ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ನಿಮ್ಮ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದರೆ ಶುಕ್ರವಾರ ಈ ಕೆಲಸಗಳನ್ನ ಮಾಡಿದ್ರೆ ಧನಾಗಮನ ಖಂಡಿತ

ಜ್ಯೋತಿಷ್ಯ ಶಾಸ್ತ್ರ ಪ್ರಕಾರ ದೇವತೆಗಳ ಆರಾಧನೆಗೆ ವಿಶೇಷ ಮಹತ್ವವಿದ್ದು, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗಿದೆ. ಧನಲಕ್ಷ್ಮಿಯ ಆಶೀರ್ವಾದದಿಂದ ವ್ಯಕ್ತಿಯ ಜೀವನದಲ್ಲಿ ಹಣ, ಸಮೃದ್ಧಿ, ವೈಭವ, ಯಶಸ್ಸು ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯ ಪೂಜೆಯನ್ನ ಶ್ರದ್ಧೆಯಿಂದ ಮಾಡಿದರೆ ಭಕ್ತರ ಎಲ್ಲಾ ಆಸೆಗಳು ಈಡೇರಲಿದ್ದು, ಭಕ್ತರು ಶ್ರೀ ಲಕ್ಷ್ಮಿಯ ಪೂಜೆಯ ಮೂಲಕ ತಮ್ಮ ಜೀವನದಲ್ಲಿ ಹಣಕಾಸಿನ ಸ್ಥಿರತೆ, ಸೌಭಾಗ್ಯ ಹಾಗೂ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು.

ಲಕ್ಷ್ಮೀಯನ್ನ ಹೀಗೆ ಪೂಜಿಸಿದ್ರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆ ದೂರಾಗುವುದು

ಸಂಗ್ರಹ ಚಿತ್ರ -

Profile
Sushmitha Jain Dec 12, 2025 7:00 AM

ಬೆಂಗಳೂರು: ಶುಕ್ರವಾರವನ್ನು(Friday) ಹಿಂದೂ ಸಂಪ್ರದಾಯದಲ್ಲಿ(Hindu Dharma) ಲಕ್ಷ್ಮಿ ದೇವಿಗೆ(Lakshmi Devi) ಸಮರ್ಪಿತವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯ ಆರಾಧನೆ ಮಾಡಿದರೆ ಭಕ್ತರಿಗೆ ಆಕೆಯ ಕೃಪೆ, ಆಶೀರ್ವಾದ ಮತ್ತು ಧನಾಗಮನ ದೊರೆಯುತ್ತದೆ ಎಂಬುದು ಪೌರಾಣಿಕ ನಂಬಿಕೆ. ಇದಲ್ಲದೆ, ನವಗ್ರಹಗಳಲ್ಲಿ ಒಂದಾದ ಶುಕ್ರ ಗ್ರಹವನ್ನೂ ಶುಕ್ರವಾರದಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಶುಕ್ರನಿಗೆ ಶಾಂತಿ ಮತ್ತು ಬಲ ನೀಡುವ ಪೂಜೆ ಮಾಡಿದರೆ ಜೀವನದಲ್ಲಿ ವೈಭವ, ಸೌಂದರ್ಯ, ಆರ್ಥಿಕಸ್ಥಿತಿ ಮತ್ತು ಕುಟುಂಬದ ಶಾಂತಿ ಹೆಚ್ಚುತ್ತದೆ ಎಂಬ ಉಲ್ಲೇಖ ಧರ್ಮಗ್ರಂಥಗಳಲ್ಲಿ ಇದೆ.

ಹೌದು ಜ್ಯೋತಿಷ್ಯ ಶಾಸ್ತ್ರ(Astro Tips) ಪ್ರಕಾರ ದೇವತೆಗಳ ಆರಾಧನೆಗೆ ವಿಶೇಷ ಮಹತ್ವವಿದ್ದು, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗಿದೆ. ಧನಲಕ್ಷ್ಮಿಯ ಆಶೀರ್ವಾದದಿಂದ ವ್ಯಕ್ತಿಯ ಜೀವನದಲ್ಲಿ ಹಣ, ಸಮೃದ್ಧಿ, ವೈಭವ, ಯಶಸ್ಸು ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯ ಪೂಜೆಯನ್ನ ಶ್ರದ್ಧೆಯಿಂದ ಮಾಡಿದರೆ ಭಕ್ತರ ಎಲ್ಲಾ ಆಸೆಗಳು ಈಡೇರಲಿದ್ದು, ಭಕ್ತರು ಶ್ರೀ ಲಕ್ಷ್ಮಿಯ ಪೂಜೆಯ ಮೂಲಕ ತಮ್ಮ ಜೀವನದಲ್ಲಿ ಹಣಕಾಸಿನ ಸ್ಥಿರತೆ, ಸೌಭಾಗ್ಯ ಹಾಗೂ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು.

