Chanakya Niti: ಚಾಣಕ್ಯನ ಈ 5 ಸೂತ್ರ ಅನುಸರಿಸಿದರೆ ಮನೆಯಲ್ಲೇ ನೆಲೆಸುತ್ತಾಳೆ ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿ!
ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮನೆಯಲ್ಲಿ ಪಾಲಿಸಬೇಕಾದ ಚಾಣಕ್ಯನ ನಿಯಮಗಳು ಬಹಳ ಸರಳವಾಗಿದ್ದರೂ ಅವುಗಳ ಮಹತ್ವ ಅತ್ಯಂತ ಆಳವಾಗಿರುತ್ತದೆ ಎಂದು ನೀತಿಶಾಸ್ತ್ರ ತಿಳಿಸುತ್ತದೆ. ಚಾಣಕ್ಯ ಹೇಳುವಂತೆ, ಲಕ್ಷ್ಮೀ ದೇವಿ ಸೌಂದರ್ಯ ಮತ್ತು ಸಂಪತ್ತಿನ ದೇವಿ ಮಾತ್ರವಲ್ಲ; ಆಕೆ ಶುದ್ಧತೆ, ಶಿಸ್ತು ಮತ್ತು ಸಾತ್ವಿಕತೆ ಹೊಂದಿರುವ ಮನೆಯನ್ನು ಹುಡುಕುತ್ತಾಳೆ. ಮನೆ ದೇಹದಷ್ಟೇ ಮನಸ್ಸು ಮತ್ತು ನಡವಳಿಕೆಯೂ ಶುದ್ಧವಾಗಿರಬೇಕು ಎಂಬುದೇ ಚಾಣಕ್ಯನ ತತ್ವ.
ಚಾಣಕ್ಯ -
ಬೆಂಗಳೂರು: ಆಚಾರ್ಯ ಚಾಣಕ್ಯನ(Chanakya) ಪ್ರಕಾರ, ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿ (lakshmi Devi) ಶುದ್ಧತೆ (Cleanliness), ಶಿಸ್ತು ಮತ್ತು ಸಾತ್ವಿಕ ಗುಣಗಳನ್ನು ಪ್ರೀತಿಸುತ್ತಾಳೆ. ಯಾವ ಒಂದು ಕುಟುಂಬ ಸದ್ಗುಣ ಭರಿತವಾಗಿ, ಇತರರಿಗೆ ಕೆಡುಕನ್ನು ಬಯಸದೇ, ಉತ್ತಮ ನಡವಳಿಕೆ ಮತ್ತು ಸಜ್ಜನಿಕೆ ಗುಣಗಳು ಇರುತ್ತದೆಯೋ ಅಂತವರಿಗೆ ಮಾತ್ರ ಆಕೆ ಆಶೀರ್ವಾದ ನೀಡುತ್ತಾಳೆ. ಲಕ್ಷ್ಮಿಯನು ಒಲಿಸಿಕೊಳ್ಳಲು ಚಾಣಕ್ಯ ಅನೇಕ ನಿಯಮಗಳನ್ನು ಸೂಚಿಸಿದ್ದಾರೆ. ಈ ನಿಯಮಗಳು ಕೇವಲ ಧಾರ್ಮಿಕ ದೃಷ್ಟಿಯಿಂದಲ್ಲ, ವೈಯಕ್ತಿಕ ಅಭಿವೃದ್ಧಿ ಮತ್ತು ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಕ್ಕೂ ಸಹಾಯಕ.
ಹೌದು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮನೆಯಲ್ಲಿ ಪಾಲಿಸಬೇಕಾದ ಚಾಣಕ್ಯನ ನಿಯಮಗಳು(Chanakya Niti) ಬಹಳ ಸರಳವಾಗಿದ್ದರೂ ಅವುಗಳ ಮಹತ್ವ ಅತ್ಯಂತ ಆಳವಾಗಿರುತ್ತದೆ ಎಂದು ನೀತಿಶಾಸ್ತ್ರ ತಿಳಿಸುತ್ತದೆ. ಚಾಣಕ್ಯ ಹೇಳುವಂತೆ, ಲಕ್ಷ್ಮೀ ದೇವಿ ಸೌಂದರ್ಯ ಮತ್ತು ಸಂಪತ್ತಿನ ದೇವಿ ಮಾತ್ರವಲ್ಲ; ಆಕೆ ಶುದ್ಧತೆ, ಶಿಸ್ತು ಮತ್ತು ಸಾತ್ವಿಕತೆ ಹೊಂದಿರುವ ಮನೆಯನ್ನು ಹುಡುಕುತ್ತಾಳೆ. ಮನೆ ದೇಹದಷ್ಟೇ ಮನಸ್ಸು ಮತ್ತು ನಡವಳಿಕೆಯೂ ಶುದ್ಧವಾಗಿರಬೇಕು ಎಂಬುದೇ ಚಾಣಕ್ಯನ ತತ್ವ.
