಕರು ‘ಏನು ಅನ್ತಾರೋ’ ಎಂಬ ಕಾರಣಕ್ಕೆ ಹೊಟ್ಟೆ ತುಂಬಾ ಊಟ ಮಾಡುವುದನ್ನು ಬಿಟ್ಟು ಹಸಿವಿನಿಂದಿರುತ್ತಾರೆ. ಇದು ಆರೋಗ್ಯಕ್ಕೂ ನಷ್ಟ.
4. ಕಲಿಯುವ ವಿಚಾರದಲ್ಲಿ
ಜ್ಞಾನವನ್ನು ಪಡೆಯುವಲ್ಲಿ ನಾಚಿಕೆಯಿರಬಾರದು. ಗುರುಗಳಿಂದಾಗಲಿ, ಅಥವಾ ತಿಳಿದವರಿಂದಾಗಲಿ—ಕೇಳಿ ಕಲಿಯುವುದು ತಪ್ಪೇನಲ್ಲ. ಯಾವುದೋ ವಿಚಾರವನ್ನು ತಿಳಿಯದೇ ಹಿಂಜರಿಯುವುದು ಜ್ಞಾನಲಾಭವನ್ನು ತಡೆಯುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.