ಶುಕ್ರವಾರದ ಆಚರಣೆಗಳಲ್ಲಿ, ಲಕ್ಷ್ಮಿ ದೇವಿಯ ಪೂಜೆಯನ್ನು ವಿಶೇಷವಾಗಿ ವಿಧಿ ವಿಧಾನಗಳೊಂದಿಗೆ ನಡೆಸುವುದು ಅತ್ಯಂತ ಫಲಪ್ರದವಾಗಿದೆ. ಪೂಜೆಯ ಸಮಯದಲ್ಲಿ ದೇವತೆಗೆ ಕಮಲದ ಹೂ, ನೈವೇದ್ಯ ಮತ್ತು ಇತರೆ ಫಲವಸ್ತುಗಳನ್ನು ಅರ್ಪಿಸುವುದರಿಂದ ಸಂತೋಷ, ಸಮೃದ್ಧಿ, ಧನ ಲಾಭದ ಜೊತೆ ಜೀವನದಲ್ಲಿ ಶಾಂತಿ ಪಡೆಯಬಹುದು. ಹಾಗಾದ್ರೆ ಬನ್ನಿ ಲಕ್ಷ್ಮೀ ದೇವಿಯ ಪೂಜೆ ಮಾಡುವಾಗ ಏನೆಲ್ಲಾ ಕ್ರಮಗಳನ್ನು ಪಾಲಿಸಬೇಕು.? ಹೇಗೆ ಪೂಜಿಸಬೇಕು.? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಮನೆಯಲ್ಲಿ ಈ ಆನೆಯ ಪ್ರತಿಮೆಯನ್ನಿಟ್ಟರೆ ಸಂಪತ್ತು ಐಶ್ವರ್ಯ ವೃದ್ಧಿ ಗ್ಯಾರೆಂಟಿ..!

ಶುಕ್ರವಾರದ ದಿನದಂದು ಸಂಪತ್ತಿನ ದೇವಿಯಾದ ಲಕ್ಷ್ಮಿ ದೇವಿಯನ್ನು ಧಾರ್ಮಿಕ ವಿಧಿ - ವಿಧಾನಗಳೊಂದಿಗೆ ಪೂಜಿಸಬೇಕು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದ್ದು, ಲಕ್ಷ್ಮಿ ದೇವಿಯನ್ನು ಪೂಜಿಸುವ ವೇಳೆ ಕಮಲದ ಹೂವನ್ನು ಆಕೆಗೆ ಸರ್ಮಪಿಸುವ ಮೂಲಕ ಆಕೆಯ ಅನುಗ್ರಹ ಪಡೆಯಬಹುದಾಗಿದ್ದು, ತನ್ನ ಆಶೀರ್ವಾದವನ್ನು ಆ ಭಕ್ತರ ಮೇಲೆ ಕರುಣಿಸುತ್ತಾಳೆ. ನೀವು ನಿಮ್ಮ ಜೀವನದ ಹಣದ ಸಮಸ್ಯೆಗಳಿಂದ ಮುಕ್ತರಾಗಲು ಇಚ್ಚಿಸಿದ್ದರೆ ಲಕ್ಷ್ಮಿ ದೇವಿಯನ್ನು ಪೂಜಿಸುವ ಸಂದರ್ಭ ಆಕೆಗೆ ತಪ್ಪದಂತೆ ಕಮಲದ ಹೂವನ್ನು ಅರ್ಪಿಸಿ. ಇದು ಮನೆಯಲ್ಲಿ ಧನಾಗಮನವಾಗುವಂತೆ ಮಾಡುತ್ತದೆ ಮತ್ತು ಹಣದ ಸಮಸ್ಯೆಯಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

ಇದರೊಂದಿಗೆ ಶಾಸ್ತ್ರಗಳ ಪ್ರಕಾರ, ಮನೆಯಲ್ಲಿ ಶುಕ್ರವಾರದಂದು ಶಂಖ ನಾದ ಹೊರಹುಮ್ಮುವುದರಿಂದ ನಿಮ್ಮ ಮನೆಯ ಮೇಲೆ ಯಾವುದೇ ದುಷ್ಟ ಹಾಗೂ ನಕಾರಾತ್ಮಕ ಶಕ್ತಿಗಳ ದೃಷ್ಟಿ ತಗುವುದಿಲ್ಲ ಎಂದು ಹೇಳಲಾಗಿದ್ದು, ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಶಂಖ ಸಹಾಯ ಮಾಡುತ್ತದೆ.

ತುಳಸಿ ಗಿಡವನ್ನು ಪೂಜಿಸುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ನಂಬಲಾಗುತ್ತದೆ. ನಿಯಮಗಳ ಪ್ರಕಾರ ಶುಕ್ರವಾರದಂದು ತುಳಸಿ ಗಿಡ ಮತ್ತು ಸಾಲಿಗ್ರಾಮಗಳನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ತುಂಬಾ ಸಂತೋಷವಾಗುತ್ತದೆ ಮತ್ತು ಬಯಸಿದ ವರವನ್ನು ನೀಡುತ್ತಾಳೆ. ತುಳಸಿ ಗಿಡದ ಬಳಿ ಬೆಳಗ್ಗೆ ಮತ್ತು ಸಂಜೆ ತುಪ್ಪದ ದೀಪವನ್ನು ಹಚ್ಚಬೇಕು.

ಶುಕ್ರವಾರದಂದು ಲಕ್ಷ್ಮಿ ಸ್ತೋತ್ರವನ್ನು ಪಠಿಸುವ ಮೂಲಕ, ಆಕೆಯ ಕೃಪೆಗೆ ಪಾತ್ರರಾಗ ಬಹುದಾಗಿದ್ದು, ಮನೆಯಲ್ಲಿನ ಸಂಪತ್ತನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಹಣದ ಕೊರತೆಯಿದ್ದರೆ ಮತ್ತು ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದರೆ, ಶುಕ್ರವಾರ ಲಕ್ಷ್ಮಿ ಸ್ತೋತ್ರವನ್ನು ಪಠಿಸಿದ್ದರೆ ಒಳ್ಳೆಯ ಫಲಿತಾಂಶಗಳನ್ನು ಪಡೆಯಬಹುದಾಗಿದೆ.