ಚಾಣಕ್ಯ ಹೇಳುವಂತೆ, ಸ್ವಚ್ಛ ಮತ್ತು ಸಾತ್ವಿಕ ಮನೆ ಲಕ್ಷ್ಮೀ ದೇವಿಯ ನೆಲೆ. ಮನೆಯಲ್ಲೇನು ಅಸ್ಥೈರ್ಯ, ಹಾಗೂ ಅಶುದ್ಧತೆ ಇದ್ದರೆ ಅಂತಹ ಮನೆಯಲ್ಲಿ ಹಣ ಹಾಗೂ ಲಕ್ಷ್ಮೀ ದೇವಿ ನೆಲೆಸುವುದಿಲ್ಲ. ಬೆಳಗ್ಗೆ ಮನೆಯನ್ನೂ, ಅಂಗಣವನ್ನೂ, ದೇವರ ಕೋಣೆಯನ್ನೂ ಶುದ್ಧಪಡಿಸುವುದು ಚಾಣಕ್ಯ ನೀತಿಯ ಪ್ರಕಾರ ಅತ್ಯಂತ ಮಹತ್ವದ ನಿಯಮ. ಮನೆಯ ಪ್ರವೇಶದ್ವಾರದಲ್ಲಿ ಕಸ, ಜಾಲಿ ಅಥವಾ ಅಶುಚಿ ಇರಬಾರದು. ಇದು ಮನೆಗೆ ಭಾಗ್ಯ ಲಕ್ಷ್ಮೀ ಬರುವುದನ್ನು ತಡೆಯಲಿದ್ದು, ಆಕೆಯ ಕೃಪೆ ದೊರೆತು ಸೌಭಾಗ್ಯ ಪ್ರವೇಶಕ್ಕೂ ಅಡ್ಡಿಯಾಗುತ್ತದೆ.
ಅತಿಥಿಗಳನ್ನು ಗೌರವಿಸುವುದು ಮತ್ತೊಂದು ಪ್ರಮುಖ ನಡವಳಿಕೆ. “ಅತಿಥಿ ದೇವೋಭವ” ಎಂಬ ತತ್ವಕ್ಕೆ ಚಾಣಕ್ಯ ಬಹಳ ಒತ್ತು ನೀಡಿದ್ದು, ಯಾರು ತಮ್ಮ ಮನೆಗೆ ಬಂದ ಅತಿಥಿಗೆ ಅವಮಾನ ಮಾಡ್ತಾರೋ ಅಥವಾ ಅವರನ್ನು ಕೇವಲವಾಗಿ ನಡೆಸಿಕೊಳ್ಳುತ್ತಾರೋ ಅಂತಹ ಮನೆಗೆ ಲಕ್ಷ್ಮೀ ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಇದೆ.
ಆಹಾರವನ್ನು ವ್ಯರ್ಥ ಮಾಡಬಾರದು ಎನ್ನುವುದು ಚಾಣಕ್ಯನ ಕಠಿಣ ಸೂಚನೆ. ಆಹಾರದಲ್ಲಿ ದೇವರ ಸಾನ್ನಿಧ್ಯವಿದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಉಳಿದ ಆಹಾರವನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಪ್ರಾಣಿಗಳಿಗೆ, ಪಕ್ಷಿಗಳಿಗೆ ನೀಡುವುದು ಪುಣ್ಯದ ಕೆಲಸವೆಂದು ಚಾಣಕ್ಯ ಉಪದೇಶಿಸುತ್ತಾರೆ.
ಮನೆಯಲ್ಲಿರುವವರ ಸಂಯಮ, ಶಿಸ್ತು, ಹಣದ ಸರಿಯಾದ ನಿರ್ವಹಣೆ, ಉಳಿತಾಯದ ಅಭ್ಯಾಸ ಇವೆಲ್ಲ ಲಕ್ಷ್ಮಿಯ ಅನುಗ್ರಹಕ್ಕೆ ಕಾರಣವಾಗುತ್ತವೆ. ಚಾಣಕ್ಯ ಹೇಳುವಂತೆ, ಯಾವ ಮನೆಯಲ್ಲಿ ಪದೇಪದೇ ಜಗಳ, ಗದ್ದಲ, ದುರ್ವ್ಯಯ ಇದ್ದರೂ ಅಲ್ಲಿ ಸಂಪತ್ತು ಉಳಿಯುವುದಿಲ್ಲ.
ಅಲ್ಲದೆ, ಸಂಜೆ ಮನೆಯಲ್ಲಿ ದೀಪ ಹಚ್ಚುವುದು, ಮಹಿಳೆಯರನ್ನು ಗೌರವಿಸುವುದು, ಬಡವರಿಗೆ ದಾನಮಾಡುವುದು, ಸೋಮಾರಿತನದಿಂದ ದೂರವಿರುವುದು, ಇವೆಲ್ಲವೂ ಲಕ್ಷ್ಮಿಯ ಪ್ರೀತಿ ಆಶೀರ್ವಾದ ಪಡೆಯಲು ಮುಖ್ಯ ಮಾರ್ಗಗಳು. ಇಂತಹ ಶಿಸ್ತಿನ ಜೀವನ ನಡೆಸಿದ ಮನೆಗಳಲ್ಲಿ ಸತತವಾಗಿ ಶಾಂತಿ, ಸಮೃದ್ಧಿ, ಧನ ಮತ್ತು ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.